logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Nz Semi Final: ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಡಿಆರ್‌ಎಸ್ ನಾಟೌಟ್; ಕೈಮುಗಿದು ನಿಟ್ಟುಸಿರು ಬಿಟ್ಟ ಅನುಷ್ಕಾ; ವಿಡಿಯೊ

IND vs NZ Semi Final: ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಡಿಆರ್‌ಎಸ್ ನಾಟೌಟ್; ಕೈಮುಗಿದು ನಿಟ್ಟುಸಿರು ಬಿಟ್ಟ ಅನುಷ್ಕಾ; ವಿಡಿಯೊ

Raghavendra M Y HT Kannada

Nov 15, 2023 06:05 PM IST

google News

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ

  • ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಕೊಹ್ಲಿ ಬ್ಯಾಟಿಂಗ್ ವೇಳೆ ಕಿವೀಸ್ ಆಟಗಾರರು ಡಿಆರ್‌ಎಸ್ ತೆಗೆದುಕೊಂಡಿದ್ದರು. ಆದರೆ ನಾಟೌಟ್ ತೀರ್ಪು ಬಂದಾಗ ಅನುಷ್ಕಾ ಪ್ರತಿಕ್ರಿಯೆ ನೋಡಿ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ

ಮುಂಬೈ (ಮಹಾರಾಷ್ಟ್ರ): ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ಐಸಿಸಿ ವಿಶ್ವಕಪ್‌ ಸೆಮಿ ಫೈನಲ್ (ICC ODI World Cup Semi Final) ಪಂದ್ಯದಲ್ಲಿ ಟೀಂ ಇಂಡಿಯಾ (Team India) ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 397 ರನ್ ಬಾರಿಸಿದೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಶೂನ್ಯದಲ್ಲಿದ್ದಾಗ ನ್ಯೂಜಿಲೆಂಡ್ ಡಿಆರ್‌ಎಸ್ ತೆಗೆದುಕೊಂಡಿತ್ತು. ಆದರೆ ಕೊಹ್ಲಿ ಪರ ತೀರ್ಪು ನಾಟೌಟ್ ಎಂದು ಬಂದಿದೆ. ಇದೇ ವೇಳೆ ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕೈಮುಗಿದು ನಿಟ್ಟುಸಿರುವ ಬಿಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊಹ್ಲಿ ಎಸೆತವೊಂದನ್ನ ಇನ್-ಕಟರ್ ಮಾಡಿದ್ದರು. ಕೂಡಲೇ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಮಯ್ಸನ್ ತಂಡದ ಆಟಗಾರರೊಂದಿಗೆ ಚರ್ಚಿಸಿ ಟಿ ಆಕಾರದಲ್ಲಿ ಕೈಗಳನ್ನು ಮೇಲಕ್ಕೆ ಎತ್ತಿ ಡಿಆರ್‌ಎಸ್‌ಗೆ ಮನವಿ ಮಾಡಿದರು. 47 ರನ್ ಗಳಿಸಿ ಆಗಾತಾನೆ ರೋಹಿತ್ ಶರ್ಮಾ ಔಟಾಗಿದ್ದರು. ಆದರೆ ಕೊಹ್ಲಿ ಅವರ ಡಿಆರ್‌ಎಸ್ ಸಾಕಷ್ಟು ಆತಂಕ ಮೂಡಿಸಿತ್ತು. ಆದರೆ ಅಂಪೈರ್ ರಿಚರ್ಡ್ ಇಲಿಂಗ್ ವರ್ತ್ ಡಿಆರ್‌ಎಸ್‌ ಅನ್ನು ನಾಟೌಟ್ ಎಂದು ನೀಡಿದರು. ಪುಣ್ಯಕ್ಕೆ ಕೊಹ್ಲಿ ಬಚಾವ್ ಆದರು. ಚೆಂಡು ಬ್ಯಾಟ್‌ಗೆ ತಾಗಿರುವುದು ಅಲ್ಟ್ರಾ-ಎಡ್ಜ್‌ನಲ್ಲಿ ತೋರಿಸಿತ್ತು. ಕಿವೀಸ್ ಪಡೆ ಮೊದಲ ಹಂತದಲ್ಲೇ ಒಂದು ಡಿಆರ್‌ಎಸ್‌ ಕಳೆದು ಕೊಂಡಿತು.

ಬಾಲ್ ಟ್ರ್ಯಾಕಿಂಗ್ ಕೂಡ ಅಗತ್ಯವಿರಲಿಲ್ಲ. ಕೊಹ್ಲಿ ಇಲ್ಲಿ ಸೇಫ್ ಆಗುತ್ತಿದ್ದಂತೆ ಅವರ ಮುಖದಲ್ಲಿ ನಗು ಮೂಡಿತು. ಈ ವೇಳೆ ಕ್ಯಾಮೆರಾ ತಕ್ಷಣ ಅನುಷ್ಕಾ ಶರ್ಮಾ ಅವರ ಕಡೆಗೆ ತಿರುಗಿತ್ತು. ಅನುಷ್ಕಾ ತಮ್ಮ ಎರಡೂ ಕೈಗಳನ್ನು ಮುಗಿದು ನಿಟ್ಟುಸಿರು ಬಿಟ್ಟಿದ್ದರು.

2015ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಕೊಹ್ಲಿ ಅವರು ಭಾರಿ ನಿರಾಸೆ ಮೂಡಿಸಿದ್ದರು. ಇವತ್ತು ಕೂಡ ಇದೇ ರೀತಿಯ ಆತಂಕ ಇತ್ತು. ಆದರೆ ಕೊಹ್ಲಿ ಇವತ್ತು ಭರ್ಜರಿ ಶತಕ ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಪೂರೈಸಿ ವಿಶ್ವದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್ 49 ಶತಕಗಳು ಈವರೆಗಿನ ಗರಿಷ್ಠವಾಗಿತ್ತು. ಇದೇ ವಿಶ್ವಕಪ್‌ನಲ್ಲಿ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದ ಕೊಹ್ಲಿ ಇದೀಗ ಕ್ರಿಕೆಟ್ ದೇವರನ್ನೇ ಮೀರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ