logo
ಕನ್ನಡ ಸುದ್ದಿ  /  ಕ್ರಿಕೆಟ್  /  ಧರ್ಮಶಾಲಾ ಪಿಚ್​ ಯಾರಿಗೆ ನೆರವು; ಭಾರತ-ನ್ಯೂಜಿಲೆಂಡ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಖಚಿತ

ಧರ್ಮಶಾಲಾ ಪಿಚ್​ ಯಾರಿಗೆ ನೆರವು; ಭಾರತ-ನ್ಯೂಜಿಲೆಂಡ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಖಚಿತ

Prasanna Kumar P N HT Kannada

Oct 21, 2023 07:30 PM IST

google News

ಧರ್ಮಶಾಲಾದ ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಮೈದಾನ.

    • India vs New Zealand pitch report: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಬ್ಯಾಟಿಂಗ್​​ ಮತ್ತು ಬೌಲಿಂಗ್​​​ನಲ್ಲಿ ತುಂಬಾ ಬಲಿಷ್ಠವಾಗಿದ್ದು, ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಸದ್ಯ ಈ ಪಂದ್ಯದ ಪಿಚ್​​ ರಿಪೋರ್ಟ್ ಹೇಗಿದೆ ಎಂಬುದನ್ನು ತಿಳಿಯೋಣ.
ಧರ್ಮಶಾಲಾದ ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಮೈದಾನ.
ಧರ್ಮಶಾಲಾದ ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಮೈದಾನ.

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ODI World Cup 2023) 21ನೇ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು (India vs New Zealand) ಮುಖಾಮುಖಿಯಾಗಲಿವೆ. ಧರ್ಮಶಾಲಾದ ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ (Himachal Pradesh Cricket Association Stadium) ಈ ಪಂದ್ಯ ನಡೆಯಲಿದೆ. ಉಭಯ ತಂಡಗಳು ಈವರೆಗೂ ತಲಾ 4 ಪಂದ್ಯಗಳನ್ನಾಡಿದ್ದು, ಎಲ್ಲವನ್ನೂ ಗೆದ್ದಿವೆ. ಇದೀಗ ಟೇಬಲ್ ಟಾಪರ್ ಆಗಲು ಉಭಯ ತಂಡಗಳ ಪೈಪೋಟಿ ನಡೆಸಲಿವೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪಂದ್ಯ: ಭಾರತ vs ನ್ಯೂಜಿಲೆಂಡ್

ಸಮಯ: ಮಧ್ಯಾಹ್ನ 02.00. ಟಾಸ್ ಪ್ರಕ್ರಿಯೆ 01.30 (ಅಕ್ಟೋಬರ್​ 21)

ನೇರ ಪ್ರಸಾರ: ಸ್ಟಾರ್​ಸ್ಪೋರ್ಟ್ಸ್​​, ಡಿಸ್ನಿ ಪ್ಲಸ್ ಹಾಟ್​ಸ್ಟಾರ್ (ಸಂಪೂರ್ಣ ಉಚಿತ)​.

ಸ್ಥಳ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಧರ್ಮಶಾಲಾ

ಉಭಯ ತಂಡಗಳು ಬ್ಯಾಟಿಂಗ್​​ ಮತ್ತು ಬೌಲಿಂಗ್​​​ನಲ್ಲಿ ತುಂಬಾ ಬಲಿಷ್ಠವಾಗಿದ್ದು, ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಆದರೆ ಐಸಿಸಿ ಈವೆಂಟ್​​ಗಳಲ್ಲಿ ಕಳೆದ 20 ವರ್ಷಗಳಿಂದ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡವೇ ಮೇಲುಗೈ ಸಾಧಿಸಿದೆ. ಸದ್ಯ ಈ ಪಂದ್ಯದ ಪಿಚ್​​ ರಿಪೋರ್ಟ್ ಹೇಗಿದೆ ಎಂಬುದನ್ನು ತಿಳಿಯೋಣ.

ಎಚ್‌ಪಿಸಿಎ ಮೈದಾನದಲ್ಲಿ ಬೌಲರ್​​​ಗಳದ್ದೇ ಆಟ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಮೈದಾನವು (ಹೆಚ್​​ಪಿಸಿಎ) ಅತ್ಯಂತ ಸುಂದರ ಮೈದಾನ. ಹಿಮಾಲಯ ಶ್ರೇಣಿಯಲ್ಲಿ ತಲೆ ಎತ್ತಿ ನಿಂತಿರುವ ಈ ಮೈದಾನವು ಬೌಲರ್​​ಗಳಿಗೆ ಹೆಚ್ಚು ನೆರವು ನೀಡುತ್ತದೆ. ಸಮುದ್ರ ಮಟ್ಟದಿಂದ 1,317 ಮೀಟರ್​ ಎತ್ತರದಲ್ಲಿರುವ ಹೆಚ್​​ಪಿಸಿಎ, 23 ಸಾವಿರ ಸಾಮರ್ಥ್ಯ ಹೊಂದಿದೆ.

ತೆರೆದ ಮೈದಾನದಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಹಾಗಾಗಿ ವೇಗದ ಬೌಲರ್​​ಗಳಿಗೆ ಹೆಚ್ಚು ನೆರವು ನೀಡುತ್ತದೆ. ವಿಶ್ವಕಪ್​​​​ಗಾಗಿ ನವೀಕರಿಸಿದ ಕಾರಣ ಬ್ಯಾಟಿಂಗ್​​ಗೂ ಸಹಾಯ ಮಾಡುತ್ತದೆ. ಪಂದ್ಯದ ಆರಂಭದಲ್ಲಿ ಬೌಲರ್​​ಗಳು ಮೇಲುಗೈ ಸಾಧಿಸಿದರೂ ಪಂದ್ಯ ಮುಂದುವರೆದಂತೆ ಹಿಡಿತ ಕಳೆದುಕೊಳ್ಳಲಿದ್ದಾರೆ.

ಹೆಚ್​ಪಿಸಿಎ ಮೈದಾನದಲ್ಲಿ ಏಕದಿನ ದಾಖಲೆಗಳು

  • ಒಟ್ಟು ಪಂದ್ಯಗಳು - 07
  • ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 03
  • ಎರಡನೇ ಬ್ಯಾಟಿಂಗ್ ನಡೆಸಿದ ತಂಡಗಳ ಗೆಲುವು - 04
  • ಮೊದಲ ಇನ್ನಿಂಗ್ಸ್​ ಸರಾಸರಿ ಮೊತ್ತ - 231
  • ಎರಡನೇ ಇನ್ನಿಂಗ್ಸ್​​ ಸರಾಸರಿ ಮೊತ್ತ - 199
  • ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ - 364/9
  • ಈ ಮೈದಾನದಲ್ಲಿ ದಾಖಲಾದ ಕನಿಷ್ಠ ಮೊತ್ತ - 112/10

ಧರ್ಮಶಾಲಾದ ಹವಾಮಾನ ವರದಿ

ಧರ್ಮಶಾಲಾದಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯಕ್ಕೆ ಮಳೆಯ ಮುನ್ಸೂಚನೆ ಹೆಚ್ಚಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪಂದ್ಯದ ಟಾಸ್‌ ವೇಳೆಗೆ ಮಳೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶೇಕಡಾ 43ರಷ್ಟು ಮಳೆ ಸುರಿಯುವ ಸಾಧ್ಯತೆ ಇದ್ದು, ಟಾಸ್ ಪ್ರಕ್ರಿಯೆ ವಿಳಂಬವಾಗಬಹುದು.

ಏಕದಿನ ವಿಶ್ವಕಪ್​ನಲ್ಲಿ ಉಭಯ ತಂಡಗಳ ಮುಖಾಮುಖಿ

  • ಒಟ್ಟು ಪಂದ್ಯಗಳು - 09
  • ಭಾರತ ಗೆಲುವು - 03
  • ನ್ಯೂಜಿಲೆಂಡ್ ಗೆಲುವು - 05
  • ರದ್ದು - 01

ಏಕದಿನ ಕ್ರಿಕೆಟ್​​ನಲ್ಲಿ ಉಭಯ ತಂಡಗಳ ಮುಖಾಮುಖಿ

  • ಒಟ್ಟು ಪಂದ್ಯಗಳು - 116
  • ಭಾರತ ಗೆಲುವು - 58
  • ನ್ಯೂಜಿಲೆಂಡ್ - 50
  • ಫಲಿತಾಂಶ ಇಲ್ಲ/ಟೈ - 08

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಆರ್​ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

ನ್ಯೂಜಿಲೆಂಡ್ ಸಂಭಾವ್ಯ ತಂಡ

ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ/ವಿಕೆಟ್ ಕೀಪರ್​), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ