ಭಾರತ ವಿರುದ್ಧ ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ; ಕಾಂಗರೂ ಬಳಗ ಸೇರಿದ ಮ್ಯಾಕ್ಸ್‌ವೆಲ್, ಜಂಪಾ
Nov 26, 2023 09:44 PM IST
ಸೂರ್ಯಕುಮಾರ್ ಯಾದವ್ ಮತ್ತು ಮ್ಯಾಥ್ಯೂ ವೇಡ್
- India vs Australia 2nd T20: ಕೇರಳದ ರಾಜಧಾನಿ ತಿರುವನಂತಪುರಂ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತವು ಮೊದಲಿಗೆ ಬ್ಯಾಟಿಂಗ್ ಮಾಡುತ್ತಿದೆ.
ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ (India vs Australia) ದಾಖಲೆಯ ಗೆಲುವು ಸಾಧಿಸಿದ ಭಾರತ ತಂಡವು, ನವೆಂಬರ್ 26ರ ಭಾನುವಾರ ಸರಣಿಯ ಎರಡನೇ ಪಂದ್ಯದಲ್ಲಿ ಕಾಂಗರೂ ಬಳಗವನ್ನು ಎದುರಿಸುತ್ತಿದೆ. ಕೇರಳದ ರಾಜಧಾನಿ ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅತ್ತ ಆಸೀಸ್ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಬೆಹ್ರೆನ್‌ಡಾರ್ಫ್ ಬದಲಿಗೆ ಆಡಮ್ ಜಂಪಾ ಸ್ಥಾನ ಪಡೆದರೆ, ಆರನ್ ಹಾರ್ಡಿ ಬದಲಿಗೆ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಮರಳಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಈಗಾಗಲೇ ಗೆದ್ದಿರುವ ಭಾರತವು, ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, 20 ಓವರ್ಗಳಲ್ಲಿ 208 ರನ್ ಗಳಿಸಿತು. ಆಸೀಸ್ ಪರ ಜೋಸ್ ಇಂಗ್ಲಿಸ್ ಶತಕ ಸಿಡಿಸಿ ಮಿಂಚಿದರು. ಗುರಿ ಬೆನ್ನಟ್ಟಿದ ಭಾರತ 19.5 ಓವರ್ಗಳಲ್ಲಿ ಗೆಲುವಿನ ದಡ ಸೇರಿತು. ನಾಯಕ ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ 80 ರನ್, ಇಶಾನ್ ಕಿಶನ್ 39 ಎಸೆತಗಳಲ್ಲಿ 58 ರನ್ ಸಿಡಿಸಿದರು.
ಇದನ್ನೂ ಓದಿ | Fact Check: ವಿಶ್ವಕಪ್ ಸೋಲಿಗೂ ರೋಹಿತ್ ಮಗಳ ಮಾತಿಗೂ ಸಂಬಂಧವೇ ಇಲ್ಲ; ವೈರಲ್ ವಿಡಿಯೋ ಸತ್ಯಾಸತ್ಯತೆ ಬಯಲು
ಭಾರತ ಆಡುವ ಬಳಗ
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ | ನಿರೀಕ್ಷೆಗಿಂತ ಹೆಚ್ಚು ಸಾಧಿಸಿದ್ದೇನೆ, ಆದರೂ ನತದೃಷ್ಟ ಕ್ರಿಕೆಟಿಗ ಎಂದು ಕರೆಯುವುದೇಕೆ; ಸ್ಯಾಮ್ಸನ್ ಬೇಸರ
ಆಸ್ಟ್ರೇಲಿಯಾ ಆಡುವ ಬಳಗ
ಸ್ಟೀವನ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೋಯ್ನಿಸ್, ಟಿಮ್ ಡೇವಿಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್ (ನಾಯಕ ಮತ್ತು ವಿಕೆಟ್ ಕೀಪರ್), ಸೀನ್ ಅಬಾಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ತನ್ವೀರ್ ಸಂಘ.