logo
ಕನ್ನಡ ಸುದ್ದಿ  /  ಕ್ರಿಕೆಟ್  /  14 ತಿಂಗಳ ಬಳಿಕ ತನ್ನ ಮೊದಲ ಟಿ20 ಆಡಲು ಇಂದೋರ್ ತಲುಪಿದ ಕೊಹ್ಲಿ; ಹಲವು ದೊಡ್ಡ ದಾಖಲೆಗಳ ಮೇಲೆ ಕಣ್ಣು

14 ತಿಂಗಳ ಬಳಿಕ ತನ್ನ ಮೊದಲ ಟಿ20 ಆಡಲು ಇಂದೋರ್ ತಲುಪಿದ ಕೊಹ್ಲಿ; ಹಲವು ದೊಡ್ಡ ದಾಖಲೆಗಳ ಮೇಲೆ ಕಣ್ಣು

Prasanna Kumar P N HT Kannada

Jan 13, 2024 03:32 PM IST

google News

ವಿರಾಟ್ ಕೊಹ್ಲಿ.

    • Virat Kohli: ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ತಪ್ಪಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಇದೀಗ ಎರಡನೇ ಟಿ20ಗೆ ತಂಡವನ್ನು ಕೂಡಿಕೊಂಡಿದ್ದಾರೆ. ಕಂಬ್ಯಾಕ್ ಪಂದ್ಯದಲ್ಲಿ ಹಲವು ದಾಖಲೆ ಪುಡಿಗಟ್ಟಲು ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ.

ವೈಯಕ್ತಿಕ ಕಾರಣಗಳಿಂದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ (India vs Afghanistan) ಅಲಭ್ಯರಾಗಿದ್ದ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli), ಈಗ 2ನೇ ಪಂದ್ಯಕ್ಕೆ ಮರಳಿದ್ದಾರೆ. 14 ತಿಂಗಳ ನಂತರ ತನ್ನ ಮೊದಲ ಟಿ20 ಪಂದ್ಯವನ್ನಾಡಲು ಮುಂಬೈನಿಂದ ಇಂದೋರ್​ಗೆ ತೆರಳಿದ್ದಾರೆ. ಮಾಜಿ ನಾಯಕ ತಮ್ಮ ಕೊನೆಯ ಟಿ20 ಪಂದ್ಯವನ್ನು 2022ರ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು.

2024ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡುತ್ತಿರುವ ಕೊನೆಯ ಅಂತಾರಾಷ್ಟ್ರೀಯ ಸರಣಿಗೆ ಕೊಹ್ಲಿಗೆ ಮತ್ತೆ ಅವಕಾಶ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೊಹ್ಲಿ ನಿರ್ಗಮನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2022ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ, ಸೋತಿತ್ತು. ಆ ಬಳಿಕ ಐಪಿಎಲ್ ಹೊರತುಪಡಿಸಿ ಅಂತಾರಾಷ್ಟ್ರೀಯ ಟಿ20 ಆಡಿರಲಿಲ್ಲ.

ದೊಡ್ಡ ದಾಖಲೆ ಮೇಲೆ ಕಣ್ಣು

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹಲವು ಮೈಲುಗಲ್ಲುಗಳನ್ನು ದಾಟಿರುವ ಕೊಹ್ಲಿ, ಮತ್ತೊಂದು ಐತಿಹಾಸಿಕ ದಾಖಲೆಗೆ ಸಜ್ಜಾಗಿದ್ದಾರೆ. ಕೇವಲ 35 ರನ್ ಸಿಡಿಸಿದ್ದೇ ಆದರೆ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಲಿದ್ದಾರೆ. ಸದ್ಯ ಅವರು 11965 ರನ್ ಸಿಡಸಿದ್ದು, 35 ರನ್ ಗಳಿಸಿದರೆ 12 ಸಾವಿರ ರನ್ ಗಡಿ ದಾಟಲಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಹಾಗೂ ವಿಶ್ವದ 4ನೇ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.

100 ಬಾರಿ 50+ ಸ್ಕೋರ್​​

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಅರ್ಧಶತಕ ಸಿಡಸಿದರೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿ 100 ಬಾರಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 38 ಬಾರಿ ಈ ಸಾಧನೆ ಮಾಡಿದ್ದರೆ, ಐಪಿಎಲ್​ ಮತ್ತು ದೇಶೀಯ ಟಿ20 ಕ್ರಿಕೆಟ್​ನಲ್ಲಿ 61 ಬಾರಿ 50+ ಸ್ಕೋರ್ ಮಾಡಿದ್ದಾರೆ. ಅಲ್ಲದೆ, ಚುಟುಕು ಕ್ರಿಕೆಟ್​ನಲ್ಲಿ 9 ಸಾವಿರ ಎಸೆತಗಳನ್ನು ಎದುರಿಸುವ ಅವಕಾಶ ಸಹ ಕೊಹ್ಲಿ ಮುಂದಿದೆ. ಅದಕ್ಕೆ ಬೇಕಿರುವುದು 28 ಎಸೆತಗಳು ಮಾತ್ರ. ಆ ಮೂಲಕ ಈ ಸಾಧನೆಗೈದ ವಿಶ್ವದ ಮೂರನೇ ಬ್ಯಾಟರ್ ಎನಿಸಲಿದ್ದಾರೆ.

ಕೊಹ್ಲಿ ಬಗ್ಗೆ ಸಬಾ ಕರೀಮ್ ಮಾತು

ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಮೂಲಕ ನಿರ್ಣಾಯಕ ಪಾತ್ರವಹಿಸುವ ಅಗತ್ಯ ಇದೆ. ವೆಸ್ಟ್​ ಇಂಡೀಸ್​ ಪಿಚ್​​ಗಳನ್ನು ಪರಿಗಣಿಸಿ, ಕೊಹ್ಲಿ ತನ್ನ ಪರಿಚಿತ ಪಾತ್ರಕ್ಕೆ ಅಂಟಿಕೊಂಡು ರನ್ ಗಳಿಸಲಿದ್ದಾರೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಹೇಳಿದ್ದರು. ಸದ್ಯ ಕೊಹ್ಲಿ ಆಗಮನದಿಂದ ತಂಡದಲ್ಲಿ ಬದಲಾವಣೆಯಾಗುವುದು ಖಚಿತ.

ಮೊದಲ ಟಿ20 ಪಂದ್ಯದಲ್ಲಿ ಗೆಲುವು

ಜನವರಿ 11ರಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್​ ಐಎಸ್​ ಬಿಂದ್ರಾ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿತು. ಭಾರತದ ಬೌಲರ್​ಗಳ ನಲುಗಿ ಪ್ರವಾಸಿ ತಂಡ, 5 ವಿಕೆಟ್​ಗೆ 158 ರನ್​ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 15 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. 4 ವಿಕೆಟ್​ ನಷ್ಟಕ್ಕೆ 159 ರನ್ ಬಾರಿಸಿ ಆರು ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿತು. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಎರಡನೇ ಪಂದ್ಯದಲ್ಲಿ ಇಂದೋರ್​​ನಲ್ಲಿ ನಡೆಯಲಿದೆ.

ಭಾರತ ಟಿ20 ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್​​, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಅವೇಶ್ ಖಾನ್, ಕುಲ್ದೀಪ್ ಯಾದವ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ