logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಆಸ್ಟ್ರೇಲಿಯಾ ವನಿತೆಯರ ಸರಣಿ; ವೇಳಾಪಟ್ಟಿ, ತಂಡ ಮತ್ತು ಲೈವ್ ಸ್ಟ್ರೀಮಿಂಗ್ ವಿವರ ಹೀಗಿದೆ

ಭಾರತ vs ಆಸ್ಟ್ರೇಲಿಯಾ ವನಿತೆಯರ ಸರಣಿ; ವೇಳಾಪಟ್ಟಿ, ತಂಡ ಮತ್ತು ಲೈವ್ ಸ್ಟ್ರೀಮಿಂಗ್ ವಿವರ ಹೀಗಿದೆ

Jayaraj HT Kannada

Dec 20, 2023 06:58 PM IST

google News

ಭಾರತ ಟೆಸ್ಟ್‌ ತಂಡ

    • INDW vs AUSW: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಡಿಸೆಂಬರ್ 28ರಿಂದ 2024ರ ಜನವರಿ 2ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ನಡುವೆ ಏಕದಿನ ಸರಣಿ ನಡೆಯಲಿವೆ. ಜನವರಿ 5ರಿಂದ 9ರವರೆಗೆ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಟಿ20 ಪಂದ್ಯಗಳು ನಡೆಯಲಿವೆ.
ಭಾರತ ಟೆಸ್ಟ್‌ ತಂಡ
ಭಾರತ ಟೆಸ್ಟ್‌ ತಂಡ (PTI)

ಇಂಗ್ಲೆಂಡ್ ವಿರುದ್ಧ ಇತ್ತೀಚೆಗಷ್ಟೇ ನಡೆದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತ ವನಿತೆಯರ ಕ್ರಿಕೆಟ್‌ ತಂಡವು 347 ರನ್‌ಗಳ ಅಂತರದಿಂದ ವಿಶ್ವದಾಖಲೆಯ ಜಯ ಸಾಧಿಸಿತು. ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಬಲಿಷ್ಠ ಆಸ್ಟ್ರೇಲಿಯಾವನ್ನು ಕೂಡಾ ಭರ್ಜರಿಯಾಗಿ ಮಣಿಸಲು ಸಜ್ಜಾಗಿದೆ. ತವರಿನಲ್ಲಿ ನಡೆಯಲಿರುವ ದ್ವಿಪಕ್ಷೀಯ ಸರಣಿಯು ಏಕೈಕ ಟೆಸ್ಟ್‌ ಪಂದ್ಯದೊಂದಿಗೆ ಆರಂಭವಾಗುತ್ತಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎಲ್ಲಾ ಮಾದರಿಯ ಸರಣಿಯು ಡಿಸೆಂಬರ್ 21ರ ಗುರುವಾರ ಆರಂಭವಾಗುತ್ತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಏಕೈಕ ಟೆಸ್ಟ್ ಪಂದ್ಯ ಮೊದಲಿಗೆ ನಡೆಯಲಿದೆ. ಆ ಬಳಿಕ ಮೂರು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಇದನ್ನೂ ಓದಿ | ಏಕೈಕ ಟೆಸ್ಟ್: ಭಾರತ ವನಿತೆಯರ ಸರ್ವಶ್ರೇಷ್ಠ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್; 347 ರನ್​ಗಳ ವಿಶ್ವದಾಖಲೆ ಗೆಲುವು

ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ಡಿಸೆಂಬರ್ 28, 30 ಮತ್ತು 2024ರ ಜನವರಿ 2ರಂದು ಏಕದಿನ ಪಂದ್ಯಗಳು ನಡೆಯಲಿವೆ. ಟಿ20 ಪಂದ್ಯಗಳು ಜನವರಿ 5, 7 ಮತ್ತು 9ರಂದು ನವಿ ಮುಂಬೈನ ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿವೆ.

ಅನುಭವಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ ತಂಡವನ್ನು ಕೇವಲ ಮೂರೇ ದಿನಗಳಲ್ಲಿ ಸೋಲಿಸಿದ ನಂತರ ಭಾರತವು ಬಲಿಷ್ಠ ಕಾಂಗರೂ ಬಳಗವನ್ನು ಕೂಡಾ ಮಣಿಸುವ ವಿಶ್ವಾಸದಲ್ಲಿದೆ.

ವೇಳಾಪಟ್ಟಿ

  • ಭಾರತ vs ಆಸ್ಟ್ರೇಲಿಯಾ ಏಕೈಕ ಟೆಸ್ಟ್ ಪಂದ್ಯ: ಡಿಸೆಂಬರ್ 21ರಿಂದ 24, ಮುಂಬೈನ ವಾಂಖೆಡೆ ಸ್ಟೇಡಿಯಂ.
  • ಭಾರತ vs ಆಸ್ಟ್ರೇಲಿಯಾ 1ನೇ ಏಕದಿನ: ಡಿಸೆಂಬರ್ 28ರ ಗುರುವಾರ, ಮುಂಬೈನ ವಾಂಖೆಡೆ ಸ್ಟೇಡಿಯಂ.
  • ಭಾರತ vs ಆಸ್ಟ್ರೇಲಿಯಾ 2ನೇ ಏಕದಿನ: ಡಿಸೆಂಬರ್ 30ರ ಶನಿವಾರ, ಮುಂಬೈನ ವಾಂಖೆಡೆ ಸ್ಟೇಡಿಯಂ.
  • ಭಾರತ vs ಆಸ್ಟ್ರೇಲಿಯಾ 3ನೇ ಏಕದಿನ: 2024ರ ಜನವರಿ 2 ಮಂಗಳವಾರ, ಮುಂಬೈನ ವಾಂಖೆಡೆ ಸ್ಟೇಡಿಯಂ.
  • ಭಾರತ vs ಆಸ್ಟ್ರೇಲಿಯಾ 1ನೇ ಟಿ20: ಜನವರಿ 5ರ ಶುಕ್ರವಾರ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ.
  • ಭಾರತ vs ಆಸ್ಟ್ರೇಲಿಯಾ 2ನೇ ಟಿ20: ಜನವರಿ 7ರ ಭಾನುವಾರ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ.
  • ಭಾರತ vs ಆಸ್ಟ್ರೇಲಿಯಾ 3ನೇ ಟಿ20: ಜನವರಿ 9ರ ಮಂಗಳವಾರ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ.

ಲೈವ್ ಸ್ಟ್ರೀಮಿಂಗ್ ವಿವರ

ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ನಡುವಿನ ಏಕೈಕ ಟೆಸ್ಟ್ ಪಂದ್ಯವು ಗುರುವಾರ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ. ಆ ಬಳಿಕ ನಡೆಯಲಿರುವ ಎಲ್ಲಾ ಮೂರು ಏಕದಿನ ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಆರಂಭವಾಗಲಿವೆ. ಆ ಬಳಿಕ ಮೂರು ಟಿ20 ಪಂದ್ಯಗಳು ಸಂಜೆ 7:00 ಗಂಟೆಗೆ ಪ್ರಾರಂಭವಾಗುತ್ತವೆ.

ಆಸೀಸ್‌ ವಿರುದ್ಧದ ಸರಣಿಯ ಎಲ್ಲಾ ಏಳು ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮೊಬೈಲ್‌ ಮೂಲಕ ಇಲ್ಲಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯಗಳನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ | ನಿಜಕ್ಕೂ ಕಠಿಣ ನಿರ್ಧಾರ, ಆದರೆ...; ರೋಹಿತ್ ಕೆಳಗಿಳಿಸಿ ಪಾಂಡ್ಯಗೆ ನಾಯಕತ್ವ ವಹಿಸಿದ ಹಿಂದಿನ ಉದ್ದೇಶ ತಿಳಿಸಿದ ಜಯವರ್ಧನೆ

ಭಾರತ ಟೆಸ್ಟ್ ತಂಡ

ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಶುಭಾ ಸತೀಶ್, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್), ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ರೇಣುಕಾ ಠಾಕೂರ್ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ರಿಚಾ ಘೋಷ್ (ವಿಕೆಟ್‌ ಕೀಪರ್), ಹರ್ಲೀನ್ ಡಿಯೋಲ್, ಸೈಕಾ ಇಶಾಕ್, ಟೈಟಾಸ್ ಸಾಧು, ಮೇಘನಾ ಸಿಂಗ್.

ಆಸ್ಟ್ರೇಲಿಯಾ ಟೆಸ್ಟ್ ತಂಡ

ಡಾರ್ಸಿ ಬ್ರೌನ್, ಲಾರೆನ್ ಚೀಟಲ್, ಹೀದರ್ ಗ್ರಹಾಂ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಅಲಿಸ್ಸಾ ಹೀಲಿ, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶಟ್, ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್.

ಆಸ್ಟ್ರೇಲಿಯಾ ಏಕದಿನ ತಂಡ

ಡಾರ್ಸಿ ಬ್ರೌನ್, ಹೀದರ್ ಗ್ರಹಾಂ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಅಲಿಸ್ಸಾ ಹೀಲಿ, ಜೆಸ್ ಜೊನಾಸ್ಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಾಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರಿ, ಮೇಗನ್ ಶಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್.

ಆಸ್ಟ್ರೇಲಿಯಾ ಟಿ20 ತಂಡ

ಡಾರ್ಸಿ ಬ್ರೌನ್, ಗ್ರೇಸ್ ಹ್ಯಾರಿಸ್, ಹೀದರ್ ಗ್ರಹಾಂ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಅಲಿಸ್ಸಾ ಹೀಲಿ, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ