ಸಿಯಾಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ 2023; ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
Jan 09, 2024 07:29 PM IST
ರೋಹಿತ್ ಶರ್ಮಾ ಅವರಿಂದ ವರ್ಷದ ಅಂತಾರಾಷ್ಟ್ರೀಯ ಬ್ಯಾಟರ್ ಪ್ರಶಸ್ತಿ ಸ್ವೀಕರಿಸಿದ ಶುಭ್ಮನ್ ಗಿಲ್
- CEAT Cricket Rating Awards 2023: ಭಾರತದ ಭರವಸೆಯ ಯುವ ಆಟಗಾರ ಶುಭ್ಮನ್ ಗಿಲ್ ಮೂರು ಸಿಯಾಟ್ ಕ್ರಿಕೆಟ್ ರೇಟಿಂಗ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಭಾರತದ ಪ್ರಮುಖ ಟೈರ್ ತಯಾರಕರಾದ ಕಂಪನಿಯಾದ CEAT ಲಿಮಿಟೆಡ್, ಇಂದು ಮುಂಬೈನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ CEAT ಕ್ರಿಕೆಟ್ ರೇಟಿಂಗ್ (CCR) ಪ್ರಶಸ್ತಿ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿತು. ಅಂತಾರಾಷ್ಟ್ರೀಯ ಮತ್ತು ದೇಶೀಯ ರಂಗದಲ್ಲಿ ಕ್ರಿಕೆಟ್‌ನ ವಿವಿಧ ಸ್ವರೂಪಗಳ ಸಾಧಕರಿಗೆ ಈ ಪ್ರಶಸ್ತಿ ವಿತರಿಸಲಾಯ್ತು.
ಜಾಗತಿಕ ಮತ್ತು ದೇಶೀಯ ರಂಗದಲ್ಲಿ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ ಸಾಧಕರನ್ನು ಮೌಲ್ಯಮಾಪನ ಮಾಡಲು, CCR (ಸಿಯಾಟ್ ಕ್ರಿಕೆಟ್ ರೇಟಿಂಗ್) ಸಮಗ್ರ ರೇಟಿಂಗ್ ಅನ್ನು ಒಂದು ಮಾನದಂಡವಾಗಿ ಸ್ಥಾಪಿಸಲಾಗಿದೆ.
CEAT ಕ್ರಿಕೆಟ್ ರೇಟಿಂಗ್ ಪ್ರಶಸ್ತಿಗಳ ಪಡೆದವರ ಸಂಪೂರ್ಣ ಪಟ್ಟಿ ಇಲ್ಲಿದೆ
- CEAT ಜೀವಮಾನದ ಸಾಧನೆ: ಮದನ್ ಲಾಲ್
- CEAT ಜೀವಮಾನದ ಸಾಧನೆ: ಕರ್ಸನ್ ಘಾವ್ರಿ
- CEAT ಪುರುಷರ ವಿಭಾಗದಲ್ಲಿ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟ್ ಆಟಗಾರ: ಶುಭ್ಮನ್ ಗಿಲ್
- CEAT ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟ್ ಆಟಗಾರ್ತಿ: ದೀಪ್ತಿ ಶರ್ಮಾ
- CEAT ಇಂಟರ್ನ್ಯಾಷನಲ್ ಬ್ಯಾಟರ್ ಆಫ್ ದಿ ಇಯರ್: ಶುಭ್ಮನ್ ಗಿಲ್
- CEAT ವರ್ಷದ ಏಕದಿನ ಬ್ಯಾಟರ್: ಶುಭ್ಮನ್ ಗಿಲ್
- CEAT ವರ್ಷದ ಏಕದಿನ ಬೌಲರ್: ಆಡಮ್ ಝಂಪಾ
- CEAT ಅಂತಾರಾಷ್ಟ್ರೀಯ ವರ್ಷದ ಬೌಲರ್: ಟಿಮ್ ಸೌಥಿ
- CEAT ವರ್ಷದ ಟೆಸ್ಟ್ ಬ್ಯಾಟ್ಸ್‌ಮನ್: ಕೇನ್ ವಿಲಿಯಮ್ಸನ್
- CEAT ವರ್ಷದ ಟೆಸ್ಟ್ ಬೌಲರ್: ಪ್ರಭಾತ್ ಜಯಸೂರ್ಯ
- CEAT ವರ್ಷದ ಟಿ20 ಬ್ಯಾಟ್ಸ್‌ಮನ್: ಸೂರ್ಯಕುಮಾರ್ ಯಾದವ್
- CEAT ವರ್ಷದ ಟಿ20 ಬೌಲರ್: ಭುವನೇಶ್ವರ್ ಕುಮಾರ್
- ಟಿ20 ವರ್ಷದ ದೇಶೀಯ ಕ್ರಿಕೆಟಿಗ: ಜಲಜ್ ಸಕ್ಸೇನಾ
- 300 ಟಿ20 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್: ಯುಜ್ವೇಂದ್ರ ಚಹಾಲ್
- ಅಂಡರ್ 19 ಮಹಿಳಾ ವಿಶ್ವಕಪ್ ವಿಜೇತ ನಾಯಕಿಗೆ ಅಭಿನಂದನೆ: ಶಫಾಲಿ ವರ್ಮಾ
- ಅತ್ಯುತ್ತಮ ಕೋಚ್: ಬ್ರೆಂಡನ್ ಮೆಕಲಮ್
ಮೈದಾನದಲ್ಲಿ ನೀಡಿದ ಅಸಾಧಾರಣ ಪ್ರದರ್ಶನಕ್ಕಾಗಿ ಗಿಲ್‌ಗೆ 'CEAT ಪುರುಷರ ವಿಭಾಗದ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ' ಪ್ರಶಸ್ತಿಯನ್ನು ನೀಡಲಾಯಿತು. "ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿರುವುದು ನನ್ನ ಪಾಲಿಗೆ ದೊಡ್ಡ ಗೌರವ. ಒಬ್ಬ ಕ್ರಿಕೆಟಿಗನಾಗಿ ಯಾವಾಗಲೂ ಬೌಂಡರಿ ಗಳಿಸುವುದು, ಸವಾಲುಗಳನ್ನು ಎದುರಿಸುವುದು ಮತ್ತು ಹೊಸ ಎತ್ತರವನ್ನು ತಲುಪಿ ನಿರಂತರವಾಗಿ ಸುಧಾರಣೆ ಕಾಣುವುದು ತುಂಬಾ ಮುಖ್ಯ. ಇಂತಹ ಗೌರವಗಳು ನಮ್ಮ ಬದ್ಧತೆಯನ್ನು ಹೆಚ್ಚಿಸಿ ಹೆಚ್ಚು ಶ್ರಮಿಸಲು ನನ್ನನ್ನು ಪ್ರೋತ್ಸಾಹಿಸುತ್ತದೆ,” ಎಂದು ಪ್ರಶಸ್ತಿ ಪಡೆದ ಶುಭ್ಮನ್ ಗಿಲ್ ಹೇಳಿದ್ದಾರೆ.