logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೂಪರ್ ಓವರ್​ನಲ್ಲೂ ಪಂದ್ಯ ಟೈ; 'ಮೋಯೆ ಮೋಯೆ' ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ, ವಿಡಿಯೋ ವೈರಲ್

ಸೂಪರ್ ಓವರ್​ನಲ್ಲೂ ಪಂದ್ಯ ಟೈ; 'ಮೋಯೆ ಮೋಯೆ' ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ, ವಿಡಿಯೋ ವೈರಲ್

Prasanna Kumar P N HT Kannada

Jan 18, 2024 12:09 PM IST

google News

ಮೋಯೆ ಮೋಯೆ' ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ.

    • Virat Kohli Dance: ಅಫ್ಘಾನಿಸ್ತಾನ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಮೊದಲ ಓವರ್​ನಲ್ಲೂ ಟೈ ಕಂಡ ನಂತರ ಮೈದಾನದಲ್ಲಿ ಡಿಜೆಯಲ್ಲಿ ಮೊಯೆ ಮೊಯೆ ಹಾಡಲು ಪ್ಲೇ ಮಾಡಲಾಗಿತ್ತು. ಈ ವೇಳೆ ವಿರಾಟ್ ಕೊಹ್ಲಿ ಸಿಗ್ನೇಚರ್ ಸ್ಟೆಪ್ಸ್ ಹಾಕಿದರು.
ಮೋಯೆ ಮೋಯೆ' ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ.
ಮೋಯೆ ಮೋಯೆ' ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು (India Vs Afghanistan 3rd T20I) ಸಾಧಿಸಿತು. 2ನೇ ಸೂಪರ್​​ ಓವರ್​​ನಲ್ಲಿ 10 ರನ್​​ಗಳಿಂದ ಗೆದ್ದ ರೋಹಿತ್​ ಪಡೆ 3-0 ಅಂತರದಿಂದ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿಕೊಂಡಿತು. ಆದರೆ ಪಂದ್ಯ ಟೈ ಆದ ಬಳಿಕ ಸೂಪರ್​ ಓವರ್​ಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮೊಯೆ ಮೊಯೆ ಹಾಡಿಗೆ ವಿರಾಟ್ ಕೊಹ್ಲಿ (Virat Kohli) ಸಿಗ್ನೇಚರ್​ ಸ್ಪೆಪ್ಸ್ ಹಾಕಿದ್ದಾರೆ.

ಸೂಪರ್​ ಓವರ್​ನಲ್ಲಿ ಸೂಪರ್ ಗೆಲುವು

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, 20 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್​​ಗಳ ಬೃಹತ್ ಮೊತ್ತ ಪೇರಿಸಿತು. ರೋಹಿತ್​ ಶರ್ಮಾ ಮತ್ತು ರಿಂಕು ಸಿಂಗ್​ ಜೋಡಿ ಐದನೇ ವಿಕೆಟ್​ಗೆ 190 ರನ್​ಗಳ ಜೊತೆಯಾಟವಾಡಿ ಅಫ್ಘನ್​ ಎದುರು ದೊಡ್ಡ ಮೊತ್ತ ಸಿಡಿಸಲು ಸಾಧ್ಯವಾಯಿತು. ಆದರೆ ಈ ಗುರಿ ಬೆನ್ನಟ್ಟಿದ ಅಫ್ಘನ್, 6 ವಿಕೆಟ್ ನಷ್ಟಕ್ಕೆ ಅಷ್ಟೇ ರನ್​ಗಳನ್ನು ಗಳಿಸಿ ಪಂದ್ಯವನ್ನು ಟೈಗೊಳಿಸಿತು.

ಮೊದಲ ಸೂಪರ್​ ಓವರ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ಭರ್ಜರಿ 16 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ, ರೋಹಿತ್​ ಶರ್ಮಾ 2 ಸಿಕ್ಸರ್​ ಸಿಡಿಸಿದ ಹೊರತಾಗಿಯೂ ಮತ್ತೆ ಟೈನಲ್ಲಿ ಅಂತ್ಯವಾಯಿತು. ಹಾಗಾಗಿ, ಫಲಿತಾಂಶ ನಿರ್ಧರಿಸಲು ಮತ್ತೊಂದು ಸೂಪರ್ ಓವರ್​ ಮೊರೆ ಹೋಗಬೇಕಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 11 ರನ್ ಗಳಿಸಿತು. ಅಫ್ಘನ್ 1 ರನ್ ಗಳಿಸಿ 10 ರನ್​ಗಳಿಂದ ರೋಹಿತ್ ಪಡೆಗೆ ಶರಣಾಯಿತು.

ವಿರಾಟ್ ಡ್ಯಾನ್ಸ್ ವಿಡಿಯೋ ವೈರಲ್

ಪಂದ್ಯದ ನಂತರ ಮೊದಲ ಸೂಪರ್​ ಓವರ್​​ನಲ್ಲೂ ಫಲಿತಾಂಶ ಬಾರದ ಕಾರಣಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಜೆಯಲ್ಲಿ ವಿಶಿಷ್ಟವಾದ 'ಮೋಯೆ ಮೋಯೆ' ಹಾಡನ್ನು ಹಾಕಲಾಯಿತು. ಇದು ನಿರ್ದಿಷ್ಟ ವ್ಯಕ್ತಿ ಅಥವಾ ತಂಡಕ್ಕೆ ತಪ್ಪಾಗಿರುವ ಸನ್ನಿವೇಶವನ್ನು ಗೇಲಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಹಾಡನ್ನು ಬಳಸಲಾಗುತ್ತದೆ. ಈ ಹಾಡನ್ನು ಪ್ಲೇ ಮಾಡಿದ ನಂತರ ವಿರಾಟ್ ಕೊಹ್ಲಿ ಈ ಐಕಾನಿಕ್ ಮೀಮ್​​ಗೆ ಡ್ಯಾನ್ಸ್ ಮಾಡಿ ಇನ್ನಷ್ಟು ತಮಾಷೆ ಮಾಡಿದ್ದಾರೆ.

ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಈ ಹಾಡಿಗೆ ನಿಂತಲ್ಲೇ ಕೂತಲ್ಲೇ ಸ್ಟೆಪ್ಸ್ ಹಾಕಿದರು. ಮೊಯೆ ಮೊಯೆ ಎಂದು ಇಡೀ ಮೈದಾನವೇ ಪ್ರತಿಧ್ವನಿಸಿತು. ಹಾಡನ್ನು ಪ್ಲೇ ಮಾಡುತ್ತಿದ್ದಂತೆ ಕೊಹ್ಲಿ ಕಣ್ಮುಚ್ಚಿಕೊಂಡು ಸೊಂಟ ಬಳುಕಿಸಿದ್ದಾರೆ. ಈ ಹಾಡಿಗೆ ಸೊಂಟ ಬಳುಕಿಸುವುದೇ ಸಿಗ್ನೇಚರ್​ ಸ್ಟೆಪ್ಸ್​ ಆಗಿದೆ. ಸಹ ಆಟಗಾರರು ಸಹ ಈ ಡ್ಯಾನ್ಸ್​ ನೋಡಿ ಬಿದ್ದು ಬಿದ್ದು ನಕ್ಕರು. ವಿರಾಟ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ವಿಭಿನ್ನ ಕಮೆಂಟ್​ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಒಂದು ಹಂತದಲ್ಲಿ ಮೆನ್ ಇನ್ ಬ್ಲೂ 22 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಆ ಬಳಿಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಅವರು ದಾಖಲೆ 190 ರನ್​ಗಳ ಜೊತೆಯಾಟವಾಡಿದರು. ಇದು ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟ. ಮತ್ತೊಂದೆಡೆ 5ನೇ ಟಿ20 ಶತಕ ಸಿಡಿಸಿದ ರೋಹಿತ್​, ನಾಯಕನಾಗಿ ಹಲವು ದಾಖಲೆ ಬರೆದಿದ್ದಾರೆ.

---

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ