logo
ಕನ್ನಡ ಸುದ್ದಿ  /  ಕ್ರಿಕೆಟ್  /  Team India: 8ನೇ ಬಾರಿ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ಪ್ರವೇಶ; ಹಿಂದಿನ ಸೆಮೀಸ್ ಸೋಲು, ಗೆಲುವಿನ ಸಂಪೂರ್ಣ ಚಿತ್ರಣ ಇಲ್ಲಿದೆ

Team India: 8ನೇ ಬಾರಿ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ಪ್ರವೇಶ; ಹಿಂದಿನ ಸೆಮೀಸ್ ಸೋಲು, ಗೆಲುವಿನ ಸಂಪೂರ್ಣ ಚಿತ್ರಣ ಇಲ್ಲಿದೆ

Raghavendra M Y HT Kannada

Nov 13, 2023 04:26 PM IST

google News

ಬೆಂಗಳೂರಿನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮ್ಯಾಕ್ಸ್ ಓಡೌಡ್ ಅವರ ವಿಕೆಟ್ ಪಡೆದಾಗ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದು ಹೀಗೆ.

  • ಟೀಂ ಇಂಡಿಯಾ 8ನೇ ಬಾರಿ ಐಸಿಸಿ ವಿಶ್ವಕಪ್ ಸೆಮಿ ಫೈನಲ್ ಪ್ರವೇಶಿಸಿದೆ. ಹಿಂದಿನ ವಿಶ್ವಕಪ್‌ಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಸೆಮಿ ಫೈನಲ್ ಸಾಧನೆಯ ಸಂಪೂರ್ಣ ಚಿತ್ರಣ ಇಲ್ಲಿದೆ.

ಬೆಂಗಳೂರಿನಲ್ಲಿ ನಡೆದ ನೆದರ್ಲೆಂಡ್ಸ್  ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮ್ಯಾಕ್ಸ್ ಓಡೌಡ್ ಅವರ ವಿಕೆಟ್ ಪಡೆದಾಗ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದು ಹೀಗೆ.
ಬೆಂಗಳೂರಿನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮ್ಯಾಕ್ಸ್ ಓಡೌಡ್ ಅವರ ವಿಕೆಟ್ ಪಡೆದಾಗ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದ್ದು ಹೀಗೆ. (PTI)

ಬೆಂಗಳೂರು: ಭಾರತದ ಕ್ರಿಕೆಟ್ ತಂಡ (Team India) 2023ರ ವಿಶ್ವಕಪ್‌ನ್‌ (ODI World Cup 2023) ಗ್ರೂಪ್ ಹಂತದ 9 ಪಂದ್ಯಗಳಲ್ಲೂ ಗೆಲುವು ಪಡೆದು ಸೆಮಿ ಫೈನಲ್ ಪ್ರವೇಶಿಸಿದೆ. ನವೆಂಬರ್ 15ರ ಬುಧವಾರ ಮುಂಬೈನ ವಾಂಖೆಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು ಆಡಲಿದೆ. ಈವರೆಗೆ ನಡೆದಿರುವ ವಿಶ್ವಕಪ್‌ ಸೆಮಿ ಫೈನಲ್‌ಗಳಲ್ಲಿ ಭಾರತದ ಸಾಧನೆ ಹೇಗಿತ್ತು ಅನ್ನೋದರ ಕಿರು ನೋಟ ಇಲ್ಲಿ ನೀಡಲಾಗಿದೆ.

ಇಲ್ಲಿಯವರಗೆ 13 ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಭಾಗವಹಿಸಿದೆ. ಈ ಪೈಕಿ 2023ರ ವಿಶ್ವಕಪ್ ಸೇರಿ 8 ಸಲ ಸೆಮಿ ಫೈನಲ್ ಪ್ರವೇಶಿಸಿದೆ. ಇದು ನಿಜಕ್ಕೂ ದೊಡ್ಡ ಸಾಧನೆ. ಆದರೆ ಹಿಂದಿನ ವಿಶ್ವಕಪ್ ಸೆಮಿಫೈನಲ್‌ ಪಂದ್ಯಗಳಲ್ಲಿ ಭಾರತದ ಯಶಸ್ಸಿನ ಶೇಕಡಾವಾರು ಪ್ರಮಾಣ ತುಂಬಾ ಕಡಿಮೆ ಇದೆ.

ಕಳೆದ 7 ಸೆಮಿ ಫೈನಲ್‌ಗಳಲ್ಲಿ ಭಾರತ ಕೇವಲ ಮೂರು ಬಾರಿ ಗೆದ್ದು ಫೈನಲ್ ಪ್ರವೇಶಿಸಿದೆ. ಆದರೆ ನಾಲ್ಕು ಬಾರಿ ವಿಶ್ವಕಪ್ ಸೆಮಿ ಫೈನಲ್‌ಗಳಲ್ಲಿ ಸೋಲು ಕಂಡಿದೆ. ಒಟ್ಟಾರೆಯಾಗಿ ಟೀಂ ಇಂಡಿಯಾ ಸೆಮಿ ಫೈನಲ್‌ ಗೆಲುವಿನ ಶೇಕಡಾವಾರು ಪ್ರಮಾಣ 43 ರಷ್ಟಿದೆ.

1983ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಗೆಲುವು

ಭಾರತೀಯ ಕ್ರಿಕೆಟ್ ತಂಡ 1983ರಲ್ಲಿ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪ್ರವೇಶಿಸಿತ್ತು. ಇಂಗ್ಲೆಂಡ್ ವಿರುದ್ಧದ ಪ್ರಶಸ್ತಿ ಸುತ್ತಿನ ಕದನದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 213 ರನ್‌ಗಳಿಗೆ ಆಲೌಟ್ ಆಗಿತ್ತು. 214 ರನ್‌ಗಳ ಗುಗರಿ ಬೆನ್ನಟ್ಟಿದ್ದ ಭಾರತ, ನಾಲ್ಕು ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಮಹತ್ವದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಲಾಲಾ ಅಮರನಾಥ್ ಅವರು 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದಿದ್ದರು. ಅಮರನಾಥ್ 27 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದಿದ್ದರು. ಅಲ್ಲದೆ, ತಂಡದ ಪರ 46 ರನ್ ಗಳಿಸಿದ್ದರು.

1987ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಸೋಲು

ಭಾರತ ತಂಡ ಸತತ ಎರಡನೇ ಬಾರಿಯೂ ವಿಶ್ವಕಪ್ ಸೆಮಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಈ ಬಾರಿಯೂ ಸೆಮೀಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧವೇ ಪೈಪೋಟಿ ನಡೆಸಿತ್ತು. ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ಈ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ 219 ರನ್ ಗಳಿಗೆ ಕುಸಿತ ಕಂಡಿತು.

1996ರಲ್ಲಿ ಶ್ರೀಲಂಕಾ ಪರ ಫಲಿತಾಂಶ

1996 ಏಕದಿನ ವಿಶ್ವಕಪ್‌ನಲ್ಲೂ ಟೀಂ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿತ್ತು. ಕೋಲ್ಕತ್ತದಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ಭಾರತ ನಡುವಿನ ಪಂದ್ಯವನ್ನು ಎಂದೂ ಮರೆಯಲಾಗುವುದಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತು. 251 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ 8 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತ್ತು. ಆದರೆ ಭಾರತದ ಎಂಟನೇ ವಿಕೆಟ್ ಪತನವಾಗುತ್ತಿದ್ದಂತೆ ಈಡನ್ ಗಾರ್ಡನ್ಸ್‌ನಲ್ಲಿ ಪ್ರೇಕ್ಷಕರು ಆಕ್ರೋಶವನ್ನು ಹೊರಹಾಕಿ ಪ್ರತಿಭಟನೆ ನಡೆಸಿದರು. ಈ ಘಟನೆಯಿಂದಾಗಿ ಪಂದ್ಯದ ಉಳಿದ ಆಟವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶ್ರೀಲಂಕಾ ಪರವಾಗಿ ಫಲಿತಾಂಶವನ್ನು ನೀಡಲಾಯಿತು.

2003ರಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಸೆಮಿ ಫೈಟ್

2003ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೊಹಾಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ 85 ರನ್‌ಗಳ ಆಕರ್ಷಕ ಅರ್ಧ ಶತಕದ ನೆರವಿನಿಂದ ಪಾಕಿಸ್ತಾನ ಗೆಲುವಿಗೆ 261 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ 231 ರನ್‌ಗಳಿಗೆ ಆಲೌಟ್‌ ಆಗಿತ್ತು.

2015ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಪರಾಭವ

ಆಸ್ಟ್ರೇಲಿಯಾದಲ್ಲಿ 2015ರಲ್ಲಿ ನಡೆದಿದ್ದ ವಿಶ್ವಕಪ್ ಮಹಾ ಟೂರ್ನಿಯಲ್ಲೂ ಟೀಂ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿತ್ತು. ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ 328 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 47 ಓವರ್‌ಗಳಲ್ಲಿ 233 ರನ್ ಗಳಿಸಿ ಆಲೌಟ್ ಆಗಿತ್ತು.

2019ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಎಡವಿದ ಭಾರತ

2019ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಕಾಣಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 239 ರನ್ ಪೇರಿಸಿತು. 240 ರನ್‌ಗಳ ಗುರಿಯನ್ನು ಚೇಸಿಂಗ್ ಮಾಡಲು ಇಳಿದ ಭಾರತ 221 ರನ್‌ಗಳಿಗೆ ಸರ್ವಪತನ ಕಂಡಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ