ಇಂಡೋ-ಆಫ್ರಿಕಾ ಸರಣಿಯ ವೇಳಾಪಟ್ಟಿ, ಪಂದ್ಯಗಳ ಸಮಯ, ನೇರಪ್ರಸಾರ, ತಂಡಗಳು; ಸಂಪೂರ್ಣ ಮಾಹಿತಿ ಇಲ್ಲಿದೆ
Dec 04, 2023 04:15 PM IST
ಇಂಡೋ-ಆಫ್ರಿಕಾ ಸರಣಿಯ ವೇಳಾಪಟ್ಟಿ.
- India Tour Of South Africa 2023: ಭಾರತ-ದಕ್ಷಿಣ ಆಫ್ರಿಕಾ ಸಿರೀಸ್ ಯಾವಾಗ ಶುರು? ಎಷ್ಟು ಗಂಟೆಗೆ? ಪಂದ್ಯ ವೀಕ್ಷಿಸುವುದೆಲ್ಲಿ? ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಕಾಂಗರೂ ಬೇಟೆಯಾಡಿದ ಭಾರತ ಈಗ ಹರಿಣಗಳ ನಾಶಕ್ಕೆ ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಬೆನ್ನಲ್ಲೇ ಡಿಸೆಂಬರ್ 10 ರಿಂದ ಸೌತ್ ಆಫ್ರಿಕಾ (India vs South Africa) ಎದುರು ಟೆಸ್ಟ್, ಏಕದಿನ, ಟಿ20 ಸಿರೀಸ್ಗೆ ಭರ್ಜರಿ ತಯಾರಿ ಆರಂಭಿಸಿದೆ. ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸರಣಿಗಳಿಗೆ ಬಲಿಷ್ಠ ತಂಡಗಳನ್ನು ಪ್ರಕಟಿಸಿವೆ.
ಡಿಸೆಂಬರ್ 10ರಿಂದ ಆರಂಭವಾಗುವ ಭಾರತದ ದಕ್ಷಿಣ ಆಫ್ರಿಕಾದ ಪ್ರವಾಸ ಜನವರಿ 7ರವರೆಗೂ ಇರಲಿದೆ. ಸರಿ ಸುಮಾರು ಒಂದು ತಿಂಗಳ ಕಾಲ ಆಫ್ರಿಕಾ ನಾಡಲ್ಲೇ ಭಾರತ ಆಟಗಾರರು ಉಳಿದುಕೊಳ್ಳಲಿದ್ದಾರೆ. ಕೊನೆಯದಾಗಿ 2021ರ ಡಿಸೆಂಬರ್ನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗೆ ಸೌತ್ ಆಫ್ರಿಕಾಗೆ ಹಾರಿತ್ತು ಭಾರತ.
ಉಭಯ ತಂಡಗಳಲ್ಲೂ ಘಟಾನುಘಟಿ ಆಟಗಾರರೇ ತುಂಬಿದ್ದು, ರೋಚಕತೆ ಹೆಚ್ಚಿಸುವ ಸಾಧ್ಯತೆ ಇದೆ. ಅಲ್ಲದೆ, 2021ರ ಸೋಲಿನ ಸೇಡು ತೀರಿಸಿಕೊಳ್ಳಲು ಇದು ಸುವರ್ಣಾವಕಾಶ. ಹಾಗಾದರೆ ಭಾರತ-ದಕ್ಷಿಣ ಆಫ್ರಿಕಾ ಸಿರೀಸ್ ಯಾವಾಗ ಶುರು? ಎಷ್ಟು ಗಂಟೆಗೆ? ಪಂದ್ಯ ವೀಕ್ಷಿಸುವುದೆಲ್ಲಿ? ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಇಂಡೋ-ಆಫ್ರಿಕಾ ಸರಣಿ ಲೈವ್ ಸ್ಟ್ರೀಮಿಂಗ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯನ್ನು ಭಾರತದಲ್ಲಿ ಸ್ಟಾರ್ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಡಿಸ್ನಿ+ ಹಾಟ್ಸ್ಟಾರ್ನಲ್ಲೂ ಕಣ್ತುಂಬಿಕೊಳ್ಳಬಹುದು.