ಬೆಂಗಳೂರಿನಲ್ಲಿ ಏಕದಿನ ವಿಶ್ವಕಪ್ ವೀಕ್ಷಿಸಲು ಬರುವವರಿಗೊಂದು ಚುಟುಕು ಪ್ರವಾಸ; ಇಲ್ಲಿದೆ ಹೋಟೆಲ್, ಶಾಪಿಂಗ್, ಟೂರಿಸ್ಟ್ ಕಂಪ್ಲೀಟ್ ಡೀಟೆಲ್ಸ್
Oct 19, 2023 09:13 PM IST
ಎಂ ಚಿನ್ನಸ್ವಾಮಿ ಮೈದಾನ.
- Bengaluru City, ICC Cricket World Cup 2023: ನೀವು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಿಗಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರೆ, ನಗರದಲ್ಲಿ ನೋಡಲೇಬೇಕಾದ, ಮಾಡಬೇಕಾದ, ತಿನ್ನುವ ತಿಂಡಿ, ಅಂಗಡಿಗಳು, ಹೋಟೆಲ್‌ಗಳು, ಶಾಪಿಂಗ್, ಟೂರಿಸ್ಟ್ ಹೀಗೆ ಪ್ರತಿಯೊಂದರ ಕುರಿತು ತ್ವರಿತ ಕಿರು ನೋಟ ಇಲ್ಲಿದೆ.
ಭಾರತದಲ್ಲಿ ಏಕದಿನ ವಿಶ್ವಕಪ್ (ICC Cricket World Cup 2023) ಹಬ್ಬ ಆರಂಭವಾಗಿದೆ. ದೇಶದ 10 ಸ್ಥಳಗಳಲ್ಲಿ 46 ದಿನಗಳ ಕಾಲ 48 ಪಂದ್ಯಗಳು ನಡೆಯಲಿದೆ. ಅದರಲ್ಲಿ ಬೆಂಗಳೂರು ಒಂದು. ದೇಶ-ವಿದೇಶಗಳಿಂದ ಫ್ಯಾನ್ಸ್ ಭಾರತದತ್ತ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ದೇಶಗಳಿಗೆ ಬೆಂಬಲ ನೀಡಲು ಅಭಿಮಾನಿಗಳು ದೂರದ ಊರುಗಳಿಂದ ಪಂದ್ಯ ನಡೆಯುವ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಿಗೂ ಫ್ಯಾನ್ಸ್ ದಂಡೇ ಬರಲಿದೆ.
ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದೆ. ಬೆಂಗಳೂರಿಗೆ ಬರುವ ಅಭಿಮಾನಿಗಳು ಕೇವಲ ಪಂದ್ಯವನ್ನಷ್ಟೇ ವೀಕ್ಷಿಸದೆ, ಸಮಯ ಇದ್ದರೆ ಒಂದು ಚುಟುಕು ಪ್ರವಾಸ ಕೈಗೊಳ್ಳಬಹುದು. ಅದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಇಲ್ಲಿದೆ. ನಗರದಲ್ಲಿ ನೋಡಲೇಬೇಕಾದ, ಮಾಡಬೇಕಾದ, ತಿನ್ನುವ ತಿಂಡಿ, ಅಂಗಡಿಗಳು, ಹೋಟೆಲ್‌ಗಳು, ಶಾಪಿಂಗ್, ಟೂರಿಸ್ಟ್ ಹೀಗೆ ಪ್ರತಿಯೊಂದರ ಕುರಿತು ತ್ವರಿತ ಕಿರು ನೋಟ ಇಲ್ಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಪಂದ್ಯಗಳು
- ಅಕ್ಟೋಬರ್ 20: ಆಸ್ಟ್ರೇಲಿಯಾ vs ಪಾಕಿಸ್ತಾನ, 2 ಗಂಟೆಗೆ
- ಅಕ್ಟೋಬರ್ 26: ಇಂಗ್ಲೆಂಡ್ vs ಶ್ರೀಲಂಕಾ, 2 ಗಂಟೆಗೆ
- ನವೆಂಬರ್ 4: ನ್ಯೂಜಿಲೆಂಡ್ vs ಪಾಕಿಸ್ತಾನ, ಬೆಳಗ್ಗೆ 10:30
- ನವೆಂಬರ್ 9: ನ್ಯೂಜಿಲೆಂಡ್ vs ಶ್ರೀಲಂಕಾ, 2 ಗಂಟೆಗೆ
- ನವೆಂಬರ್ 12: ಭಾರತ vs ನೆದರ್ಲೆಂಡ್ಸ್, 2 ಗಂಟೆಗೆ
ಮೈದಾನ ಕುರಿತು ಮಾಹಿತಿ
ಸ್ಟೇಡಿಯಂ ಹೆಸರು: ಎಂ ಚಿನ್ನಸ್ವಾಮಿ ಸ್ಟೇಡಿಎಂ
ಮತ್ತೊಂದು ಹೆಸರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ
ಸ್ಥಳ: ಬೆಂಗಳೂರು
ವಿಳಾಸ: ಕಬ್ಬನ್ ರಸ್ತೆ, ಶಿವಾಜಿ ನಗರ, ಬೆಂಗಳೂರು
ಸ್ಥಾಪನೆ: 1969
ಪ್ರೇಕ್ಷಕರ ಸಾಮರ್ಥ್ಯ: 40,000
ಎಂಡ್ಸ್: ಪೆವಿಲಿಯನ್ ಎಂಡ್, ಬಿಇಎಂಎಲ್
ಕ್ರೀಡಾಂಗಣವನ್ನು ತಲುಪುವುದು ಹೇಗೆ?
- ಚಿನ್ನಸ್ವಾಮಿ ಸ್ಟೇಡಿಯಂ ವಿಮಾನ ನಿಲ್ದಾಣದಿಂದ 34 ಕಿಮೀ ದೂರದಲ್ಲಿದೆ.
- ಹತ್ತಿರದ ರೈಲು ನಿಲ್ದಾಣ: ಬೆಂಗಳೂರು ಕಂಟೋನ್ಮೆಂಟ್
- ಹತ್ತಿರದ ಬಸ್ ನಿಲ್ದಾಣ ಇಂಡಿಯನ್ ಎಕ್ಸ್‌ಪ್ರೆಸ್: 10 ನಿಮಿಷಗಳ ನಡಿಗೆ
- ಹತ್ತಿರದ ಮೆಟ್ರೋ ನಿಲ್ದಾಣ: ಕಬ್ಬನ್ ಪಾರ್ಕ್ (21 ನಿಮಿಷಗಳ ನಡಿಗೆ)
ಸರಾಸರಿ ತಾಪಮಾನ: ಅಕ್ಟೋಬರ್‌ನಲ್ಲಿ, ಗರಿಷ್ಠ 28-31 ಮತ್ತು ಕನಿಷ್ಠ 19-21 ಡಿಗ್ರಿ ಸೆಲ್ಸಿಯಸ್. ನವೆಂಬರ್‌ನಲ್ಲಿ, ಗರಿಷ್ಠ 29 ಮತ್ತು ಕನಿಷ್ಠ 19-21 ಡಿಗ್ರಿ ಸೆಲ್ಸಿಯಸ್.
ಏನೆಲ್ಲಾ ನೋಡಬಹುದು?
ಕಬ್ಬನ್ ಪಾರ್ಕ್, ರಾಜಭವನ ವಿಧಾನಸೌಧ, ಟೌನ್ ಹಾಲ್, ಮೇಯೋ ಹಾಲ್, ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್, ಕಾರ್ಪೊರೇಷನ್ ಕಟ್ಟಡ, ಬೆಂಗಳೂರು ಅರಮನೆ, ಹೈಕೋರ್ಟ್, ಲಾಲ್ ಬಾಗ್, ರವೀಂದ್ರ ಕಲಾಕ್ಷೇತ್ರ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಸೇಕ್ರೆಡ್ ಹಾರ್ಟ್ ಚರ್ಚ್, ಜಾಮಿಯಾ ಮಸೀದಿ, ವಸ್ತುಸಂಗ್ರಹಾಲಯ, ಭಾರತೀಯ ಕಾರ್ಟೂನ್ ಗ್ಯಾಲರಿ, ಬುಲ್ ಟೆಂಪಲ್, ಸ್ನೋ ಸಿಟಿ, ದಕ್ಷಿಣ ಭಾರತದ ಅತಿ ದೊಡ್ಡ ಸ್ನೋ ಪಾರ್ಕ್, ಜಯನಗರದಲ್ಲಿ ಲೇಸರ್ ಗೇಮಿಂಗ್ ವಾರ್ ಡ್ರೋನ್, ವೈಟ್‌ಫೀಲ್ಡ್‌ನಲ್ಲಿರುವ ಐಪ್ಲೇ ಐಸ್‌ಸ್ಕೇಟಿಂಗ್, ಬೆಂಗಳೂರು ಅರಮನೆ ಬಳಿಯ ಫನ್ ವರ್ಲ್ಡ್ ಅಮ್ಯೂಸ್‌ಮೆಂಟ್ ಪಾರ್ಕ್.
ಎಲ್ಲಿ ಏನು ತಿನ್ನಬಹುದು?
ಎಂಟಿಆರ್, ವಿದ್ಯಾರ್ಥಿ ಭವನ, ಬ್ರಾಹ್ಮಣರ ಕಾಫಿ ಬಾರ್, ಹಳ್ಳಿ ಮನೆ, ಸಿಟಿಆರ್, ವೀಣಾ ಸ್ಟೋರ್ಸ್, ಜನತಾ ಹೋಟೆಲ್, ಉಡುಪಿ ಕ್ರಿಶಾ ಹೋಟೆಲ್, ಇಂದಿರಾನಗರ, ಎಂಜಿ ರೋಡ್ ಮತ್ತು ಕೋರಮಂಗಲ ಆಹಾರ ಪ್ರಿಯರ ಹಾಟ್‌ಸ್ಪಾಟ್‌ಗಳು, ವಿವಿ ಪುರಂ ಫುಡ್ ಸ್ಟ್ರೀಟ್.
ಶಾಪಿಂಗ್ ಮಾಡುವ ಪ್ರಮುಖ ಸ್ಥಳಗಳು
ಕೆಆರ್ ಮಾರುಕಟ್ಟೆ, ಅಟ್ಟ ಗಲಾಟ್ಟಾ, ಕೆಫೆಯೊಂದಿಗೆ ಪುಸ್ತಕದಂಗಡಿ, ಇಂಡೋ-ದುಬೈ ಪ್ಲಾಜಾ, ಜಯನಗರ 4ನೇ ಬ್ಲಾಕ್, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಎಂಜಿ ರೋಡ್, ಶಿವಾಜಿನಗರ, ಚಿಕ್ಕಪೇಟೆ, ಅವೆನ್ಯೂ ರೋಡ್ ಸುತ್ತ ಬೀದಿ ಶಾಪಿಂಗ್, ಯುಬಿ ಸಿಟಿ, ಪಾರ್ಕ್ ಸ್ಕ್ವೇರ್ ಮಾಲ್, ರಾಯಲ್ ಮೀಯಾಕ್ಷಿ ಮಾಲ್.
ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪವಿರುವ ಹೋಟೆಲ್‌ಗಳು
ಓಕ್‌ವುಡ್ ಪ್ರೀಮಿಯರ್ ಪ್ರೆಸ್ಟೀಜ್ (0.8 ಕಿಮೀ), ಸದರ್ನ್ ಸ್ಟಾರ್ (450 ಮೀಟರ್), ಜೆಡಬ್ಲ್ಯೂ ಮ್ಯಾರಿಯಟ್ ಬೆಂಗಳೂರು (0.9 ಕಿಮೀ), ದಿ ಪಾರ್ಕ್ ಇನ್‌ಫೆಂಟ್ರಿ (0.6 ಕಿಮೀ), ದಿ ಚಾನ್ಸೆರಿ ಪೆವಿಲಿಯನ್ (1.4 ಕಿಮೀ), ಲೆಮನ್ ಟ್ರೀ ಪ್ರೀಮಿಯರ್, ಹಲಸೂರು ಲೇಕ್ (2.1 ಕಿಮೀ), ದಿ ಒಬೆರಾಯ್ ಬೆಂಗಳೂರು (2.2 ಕಿಮೀ), ಶಾಂಗ್ರಿ-ಲಾ (1.9 ಕಿಮೀ).
ಸಾರಿಗೆ ವ್ಯವಸ್ಥೆ
- ನಮ್ಮ ಮೆಟ್ರೋ, ಬಿಎಂಟಿಸಿ ಬಸ್ಸುಗಳು, ಆಟೋ ರಿಕ್ಷಾ, ಟ್ಯಾಕ್ಸಿಗಳು, ಉಬರ್ ಅಥವಾ ಓಲಾ, ಗೋ ಪಿಂಕ್ ಟ್ಯಾಕ್ಸಿಗಳು ಸಾರಿಗೆಯ ಮುಖ್ಯ ವಿಧಾನಗಳಾಗಿವೆ. ಮೆಟ್ರೋ ಬೆಳಿಗ್ಗೆ 5.30 ರಿಂದ ರಾತ್ರಿ 11 ರವರೆಗೆ ಕಾರ್ಯನಿರ್ವಹಿಸುತ್ತದೆ. 2 ಪ್ರಮುಖ ಮಾರ್ಗಗಳನ್ನು ಹೊಂದಿದೆ.
- 1. ನಾಗಸಂದ್ರ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ನಡುವೆ ಹಸಿರು ಮಾರ್ಗ, 2. ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗ. ಅದೇ ಪರ್ಪಲ್ ಲೈನ್ ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ನಡುವೆ ಸಂಚರಿಸುತ್ತದೆ.
- ನೀವು ವಾಟ್ಸಪ್, ನಮ್ಮ ಮೆಟ್ರೋ ಅಪ್ಲಿಕೇಶನ್, ಪೆಟಿಎಂ ಮತ್ತು ಯಾತ್ರಾ ಅಪ್ಲಿಕೇಶನ್ ಬಳಸಿ ಟಿಕೆಟ್ಗಳನ್ನು ಖರೀದಿಸಬಹುದು. ವಾಟ್ಸಪ್ ಸಂಖ್ಯೆ 81055-56677.
- ಬಿಎಂಟಿಸಿ ಬಸ್‌ಗಳ ಪ್ರಯಾಣ ದರವನ್ನು ನಗದು ರೂಪದಲ್ಲಿ ಮಾತ್ರ ಪಾವತಿಸಬೇಕು. ಆಟೋರಿಕ್ಷಾಗಳು ಮೊದಲ 2 ಕಿಲೋಮೀಟರ್‌ಗೆ 30 ಮತ್ತು ನಂತರ ಪ್ರತಿ ಕಿಲೋಮೀಟರ್‌ಗೆ 15 ಶುಲ್ಕ ವಿಧಿಸುತ್ತವೆ. ಗೋ ಪಿಂಕ್ ಟ್ಯಾಕ್ಸಿಗಳು ಮಹಿಳಾ ಪ್ರಯಾಣಿಕರಿಗೆ ಮತ್ತು ಮಹಿಳಾ ಚಾಲಕರಿಂದ ಚಾಲನೆ ಮಾಡಲ್ಪಡುತ್ತವೆ.
ನೆನಪಿಡಿ
- ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚು. ಬೇಗನೇ ಮೈದಾನಕ್ಕೆ ಪ್ರಯಾಣಿಸಿ.
- ತಡರಾತ್ರಿ ಏಕಾಂಗಿ ಪ್ರಯಾಣ ಮಾಡಬೇಡಿ.
- ನೀವು ಬೀದಿ ಬದಿ ಶಾಪಿಂಗ್ ಮಾಡುವುದಿದ್ದರೆ, ಪರ್ಸ್ಗಳಲ್ಲಿ ಸಣ್ಣ ಮೊತ್ತವನ್ನಿಟ್ಟುಕೊಳ್ಳಿ.