logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಪಾಕ್‌ ಏಷ್ಯಾಕಪ್‌ ಮುಖಾಮುಖಿಯಲ್ಲಿ ಭಾರತವೇ ಸ್ಟ್ರಾಂಗ್; ಈವರೆಗಿನ ಎಲ್ಲಾ ಪಂದ್ಯಗಳ ಸೋಲು ಗೆಲುವುಗಳ ವಿವರ ಹೀಗಿದೆ

ಇಂಡೋ-ಪಾಕ್‌ ಏಷ್ಯಾಕಪ್‌ ಮುಖಾಮುಖಿಯಲ್ಲಿ ಭಾರತವೇ ಸ್ಟ್ರಾಂಗ್; ಈವರೆಗಿನ ಎಲ್ಲಾ ಪಂದ್ಯಗಳ ಸೋಲು ಗೆಲುವುಗಳ ವಿವರ ಹೀಗಿದೆ

Jayaraj HT Kannada

Sep 01, 2023 03:36 PM IST

google News

ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‌ ಮುಖಾಮುಖಿ ದಾಖಲೆ

    • ಏಷ್ಯಾಕಪ್‌ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಪರಸ್ಪರ ಮುಖಾಮುಖಿ ದಾಖಲೆಗಳು ಹೇಗಿವೆ? ಹೆಚ್ಚು ಪಂದ್ಯಗಳಲ್ಲಿ ಯಾವ ದೇಶ ಗೆದ್ದಿದೆ? ತಂಡಗಳ ಬಲಾಬಲ ಹೇಗಿದೆ ಎಂಬುದನ್ನು ನೋಡೋಣ.
ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‌ ಮುಖಾಮುಖಿ ದಾಖಲೆ
ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‌ ಮುಖಾಮುಖಿ ದಾಖಲೆ

ಏಷ್ಯಾಕಪ್‌ 2023ರ (Asia Cup 2023) ಆವೃತ್ತಿಯಲ್ಲಿ ಶನಿವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (Pakistan vs India) ತಂಡಗಳು ಮುಖಾಮುಖಿಯಾಗುತ್ತಿವೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯುತ್ತಿರುವ ಪಂದ್ಯವು ಎಂದಿನಂತೆ ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಡುತ್ತಿದ್ದು, ಹೈವೋಲ್ಟೇಜ್‌ ಪಂದ್ಯದ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿವೆ.

ಇಂಡೋ ಪಾಕ್ ಪಂದ್ಯವೆಂದರೆ ಅದರ ಜೋಶ್‌ ದುಪ್ಪಟ್ಟಾಗಿರುತ್ತದೆ. ಆಟಗಾರರಿಗಿಂತ ಹೆಚ್ಚಿನ ಕುತೂಹಲ, ಕಾತರ ಅಭಿಮಾನಿಗಳಲ್ಲಿ ಮನೆ ಮಾಡಿರುತ್ತದೆ. ಪಂದ್ಯ ವಿಶ್ವದ ಯಾವುದೇ ಮೂಲೆಯಲ್ಲಿ ನಡೆದರೂ ಉಭಯ ರಾಷ್ಟ್ರಗಳ ಅಭಿಮಾನಿಗಳು ಮೈದಾನದಲ್ಲಿ ತುಂಬಿರುತ್ತಾರೆ. ಹೀಗಾಗಿಯೇ ಕ್ಯಾಂಡಿಯ ಹೋಟೆಲ್‌ಗಳು ಕೂಡ ಬಹುತೇಕ ಬುಕ್‌ ಆಗಿವೆ.

ಸದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಏಷ್ಯಾಕಪ್‌ ಹಣಾಹಣಿಗೆ ಮುಹೂರ್ತ ನಿಗದಿಯಾಗಿದ್ದು, ತಂಡಗಳು ಕೂಡಾ ಲಂಕಾದಲ್ಲಿ ಬೀಡು ಬಿಟ್ಟಿವೆ. ಹೀಗಾಗಿ ಏಷ್ಯಾಕಪ್‌ನಲ್ಲಿ ಈ ಎರಡು ತಂಡಗಳ ಪರಸ್ಪರ ಮುಖಾಮುಖಿ ದಾಖಲೆಗಳು ಹೇಗಿವೆ? ಹೆಚ್ಚು ಪಂದ್ಯಗಳಲ್ಲಿ ಯಾವ ದೇಶ ಗೆದ್ದಿದೆ? ತಂಡಗಳ ಬಲಾಬಲ ಹೇಗಿದೆ ಎಂಬುದನ್ನು ನೋಡೋಣ.

ಹೆಚ್ಚು ಪಂದ್ಯಗಳನ್ನು ಗೆದ್ದಿದ್ದು‌ ಯಾರು

1984ರಲ್ಲಿ ಆರಂಭವಾದ ಏಷ್ಯಾಕಪ್‌ ಟೂರ್ನಮೆಂಟ್‌ನ ಆರಂಭದಿಂದಲೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗ ಒಟ್ಟು 16 ಬಾರಿ ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯಾಗಿದೆ. ಇದರಲ್ಲಿ ಏಕದಿನ ಮಾದರಿಯಡಿಯಲ್ಲಿ 13 ಪಂದ್ಯಗಳನ್ನು ಆಡಿವೆ. ಉಳಿದಂತೆ ಟಿ20 ಸ್ವರೂಪದಲ್ಲಿ ಮೂರು ಬಾರಿ ಮಾತ್ರ ಕಣಕ್ಕಿಳಿದಿವೆ. ಇದರಲ್ಲಿ ಭಾರತದ ಗೆಲುವಿನ ಪ್ರಮಾಣವೇ ಹೆಚ್ಚು.

ಒಟ್ಟು ಆಡಿರುವ 16 ಪಂದ್ಯಗಳಲ್ಲಿ ಭಾರತವು 9 ಪಂದ್ಯಗಳನ್ನು ಗೆದ್ದಿದೆ. ಇದರಲ್ಲಿ 7 ಏಕದಿನ ಪಂದ್ಯಗಳಾದರೆ 2 ಟಿ20 ಪಂದ್ಯಗಳು. ಅತ್ತ ಪಾಕಿಸ್ತಾನವು ಒಟ್ಟು ಆರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಅದರಲ್ಲಿ 5 ಏಕದಿನ ಪಂದ್ಯ ಮತ್ತು ಒಂದು 1 ಟಿ20 ಪಂದ್ಯವಾಗಿದೆ. ಹೀಗಾಗಿ ಎರಡೂ ಸ್ವರೂಪದ ಪಂದ್ಯಗಳಲ್ಲೂ ಭಾರತದ ಗೆಲುವಿನ ಪ್ರಮಾಣವೇ ಹೆಚ್ಚಿದೆ. ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಭಾರತ ತಂಡವೇ ಮುನ್ನಡೆಯಲ್ಲಿದೆ.

ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನ ನಡುವಿನ ಪಂದ್ಯದ ಫಲಿತಾಂಶ

  • ಭಾರತವು ಪಾಕಿಸ್ತಾನವನ್ನು 54 ರನ್‌ಗಳಿಂದ ಸೋಲಿಸಿತು (ಶಾರ್ಜಾ, 3 ಏಪ್ರಿಲ್ 1984)
  • ಭಾರತವು ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿತು (ಢಾಕಾ, 31 ಅಕ್ಟೋಬರ್ 1988)
  • ಪಾಕಿಸ್ತಾನವು ಭಾರತವನ್ನು 97 ರನ್‌ಗಳಿಂದ ಸೋಲಿಸಿತು (ಶಾರ್ಜಾ, 7 ಏಪ್ರಿಲ್ 1995)
  • ಫಲಿತಾಂಶವಿಲ್ಲ (ಕೊಲಂಬೊ, 20 ಜುಲೈ 1997)
  • ಪಾಕಿಸ್ತಾನವು ಭಾರತವನ್ನು 44 ರನ್‌ಗಳಿಂದ ಸೋಲಿಸಿತು (ಢಾಕಾ, 3 ಜೂನ್ 2000)
  • ಪಾಕಿಸ್ತಾನವು ಭಾರತವನ್ನು 59 ರನ್‌ಗಳಿಂದ ಸೋಲಿಸಿತು (ಕೊಲಂಬೊ, 25 ಜುಲೈ 2004)
  • ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು (ಕರಾಚಿ, 26 ಜೂನ್ 2008)
  • ಪಾಕಿಸ್ತಾನವು ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿತು (ಕರಾಚಿ, 2 ಜುಲೈ 2008)
  • ಭಾರತವು ಪಾಕಿಸ್ತಾನವನ್ನು 3 ವಿಕೆಟ್‌ಗಳಿಂದ ಸೋಲಿಸಿತು (ದಂಬುಲ್ಲಾ, 19 ಜೂನ್ 2010)
  • ಭಾರತವು ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು (ಮೀರ್‌ಪುರ್, 18 ಮಾರ್ಚ್ 2012)
  • ಪಾಕಿಸ್ತಾನವು ಭಾರತವನ್ನು 1 ವಿಕೆಟ್‌ನಿಂದ ಸೋಲಿಸಿತು (ಮೀರ್‌ಪುರ್, 2 ಮಾರ್ಚ್ 2014)
  • ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು (T20I; ಮೀರ್ಪುರ್, 27 ಫೆಬ್ರವರಿ 2016)
  • ಭಾರತವು ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿತು (ದುಬೈ, 19 ಸೆಪ್ಟೆಂಬರ್ 2018)
  • ಭಾರತವು ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿಸಿತು (ದುಬೈ, 23 ಸೆಪ್ಟೆಂಬರ್ 2018)
  • ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು (ಟಿ20; ದುಬೈ, 28 ಆಗಸ್ಟ್ 2022)
  • ಪಾಕಿಸ್ತಾನವು ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು (ಟಿ20; ದುಬೈ, 4 ಸೆಪ್ಟೆಂಬರ್ 2022)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ