logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Icc World Cup 2023: ವಿಶ್ವಕಪ್‌ನಲ್ಲಿ ಕೊಹ್ಲಿ ಸೇರಿ ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿ ಇವರೇ

ICC World Cup 2023: ವಿಶ್ವಕಪ್‌ನಲ್ಲಿ ಕೊಹ್ಲಿ ಸೇರಿ ಟೀಂ ಇಂಡಿಯಾ ಬ್ಯಾಟಿಂಗ್ ಶಕ್ತಿ ಇವರೇ

Sep 06, 2023 04:32 PM IST

ವಿಶ್ವಕಪ್ 2023 ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟೀಂ ಇಂಡಿಯಾಗೆ ಬ್ಯಾಟಿಂಗ್ ಬಲವಾಗಿರುವ ಬ್ಯಾಟ್ಸಮನ್‌ಗಳ ವಿವರ ಇಲ್ಲಿದೆ.  ಕಿಂಗ್ ಕೊಹ್ಲಿ, ರೋಹಿತ್, ಗಿಲ್, ಇಶಾನ್ ಸೇರಿ 7 ಬ್ಯಾಟರ್‌ಗಳ ಅಂಕಿ ಅಂಶಗಳು ಹೀಗಿವೆ.

ವಿಶ್ವಕಪ್ 2023 ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟೀಂ ಇಂಡಿಯಾಗೆ ಬ್ಯಾಟಿಂಗ್ ಬಲವಾಗಿರುವ ಬ್ಯಾಟ್ಸಮನ್‌ಗಳ ವಿವರ ಇಲ್ಲಿದೆ.  ಕಿಂಗ್ ಕೊಹ್ಲಿ, ರೋಹಿತ್, ಗಿಲ್, ಇಶಾನ್ ಸೇರಿ 7 ಬ್ಯಾಟರ್‌ಗಳ ಅಂಕಿ ಅಂಶಗಳು ಹೀಗಿವೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟರ್‌ಗಳ ಪೈಕಿ ಜಗತ್ತಿನ ಶ್ರೇಷ್ಠ ಬ್ಯಾಟ್ಸಮನ್‌ಗಳಲ್ಲಿ ಒಬ್ಬರು. ವಿರಾಟ್ ಇದುವರೆಗೆ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ 12,902 ರನ್ ಗಳ ಮೈಲುಗಲ್ಲು ಸಾಧಿಸಿದ್ದಾರೆ. ವಿರಾಟ್ ವಿಶ್ವಕಪ್‌ನಲ್ಲಿ ಭಾರತ ಪ್ರಮಖ ಬ್ಯಾಟ್ಸಮನ್‌ ಕೂಡ ಆಗಿದ್ದಾರೆ. 
(1 / 7)
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟರ್‌ಗಳ ಪೈಕಿ ಜಗತ್ತಿನ ಶ್ರೇಷ್ಠ ಬ್ಯಾಟ್ಸಮನ್‌ಗಳಲ್ಲಿ ಒಬ್ಬರು. ವಿರಾಟ್ ಇದುವರೆಗೆ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ 12,902 ರನ್ ಗಳ ಮೈಲುಗಲ್ಲು ಸಾಧಿಸಿದ್ದಾರೆ. ವಿರಾಟ್ ವಿಶ್ವಕಪ್‌ನಲ್ಲಿ ಭಾರತ ಪ್ರಮಖ ಬ್ಯಾಟ್ಸಮನ್‌ ಕೂಡ ಆಗಿದ್ದಾರೆ. (AFP)
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿ ಇನ್ನಿಂಗ್ಸ್‌ಗೆ ಹೆಸರುವಾಸಿಯಾಗಿದ್ದಾರೆ. ಒಮ್ಮೆ ಕ್ರೀಸ್‌ಗೆ ಕಚ್ಚಿ ನಿಂತರೆ ಎದುರಾಳಿಗಳು ಯಾರೇ ಆಗಿದ್ದರೂ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸುವುದರಲ್ಲಿ ರೋಹಿತ್ ಎತ್ತಿದ ಕೈ. ಇವರು ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 10,000 ರನ್‌ಗಳ ಗಡಿ ತಲುಪುವ ಸಮೀಪದಲ್ಲಿದ್ದಾರೆ.
(2 / 7)
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿ ಇನ್ನಿಂಗ್ಸ್‌ಗೆ ಹೆಸರುವಾಸಿಯಾಗಿದ್ದಾರೆ. ಒಮ್ಮೆ ಕ್ರೀಸ್‌ಗೆ ಕಚ್ಚಿ ನಿಂತರೆ ಎದುರಾಳಿಗಳು ಯಾರೇ ಆಗಿದ್ದರೂ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸುವುದರಲ್ಲಿ ರೋಹಿತ್ ಎತ್ತಿದ ಕೈ. ಇವರು ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 10,000 ರನ್‌ಗಳ ಗಡಿ ತಲುಪುವ ಸಮೀಪದಲ್ಲಿದ್ದಾರೆ.
ಐಸಿಸಿ (ICC) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಪ್ರಕಟಿಸಿರುವ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರ ಶುಭ್ಮನ್ ಗಿಲ್ ನಾಲ್ಕನೇ ಸ್ಥಾನಕ್ಕೇರುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿಯಲಿರುವ ಗಿಲ್ ಭರವಸೆಯ ಬ್ಯಾಟರ್.
(3 / 7)
ಐಸಿಸಿ (ICC) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಪ್ರಕಟಿಸಿರುವ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರ ಶುಭ್ಮನ್ ಗಿಲ್ ನಾಲ್ಕನೇ ಸ್ಥಾನಕ್ಕೇರುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿಯಲಿರುವ ಗಿಲ್ ಭರವಸೆಯ ಬ್ಯಾಟರ್.(AFP)
ಶ್ರೇಯಸ್ ಅಯ್ಯರ್ ಈವರೆಗೆ 44 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 2 ಶತಕ, 14  ಅರ್ಧ ಶತಕಗಳನ್ನು ಗಳಿಸಿದ್ದಾರೆ. 45.69ರ ಸರಾಸರಿಯಲ್ಲಿ 1,645 ರನ್ ಗಳಿಸಿದ್ದಾರೆ.ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಅಯ್ಯರ್‌ಗಿದೆ.
(4 / 7)
ಶ್ರೇಯಸ್ ಅಯ್ಯರ್ ಈವರೆಗೆ 44 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 2 ಶತಕ, 14  ಅರ್ಧ ಶತಕಗಳನ್ನು ಗಳಿಸಿದ್ದಾರೆ. 45.69ರ ಸರಾಸರಿಯಲ್ಲಿ 1,645 ರನ್ ಗಳಿಸಿದ್ದಾರೆ.ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಅಯ್ಯರ್‌ಗಿದೆ.(AP)
ಕನ್ನಡಿಗ ಕೆಎಲ್ ರಾಹುಲ್ ಈವರೆಗೆ 54 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 5 ಶತಕ, 13 ಅರ್ಧ ಶತಕಗಳನ್ನು ಗಳಿಸಿದ್ದಾರೆ. 45.14ರ ಸರಾಸರಿಯಲ್ಲಿ 1,986 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ನಂಬಿಕೆಯ ಬ್ಯಾಟರ್ ಆಗಿದ್ದಾರೆ.
(5 / 7)
ಕನ್ನಡಿಗ ಕೆಎಲ್ ರಾಹುಲ್ ಈವರೆಗೆ 54 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 5 ಶತಕ, 13 ಅರ್ಧ ಶತಕಗಳನ್ನು ಗಳಿಸಿದ್ದಾರೆ. 45.14ರ ಸರಾಸರಿಯಲ್ಲಿ 1,986 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ನಂಬಿಕೆಯ ಬ್ಯಾಟರ್ ಆಗಿದ್ದಾರೆ.
ಐಸಿಸಿ ವಿಶ್ವಕಪ್‌ಗೆ ಪ್ರಕಟಿಸಿರುವ ಟೀಂ ಇಂಡಿಯಾ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿದ್ದಾರೆ. 79 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇವರ ಬ್ಯಾಟ್‌ನಿಂದ ಈವರೆಗೆ ಒಂದೇ ಒಂದು ಶತಕ ಬಂದಿಲ್ಲ. 11 ಅರ್ಧ ಶತಕಗಳನ್ನು ಗಳಿಸಿದ್ದಾರೆ. 34.37ರ ಸರಾಸರಿಯಲ್ಲಿ 1,753 ರನ್ ಗಳಿಸಿದ್ದಾರೆ. ಭಾರತ ತಂಡವನ್ನು ಗೆಲ್ಲಿಸಬಲ್ಲ ನಂಬಿಕೆಯ ಆಟಗಾರ ಇವರು.
(6 / 7)
ಐಸಿಸಿ ವಿಶ್ವಕಪ್‌ಗೆ ಪ್ರಕಟಿಸಿರುವ ಟೀಂ ಇಂಡಿಯಾ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿದ್ದಾರೆ. 79 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇವರ ಬ್ಯಾಟ್‌ನಿಂದ ಈವರೆಗೆ ಒಂದೇ ಒಂದು ಶತಕ ಬಂದಿಲ್ಲ. 11 ಅರ್ಧ ಶತಕಗಳನ್ನು ಗಳಿಸಿದ್ದಾರೆ. 34.37ರ ಸರಾಸರಿಯಲ್ಲಿ 1,753 ರನ್ ಗಳಿಸಿದ್ದಾರೆ. ಭಾರತ ತಂಡವನ್ನು ಗೆಲ್ಲಿಸಬಲ್ಲ ನಂಬಿಕೆಯ ಆಟಗಾರ ಇವರು.(HT)
ಟಿ20 ಸ್ಪೆಷಲಿಸ್ಟ್ ಆಗಿರುವ ಸೂರ್ಯಕುಮಾರ್ ಯಾದವ್ ಅವರನ್ನು ಐಸಿಸಿ ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಏಕದಿನ ಮಾದರಿಲ್ಲಿ ಇವರದ್ದು ಹೇಳಿಕೊಳ್ಳುವಂತಹ ಪ್ರದರ್ಶನ ಇನ್ನೂ ಬಂದಿಲ್ಲ. ಈವರೆಗೆ 26 ಅಂತಾರಾಷ್ಟ್ರೀಯ ಪಂದ್ಯಗಳಿಂದ 24.33 ಸರಾಸರಿಯಲ್ಲಿ 511 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧ ಶತಕಗಳಿವೆ. ವಿಶ್ವಕಪ್‌ನಲ್ಲಿ ಮಿಂಚುವ ಮೂಲಕ ಆಯ್ಕೆಗಾರರ ನಂಬಿಕೆಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ.
(7 / 7)
ಟಿ20 ಸ್ಪೆಷಲಿಸ್ಟ್ ಆಗಿರುವ ಸೂರ್ಯಕುಮಾರ್ ಯಾದವ್ ಅವರನ್ನು ಐಸಿಸಿ ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಏಕದಿನ ಮಾದರಿಲ್ಲಿ ಇವರದ್ದು ಹೇಳಿಕೊಳ್ಳುವಂತಹ ಪ್ರದರ್ಶನ ಇನ್ನೂ ಬಂದಿಲ್ಲ. ಈವರೆಗೆ 26 ಅಂತಾರಾಷ್ಟ್ರೀಯ ಪಂದ್ಯಗಳಿಂದ 24.33 ಸರಾಸರಿಯಲ್ಲಿ 511 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧ ಶತಕಗಳಿವೆ. ವಿಶ್ವಕಪ್‌ನಲ್ಲಿ ಮಿಂಚುವ ಮೂಲಕ ಆಯ್ಕೆಗಾರರ ನಂಬಿಕೆಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ.(ANI)

    ಹಂಚಿಕೊಳ್ಳಲು ಲೇಖನಗಳು