logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್ 5ನೇ ಟೆಸ್ಟ್: ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ಕ್ರಿಕೆಟ್ ಜರ್ನಿ ಹೇಗಿತ್ತು

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ಕ್ರಿಕೆಟ್ ಜರ್ನಿ ಹೇಗಿತ್ತು

Raghavendra M Y HT Kannada

Mar 07, 2024 12:44 PM IST

google News

ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೇವದತ್ ಪಡಿಕ್ಕಲ್ ಆರ್ ಅಶ್ವಿನ್ ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದರು. ಧರ್ಮಶಾಲದಲ್ಲಿನ ಇಂಗ್ಲೆಂಡ್ ವಿರುದ್ಧದ 5ನೇ ಪಂದ್ಯ ಅಶ್ವಿನ್‌ಗೆ 100ನೇ ಟೆಸ್ಟ ಪಂದ್ಯವಾಗಿದೆ.

    • Devdutt Paddikkal: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡ ದೇವದತ್ ಪಡಿಕ್ಕಲ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ರಜತ್ ಪಾಟಿದಾರ್ ಬದಲಿಗೆ ಭಾರತದ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೇವದತ್ ಪಡಿಕ್ಕಲ್ ಆರ್ ಅಶ್ವಿನ್ ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದರು. ಧರ್ಮಶಾಲದಲ್ಲಿನ ಇಂಗ್ಲೆಂಡ್ ವಿರುದ್ಧದ 5ನೇ ಪಂದ್ಯ ಅಶ್ವಿನ್‌ಗೆ 100ನೇ ಟೆಸ್ಟ ಪಂದ್ಯವಾಗಿದೆ.
ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೇವದತ್ ಪಡಿಕ್ಕಲ್ ಆರ್ ಅಶ್ವಿನ್ ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದರು. ಧರ್ಮಶಾಲದಲ್ಲಿನ ಇಂಗ್ಲೆಂಡ್ ವಿರುದ್ಧದ 5ನೇ ಪಂದ್ಯ ಅಶ್ವಿನ್‌ಗೆ 100ನೇ ಟೆಸ್ಟ ಪಂದ್ಯವಾಗಿದೆ.

ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ (India vs England 5th Test Cricket) ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal) ಭಾರತದ ಟೆಸ್ಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ 100 ನೇ ಟೆಸ್ಟ್ ಆಡುತ್ತಿರುವ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಪಡಿಕ್ಕಲ್‌ಗೆ ಟೆಸ್ಟ್ ಕ್ಯಾಪ್ ನೀಡಿ ಸ್ವಾಗತಿಸಿದರು. ಮಾರ್ಚ್ 6ರ ಬುಧವಾರ 5ನೇ ಟೆಸ್ಟ್‌ ಪಂದ್ಯಕ್ಕೆ ಅಭ್ಯಾಸ ಮಾಡುವ ವೇಳೆ ರಜತ್ ಪಾಟಿದಾರ್ ಗಾಯಮಾಡಿಕೊಂಡಿದ್ದರು. ಹೀಗಾಗಿ ಅವರ ಅಲಭ್ಯತೆ ಹಿನ್ನೆಲೆಯಲ್ಲಿ ದೇವದತ್ ಪಡಿಕ್ಕಲ್‌ಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಕ್ಕಿದೆ. ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್ ಮತ್ತು ಆಕಾಶ್ ದೀಪ್ ನಂತರ ಈ ಐದು ಪಂದ್ಯಗಳ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಐದನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ. ಅಲ್ಲದೆ, ಭಾರತದ 314ನೇ ಟೆಸ್ಟ್ ಕ್ರಿಕೆಟರ್ ಎನಿಸಿಕೊಂಡರು.

ಇಂಗ್ಲೆಂಡ್ ಕೂಡ ಈ ಸರಣಿಯಲ್ಲಿ ಇಬ್ಬರು ಚೊಚ್ಚಲ ಆಟಗಾರರನ್ನು ಹೊಂದಿದೆ. ಸ್ಪಿನ್ನರ್‌ಗಳಾದ ಟಾಮ್ ಹಾರ್ಟ್ಲೆ ಮತ್ತು ಶೋಯೆಬ್ ಬಶೀರ್ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಹೊಸದಾಗಿ ಕಾಣಿಸಿಕೊಂಡಿದ್ದಾರೆ. ಪಂದ್ಯದ ಮುನ್ನಾದಿನದಂದು ಅಭ್ಯಾಸ ಮಾಡುವಾಗ ಪಾಟೀದಾರ್ ಅವರ ಪಾದಕ್ಕೆ ಗಾಯವಾಗಿತ್ತು. ಅವರು ಆಯ್ಕೆಗೆ ಲಭ್ಯವಿರಲಿಲ್ಲ ಎಂದು ಬಿಸಿಸಿಐನ ಅಧಿಕೃತ ಹೇಳಿಕೆ ತಿಳಿಸಿದೆ.

ದೇವದತ್ ಪಡಿಕ್ಕಲ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಈ ಸಾಧನೆಗಳೇ ಕಾರಣ

ಪಡಿಕ್ಕಲ್ ಅವರು ಈವರೆಗೆ ಆಡಿದ 31 ಪ್ರಥಮ ದರ್ಜೆ ಪಂದ್ಯಗಳಲ್ಲಿ 44.54 ಸರಾಸರಿಯಲ್ಲಿ 2,227 ರನ್ ಗಳಿಸಿದ್ದಾರೆ. ಈ ಭಾರಿಯ ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 92.66 ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ. ಆಡಿದ ಆರು ಇನ್ನಿಂಗ್‌ಗಳಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ, ಪ್ರತಿ ಬಾರಿ ಅವರು 50 ರನ್‌ ದಾಟಿದಾಗಲೆಲ್ಲಾ ಮೂರು ಅಂಕಿಯ ಸ್ಕೋರ್ ಪಡೆದಿದ್ದಾರೆ. ಚೆನ್ನೈನಲ್ಲಿ ಸೋಮವಾರ ನಡೆದ ತಮಿಳುನಾಡು ವಿರುದ್ಧದ ಐದನೇ ಸುತ್ತಿನ ಪಂದ್ಯದಲ್ಲಿ 151 ಮತ್ತು 36 ರನ್ ಗಳಿಸಿದ ಪಡಿಕ್ಕಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂಜಾಬ್ ವಿರುದ್ಧದ ಕರ್ನಾಟಕದ ಆರಂಭಿಕ ಪಂದ್ಯದಲ್ಲಿ ಅವರು ಗಳಿಸಿದ 193 ರನ್ ಈ ಋತುವಿನಲ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ.

ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆದ ಭಾರತ ಎ ತಂಡದ ಭಾಗವಾಗಿದ್ದ ಪಡಿಕ್ಕಲ್ 65, 21 ಮತ್ತು 105 ರನ್ ಗಳಿಸಿದ್ದರು. ಪಂದ್ಯದಿಂದ ಪಂದ್ಯಕ್ಕೆ ಪಡಿಕ್ಕಲ್ ಅವರ ಬ್ಯಾಟ್ ಅಬ್ಬರಿಸುತ್ತಲೇ ಇದೆ. ಇದು ಆಯ್ಕೆಗಾರರ ಗಮನವನ್ನು ಸೆಳೆದಿತ್ತು. ಟೀಂ ಇಂಡಿಯಾ ಪರ 2 ಟಿ20 ಪಂದ್ಯಗಳನ್ನು ಆಡಿದ್ದಾರೆ. 2021ರಲ್ಲಿ ಎರಡೂ ಪಂದ್ಯಗಳನ್ನು ಶ್ರೀಲಂಕಾ ವಿರುದ್ಧ ಆಡಿದ್ದರು. ಇದೀಗ ತಮ್ಮ ಪ್ರತಿಭೆಯ ಮೂಲಕವೇ ಟೆಸ್ಟ್ ತಂಡಕ್ಕೂ ಪದಾರ್ಪಣೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಪಡಿಕ್ಕಲ್ ಅವರನ್ನು ರಾಜಸ್ತಾನ್ ರಾಯಲ್ಸ್ ಬಿಡ್ ಮಾಡಿತ್ತು. ಕಳೆದ ಆವೃತ್ತಿಯಲ್ಲಿ ಅವರನ್ನು ಗುಜರಾತ್ ಜೈಂಟ್ಸ್ ಖರೀದಿಸಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಸುಂದರವಾದ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನಂತರ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಪರಿಣಾಮ 23 ವರ್ಷದ ಪಡಿಕ್ಕಲ್ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಸಾಬೀತುಪಡಿಸಲು ಇಂಗ್ಲೆಂಡ್‌ನ ಮೊದಲ ಇನ್ಸಿಂಗ್ಸ್ ಮುಗಿಯುವವರೆಗೆ ಕಾಯಬೇಕಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 3-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಭಾರತ, ಇಂಗ್ಲೆಂಡ್ ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ

(This copy first appeared in Hindustan Times Kannada website. To read more like this please logon to kannada.hindustantimes.com )

.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ