ಭಾರತ vs ಆಸ್ಟ್ರೇಲಿಯಾ ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯ; ಯಾವಾಗ, ಎಷ್ಟೊತ್ತಿಗೆ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
Nov 29, 2024 08:33 AM IST
ಭಾರತ vs ಆಸ್ಟ್ರೇಲಿಯಾ ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯ; ಯಾವಾಗ, ಎಷ್ಟೊತ್ತಿಗೆ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
- India vs Australia Prime Ministers XI: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್‌ಗೂ ಮುನ್ನ ಕ್ಯಾನ್‌ಬೆರಾದಲ್ಲಿ ಪ್ರೈಮ್ ಮಿನಿಸ್ಟರ್ಸ್ XI ವಿರುದ್ಧ ಭಾರತ 2 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯ ಯಾವಾಗ, ಎಷ್ಟೊತ್ತಿಗೆ?
ಪರ್ತ್ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳಿಂದ ಗೆದ್ದ ಭಾರತ, ಶುಭಾರಂಭ ಮಾಡಿದೆ. 2ನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಡಿಸೆಂಬರ್ 6 ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಆಸೀಸ್ ನೆಲದಲ ಡೇ-ನೈಟ್ ಟೆಸ್ಟ್ ಆಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿಗೆ ಆಡಿದ ಪಿಂಕ್-ಬಾಲ್ ಟೆಸ್ಟ್ನಲ್ಲಿ 36 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. ಇದೀಗ ಅದರ ಸೇಡಿಗೆ ರೋಹಿತ್ ಪಡೆ ಸಜ್ಜಾಗಿದೆ. ಆದರೆ ಎರಡನೇ ಟೆಸ್ಟ್‌ಗೂ ಮುನ್ನ ಕ್ಯಾನ್‌ಬೆರಾದಲ್ಲಿ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಭಾರತ 2 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯ ಯಾವಾಗ, ಎಷ್ಟೊತ್ತಿಗೆ?
ಭಾರತ vs ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯ ಸ್ಥಳ, ದಿನಾಂಕ ಮತ್ತು ಸಮಯ
ಅಭ್ಯಾಸ ಪಂದ್ಯವು ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆಯಲಿದೆ. ಪಂದ್ಯವು ನವೆಂಬರ್ 30 ರಿಂದ ಡಿಸೆಂಬರ್ 1 ರವರೆಗೆ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9:10ಕ್ಕೆ ಪ್ರಾರಂಭವಾಗುತ್ತದೆ.
ಭಾರತ vs ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯ ಲೈವ್ ಸ್ಟ್ರೀಮಿಂಗ್
ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಭಾರತ ಮತ್ತು ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯವು ಲಭ್ಯವಿರುತ್ತದೆ.
ಪ್ರೈಮ್ ಮಿನಿಸ್ಟರ್ಸ್ XI
ಜ್ಯಾಕ್ ಎಡ್ವರ್ಡ್ಸ್ (ನಾಯಕ), ಚಾರ್ಲಿ ಆಂಡರ್ಸನ್, ಮಾಹ್ಲಿ ಬಿಯರ್ಡ್‌ಮನ್, ಸ್ಕಾಟ್ ಬೋಲ್ಯಾಂಡ್, ಜ್ಯಾಕ್ ಕ್ಲೇಟನ್, ಏಡನ್ ಓ'ಕಾನ್ನರ್, ಒಲ್ಲಿ ಡೇವಿಸ್, ಜೇಡನ್ ಗುಡ್‌ವಿನ್, ಸ್ಯಾಮ್ ಹಾರ್ಪರ್, ಹ್ಯಾನೋ ಜೇಕಬ್ಸ್, ಸ್ಯಾಮ್ ಕಾನ್ಸ್ಟಾಸ್, ಲಾಯ್ಡ್ ಪೋಪ್, ಮ್ಯಾಥ್ಯೂ ರೆನ್‌ಶಾ, ಜೆಮ್ ರಯಾನ್.
2ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ XI
ಪಿಂಕ್ ಬಾಲ್ ಟೆಸ್ಟ್‌ಗೆ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಶುಭ್ಮನ್ ಗಿಲ್ ಅವರು ನಂ.3 ಸ್ಥಾನಕ್ಕೆ ಮರಳುವ ಸಾಧ್ಯತೆ ಇದೆ. ಆದರೆ ಗಾಯದಿಂದ ಚೇತರಿಸಿಕೊಂಡರೆ ಮಾತ್ರ. ಗಿಲ್ ಮರಳಿದರೆ ದೇವದತ್ ಪಡಿಕ್ಕಲ್ ಅಥವಾ ಧ್ರುವ್ ಜುರೆಲ್ರಲ್ಲಿ ಇಬ್ಬರು ಜಾಗ ಬಿಟ್ಟುಕೊಡಬೇಕು. ಅಡಿಲೇಡ್‌ನಲ್ಲಿ ಆರ್ ಅಶ್ವಿನ್ ಕಣಕ್ಕಿಳಿಯುವ ನಿರೀಕ್ಷೆ ಇದೆ. ಏಕೆಂದರೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದ್ದು, ಇಲ್ಲಿನ ಪಿಚ್ ಸ್ಪಿನ್ನರ್ಗಳಿಗೆ ನೆರವಾಗಲಿದೆ. ಹೀಗಾಗಿ, ಅನುಭವಿ ಅಶ್ವಿನ್ ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ.
ಭಾರತ ಟೆಸ್ಟ್ ಕ್ರಿಕೆಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸರ್ಫರಾಜ್ ಖಾನ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.
ಮೀಸಲು ಆಟಗಾರರು: ಮುಕೇಶ್ ಕುಮಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್, ಯಶ್ ದಯಾಳ್.