logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಹುಲ್-ಭರತ್ ಇನ್, ಮೂವರು ಆಲ್‌ರೌಂಡರ್‌ಗಳು; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ

ರಾಹುಲ್-ಭರತ್ ಇನ್, ಮೂವರು ಆಲ್‌ರೌಂಡರ್‌ಗಳು; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ

Jayaraj HT Kannada

Jan 23, 2024 05:41 PM IST

google News

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ

    • IND vs ENG 1st Test: ವಿರಾಟ್‌ ಕೊಹ್ಲಿ ಭಾರತ ತಂಡದಲ್ಲಿದ್ದರೆ, ಮದ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆನೆಬಲ ಬರುತ್ತಿತ್ತು. ಅವರ ಸ್ಥಾನ ತುಂಬಬಲ್ಲ ಮತ್ತೋರ್ವ ಬಲಿಷ್ಠ ಆಟಗಾರನ್ನು ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡಬೇಕಿದೆ. ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ಆಡುವ ಬಳಗ ಹೀಗಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ (PTI)

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ (India vs England, 1st Test) ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಜನವರಿ 25ರ ಗುರುವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ (Rajiv Gandhi International Stadium) ಪಂದ್ಯ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಿದ್ದು, ಅನುಭವಿ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ವೈಯಕ್ತಿಕ ಕಾರಣ ನೀಡಿ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ಸದ್ಯ, ಈವರೆಗೆ ಬಿಸಿಸಿಐ ಕೊಹ್ಲಿಗೆ ಬದಲಿ ಆಟಗಾರನನ್ನು ಹೆಸರಿಸಿಲ್ಲ.

ತಂಡದಿಂದ ಕೊಹ್ಲಿ ಹಿಂದೆ ಸರಿಯಲು ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಕೊಹ್ಲಿಯ ಗೌಪ್ಯತೆಯನ್ನು ಗೌರವಿಸಬೇಕು, ಅಲ್ಲದೆ ಯಾವುದೇ ಊಹಾಪೋಹಗಳಿಗೆ ಒಳಗಾಗಬೇಡಿ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಭಿಮಾನಿಗಳಲ್ಲಿ ವಿನಂತಿಸಿದೆ.

ಕೊಹ್ಲಿ ತಂಡದಲ್ಲಿದ್ದರೆ, ಮದ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆನೆಬಲ ಬರುತ್ತಿತ್ತು. ಇದೀಗ ವಿರಾಟ್‌ ಅನುಪಸ್ಥಿತಿಯಿಂದ ತಂಡದ ಮಧ್ಯಮ ಕ್ರಮಾಂಕವು ತುಸು ದುರ್ಬಲವಾಗಿ ಕಾಣುತ್ತಿದೆ. ಅವರ ಸ್ಥಾನ ತುಂಬಬಲ್ಲ ಮತ್ತೋರ್ವ ಬಲಿಷ್ಠ ಆಟಗಾರನ್ನು ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡಬೇಕಿದೆ.

ಇದನ್ನೂ ಓದಿ | ಭಾರತ vs ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಕೀಪಿಂಗ್ ಮಾಡಲ್ಲ; ಕೋಚ್‌ ದ್ರಾವಿಡ್ ಸ್ಪಷ್ಟನೆ

ಇಂಡೋ-ಇಂಗ್ಲೆಂಡ್‌ ಸರಣಿಯಲ್ಲಿ ಕನ್ನಡಿಗೆ ಕೆಎಲ್‌ ರಾಹುಲ್ ವಿಕೆಟ್ ಕೀಪಿಂಗ್ ಮಾಡುವುದಿಲ್ಲ ಎಂಬುದನ್ನು ಈಗಾಗಲೇ ಭಾರತ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ದೃಢಪಡಿಸಿದ್ದಾರೆ. ಹೀಗಾಗಿ ದ್ರುವ್‌ ಜುರೆಲ್‌ ಅವರೊಂದಿಗಿನ ಆಯ್ಕೆಯ ಪೈಪೋಟಿ ಗೆದ್ದು ಕೆಎಸ್ ಭರತ್ ವಿಕೆಟ್‌ ಕೀಪರ್‌ ಆಗಿ ಆಯ್ಕೆಯಾಗುವುದು ಖಚಿತವಾಗಿದೆ. ಅಲ್ಲದೆ ಜುರೆಲ್‌ ಇದೇ ಮೊಲದ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಭರತ್ ಅವರಷ್ಟು ಅನುಭವವಿಲ್ಲ.

ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ. ಶುಭ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ವಿರಾಟ್‌ ಅನುಪಸ್ಥಿತಿಯು ತಂಡದ ಆಯ್ಕೆಯಲ್ಲಿದ್ದ ತಲೆನೋವನ್ನು ಕಡಿಮೆ ಮಾಡಿದೆ. ಕೊಹ್ಲಿ ಈದ್ದಾಗ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ನಡುವೆ ಈಬ್ಬರಲ್ಲಿ ಒಬ್ಬರನ್ನು ಮಾತ್ರ ಆಡುವ ಬಳಗಕ್ಕೆ ಆಯ್ಕೆ ಮಾಡಬೇಕಾಗಿತ್ತು. ಇದೀಗ ಶ್ರೇಯಸ್ ಮತ್ತು ರಾಹುಲ್ ಇಬ್ಬರೂ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೇಯಸ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, ರಾಹುಲ್ ಐದನೇ ಕ್ರಮಾಂಕದಲ್ಲಿ ಮೈದಾನಕ್ಕೆ ಬರಲಿದ್ದಾರೆ.

ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌​ಗಳಿಗೆ ಕೊಹ್ಲಿ ಸ್ಥಾನ ತುಂಬಬಲ್ಲ ಮೂವರು ಸಮರ್ಥ ಆಟಗಾರರು ಇವರು

ಭಾರತದ ಕೆಳ ಕ್ರಮಾಂಕ ಬಲಿಷ್ಠವಾಗಲಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಪ್ರಬಲ ಸ್ಪಿನ್ನರ್‌ಗಳಾಗಿ ಕಣಕ್ಕಿಳಿಯಲಿದ್ದಾರೆ. ಈ ಮೂವರೂ ಬ್ಯಾಟ್‌ನೊಂದಿಗೂ ಬೃಹತ್ ಮೊತ್ತ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾ. ಈಗಾಗಲೇ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಜಸ್ಪ್ರೀತ್ ಬುಮ್ರಾ, ಪ್ರಮುಖ ವೇಗಿಯಾಗಿ ಆಡಲಿದ್ದಾರೆ. ಇವರಿಗೆ ಮೊಹಮ್ಮದ್ ಸಿರಾಜ್ ವೇಗದ ದಾಳಿಯಲ್ಲಿ ಸಾಥ್‌ ನೀಡಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ