ಟಿ20 ವಿಶ್ವಕಪ್ ನಂತರ ತವರಿನಲ್ಲಿ3 ಬಲಿಷ್ಠ ತಂಡಗಳ ವಿರುದ್ಧ ಭಾರತ ತಂಡ ಸೆಣಸಾಟ; ವೇಳಾಪಟ್ಟಿ ಇಲ್ಲಿದೆ
Jun 20, 2024 10:40 PM IST
ಟಿ20 ವಿಶ್ವಕಪ್ ನಂತರ ತವರಿನಲ್ಲಿ3 ಬಲಿಷ್ಠ ತಂಡಗಳ ವಿರುದ್ಧ ಭಾರತ ತಂಡ ಸೆಣಸಾಟ; ವೇಳಾಪಟ್ಟಿ ಇಲ್ಲಿದೆ
- Indian Cricket Team: ಟಿ20 ವಿಶ್ವಕಪ್ 2024 ಟೂರ್ನಿಯ ನಂತರ ಟೀಮ್ ಇಂಡಿಯಾ ಬಲಿಷ್ಠ ಮೂರು ತಂಡಗಳನ್ನು ತವರಿನಲ್ಲಿ ಎದುರಿಸಲಿದೆ. ಅದರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024) ಸೂಪರ್-8 ಪಂದ್ಯಗಳಲ್ಲಿ ನಿರತರಾಗಿರುವ ಟೀಮ್ ಇಂಡಿಯಾ, ಮೆಗಾ ಟೂರ್ನಿಯ ಬಳಿಕ ಬಲಿಷ್ಠ 3 ತಂಡಗಳ ವಿರುದ್ಧ ತವರಿನಲ್ಲಿ ಸರಣಿಗಳನ್ನು ಆಡಲಿದೆ. 2024-25ನೇ ಸಾಲಿನಲ್ಲಿ ತವರಿನಲ್ಲಿ ನಡೆಯುವ ಟೀಮ್ ಇಂಡಿಯಾ ಸರಣಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಎದುರು ಸರಣಿಗಳನ್ನು ಆಡಲಿದೆ. ಎಲ್ಲಿ ಯಾವಾಗ, ಎಷ್ಟು ಪಂದ್ಯಗಳನ್ನು ಆಡಲಿದೆ ಎಂಬ ಮಾಹಿತಿ ಇದೆ.
ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್ ಸರಣಿ
ಪ್ರಥಮ ಟೆಸ್ಟ್ - ಸೆಪ್ಟೆಂಬರ್ 19 ರಿಂದ 23ರವರೆಗೆ, ಚೆನ್ನೈ, (ಬೆಳಿಗ್ಗೆ 9.30ಕ್ಕೆ ಆರಂಭ)
ದ್ವಿತೀಯ ಟೆಸ್ಟ್ - ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ, ಕಾನ್ಪುರ, (ಬೆಳಿಗ್ಗೆ 9.30ಕ್ಕೆ ಆರಂಭ)
ಭಾರತ ಮತ್ತು ಬಾಂಗ್ಲಾದೇಶ ಟಿ20 ಸರಣಿ
1ನೇ ಟಿ20 - ಅಕ್ಟೋಬರ್ 6, 2024, ಧರ್ಮಶಾಲಾ, (ರಾತ್ರಿ 7ಕ್ಕೆ)
2ನೇ ಟಿ20 - ಅಕ್ಟೋಬರ್ 9, 2024, ದೆಹಲಿ (ರಾತ್ರಿ 7ಕ್ಕೆ)
3ನೇ ಟಿ20 - ಅಕ್ಟೋಬರ್ 12, 2024, ಹೈದರಾಬಾದ್ (ರಾತ್ರಿ 7ಕ್ಕೆ)
ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿ
ಪ್ರಥಮ ಟೆಸ್ಟ್ - 16-20 ಅಕ್ಟೋಬರ್ 2024, ಬೆಂಗಳೂರು (ಬೆಳಿಗ್ಗೆ 9.30ಕ್ಕೆ ಆರಂಭ)
ದ್ವಿತೀಯ ಟೆಸ್ಟ್ - 24-28 ಅಕ್ಟೋಬರ್ 2024, ಪುಣೆ (ಬೆಳಿಗ್ಗೆ 9.30ಕ್ಕೆ ಆರಂಭ)
ತೃತೀಯ ಟೆಸ್ಟ್ - 1-5 ನವೆಂಬರ್ 2024, ಮುಂಬೈ (ಬೆಳಿಗ್ಗೆ 9.30ಕ್ಕೆ ಆರಂಭ)
ಭಾರತ ಮತ್ತು ಇಂಗ್ಲೆಂಡ್ ಟಿ20 ಸರಣಿ
1ನೇ ಟಿ20 ಪಂದ್ಯ - 22 ಜನವರಿ 2025, ಚೆನ್ನೈ, (ರಾತ್ರಿ 7ಕ್ಕೆ)
2ನೇ ಟಿ20 ಪಂದ್ಯ - 25 ಜನವರಿ 2025, ಕೋಲ್ಕತ್ತಾ, (ರಾತ್ರಿ 7ಕ್ಕೆ)
3ನೇ ಟಿ20 ಪಂದ್ಯ - 28 ಜನವರಿ 2025, ರಾಜ್‌ಕೋಟ್, (ರಾತ್ರಿ 7ಕ್ಕೆ)
4ನೇ ಟಿ20 ಪಂದ್ಯ - 31 ಜನವರಿ 2025, ಪುಣೆ, (ರಾತ್ರಿ 7ಕ್ಕೆ)
5ನೇ ಟಿ20 - 2 ಫೆಬ್ರವರಿ 2025, ಮುಂಬೈ, (ರಾತ್ರಿ 7ಕ್ಕೆ)
ಭಾರತ ಮತ್ತು ಇಂಗ್ಲೆಂಡ್ ಏಕದಿನ ಸರಣಿ
ಪ್ರಥಮ ಓಡಿಐ ಪಂದ್ಯ - 6 ಫೆಬ್ರವರಿ 2025, ನಾಗ್ಪುರ, (ಮಧ್ಯಾಹ್ನ 1.30ಕ್ಕೆ)
ದ್ವಿತೀಯ ಓಡಿಐ ಪಂದ್ಯ - 9 ಫೆಬ್ರವರಿ 2025, ಕಟಕ್, (ಮಧ್ಯಾಹ್ನ 1.30ಕ್ಕೆ)
ತೃತೀಯ ಓಡಿಐ ಪಂದ್ಯ - 12 ಫೆಬ್ರವರಿ 2025, ಅಹಮದಾಬಾದ್ (ಮಧ್ಯಾಹ್ನ 1.30ಕ್ಕೆ)
ಟೀಮ್ ಇಂಡಿಯಾ ಪ್ರಸ್ತುತ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಆಡುತ್ತಿದೆ. ಈಗಾಗಲೇ ಗುಂಪು ಹಂತ ಪೂರೈಸಿರುವ ರೋಹಿತ್ ಪಡೆ, ಸೂಪರ್-8 ಪಂದ್ಯಗಳನ್ನು ಆಡುತ್ತಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಲಿದೆ.