ಐಪಿಎಲ್ 2024ರ ಪಂದ್ಯಗಳ ಸಮಯ, ವೇಳಾಪಟ್ಟಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ; ಟೂರ್ನಿ ಕುರಿತು ಪ್ರಮುಖ ಮಾಹಿತಿ ಇಲ್ಲಿದೆ
Mar 21, 2024 09:34 AM IST
ಐಪಿಎಲ್ 2024ರ ಪಂದ್ಯಗಳ ಸಮಯ, ವೇಳಾಪಟ್ಟಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ
- IPL 2024: ಬಹುನಿರೀಕ್ಷಿತ ಐಪಿಎಲ್ ಪಂದ್ಯಾವಳಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ, ಪಂದ್ಯದ ಸಮಯ ಸೇರಿದಂತೆ ನೇರಪ್ರಸಾರ ಕುರಿತ ಎಲ್ಲಾ ಮಾಹಿತಿ ಇಲ್ಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಹೀಗಿವೆ.
ಭಾರತೀಯ ಕ್ರಿಕೆಟ್‌ನ ಅತಿ ದೊಡ್ಡ ಹಬ್ಬ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ವನಿತೆಯರ ಕ್ರಿಕೆಟ್ ಲೀಗ್ ಮುಗಿದ ಬೆನ್ನಲ್ಲೇ ವಿಶ್ವದ ದುಬಾರಿ ಹಾಗೂ ಜನಪ್ರಿಯ ಟೂರ್ನಿ ಆರಂಭವಾಗುತ್ತಿದೆ. ಮಾರ್ಚ್ 22ರ ಶುಕ್ರವಾರ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಚಾಲನೆ ಸಿಗುತ್ತಿದ್ದು, ಹಾಲಿ ಚಾಂಪಿಯನ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತನ್ನ ತವರು ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲು ಸಜ್ಜಾಗಿದೆ. ಟೀಮ್ ಇಂಡಿಯಾದ ಇಬ್ಬರು ಮಾಜಿ ಹಾಗೂ ದಿಗ್ಗಜ ಆಟಗಾರರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಬಳಗವು ಅಭಿಮಾನಿಗಳ ಆಕರ್ಷಣೆಯಾಗಲಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದೆ. ಮಾರ್ಚ್ 22ರಿಂದ ಏಪ್ರಿಲ್ 7ರವರೆಗೆ ಮೊದಲ ಹಂತದ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಟೂರ್ನಿಯ ಫೈನಲ್ ಪಂದ್ಯವು ಮೇ 26ರಂದು ನಡೆಯಲಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಅದಕ್ಕಿಂತ ಕೇವಲ ಐದು ದಿನ ಮುಂಚಿತವಾಗಿ ಐಪಿಎಲ್ ಟೂರ್ನಿ ಮುಗಿಯಲಿದೆ.
ಉದ್ಘಾಟನಾ ಸಮಾರಂಭ ಹಿನ್ನೆಲೆಯಲ್ಲಿ ಐಪಿಎಲ್ ಆರಂಭಿಕ ಪಂದ್ಯ ಮಾತ್ರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿವೆ. ಕೆಲವು ದಿನಗಳಲ್ಲಿ ಎರಡೆರಡು ಪಂದ್ಯಗಳು ನಡೆಯಲಿದ್ದು, ಆ ದಿನದ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಲಿದೆ.
ಇದನ್ನೂ ಓದಿ | ದಿಲ್ಶನ್ ಮಧುಶಂಕ ಬದಲಿಗೆ ಮುಂಬೈ ಇಂಡಿಯನ್ಸ್ ಸೇರಿಕೊಂಡ ಖಡಕ್ ಬೌಲರ್; 17 ವರ್ಷದ ಈ ಕ್ವೆನಾ ಮಫಾಕಾ ಯಾರು?
ಪ್ರಸಕ್ತ ಆವೃತ್ತಿಯ ವೇಳಾಪಟ್ಟಿ, ಪಂದ್ಯದ ಸಮಯ ಲೈವ್ ಸ್ಟ್ರೀಮಿಂಗ್ ವಿವರ ಸೇರಿದಂತೆ ಐಪಿಎಲ್ 2024ರ ಆವೃತ್ತಿಯ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವುದು ಹೇಗೆ?
ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಟಿವಿ ಮೂಲಕ ಐಪಿಎಲ್ 2024ರ ಆವೃತ್ತಿಯ ಪಂದ್ಯಗಳನ್ನು ನೇರಪ್ರಸಾರ ಮಾಡುತ್ತಿವೆ. ಬ್ರಾಡ್‌ಕ್ಯಾಸ್ಟ್ ಹಕ್ಕು ಸ್ಟಾರ್ ತೆಕ್ಕೆಗೆ ಬಂದಿದ್ದರೆ, ಲೈವ್ ಸ್ಟ್ರೀಮ್ ಹಕ್ಕನ್ನು ಜಿಯೋ ಪಡೆದುಕೊಂಡಿದೆ. ಅಭಿಮಾನಿಗಳು ಜಿಯೋ ಸಿನೆಮಾದಲ್ಲಿ ಐಪಿಎಲ್ 2024ರ ಪಂದ್ಯಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಬಹುದು. ಮೊಬೈಲ್ ಮೂಲಕ ಉಚಿತವಾಗಿ ಉತ್ತಮ ಗುಣಮಟ್ಟದ ವಿಡಿಯೋದೊಂದಿಗೆ ವೀಕ್ಷಿಸಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ
- ಮಾರ್ಚ್ 22, ರಾತ್ರಿ 8:00 ಗಂಟೆಗೆ: ಸಿಎಸ್‌ಕೆ vs ಆರ್‌ಸಿಬಿ, ಚೆನ್ನೈ.
- ಮಾರ್ಚ್ 23, ಮಧ್ಯಾಹ್ನ 3:30: ಪಿಬಿಕೆಎಸ್ vs ಡಿಸಿ, ಮೊಹಾಲಿ.
- ಮಾರ್ಚ್ 23, ಸಂಜೆ 7:30: ಕೆಕೆಆರ್ vs ಎಸ್ಆರ್‌ಹೆಚ್, ಕೋಲ್ಕತಾ.
- ಮಾರ್ಚ್ 24, ಮಧ್ಯಾಹ್ನ 3:30: ಆರ್‌ಆರ್ vs ಎಲ್ಎಸ್‌ಜಿ, ಜೈಪುರ.
- ಮಾರ್ಚ್ 24, ಸಂಜೆ 7:30: ಜಿಟಿ vs ಎಂಐ, ಅಹಮದಾಬಾದ್.
- ಮಾರ್ಚ್ 25, ಸಂಜೆ 7:30: ಆರ್‌ಸಿಬಿ vs ಪಿಬಿಕೆಎಸ್, ಬೆಂಗಳೂರು.
- ಮಾರ್ಚ್ 26, ಸಂಜೆ 7:30: ಸಿಎಸ್‌ಕೆ vs ಜಿಟಿ, ಚೆನ್ನೈ.
- ಮಾರ್ಚ್ 27, ಸಂಜೆ 7:30: ಎಸ್ಆರ್‌ಹೆಚ್ vs ಎಂಐ, ಹೈದರಾಬಾದ್.
- ಮಾರ್ಚ್ 28, ಸಂಜೆ 7:30: ಆರ್‌ಆರ್ vs ಡಿಸಿ, ಜೈಪುರ.
- ಮಾರ್ಚ್ 29, ಸಂಜೆ 7.30: ಆರ್‌ಸಿಬಿ vs ಕೆಕೆಆರ್, ಬೆಂಗಳೂರು.
- ಮಾರ್ಚ್ 30, ಸಂಜೆ 7:30: ಎಲ್ಎಸ್‌ಜಿ vs ಪಿಬಿಕೆಎಸ್, ಲಕ್ನೋ.
- ಮಾರ್ಚ್ 31, ಮಧ್ಯಾಹ್ನ 3:30: ಜಿಟಿ vs ಎಸ್ಆರ್‌ಹೆಚ್, ಅಹಮದಾಬಾದ್.
- ಮಾರ್ಚ್ 31, ಸಂಜೆ 7:30: ಡಿಸಿ vs ಸಿಎಸ್‌ಕೆ, ವಿಶಾಖಪಟ್ಟಣಂ.
- ಏಪ್ರಿಲ್ 1, ಸಂಜೆ 7:30: ಮುಂಬೈ vs ಆರ್‌ಆರ್, ಮುಂಬೈ.
- ಏಪ್ರಿಲ್ 2, ಸಂಜೆ 7:30: ಆರ್‌ಸಿಬಿ vs ಎಲ್ಎಸ್‌ಜಿ, ಬೆಂಗಳೂರು.
- ಏಪ್ರಿಲ್ 3, ಸಂಜೆ 7:30: ಡಿಸಿ vs ಕೆಕೆಆರ್, ವಿಶಾಖಪಟ್ಟಣಂ.
- ಏಪ್ರಿಲ್ 4, ಸಂಜೆ 7:30: ಜಿಟಿ vs ಪಿಬಿಕೆಎಸ್, ಅಹಮದಾಬಾದ್.
- ಏಪ್ರಿಲ್ 5, ಸಂಜೆ 7:30: ಎಸ್ಆರ್‌ಎಚ್ vs ಸಿಎಸ್ಕೆ, ಹೈದರಾಬಾದ್.
- ಏಪ್ರಿಲ್ 6, ಸಂಜೆ 7:30: ಆರ್‌ಆರ್ vs ಆರ್‌ಸಿಬಿ, ಜೈಪುರ.
- ಏಪ್ರಿಲ್ 7, ಮಧ್ಯಾಹ್ನ 3:30: ಮುಂಬೈ vs ಡಿಸಿ.
- ಏಪ್ರಿಲ್ 7, ಸಂಜೆ 7:30: ಎಲ್ಎಸ್‌ಜಿ vs ಜಿಟಿ, ಲಕ್ನೋ.