logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಆಫ್ರಿಕಾ ಟಿ20 ಸರಣಿ: ಮುಖಾಮುಖಿ ದಾಖಲೆ, ಅತ್ಯಧಿಕ ರನ್, ವಿಕೆಟ್, ಗರಿಷ್ಠ ಸ್ಕೋರ್; ಸಂಪೂರ್ಣ ವಿವರ ಇಲ್ಲಿದೆ

ಇಂಡೋ-ಆಫ್ರಿಕಾ ಟಿ20 ಸರಣಿ: ಮುಖಾಮುಖಿ ದಾಖಲೆ, ಅತ್ಯಧಿಕ ರನ್, ವಿಕೆಟ್, ಗರಿಷ್ಠ ಸ್ಕೋರ್; ಸಂಪೂರ್ಣ ವಿವರ ಇಲ್ಲಿದೆ

Prasanna Kumar P N HT Kannada

Dec 05, 2023 06:45 PM IST

google News

ಇಂಡೋ-ಆಫ್ರಿಕಾ ಟಿ20 ಸರಣಿ

    • India Vs South Africa In T20I: ದ್ವಿಪಕ್ಷೀಯ ಸರಣಿಗೂ ಮುನ್ನ ಇಂಡೋ-ಆಫ್ರಿಕಾ ನಡುವಿನ ಟಿ20 ಸರಣಿಗಳಲ್ಲಿ ಪರಸ್ಪರ ದಾಖಲೆ ಹೇಗಿದೆ? ಅಧಿಕ ರನ್, ವಿಕೆಟ್, ಗರಿಷ್ಠ ಸ್ಕೋರ್, ಅರ್ಧಶತಕ, ಶತಕ​ ಸಿಡಿಸಿದವರು ಯಾರು? ಇಲ್ಲಿದೆ ಮಾಹಿತಿ.
ಇಂಡೋ-ಆಫ್ರಿಕಾ ಟಿ20 ಸರಣಿ
ಇಂಡೋ-ಆಫ್ರಿಕಾ ಟಿ20 ಸರಣಿ

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 4-1ರ ಅಂತರದಲ್ಲಿ ಗೆದ್ದ ನಂತರ, ವಿಶ್ವದ ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು (India Vs South Africa In T20I) ಎದುರಿಸಲಿದೆ. ಚುಟುಕು ಸರಣಿಯು ಡಿ.10ರಂದು ಡರ್ಬನ್‌ನಲ್ಲಿ ಪ್ರಾರಂಭವಾಗಲಿದೆ.

ಕಳೆದ ವರ್ಷ (2022) ಉಭಯ ತಂಡಗಳ ನಡುವೆ ಎರಡು ದ್ವಿಪಕ್ಷೀಯ ಸರಣಿಗಳ ಬಳಿಕ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. 2017-18ರ ನಂತರ ಇದೇ ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಟಿ20 ಸರಣಿ ಆಡಲು ಮೆನ್​ ಇನ್ ಬ್ಲೂ ಸಜ್ಜಾಗಿದೆ. ವಿಶೇಷ ಏನೆಂದರೆ 2015-16 ರಿಂದ ಭಾರತ, ಹರಿಣಗಳ ವಿರುದ್ಧ ಟಿ20 ಸರಣಿ ಸೋತೇ ಇಲ್ಲ.

ದ್ವಿಪಕ್ಷೀಯ ಸರಣಿಗೂ ಮುನ್ನ ಇಂಡೋ-ಆಫ್ರಿಕಾ ನಡುವಿನ ಟಿ20 ಸರಣಿಗಳಲ್ಲಿ ಪರಸ್ಪರ ದಾಖಲೆ ಹೇಗಿದೆ? ಅಧಿಕ ರನ್, ಹೆಚ್ಚು ವಿಕೆಟ್, ಗರಿಷ್ಠ ಸ್ಕೋರ್, ಅರ್ಧಶತಕ, ಶತಕ, ಬೌಂಡರಿ, ಸಿಕ್ಸರ್​ ಸಿಡಿಸಿದವರು ಯಾರು? ಹೀಗೆ ಹಲವು ದಾಖಲೆಗಳನ್ನು ಈ ಮುಂದಿನಂತೆ ನೋಡೋಣ. ಇಲ್ಲಿರುವ ಅಂಕಿ-ಅಂಶ ಕೇವಲ ಭಾರತ-ಮತ್ತು ಸೌತ್​ ಆಫ್ರಿಕಾ ನಡುವಿನ ಟಿ20 ಸರಣಿಗಳಲ್ಲಿ ದಾಖಲಾದವು ಮಾತ್ರ.

ಮುಖಾಮುಖಿ ದಾಖಲೆ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿ20ಗಳಲ್ಲಿ 24 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 13 ಸಲ ಭಾರತ ಗೆದ್ದಿದೆ. 10 ಬಾರಿ ಸೌತ್​ ಆಫ್ರಿಕಾ ಗೆದ್ದಿದೆ. 1 ಪಂದ್ಯ ಫಲಿತಾಂಶ ಕಾಣದೆ ಅಂತ್ಯ ಕಂಡಿದೆ.

ಗರಿಷ್ಠ ಮೊತ್ತ: ಅಕ್ಟೋಬರ್ 2, 2022ರಂದು ಗುವಾಹಟಿಯಲ್ಲಿ ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 237 ರನ್ ಗಳಿಸಿತ್ತು.

ಕಡಿಮೆ ಮೊತ್ತ: ಜೂನ್ 17, 2022ರಂದು ರಾಜ್‌ಕೋಟ್‌ನಲ್ಲಿ ದಕ್ಷಿಣ ಆಫ್ರಿಕಾ 16.5 ಓವರ್‌ಗಳಲ್ಲಿ 87ಕ್ಕೆ ಆಲೌಟ್.

ಅತಿದೊಡ್ಡ ಗೆಲುವು: ಜೂನ್ 17, 2022ರಂದು ರಾಜ್‌ಕೋಟ್‌ನಲ್ಲಿ ಭಾರತ 82 ರನ್​ಗಳಿಂದ ಗೆದ್ದಿದೆ.

ಹೆಚ್ಚು ರನ್ ಗಳಿಸಿದವರು: ರೋಹಿತ್ ಶರ್ಮಾ 17 ಟಿ20ಗಳಲ್ಲಿ 420 ರನ್ ಸಿಡಿಸಿದ್ದಾರೆ.

ಸರಣಿಯಲ್ಲಿ ಅತ್ಯಧಿಕ ರನ್ ಸಿಡಿಸಿದವರು: 2022ರಲ್ಲಿ ಇಶಾನ್ ಕಿಶನ್ 5 ಪಂದ್ಯಗಳ ಟಿ20 ಸರಣಿಯಲ್ಲಿ 206 ರನ್ ಸಿಡಿಸಿದ್ದರು.

ಗರಿಷ್ಠ ವೈಯಕ್ತಿಕ ಸ್ಕೋರ್: ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ಇಬ್ಬರೂ ಸಹ 106 ರನ್ ಗಳಿಸಿದ್ದು, ಉಭಯ ದೇಶಗಳ ಟಿ20 ಸರಣಿಗಳಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್​ ಆಗಿದೆ.

ಹೆಚ್ಚು ಶತಕ: ಸುರೇಶ್ ರೈನಾ, ರೋಹಿತ್ ಶರ್ಮಾ, ಡೇವಿಡ್ ಮಿಲ್ಲರ್ ಮತ್ತು ರಿಲೀ ರೊಸೊ ತಲಾ ಒಂದೊಂದು ಶತಕ ಸಿಡಿಸಿದ್ದಾರೆ.

ಹೆಚ್ಚು ಅರ್ಧಶತಕ ಗಳಿಸಿದವರು: ಕ್ವಿಂಟನ್ ಡಿ ಕಾಕ್ 4 ಬಾರಿ 50ರ ಗಡಿ ದಾಟಿದ್ದಾರೆ.

ಗರಿಷ್ಠ ಸಿಕ್ಸರ್ ಸಿಡಿಸಿದವರು: ಡೇವಿಡ್ ಮಿಲ್ಲರ್ 18 ಟಿ20ಗಳಲ್ಲಿ 26 ಸಿಕ್ಸರ್‌ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

ಇನ್ನಿಂಗ್ಸ್​​ವೊಂದರಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದವರು: ಅಕ್ಟೋಬರ್ 4 2022 ರಂದು ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ರಿಲೀ ರೊಸೊ 8 ಸಿಕ್ಸರ್​ ಸಿಡಿಸಿದ್ದರು.

ಅಧಿಕ ವಿಕೆಟ್‌ ಗಳಿಸಿದ ಬೌಲರ್: ಭುವನೇಶ್ವರ್ ಕುಮಾರ್ 12 ಟಿ20ಗಳಲ್ಲಿ 14 ಕಬಳಿಸಿದ್ದಾರೆ.

ಬೆಸ್ಟ್​ ಬೌಲಿಂಗ್​: ಫೆಬ್ರವರಿ 18, 2018ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 24 ರನ್ ನೀಡಿ 5 ವಿಕೆಟ್ ಪಡೆದಿದ್ದರು.

ಸರಣಿಯಲ್ಲಿ ಅತ್ಯಧಿಕ ವಿಕೆಟ್‌: 2018ರಲ್ಲಿ ಭುವನೇಶ್ವರ್ ಕುಮಾರ್ 3 ಪಂದ್ಯಗಳ ಚುಟುಕು ಸರಣಿಯಲ್ಲಿ 7 ವಿಕೆಟ್ ಪಡೆದಿದ್ದು ಈವರೆಗಿನ ದಾಖಲೆ.

ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್: ಕ್ವಿಂಟನ್ ಡಿ ಕಾಕ್ 10 ಟಿ20 ಪಂದ್ಯಗಳಿಂದ 8 ಮಂದಿಯನ್ನು ವಿಕೆಟ್​ ಕೀಪರ್​ ಹಿಂದೆ ನಿಂತು ಔಟ್ ಮಾಡಿದ್ದಾರೆ.

ಅಧಿಕ ಕ್ಯಾಚ್‌: ರೋಹಿತ್ ಶರ್ಮಾ 17 ಟಿ20ಗಳಲ್ಲಿ 10 ಕ್ಯಾಚ್ ಪಡೆದಿದ್ದಾರೆ.

ಗರಿಷ್ಠ ಜೊತೆಯಾಟ: ಅಕ್ಟೋಬರ್ 2, 2022ರಂದು ಗುವಾಹಟಿಯಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್ 4ನೇ ವಿಕೆಟ್‌ಗೆ 174 ರನ್​ಗಳ ಜೊತೆಯಾಟವಾಡಿದ್ದಾರೆ. ಇದು ಉಭಯ ದೇಶಗಳ ನಡುವೆ ದಾಖಲಾದ ಗರಿಷ್ಠ ಜೊತೆಯಾಟ.

ನಾಯಕನಾಗಿ ಹೆಚ್ಚು ಗೆಲುವು: ಎಂಎಸ್ ಧೋನಿ, ಸೌತ್ ಆಫ್ರಿಕಾ ವಿರುದ್ಧ 9 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಆದರೆ 5ರಲ್ಲಿ ಗೆಲುವು ಸಾಧಿಸಿದ್ದು, ನಾಯಕನಾಗಿ ಅಧಿಕ ಜಯ ಸಾಧಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ