Hardik vs Tilak: ಮೊದಲು ಸ್ಯಾಮ್ಸನ್ ಸ್ಥಾನ ಕದ್ದ, ನಂತರ ತಿಲಕ್ ಅರ್ಧಶತಕ ಪೂರೈಸಲು ಬಿಡಲಿಲ್ಲ; ಹಾರ್ದಿಕ್ ವಿರುದ್ಧ ಹೆಚ್ಚಾಯ್ತು ಆಕ್ರೋಶ
Aug 09, 2023 10:54 AM IST
ವಿಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ತಿಲಕ್ ವರ್ಮಾ ಉಪಯುಕ್ತ ಕಾಣಿಗೆ ನೀಡಿದರು. ಆದರೆ ಕೇವಲ 1 ರನ್‌ನಿಂದ ಅರ್ಧ ಶತಕ ವಂಚಿತರಾದರು. (AFP)
ಕೇವಲ 1 ರನ್ ಗಳಿಸಿದ್ದರೆ ತಿಲಕ್ ವರ್ಮಾ ಪಾದಾರ್ಪಣೆ ಮಾಡಿದ ಟಿ20 ಸರಣಿಯಲ್ಲಿ ಸತತ 2 ಅರ್ಧ ಶತಕದ ದಾಖಲೆ ಮಾಡುತ್ತಿದ್ದರು. ಆದರೆ ವರ್ಮಾ ಅವರಿಗೆ ರನ್ ಪಡೆಯಲು ಅವಕಾಶ ನೀಡದ ನಾಯಕ ಹಾರ್ದಿಕ್ ಪಾಂಡ್ಯ ತುಂಬಾ ಸ್ವಾರ್ಥಿ ಎಂದು ಭಾರಿ ಆಕ್ರೋಶ ವ್ಯಕ್ತವಾಗಿದೆ.
ಗಯಾನಾ (ವೆಸ್ಟ್ ಇಂಡೀಸ್): India vs West Indies 3rd T20 ಕೆರಿಬಿಯನ್ನರ ವಿರುದ್ಧ ನಿರ್ಣಾಯಕ ಮೂರನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದರೂ ( ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿವೆ. ಇದಕ್ಕೆ ಕಾರಣ ಪಾಂಡ್ಯ ಅವರ ಎರಡು ನಿರ್ಧಾರಗಳು.
ಟಿ20 ಸರಣಿಯಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಯುವ ಪ್ರತಿಭೆ ತಿಲಕ್ ವರ್ಮಾ (Tilak Verma) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಗೆಲ್ಲಲೇ ಬೇಕಾಗಿದ್ದ ಮೂರನೇ ಪಂದ್ಯದಲ್ಲೂ ಉತ್ತಮ ರನ್ ಕಾಣಿಕೆ ನೀಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಪಾಂಡ್ಯ ಅವರು ಸ್ವಾರ್ಥ ಮನೋಭಾದಿಂದ ಕೇವಲ 1 ರನ್‌ನಿಂದ ಅರ್ಧ ಶತಕದಿಂದ ವಂಚಿತರಾಗಿದ್ದಾರೆ.
18ನೇ ಓವರ್‌ನ 4ನೇ ಎಸೆತದಲ್ಲಿ ತಿಲಕ್ ಸಿಂಗ್ ರನ್ ಪಡೆದರು. ಆಗ ಅವರು 37 ಎಸೆತಗಳಿಂದ 49 ರನ್ ಗಳಿಸಿದ್ದರು. ಅದೇ ಓವರ್‌ನಲ್ಲಿ ಇನ್ನೂ 2 ಎಸೆತಗಳು ಬಾಕಿ ಇದ್ದವು. ಭಾರತದ ಗೆಲುವಿಗೆ 2 ರನ್‌ಗಳ ಅತ್ಯವಿತ್ತು. ಆಗ ತಿಲಕ್ ಅರ್ಧ ಶತಕ ಗಳಿಸಿಲು ಪೂರೈಸಲು ಹಾರ್ದಿಕ್ ಪಾಂಡ್ಯ ಅವಕಾಶ ನೀಡುತ್ತಾರೆ ಅಂತ ಎಲ್ಲರೂ ಭಾವಿಸಿದ್ದರು. ಆದರೆ ಅದೇ ಓವರ್‌ನ 5ನೇ ಎಸೆತದಲ್ಲಿ ಹಾರ್ದಿಕ್ ಸಿಕ್ಸರ್ ಬಾರಿಸಿ ಪಂದ್ಯವನ್ನು ಮುಗಿಸಿದ್ದಾರೆ.
ಮೂರನೇ ಪಂದ್ಯದ ಕೊನೆಯ ಹಂತದಲ್ಲಿ ಭಾರತ ಗೆಲುವಿಗೆ ಎರಡು ಓವರ್‌ಗಳು ಬಾಕಿ ಇದ್ದವು. ತಿಲಕ್ ವರ್ಮಾ ಅರ್ಧ ಶತಕ ಪೂರೈಸಲು ಕೇವಲ ಒಂದು ರನ್ ಬಾಕಿ ಇರುವುದು ಗೊತ್ತಿದ್ದರೂ ನಾಯಕ ಹಾರ್ದಿಕ್ ಪಾಂಡ್ಯ ಸಿಕ್ಸ್ ಹೊಡೆದು ಪಂದ್ಯವನ್ನ ಮುಗಿಸಿರುವುದು ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಲವರು ಹಾರ್ದಿಕ್ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಸುಲಭವಾಗಿ ಗೆಲ್ಲುವ ಅವಕಾಶ ಇದ್ದಾಗ ಸಂಜು ಸ್ಯಾಮ್ಸನ್ ಬದಲು ಬ್ಯಾಟಿಂಗ್ ಮಾಡಲು ಬಂದು, ನಂತರ ತಿಲಕ್ ವರ್ಮಾ ಅರ್ಧ ಶತಕ ಪೂರೈಸುವುದನ್ನು ತಡೆದರು ಎಂದು ಪಾಂಡ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ತುಂಬಾ ಸ್ವಾರ್ಥಿ ಇಂತಹ ಆಟಗಾರ ಮತ್ತು ನಾಯಕನನ್ನು ಟೀಂ ಇಂಡಿಯಾ ಇದುವರೆಗೆ ನೋಡೇ ಇಲ್ಲ ಎಂದು ಹಲವರು ಸರಣಿ ಟ್ವೀಟ್‌ಗಳ ಮೂಲಕ ಹಾಂಡ್ಯ ವಿರುದ್ಧ ಕಿಡಿಕಾರಿದ್ದಾರೆ.
ಇಂತಹ ಸಂದರ್ಭದಲ್ಲಿ ನಾಯಕನಾದನು ಹೀಗೆ ಮಾಡಬಹುದಾ? ಒಬ್ಬ ಯುವ ಬ್ಯಾಟ್ಸಮನ್ ಹೀರೋ ಆಗುವ ಎಲ್ಲಾ ಅವಕಾಶವಿತ್ತು. ಆದರೆ ಹಾರ್ದಿಕ್ ಪಾಂಡ್ಯ ಹಾಗೆ ಮಾಡಲಿಲ್ಲ. ಭಾರತ ಯಾವತ್ತೂ ನಾಚಿಕೆಯಿಲ್ಲದ ನಾಯಕನನ್ನು ನೋಡಿಲ್ಲ ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಪ್ರತಿಕ್ರಿಸಿದ್ದು, ಇಂತಹ ಸ್ವಾರ್ಥಿ ಆಟಗಾರ ಮತ್ತು ನಾಯಕನನ್ನು ಎಂದೂ ನೋಡಿಲ್ಲ ಎಂದು ಟೀಕಿಸಿದ್ದಾರೆ.
ಈ ಹಿಂದೆ ಕೊಹ್ಲಿ ಶತಕ ಪೂರೈಸಲು ಎಂಎಸ್ ಧೋನಿ ಅವಕಾಶ ಮಾಡಿಕೊಟ್ಟಿದ್ದು ಸೇರಿದಂತೆ ಹಿರಿಯ ಆಟಗಾರರ ಉದಾರತೆಯನ್ನು ಇದೇ ವೇಳೆ ಅಭಿಮಾನಿಗಳು ಸ್ಮರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿರುವ ತಿಲಕ್ ವರ್ಮಾ ಮೂರು ಪಂದ್ಯದಲ್ಲಿ ಉತ್ತಮ ಆಟವಾಡಿದ್ದಾರೆ.
ಮೊದಲ ಪಂದ್ಯದಲ್ಲಿ 25 ಎಸೆತಗಳಿಂದ 39 ರನ್, ಎರಡನೇ ಪಂದ್ಯದಲ್ಲಿ 51 ರನ್ ಹಾಗೂ ಮೂರನೇ ಪಂದ್ಯದಲ್ಲಿ 49 ರನ್‌ಗಳಿಸಿ ಉತ್ತಮ ಆಟವಾಡುತ್ತಿದ್ದಾರೆ. ಪದಾರ್ಪಣೆ ಸರಣಿಯಲ್ಲಿ ಸತತವಾಗಿ 30ಕ್ಕಿಂತ ಹೆಚ್ಚು ರನ್ ಕಲೆಹಾಕಿದ ಎರನಡೇ ಭಾರತೀಯ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ್ದರು.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕು ಮತ್ತು ಐದನೇ ಟಿ20 ಪಂದ್ಯಗಳು ಫ್ಲೋರಿಡಾದಲ್ಲಿ ಕ್ರಮವಾಗಿ 12 ಮತ್ತು 13 ರಂದು ನಡೆಯಲಿವೆ. ಈ ಎರಡು ಪಂದ್ಯಗಳನ್ನು ಗೆದ್ದರೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್‌ನಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಮೂರು ಸರಣಿಗಳನ್ನು ಗೆದ್ದಂತಾಗುತ್ತದೆ.