IND vs NED World Cup Highlights: ನೆದರ್ಲೆಂಡ್ಸ್ ವಿರುದ್ಧ ಟೀಂ ಇಂಡಿಯಾಗೆ 160 ರನ್‌ಗಳ ಗೆಲುವು; ಲೈವ್ ಅಪ್ಡೇಟ್ಸ್
Nov 12, 2023 11:50 PM IST
ಭಾರತ-ನೆದರ್ಲೆಂಡ್ಸ್ ವಿಶ್ವಕಪ್ ಪಂದ್ಯದ ಹೈಲೈಟ್ಸ್
- India vs Netherlands Cricket World Cup Live Score: ಏಕದಿನ ವಿಶ್ವಕಪ್ 2023ರ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಲೈವ್ ಅಪ್ಡೇಟ್ಸ್ ಇಲ್ಲಿದೆ.
India vs Netherlands Cricket World Cup Live Updates: ಐಸಿಸಿ ಏಕದಿನ ವಿಶ್ವಕಪ್ 2023ರ 45ನೇ ಹಾಗೂ ಲೀಗ್ನ ಕೊನೆಯ ಪಂದ್ಯದಲ್ಲಿ ನವೆಂಬರ್ 12ರ ಭಾನುವಾರ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನೊಂದಿಗೆ ಲೀಗ್ ಹಂತಕ್ಕೆ ವಿದಾಯ ಹೇಳಲು ಸಜ್ಜಾಗಿವೆ. ಇಂದಿನ ಪಂದ್ಯ ಗೆದ್ದರೆ ಟೂರ್ನಿಯಲ್ಲಿ ರೋಹಿತ್ ಶರ್ಮಾ ಪಡೆಯು ಅಜೇಯ ಸೆಮಿಫೈನಲ್‌ಗೆ ಮುನ್ನಡೆಯಲಿದೆ.
ನೆದರ್ಲೆಂಡ್ಸ್ ವಿರುದ್ಧ ಟೀಂ ಇಂಡಿಯಾಗೆ 160 ರನ್ ಗೆಲುವು
09:34 PM: India vs Netherlands Cricket World Cup Live Updates: ನೆದರ್ಲೆಂಡ್ಸ್ ವಿರುದ್ಧ ಟೀಂ ಇಂಡಿಯಾ 160 ರನ್ ಗಳ ಗೆಲುವು ಪಡೆದಿದೆ.
ನೆದರ್ಲೆಂಡ್ಸ್ ತಂಡದ 7 ಮತ್ತು 8ನೇ ವಿಕೆಟ್ ಪತನ
09:14 PM: India vs Netherlands Cricket World Cup Live Updates: 226/8 (44): ನೆದರ್ಲೆಂಡ್ಸ್‌ನ 7 ಮತ್ತು 8ನೇ ವಿಕೆಟ್ ಪತನವಾಗಿದೆ. ವ್ಯಾನ್ ಬೀಕ್ (16), ರೋಲೋಫ್ ವ್ಯಾನ್ ಡೆರ್ ಮೆರ್ವೆ (16) ಕ್ರಮವಾಗಿ ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದ್ದಾರೆ.
200 ರನ್ ಗಳಿಸಿದ ನೆದರ್ಲೆಂಡ್ಸ್
09:04 PM: India vs Netherlands Cricket World Cup Live Updates: 207/6 (41.3): ನೆದರ್ಲೆಂಡ್ಸ್ ತಂಡ 200ರನ್ ಗಳಿಸಿದೆ. ತೇಜ ನಿಡಮನೂರು ಮತ್ತು ಲ್ಯಾಂಗ್ ವ್ಯಾನ್ ಬೀಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನೆದರ್ಲೆಂಡ್ಸ್ ತಂಡದ 6ನೇ ವಿಕೆಟ್ ಪತನ
08:51 PM: India vs Netherlands Cricket World Cup Live Updates: 183/6 (39): ನೆದರ್ಲೆಂಡ್ಸ್‌ನ 6ನೇ ವಿಕೆಟ್ ಪಡೆಯುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾಗಿದ್ದಾರೆ. ಸೈಬ್ರಾಂಡ್ ಎನಗೆಲ್‌ಬ್ರೆಕ್ಟ್ 45 ರನ್ ಗಳಿಸಿ ಔಟಾಗಿದ್ದಾರೆ.
ನೆದರ್ಲೆಂಡ್ಸ್ ತಂಡದ 5ನೇ ವಿಕೆಟ್ ಪತನ
08:24 PM: India vs Netherlands Cricket World Cup Live Updates: 148/5 (33.1): ನೆದರ್ಲೆಂಡ್ಸ್ 5ನೇ ವಿಕೆಟ್ ಕಳೆದುಕೊಂಡಿದೆ. ಬಾಸ್ ಡಿ ಲೀಡ್ 12 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿದ್ದಾರೆ.
ನೆದರ್ಲೆಂಡ್ಸ್ ತಂಡದ 4ನೇ ವಿಕೆಟ್ ಪತನ
07:59 PM: India vs Netherlands Cricket World Cup Live Updates: 119/4 (26): ನೆದರ್ಲೆಂಡ್ಸ್ 4ನೇ ವಿಕೆಟ್ ಕಳೆದುಕೊಂಡಿದೆ. 17 ರನ್ ಗಳಿಸಿದ್ದ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರು ವಿರಾಟ್ ಕೊಹ್ಲಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.
20 ಓವರ್‌ಗಳ ಮುಕ್ತಾಯಕ್ಕೆ 86 ರನ್ ಗಳಿಸಿದ ನೆದರ್ಲೆಂಡ್ಸ್
07:44 PM: India vs Netherlands Cricket World Cup Live Updates: 86/3 (20): ನೆದರ್ಲೆಂಡ್ಸ್ 20 ಓವರ್‌ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ಸೈಬ್ರಾಂಡ್ ಎನಗೆಲ್‌ಬ್ರೆಕ್ಟ್ ಮತ್ತು ಸ್ಕಾಟ್ ಎಡ್ವರ್ಡ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
3ನೇ ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ನೆದರ್ಲೆಂಡ್ಸ್
07:32 PM: India vs Netherlands Cricket World Cup Live Updates: 80/3 (18): ನೆದರ್ಲೆಂಡ್ಸ್ 3ನೇ ವಿಕೆಟ್ ಕಳೆದುಕೊಂಡಿದೆ. ಮ್ಯಾಕ್ಸ್ ಓಡೌಡ್ 30 ರನ್ ಗಳಿಸಿ ಔಟಾಗಿದ್ದಾರೆ.
2ನೇ ವಿಕೆಟ್ ಕಳೆದುಕೊಂಡ ನೆದರ್ಲೆಂಡ್ಸ್
07:20 PM: India vs Netherlands Cricket World Cup Live Updates: 70/2 (14): ನೆದರ್ಲೆಂಡ್ಸ್ 2ನೇ ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಅನುಭವಿಸಿದೆ. ಕಾಲಿನ್ ಅಕರ್‌ಮನ್ 35 ರನ್ ಗಳಿಸಿ ಕುಲ್ದೀಪ್ ಯಾದವ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದಿದ್ದಾರೆ.
ನೆದರ್ಲೆಂಡ್ಸ್ 10 ಓವರ್‌ಗಳ ಮುಕ್ತಾಯಕ್ಕೆ 62 ರನ್
07:05 PM: India vs Netherlands Cricket World Cup Live Updates: 62/1 (10): ನೆದರ್ಲೆಂಡ್ಸ್ 10 ಓವರ್‌ಗಳ ಮುಕ್ತಾಯಕ್ಕೆ 62 ರನ್ ಗಳಿಸಿದೆ. ಮ್ಯಾಕ್ಸ್ ಓಡೌಡ್ ಮತ್ತು ಕಾಲಿನ್ ಅಕರ್‌ಮನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನೆದರ್ಲೆಂಡ್ಸ್ ತಂಡದ ಮೊದಲ ವಿಕೆಟ್ ಪತನ
06:25 PM: India vs Netherlands Cricket World Cup Live Updates: 5/1 (1.4): ನೆದರ್ಲೆಂಡ್ಸ್ ಮೊದಲ ವಿಕೆಟ್ ಪತನವಾಗಿದೆ. ವೆಸ್ಲಿ ಬ್ಯಾರೆಸಿ 1 ರನ್ ಗಳಿಸಿ ಸಿರಾಜ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.
ಕೆಎಲ್ ರಾಹುಲ್ ಸ್ಫೋಟಕ ಶತಕ
05:44 PM: India vs Netherlands Cricket World Cup Live Updates: 407/3 (49.3): ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಸ್ಫೋಟಕ ಶತಕ ಸಿಡಿಸಿದ್ದಾರೆ. 63 ಎಸೆತಗಳಲ್ಲಿ 102 ರನ್ ಬಾರಿಸಿದ್ದಾರೆ. ಇದರಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಆಕರ್ಷಕ ಶತಕ
05:27 PM: India vs Netherlands Cricket World Cup Live Updates: 339/3 (46.4): ಟೀಂ ಇಂಡಿಯಾ ಪರ ಶ್ರೇಯರ್ ಅಯ್ಯರ್ ಆಕರ್ಷಕ ಶತಕ ಸಿಡಿಸಿದ್ದಾರೆ. 85 ಎಸೆತಗಳಲ್ಲಿ 102 ರನ್ ಬಾರಿಸಿದ್ದಾರೆ. ಇದರಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ.
ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಅರ್ಧ ಶತಕ
05:08 PM: India vs Netherlands Cricket World Cup Live Updates: 306/3 (42.2): ಟೀಂ ಇಂಡಿಯಾ ಪರ ಕೆೆಲ್ ರಾಹುಲ್ ಅರ್ಧ ಶತಕ ಸಿಡಿಸಿದ್ದಾರೆ. 41 ಎಸೆತಗಳಲ್ಲಿ 7 ಬೌಂಡರಿ ಸೇರಿ 51 ರನ್ ಗಳಿಸಿ ಆಡುತ್ತಿದ್ದಾರೆ.
ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಅರ್ಧ ಶತಕ
05:05 PM: India vs Netherlands Cricket World Cup Live Updates: 304/3 (42): ಟೀಂ ಇಂಡಿಯಾ 300ರ ಗಡಿ ದಾಟಿದೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಅರ್ಧ ಶತಕ
04:28 PM: India vs Netherlands Cricket World Cup Live Updates: 235/3 (34): ಶ್ರೇಯಸ್ ಅಯ್ಯರ್ ಅರ್ಧ ಶತಕ ಪೂರೈಸಿದ್ದಾರೆ. 50 ಎಸೆತಗಳನ್ನು ಎದುರಿಸಿ 6 ಬೌಂಡರಿ ಸೇರಿ 55 ರನ್ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಅರ್ಧ ಶತಕ ಸಿಡಿಸಿ ಕೊಹ್ಲಿ ಔಟ್
04:04: India vs Netherlands Cricket World Cup Live Updates: 200/3 (28.5): ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 71ನೇ ಅರ್ಧ ಶತಕ ಪೂರೈಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಅರ್ಧ ಶತಕ ಪೂರೈಸಿದ ವಿರಾಟ್
04:01 PM: India vs Netherlands Cricket World Cup Live Updates: 198/2 (28): ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 71ನೇ ಅರ್ಧ ಶತಕ ಪೂರೈಸಿದ್ದಾರೆ.
ಟೀಂ ಇಂಡಿಯಾ 20 ಓವರ್‌ಗಳ ಮುಕ್ತಾಯಕ್ಕೆ 140 ರನ್
03:32 PM: India vs Netherlands Cricket World Cup Live Updates: 140/2 (20): ಟೀಂ ಇಂಡಿಯಾ 20 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್.
2ನೇ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ
03:18 PM: India vs Netherlands Cricket World Cup Live Updates: 129/2 (17.4): ಟೀಂ ಇಂಡಿಯಾದ ಎರಡನೇ ವಿಕೆಟ್ ಪತನವಾಗಿದೆ. ರೋಹಿತ್ ಶರ್ಮಾ 61 ರನ್ ಗಳಿಸಿ ಔಟಾಗಿದ್ದಾರೆ.
ಮೊದಲ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ
02:50 PM: India vs Netherlands Cricket World Cup Live Updates: 100/1 (11.5): ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿದೆ. 51 ರನ್ ಗಳಿಸಿ ಶುಭ್ಮನ್ ಗಿಲ್ ವಿಕೆಟ್ ಒಪ್ಪಿಸಿದ್ದಾರೆ.
100 ರನ್ ಪೂರೈಸಿದ ಟೀಂ ಇಂಡಿಯಾ
02:49 PM: India vs Netherlands Cricket World Cup Live Updates: 100/0 (11.4): ಟೀಂ ಇಂಡಿಯಾದ 11.4 ಓವರ್‌ಗಳಲ್ಲಿ 100 ರನ್ ಪೂರೈಸಿದೆ.
ಶುಭ್ಮನ್ ಗಿಲ್ ಅರ್ಧ ಶತಕ
02:47 PM: India vs Netherlands Cricket World Cup Live Updates: 98/0 (11.2): ಟೀಂ ಇಂಡಿಯಾದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಶುಭ್ಮನ್ ಗಿಲ್ ಅರ್ಧ ಶತಕ ಪೂರೈಸಿದ್ದಾರೆ. 30 ಎಸೆತಗಳಲ್ಲಿ ಅವರು 50 ರನ್ ಬಾರಿಸಿದ್ದಾರೆ. ಇದರಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿವೆ.
ಟೀಂ ಇಂಡಿಯಾ 10 ಓವರ್‌ಗಳ ಮುಕ್ತಾಯಕ್ಕೆ 91 ರನ್
02:42 PM: India vs Netherlands Cricket World Cup Live Updates: 91/0 (10): ಟೀಂ ಇಂಡಿಯಾದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ರೋಹಿತ್ ಮತ್ತು ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್
02:28 PM: India vs Netherlands Cricket World Cup Live Updates: 64/0 (7): ಟೀಂ ಇಂಡಿಯಾದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ರೋಹಿತ್ ಮತ್ತು ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಬ್ಯಾಟಿಂಗ್ ಆರಂಭ
02:01 PM: India vs Netherlands Cricket World Cup Live Updates: 5/0 (0.1): ಟೀಂ ಇಂಡಿಯಾದ ಬ್ಯಾಟಿಂಗ್ ಆರಂಭವಾಗಿದ್ದು, ರೋಹಿತ್ ಮತ್ತು ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನೆದರ್ಲ್ಯಾಂಡ್ಸ್ ಆಡುವ 11ರ ಬಳಗ
ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್.
ಭಾರತ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
1.30PM: IND vs NED ODI World Cup 2023 Live Score: ನೆದರ್ಲೆಂಡ್ಸ್ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ವಿಶ್ರಾಂತಿ ಕುರಿತು ದ್ರಾವಿಡ್ ಸುಳಿವು
IND vs NED ODI World Cup 2023 Live Updates: ಕಳೆದ ಭಾನುವಾರದಂದು ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ಕೊನೆಯ ಪಂದ್ಯ ಆಡಿತ್ತು. ಅಲ್ಲಿಂದ ಈ ಪಂದ್ಯದ ನಡುವೆ ಒಟ್ಟು ಆರು ದಿನಗಳ ಸುದೀರ್ಘ ಅಂತರವಿದೆ. ಹೀಗಾಗಿ ಭಾರತ ತಂಡವು ನೆದರ್ಲೆಂಡ್ಸ್ ವಿರುದ್ಧ ಅತ್ಯುತ್ತಮ ಆಡುವ ಬಳಗದೊಂದಿಗೆ ಕಣಕ್ಕಿಳಿಯಲಿದೆ ಎಂದು ದ್ರಾವಿಡ್ ಸುಳಿವು ನೀಡಿದರು. “ನಮಗೆ ಕೊನೆಯ ಪಂದ್ಯದ ಬಳಿಕ ಆರು ದಿನಗಳ ರಜೆ ಸಿಕ್ಕಿದೆ. ಹೀಗಾಗಿ ನಾವು ಸಾಕಷ್ಟು ವಿಶ್ರಾಂತಿ ಪಡೆದಿದ್ದೇವೆ. ತಂಡದ ಎಲ್ಲಾ ಆಟಗಾರರು ಉತ್ತಮ ಸ್ಥಿತಿಯಲ್ಲಿದ್ದಾರೆ. ಸೆಮಿಫೈನಲ್‌ಗೂ ಮುನ್ನ ನಮಗೆ ಒಂದು ಪಂದ್ಯವಿದೆ. ಎಲ್ಲಾ ಹುಡುಗರಿಗೆ ವಿಶ್ರಾಂತಿ ನೀಡಲಾಗಿದೆ. ಈ ಕುರಿತು ಹೆಚ್ಚು ವಿವಿರ ನೀಡಬೇಕಿಲ್ಲ,” ಎಂದು ಪಂದ್ಯದ ಮುನ್ನಾದಿನ ಬೆಂಗಳೂರಿನಲ್ಲಿ ದ್ರಾವಿಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನೆದರ್ಲೆಂಡ್ಸ್ಗೆ ಗೆಲುವು ಅನಿವಾರ್ಯ
IND vs NED ODI World Cup 2023 Live Updates: ನೆದರ್ಲೆಂಡ್ಸ್ಗೆ ಈ ಪಂದ್ಯ ಮಹತ್ವದ್ದಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದರೆ ಡಚ್ಚರು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾವನ್ನು ಮಣಿಸುವ ಯೋಚನೆಯಲ್ಲಿದೆ.
ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ
IND vs NED ODI World Cup 2023 Live Updates: ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ. ಅಲ್ಲದೆ ತಂಡದ ಕೋಚ್ ಕೂಡಾ ಈ ಬಗ್ಗೆ ಮಾತನಾಡಿದ್ದು, ಒಂದು ವಾರಗಳ ಕಾಲ ಆಟಗಾರರು ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಪಂದ್ಯದಿಂದ ಹೆಚ್ಚುವರಿ ವಿಶ್ರಾಂತಿ ನೀಡುವ ಅಗತ್ಯ ಇಲ್ಲ ಎಂದಿದ್ದಾರೆ.
ಹವಾಮಾನ ವರದಿ
IND vs NED ODI World Cup 2023 Live Updates: ಕಳೆದ 2 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿಲ್ಲ. ನವೆಂಬರ್ 12ರಂದು ಕೂಡ ಮಳೆ ಸುರಿಯುವ ಸಾಧ್ಯತೆ ಕಡಿಮೆ ಇದೆ. ತಾಪಮಾನ 16 ರಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಭಾರತ ತಂಡ ಈಗಾಗಲೇ ಸೆಮೀಸ್ ಪ್ರವೇಶಿಸಿರುವುದರಿಂದ ಮಳೆ ಬಂದರೂ ಟೀಮ್ ಇಂಡಿಯಾಗೆ ಯಾವುದೇ ಸಮಸ್ಯೆ ಇಲ್ಲ.
ಉಭಯ ತಂಡಗಳ ಮುಖಾಮುಖಿ
IND vs NED ODI World Cup 2023 Live Updates: ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಈವರೆಎ 2 ಬಾರಿ ಮಾತ್ರ ಮುಖಾಮುಖಿಯಾಗಿವೆ. ಈ ಎರಡೂ ವಿಶ್ವಕಪ್ ಪಂದ್ಯಗಳೇ ಎಂಬುದು ವಿಶೇಷ. ಭಾರತ ಈ ಎರಡೂ ಪಂದ್ಯವನ್ನು ಗೆದ್ದುಕೊಂಡಿದೆ.
ಪಿಚ್ ರಿಪೋರ್ಟ್
IND vs NED ODI World Cup 2023 Live Updates: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬೌಂಡರಿಗಳು ಸಣ್ಣದಾಗಿದ್ದು, ಇಲ್ಲಿನ ಪಿಚ್ ಬ್ಯಾಟಿಂಗ್ಗೆ ಹೆಚ್ಚು ನೆರವಾಗಲಿದೆ. ಇಲ್ಲಿ 300ಕ್ಕೂ ಅಧಿಕ ರನ್ ಗಳಿಸಲು ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಬ್ಯಾಟರ್‌ಗಳು ಉತ್ತಮ ಸ್ಕೋರ್ ಮಾಡಲು ಸಹಕಾರಿ. ಟಾಸ್ ಗೆಲ್ಲುವ ತಂಡ ಚೇಸಿಂಗ್ ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು.
ನೇರಪ್ರಸಾರ
IND vs NED ODI World Cup 2023 Live Updates: ಭಾರತ ನೆದರ್ಲೆಂಡ್ಸ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ನೋಡಬಹುದು.
ಭಾರತ ಸಂಭಾವ್ಯ ಆಡುವ ಬಳಗ
IND vs NED ODI World Cup 2023 Live Updates: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.
ನೆದರ್ಲೆಂಡ್ಸ್ ಸಂಭಾವ್ಯ ಆಡುವ ಬಳಗ
IND vs NED ODI World Cup 2023 Live Updates: ಮ್ಯಾಕ್ಸ್ ಓ ಡೌಡ್, ವಿಕ್ರಮಜಿತ್ ಸಿಂಗ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ತೇಜಾ ನಿಡಮನೂರು, ಬಾಸ್ ಡಿ ಲೀಡೆ, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.