IND vs SA: 11 ಎಸೆತಗಳಲ್ಲಿ 6 ವಿಕೆಟ್ ಪತನ; 153 ರನ್‌ಗೆ ಭಾರತ ಆಲೌಟ್, 6 ಮಂದಿ ಡಕೌಟ್
Jan 03, 2024 07:59 PM IST
ದಕ್ಷಿಣ ಆಫ್ರಿಕಾ ಆಟಗಾರರ ಸಂಭ್ರಮ
- South Africa vs India: ಒಂದು ಹಂತದಲ್ಲಿ 153 ರನ್ ವೇಳೆಗೆ ಕೇವಲ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಭಾರತ, ಮರುಕ್ಷಣವೇ ಅದೇ 153 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಆರು ಬ್ಯಾಟರ್‌ಗಳು ಡಕೌಟ್ ಆಗಿ ಕಳಪೆ ದಾಖಲೆ ನಿರ್ಮಿಸಿದ್ದಾರೆ.
W 0 W 0 W 0 0 W 0 W W... ಇದು ಕೊನೆಯ 11 ಎಸೆತಗಳಲ್ಲಿ ಭಾರತದ ವಿಕೆಟ್‌ಗಳು ಉರುಳಿದ ಪರಿ. ದಕ್ಷಿಣ ಆಫ್ರಿಕಾ (South Africa vs India 2nd Test) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ದಿಢೀರ್ ಕುಸಿತ ಕಂಡಿದೆ. ಒಂದು ಹಂತದಲ್ಲಿ 153 ರನ್ ವೇಳೆಗೆ ಕೇವಲ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಭಾರತ, ಮರುಕ್ಷಣವೇ ಅದೇ 153 ರನ್‌ಗಳಿಗೆ ಆಲೌಟ್ ಆಗಿದೆ. ಎರಡು ಓವರ್‌ಗಳೊಳಗೆ 11 ಎಸೆತಗಳಲ್ಲಿ ಮೇಲಿಂದ ಮೇಲೆ ಆರು ವಿಕೆಟ್ ಕಳೆದುಕೊಂಡು ಮೊದಲ ದಿನವೇ ಇನ್ನಿಂಗ್ಸ್ ಮುಗಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಮೊದಲ ಸೆಷನ್‌ನಲ್ಲೇ ಕೇವಲ 55 ರನ್‌ಗಳಿಗೆ ಆಲೌಟ್ ಆಯ್ತು. ಇದಕ್ಕೆ ಪ್ರತಿಯಾಗಿ ಭಾರತ ಉತ್ತಮ ಮೊತ್ತ ಕಲೆ ಹಾಕುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ದಿನದೊಳಗೆ ರೋಹಿತ್ ಶರ್ಮಾ ಬಳಗ ಕೂಡಾ ಆಲೌಟ್ ಆಗಿದೆ. ಪಂದ್ಯದ ಮೊದಲ ದಿನದ ಅಂತ್ಯಕ್ಕೂ ಮುನ್ನ ದಿನದಾಟದಲ್ಲಿ ಬೌಲರ್‌ಗಳು ಪಾರಮ್ಯ ಮೆರೆದಿದ್ದು, 20 ವಿಕೆಟ್‌ಗಳು ಪತನಗೊಂಡಿವೆ.
ಇದನ್ನೂ ಓದಿ | Video: ಕೇಶವ್ ಮಹಾರಾಜ್ ಎಂಟ್ರಿಗೆ ಮೊಳಗಿದ ರಾಮ್ ಸಿಯಾ ರಾಮ್ ಹಾಡು; ಕೊಹ್ಲಿ ಏನ್ ಮಾಡಿದ್ರು ನೋಡಿ
ಸದ್ಯ ಕೇವಲ 98 ರನ್‌ಗಳ ಮುನ್ನಡೆಯೊಂದಿಗೆ ಭಾರತ ಇನ್ನಿಂಗ್ಸ್ ಮುಗಿಸಿದೆ. ಭಾರತದ ಪರ ವಿರಾಟ್ ಕೊಹ್ಲಿ 46 ರನ್ ಗಳಿಸಿ ರಬಾಡಾಗೆ ವಿಕೆಟ್ ಒಪ್ಪಿಸಿದರು. ಇದು ಭಾರತದ ಪಾಲಿನ ವೈಯಕ್ತಿಕ ಗರಿಷ್ಠ ಮೊತ್ತ. ಉಳಿದಂತೆ ನಾಯಕ ರೋಹಿತ್ 39 ರನ್ ಪೇರಿಸಿದರೆ, ಶುಭ್ಮನ್ ಗಿಲ್ 36 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ ಒಬ್ಬರು ಒಂದಂಕಿ ಮೊತ್ತ 8 ರನ್ ಗಳಿಸಿ ಔಟಾದರೆ, ಉಳಿದ ಎಲ್ಲಾ ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರು. ಜೈಸ್ವಾಲ್ ಅಯ್ಯರ್, ಜಡೇಜಾ ಸೇರಿದಂತೆ ಏಳು ಮಂದಿ ಡಕೌಟ್ ಆಗಿ ನಿರಾಶೆ ಮೂಡಿಸಿದರು.
ಇದನ್ನೂ ಓದಿ | ಕೇವಲ 55 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್; ಹರಿಣಗಳ ಬ್ಯಾಟಿಂಗ್ ಲೈನಪ್ ಹಣ್ಣುಗಾಯಿ ನೀರುಗಾಯಿ ಮಾಡಿದ ಸಿರಾಜ್
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ದಕ್ಷಿಣ ಆಫ್ರಿಕಾ 23.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಸಿರಾಜ್ ದಾಳಿಗೆ ಮಂಕಾದ ಆತಿಥೇಯರು ಮೊದಲ ದಿನದಾಟದ ಮೊದಲ ಸೆಷನ್‌ನಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಭರ್ಜರಿ 6 ವಿಕೆಟ್‌ಗಳನ್ನು ಕಬಳಿಸಿದ ವೇಗಿ ಸಿರಾಜ್, ಟೆಸ್ಟ್ ವೃತ್ತಿ ಜೀವನದ ಅತ್ಯುತ್ತಮ ಅಂಕಿ ಅಂಶ ದಾಖಲಿಸಿದರು.
ದಕ್ಷಿಣ ಆಫ್ರಿಕಾ ಪರ ಡೇವಿಡ್ ಬೆಡಿಂಗ್‌ಹ್ಯಾಮ್ (12) ಮತ್ತು ಕೈಲ್ ವೆರೆನ್ನೆ (15) ಹೊರತುಪಡಿಸಿದರೆ, ಬೇರೆ ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ಗಳಿಸಿಲ್ಲ. ಅತ್ತ ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ಕೂಡಾ ತಲಾ ಎರಡು ವಿಕೆಟ್ ಕಬಳಿಸಿ ಅಬ್ಬರಿಸಿದರು. ಕೇವಲ 9 ಓವರ್ ಬೌಲಿಂಗ್ ಮಾಡಿದ ಸಿರಾಜ್ 15 ರನ್ ಮಾತ್ರ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದರು.
Gurugram : ಗುರುಗಾಂವ್ ನ ವಸತಿ ಸಮುಚ್ಛಯಕ್ಕೆ ನುಗ್ಗಿದ ಚಿರತೆ ; ಸೆರೆ ಹಿಡಿಯಲು ಅರಣ್ಯ ಇಲಾಖೆ, ಪೊಲೀಸರ ಸಾಹಸ