logo
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ತನ್ನ ಹೀರೋ ಸಚಿನ್‌ಗೆ ಶಿರಬಾಗಿ ನಮಿಸಿದ ವಿರಾಟ್ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ತನ್ನ ಹೀರೋ ಸಚಿನ್‌ಗೆ ಶಿರಬಾಗಿ ನಮಿಸಿದ ವಿರಾಟ್ ಕೊಹ್ಲಿ

Raghavendra M Y HT Kannada

Nov 15, 2023 07:55 PM IST

google News

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಸಚಿನ್‌ತೆಂಡೂಲ್ಕರ್‌ಗೆ ಶಿರಬಾಗಿ ನಮಿಸಿದ ವಿರಾಟ್ ಕೊಹ್ಲಿ

  • ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಪೂರೈಸುತ್ತಿದ್ದಂತೆ ಶಿರಬಾಗಿ ತನ್ನ ಹಿರೋ ಸಚಿನ್‌ಗೆ ನಮಿಸಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಸಚಿನ್‌ತೆಂಡೂಲ್ಕರ್‌ಗೆ ಶಿರಬಾಗಿ ನಮಿಸಿದ ವಿರಾಟ್ ಕೊಹ್ಲಿ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಸಚಿನ್‌ತೆಂಡೂಲ್ಕರ್‌ಗೆ ಶಿರಬಾಗಿ ನಮಿಸಿದ ವಿರಾಟ್ ಕೊಹ್ಲಿ

ಮುಂಬೈ (ಮಹಾರಾಷ್ಟ್ರ): ದಾಖಲೆಗಳ ವೀರ ವಿರಾಟ್ ಕೊಹ್ಲಿ (Virat Kohli) ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದು, ನಿರೀಕ್ಷೆಗೂ ಮುನ್ನವೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್ (Sachin Tendulkar) ಅವರ ದಾಖಲೆಯನ್ನು ಮುರಿದಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ 106 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. 98 ರನ್ ಗಳಿಸಿದ್ದಾಗ ಲಾಕಿ ಫರ್ಗುಸನ್ ಬೌಲಿಂಗ್‌ನಲ್ಲಿ ಚೆಂಡನ್ನು ಬ್ಯಾಕ್‌ವರ್ಡ್ ಸ್ವ್ಕೇರ್-ಲೇಗನತ್ತ ಅಟ್ಟಿದರು. ಚಿರತೆಯಂತ ಓಟದ ಮೂಲಕ 2 ರನ್ ಗಳಿಸಿದ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಪೂರೈಸಿದರು. ತಮ್ಮ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲಿ ಈ ಸಾಧನೆ ಮಾಡಿದರು. ಇದೇ ವೇಳೆ ಹೆಲ್ಮೆಟ್ ಮತ್ತು ಗ್ಲೌಸ್‌ಗಳನ್ನು ತೆಗೆದು ಶಿರಬಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ನಮಿಸಿದ್ದಾರೆ. ಸಚಿನ್ ಅವರು ಕೂಡ ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವವನ್ನು ಸ್ವೀಕರಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ 49 ಶತಕಗಳನ್ನು ಗಳಿಸಿದ್ದಾರೆ. 2023 ವಿಶ್ವಕಪ್ ಲೀಗ್‌ ಹಂತದಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 49ನೇ ಶತಕ ಬಾರಿಸುವ ಮೂಲಕ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇಂದು (ನವೆಂಬರ್ 15, ಬುಧವಾರ) ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ದಾಖಲೆಯನ್ನು ವಿರಾಟ್ ಬ್ರೇಕ್ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿರಾಟ್ ಅಂತಿಮವಾಗಿ 113 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸೇರಿ 117 ರನ್ ಗಳಿಸಿ ಟೀಂ ಸೌಥಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರು

ವಿರಾಟ್ ಕೊಹ್ಲಿ - 50

ಸಚಿನ್ ತೆಂಡೂಲ್ಕರ್ - 49

ರೋಹಿತ್ ಶರ್ಮಾ - 31

ರಿಕಿ ಪಾಂಟಿಂಗ್ - 30

ಸನತ್ ಜಯಸೂರ್ಯ - 28

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು

ರೋಹಿತ್ ಶರ್ಮಾ - 7

ಸಚಿನ್ ತೆಂಡೂಲ್ಕರ್ - 6

ಡೇವಿಡ್ ವಾರ್ನರ್ - 6

ರಿಕಿ ಪಾಂಟಿಂಗ್ - 5

ಕುಮಾರ್ ಸಂಗಕ್ಕಾರ - 5

ವಿರಾಟ್ ಕೊಹ್ಲಿ - 5

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ