logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

Prasanna Kumar P N HT Kannada

May 20, 2024 07:00 AM IST

google News

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

    • IPL Playoff Matches Schedule: 2024ರ ಐಪಿಎಲ್​ ಪ್ಲೇಆಫ್​​ ಪಂದ್ಯಗಳಲ್ಲಿ ಯಾವ ತಂಡಗಳು, ಯಾರ ವಿರುದ್ಧ ಸೆಣಸಾಟ ನಡೆಸಬೇಕು ಎಂಬುದು ಖಚಿತಗೊಂಡಿದೆ. ಕ್ವಾಲಿಫೈಯರ್​​-1, ಎಲಿಮಿನೇಟರ್, ಕ್ವಾಲಿಫೈಯರ್​​-2, ಫೈನಲ್ ಪಂದ್ಯಗಳ ವೇಳಾಪಟ್ಟಿ, ಸಮಯ, ದಿನಾಂಕದ ವಿವರ ಇಲ್ಲಿದೆ.
ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ
ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

ಐಪಿಎಲ್-2024 ಅಂತಿಮ ಘಟಕ್ಕೆ ಬಂದಿದೆ. ಎರಡು ತಿಂಗಳ ಕಾಲ ನಡೆದ 70 ಲೀಗ್​ ಪಂದ್ಯಗಳಿಗೆ ತೆರೆ ಬಿದ್ದಿದೆ. ಇನ್ನೇನಿದ್ದರೂ ಪ್ಲೇಆಫ್ ಪಂದ್ಯಗಳ ಧಮಾಕ ಆರಂಭ. ಟೂರ್ನಿಯಲ್ಲಿ 10 ತಂಡಗಳ ಪೈಕಿ 6 ತಂಡಗಳು ಲೀಗ್​​​ ಹಂತದಲ್ಲೇ ಹೊರಬಿದ್ದಿವೆ. ಉಳಿದ 4 ತಂಡಗಳು ಒಂದು ಟ್ರೋಫಿ ಗೆಲ್ಲಲು ಕ್ವಾಲಿಫೈಯರ್-1, ಎಲಿಮಿನೇಟರ್​, ಕ್ವಾಲಿಫೈಯರ್​​-2 ಮತ್ತು ಪಂದ್ಯಗಳಲ್ಲಿ ಕಣಕ್ಕಿಳಿಯಲು ಸಜ್ಜಾಗಿವೆ.

ಮಾರ್ಚ್​ 22 ರಿಂದ ಮೇ 19ರ ಕೊನೆಯ ಲೀಗ್​ ಪಂದ್ಯದವರೆಗೂ ನಾನ್​​ಸ್ಟಾಫ್ ಎಂಟರ್​ಟೈನ್ಮೆಂಟ್​ ನೀಡಿದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ​ ಇನ್ನೊಂದು ವಾರದಲ್ಲಿ ಅದ್ಧೂರಿ ತೆರೆ ಬೀಳಲಿದೆ. ಪ್ಲೇಆಫ್​​ನಲ್ಲಿ ಯಾವ ತಂಡಗಳು ಸೆಣಸಾಟ ನಡೆಸಬೇಕು ಎಂಬುದಕ್ಕೆ ಕೊನೆಗೂ ತೆರೆಬಿದ್ದಿದೆ. ನಾಲ್ಕು ಕ್ವಾಲಿಫೈ ಆಗಿದ್ದರೂ ಯಾವ ತಂಡದ ಯಾರ ವಿರುದ್ಧ ಆಡಬೇಕು ಎನ್ನುವುದು ಲೀಗ್​​ ಹಂತದ ಅಂತಿಮ ಪಂದ್ಯವರೆಗೂ ಖಚಿತಗೊಂಡಿರಲಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್, ಸನ್​ರೈಸರ್ಸ್​ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕ್ರಮವಾಗಿ ಅಂಕಪಟ್ಟಿಯಲ್ಲಿ 1, 2, 3, 4ನೇ ಸ್ಥಾನ ಪಡೆದುಕೊಂಡಿವೆ. ಮೊದಲ ಎರಡು ತಂಡಗಳು ಮೊದಲ ಕ್ವಾಲಿಫೈಯರ್​ ಪಂದ್ಯವನ್ನು ಆಡಲಿವೆ. ಉಳಿದ ಎರಡು ತಂಡಗಳು ಎಲಿಮಿನೇಟರ್​ ಆಡಲಿವೆ. ಪ್ಲೇಆಫ್​ ಪಂದ್ಯಗಳ ವೇಳಾಪಟ್ಟಿ, ಸಮಯ, ದಿನಾಂಕದ ವಿವರ ಇಲ್ಲಿದೆ ನೋಡಿ.

ಐಪಿಎಲ್​-2024ರ ಪ್ಲೇಆಫ್ ಪಂದ್ಯಗಳ​ ವೇಳಾಪಟ್ಟಿ

ಮೇ 21 - ಕೆಕೆಆರ್​ vs ಎಸ್​ಆರ್​ಹೆಚ್ (ಕ್ವಾಲಿಫೈಯರ್​-1) - ನರೇಂದ್ರ ಮೋದಿ ಸ್ಟೇಡಿಯಂ​​ (ಅಹ್ಮದಾಬಾದ್)

ಮೇ 22 - ಆರ್​ಆರ್​​ vs ಆರ್​ಸಿಬಿ (ಎಲಿಮಿನೇಟರ್​​) - ನರೇಂದ್ರ ಮೋದಿ ಸ್ಟೇಡಿಯಂ (ಅಹ್ಮದಾಬಾದ್)

ಮೇ 24 - ಕ್ವಾಲಿಫೈಯರ್​-1 ಸೋತವರು vs ಎಲಿಮಿನೇಟರ್ ಗೆದ್ದವರು (2ನೇ ಕ್ವಾಲಿಫೈಯರ್​), ಚಿದಂಬರಂ ಕ್ರಿಕೆಟ್ ಮೈದಾನ (ಚೆನ್ನೈ)

ಮೇ 26 - ಫೈನಲ್​ ಪಂದ್ಯ, ಚಿದಂಬರಂ ಕ್ರಿಕೆಟ್ ಮೈದಾನ (ಚೆನ್ನೈ)

(ಗಮನಕ್ಕೆ- ಎಲ್ಲಾ ಪಂದ್ಯಗಳು ಸಂಜೆ 7.30ಕ್ಕೆ ಆರಂಭ)

ಪ್ಲೇಆಫ್​​ಗಳಿಗೆ ಮೀಸಲು ದಿನ ಇದೆಯೇ?

ಐಪಿಎಲ್​ನ ಪ್ಲೇಆಫ್​ ಪಂದ್ಯಗಳಿಗೆ ಮಳೆಯು ಅಡ್ಡಿಪಡಿಸಿದರೆ ಮೀಸಲು ದಿನ ಇರಲಿದೆ. ಪಂದ್ಯ ನಿಗದಿಯಾದ ದಿನವೇ ಪಂದ್ಯ ಆಯೋಜಿಸಲು ಪ್ರಯತ್ನ ಮಾಡಲಾಗುತ್ತದೆ. ಕೊನೆ ಪಕ್ಷ 5 ಓವರ್ ನಡೆಸಲು ಯೋಜಿಸಲಾಗುತ್ತದೆ. ಆದರೆ ಬಿಟ್ಟೂ ಬಿಡದೆ ಮಳೆ ಸುರಿದು ಪಂದ್ಯ ಆರಂಭವಾಗಲು ಸಾಧ್ಯವಾಗದಿದ್ದರೆ ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ.

ಒಂದು ವೇಳೆ ಮೀಸಲು ದಿನವೂ ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ಮೇಲಿರುವ ತಂಡಕ್ಕೆ ಗೆಲುವು ನೀಡಲಾಗುತ್ತದೆ. ಇದು ಫೈನಲ್ ಪಂದ್ಯಕ್ಕೂ ಅನ್ವಯವಾಗುತ್ತದೆ. ಪ್ಲೇಆಫ್ ಪಂದ್ಯಗಳಿಗೆ 120 ನಿಮಿಷಗಳವರೆಗೆ ಹೆಚ್ಚುವರಿ ಸಮಯ ಲಭ್ಯವಿರುತ್ತದೆ. ವಿಜೇತರನ್ನು ನಿರ್ಧರಿಸಲು ಲಭ್ಯವಿರುವ ಸಮಯದೊಳಗೆ ಪರಿಸ್ಥಿತಿಗಳು ಸೂಪರ್ ಓವರ್​​ ಆಡಿಸಲಾಗುತ್ತದೆ. ಇದು ಸಾಧ್ಯವಾಗದಿದ್ದರೆ ಲೀಗ್ ಟೇಬಲ್‌ನಲ್ಲಿ ಉನ್ನತ ಸ್ಥಾನವನ್ನು ಗಳಿಸಿದ ತಂಡ ಸಂಬಂಧಿತ ಪ್ಲೇಆಫ್ ಪಂದ್ಯದ ವಿಜೇತ ಎಂದು ಪರಿಗಣಿಸಲಾಗುತ್ತದೆ.

ಪ್ಲೇಆಫ್​ ಪ್ರವೇಶಿಸಿದ ತಂಡಗಳ ಸೋಲು-ಗೆಲುವು

1. ಕೋಲ್ಕತ್ತಾ ನೈಟ್ ರೈಡರ್ಸ್​: 14 ಪಂದ್ಯ, 9 ಗೆಲುವು, 3 ಸೋಲು, 2 ಫಲಿತಾಂಶ ಇಲ್ಲ, 20 ಅಂಕ, +1.428 ನೆಟ್​​ರನ್​​ರೇಟ್​.

2. ಸನ್​​ರೈಸರ್ಸ್ ಹೈದರಾಬಾದ್: 14 ಪಂದ್ಯ, 8 ಗೆಲುವು, 5 ಸೋಲು, 1 ಫಲಿತಾಂಶ ಇಲ್ಲ, 17 ಅಂಕ, +0.414 ನೆಟ್​​ರನ್​​ರೇಟ್​.

3. ರಾಜಸ್ಥಾನ್ ರಾಯಲ್ಸ್: 14 ಪಂದ್ಯ, 8 ಗೆಲುವು, 5 ಸೋಲು, 1 ಫಲಿತಾಂಶ ಇಲ್ಲ, 17 ಅಂಕ, +0.273 ನೆಟ್​​ರನ್​​ರೇಟ್​.

4. ರಾಯಲ್ ಚಾಲೆಂಜರ್ಸ್ ಬೆಂಗಳೂರು: 14 ಪಂದ್ಯ, 7 ಗೆಲುವು, 7 ಸೋಲು, 0 ಫಲಿತಾಂಶ ಇಲ್ಲ, 14 ಅಂಕ, +0.459 ನೆಟ್​​ರನ್​​ರೇಟ್.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ