logo
ಕನ್ನಡ ಸುದ್ದಿ  /  ಕ್ರಿಕೆಟ್  /  ಯಾವೆಲ್ಲಾ ಆಟಗಾರರಿಗೆ ದೀಪಾವಳಿ ಗಿಫ್ಟ್? ಐಪಿಎಲ್ 10 ತಂಡಗಳು ಉಳಿಸಿಕೊಳ್ಳುವ ಸಂಭಾವ್ಯ ಪ್ಲೇಯರ್ಸ್ ಲಿಸ್ಟ್ ಇಲ್ಲಿದೆ

ಯಾವೆಲ್ಲಾ ಆಟಗಾರರಿಗೆ ದೀಪಾವಳಿ ಗಿಫ್ಟ್? ಐಪಿಎಲ್ 10 ತಂಡಗಳು ಉಳಿಸಿಕೊಳ್ಳುವ ಸಂಭಾವ್ಯ ಪ್ಲೇಯರ್ಸ್ ಲಿಸ್ಟ್ ಇಲ್ಲಿದೆ

Prasanna Kumar P N HT Kannada

Oct 30, 2024 03:03 PM IST

google News

ಕೆಎಲ್ ರಾಹುಲ್, ಎಂಎಸ್ ಧೋನಿ, ರಿಷಭ್ ಪಂತ್

    • IPL 2025: ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಇದಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಯಾರಿಗೆಲ್ಲಾ ದೀಪಾವಳಿ ಗಿಫ್ಟ್ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೆಎಲ್ ರಾಹುಲ್, ಎಂಎಸ್ ಧೋನಿ, ರಿಷಭ್ ಪಂತ್
ಕೆಎಲ್ ರಾಹುಲ್, ಎಂಎಸ್ ಧೋನಿ, ರಿಷಭ್ ಪಂತ್

IPL 2025 Retention List: 18ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ 10 ತಂಡಗಳು ಉಳಿಸಿಕೊಳ್ಳುವ ಪ್ರಮುಖ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31ರೊಳಗೆ ಬಿಡುಗಡೆ ಮಾಡಬೇಕಿದೆ. ಆದರೆ ಯಾವ ತಂಡ ಇದುವರೆಗೂ ರಿಟೆನ್ಶನ್ ಪಟ್ಟಿ ಬಿಡುಗಡೆ ಮಾಡದಿರುವುದು ಅಚ್ಚರಿ ಮೂಡಿಸಿದೆ. ಮೈದಾನದಲ್ಲಿ ಆಟಗಾರರಂತೆ, ಫ್ರಾಂಚೈಸಿಗಳು ಸಹ ಪ್ಲೇಯರ್ಸ್ ರಿಟೆನ್ಶನ್ ವಿಚಾರದಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಪ್ರತಿ ತಂಡದಲ್ಲೂ ಸ್ಟಾರ್​​ಗಳ ಪಟ್ಟಿ ಅಡಗಿದ ಕಾರಣ ಯಾರನ್ನು ಕೈಬಿಡಬೇಕು? ಯಾರನ್ನು ಉಳಿಸಿಕೊಳ್ಳಬೇಕು? ಕಳೆದ ವರ್ಷ, ಅದಕ್ಕೂ ಹಿಂದೆ ಆಟಗಾರರ ಪ್ರದರ್ಶನ ಹೇಗಿದೆ ಎಂಬುದನ್ನು ಲೆಕ್ಕಚಾರವನ್ನೂ ಹಾಕುತ್ತಿವೆ.

ಆರ್​ಟಿಎಂ (ರೈಟ್ ಟು ಮ್ಯಾಚ್) ಮೂಲಕ ಒಬ್ಬರನ್ನು ಸೇರಿ ಒಟ್ಟು 6 ಆಟಗಾರರನ್ನು ಒಂದು ತಂಡವು ಉಳಿಸಿಕೊಳ್ಳಲು ಅವಕಾಶ ನೀಡಿದೆ. ರಿಟೈನ್​ನ ಐವರಲ್ಲಿ ದೇಶ-ವಿದೇಶದವರು ಇರಬಹುದು. ಇಬ್ಬರು ಅನ್‌ಕ್ಯಾಪ್ಡ್‌ ಪ್ಲೇಯರ್ಸ್​ ಉಳಿಸಿಕೊಳ್ಳಲು ಅನುಮತಿ ನೀಡಿದೆ. ಈ ಬಾರಿ ಪರ್ಸ್ ಮೊತ್ತವನ್ನು 120 ಕೋಟಿ ರೂಗೆ ಏರಿಸಲಾಗಿದೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರೆ ಎಂದು ಈ ಹಿಂದೆ ವರದಿ ಆಗಿತ್ತು. ಅಲ್ಲದೆ, ಎಂಎಸ್ ಧೋನಿಗೆ ಇದೇ ಕೊನೆಯ ಐಪಿಎಲ್ ಎಂದು ವರದಿಯಾಗಿತ್ತು. ಆದರೆ ಇಬ್ಬರು ಸಹ ತಮ್ಮ ತಂಡಗಳ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಹಾಗಾದರೆ 10 ತಂಡಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ. ಅಕ್ಟೋಬರ್ 31ರಂದು ಯಾವೆಲ್ಲಾ ಆಟಗಾರರಿಗೆ ದೀಪಾವಳಿ ಗಿಫ್ಟ್ ಸಿಗಬಹುದು ಎಂಬುದನ್ನು ಕಾದುನೋಡಬೇಕಿದೆ.

ಗುಜರಾತ್ ಟೈಟಾನ್ಸ್

ಶುಭ್ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ (ಆರ್‌ಟಿಎಂ ಸಾಧ್ಯತೆ)

ಲಕ್ನೋ ಸೂಪರ್ ಜೈಂಟ್ಸ್

ಕೆಎಲ್ ರಾಹುಲ್, ನಿಕೋಲಸ್ ಪೂರನ್, ಮಯಾಂಕ್ ಯಾದವ್, ಆಯುಷ್ ಬದೋನಿ, ರವಿ ಬಿಷ್ಣೋಯ್ (RTM)

ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ ಅಥವಾ ಆಕಾಶ್ ಮಧ್ವಲ್ (ಅನ್​ಕ್ಯಾಪ್ಡ್ ಪ್ಲೇಯರ್)

ಚೆನ್ನೈ ಸೂಪರ್ ಕಿಂಗ್ಸ್

ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಎಂಎಸ್ ಧೋನಿ, ಶಿವಂ ದುವೆ, ಮತೀಶ ಪತಿರಾಣ

ಸನ್ ರೈಸರ್ಸ್ ಹೈದರಾಬಾದ್

ಪ್ಯಾಟ್ ಕಮಿನ್ಸ್, ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಭುವನೇಶ್ವರ್ ಕುಮಾರ್, ಅಬ್ದುಲ್ ಸಮದ್ (ಅನ್​ಕ್ಯಾಪ್ಡ್)

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್​ವೆಲ್, ವಿಲ್ ಜ್ಯಾಕ್ಸ್, ರಜತ್ ಪಾಟೀದಾರ್ (RTM), ಮೊಹಮ್ಮದ್ ಸಿರಾಜ್, ಯಶ್ ದಯಾಳ್

ಡೆಲ್ಲಿ ಕ್ಯಾಪಿಟಲ್ಸ್

ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್, ಟ್ರಿಸ್ಟಾನ್ ಸ್ಟಬ್ಸ್

ಕೋಲ್ಕತ್ತಾ ನೈಟ್ ರೈಡರ್ಸ್

ಶ್ರೇಯಸ್ ಅಯ್ಯರ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ರಹಮಾನುಲ್ಲಾ ಗುರ್ಬಾಜ್/ವರುಣ್ ಚಕ್ರವರ್ತಿ (RTM), ರಿಂಕು ಸಿಂಗ್, ಹರ್ಷಿತ್ ರಾಣಾ

ಪಂಜಾಬ್ ಕಿಂಗ್ಸ್

ಆಶುತೋಶ್ ಶರ್ಮಾ, ಶಶಾಂಕ್ ಸಿಂಗ್, ಅರ್ಷದೀಪ್ ಸಿಂಗ್, ಕಗಿಸೋ ರಬಾಡ, ಲಿಯಾಮ್ ಲಿವಿಂಗ್​ಸ್ಟನ್

ರಾಜಸ್ಥಾನ್ ರಾಯಲ್ಸ್

ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಜೋಸ್ ಬಟ್ಲರ್

ಉಳಿಸಿಕೊಂಡರೆ ಯಾರಿಗೆಷ್ಟು ಸಂಭಾವನೆ?

ಕ್ಯಾಪ್ಡ್ ಆಟಗಾರ 1: 18 ಕೋಟಿ ರೂಪಾಯಿ

ಕ್ಯಾಪ್ಡ್ ಆಟಗಾರ 2: 14 ಕೋಟಿ ರೂಪಾಯಿ

ಕ್ಯಾಪ್ಡ್ ಆಟಗಾರ 3: 11 ಕೋಟಿ ರೂಪಾಯಿ

ಕ್ಯಾಪ್ಡ್ ಆಟಗಾರ 4: 18 ಕೋಟಿ ರೂಪಾಯಿ

ಕ್ಯಾಪ್ಡ್ ಆಟಗಾರ 5: 14 ಕೋಟಿ ರೂಪಾಯಿ

ಪ್ರತಿ ಅನ್‌ಕ್ಯಾಪ್ಡ್ ಆಟಗಾರ: 4 ಕೋಟಿ ರೂಪಾಯಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ