Ireland vs India 3rd T20I: ಇಂದು ಭಾರತ vs ಐರ್ಲೆಂಡ್ 3ನೇ ಹಾಗೂ ಅಂತಿಮ ಟಿ20 ಫೈಟ್
Aug 23, 2023 06:47 AM IST
ಐರ್ಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಚರ್ಚೆಯಲ್ಲಿ ತೊಡಿಗಿರುವುದು (PTI)
ಡಬ್ಲಿನ್‌ನಲ್ಲಿಂದು ಭಾರತ-ಐರ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಲು ತಂತ್ರಗಳನ್ನು ರೂಪಿಸಿದೆ.
ಡಬ್ಲಿನ್ (ಐರ್ಲೆಂಡ್): ಭಾರತ ಮತ್ತು ಐರ್ಲೆಂಡ್ (Ireland vs India) ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ (3rd T20I) ಡಬ್ಲಿನ್‌ನಲ್ಲಿ (Dublin) ಇಂದು (ಆಗಸ್ಟ್ 23, ಬುಧವಾರ) ನಡೆಯಲಿದ್ದು, ಟೀಂ ಇಂಡಿಯಾದ ಚಿತ್ತ ಕ್ಲೀನ್‌ಸ್ವೀಪ್‌ನತ್ತ ನೆಟ್ಟಿದೆ.
ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಪಡೆ ಈಗಾಗಲೇ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಸರಣಿಯನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಆಡುವ 11ರ ಬಳಗದಲ್ಲಿ ಇವತ್ತು ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
ಸಂಜು ಸ್ಯಾಮ್ಸನ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗದಿದ್ದರೆ ಅವರ ಸ್ಥಾನದಲ್ಲಿ ಜಿತೇಶ್ ಶರ್ಮಾ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಹಿಂದಿನ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಮುಕೇಶ್ ಕುಮಾರ್, ಶಹಬಾಜ್ ಅಹ್ಮದ್, ಹಾಗೂ ಅವೇಶ್ ಖಾನ್‌ಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಡಿಎಲ್‌ಎಸ್ ನಿಯಮದ ಅನ್ವಯ 2 ರನ್‌ಗಳ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ 33 ರನ್ ಜಯಬೇರಿ ಬಾರಿಸಿತ್ತು. ರುತುರಾಜ್ ಗಾಯಕ್ವಾಡ್ 58, ಸಂಜು ಸ್ಯಾಮ್ಸನ್ 26 ಎಸೆತಗಳಿಂದ 5 ಬೌಂಡರಿ ಹಾಗೂ 1 ಸಿಕ್ಸರ್ 40 ರನ್‌ಗಳ ಗಳಿಸಿದ್ದರು.
ಕೊನೆಯಲ್ಲಿ ರಿಂಕು ಸಿಂಗ್ 21 ಎಸೆತಗಳಿಂದ 2 ಬೌಂಡರಿ ಮೂರು ಸಿಕ್ಸರ್ ಸೇರಿ 38 ಹಾಗೂ ಶಿವಂ ದುಬೆ 22 ರನ್ ಗಳಿಸಿದರು. ಇದು ಟೀ ಇಂಡೀಯಾ 185 ರನ್‌ಗಳ ಬೃಹತ್ ಗುರಿ ನೀಡಲು ನೆರವಾಗಿತ್ತು. ಇದಕ್ಕೆ ಉತ್ತರವಾಗಿ ಐರ್ಲೆಂಡ್ 8 ವಿಕೆಟ್‌ಗೆ 152 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಮತ್ತೊಂದೆಡೆ ಸತತವಾಗಿ ಎರಡು ಪಂದ್ಯಗಳನ್ನು ಸೋತಿರುವ ಐರ್ಲೆಂಡ್ ಇವತ್ತಿನ ಪಂದ್ಯವನ್ನು ಗೆದ್ದು ಕ್ಲೀನ್‌ಸ್ವೀಪ್‌ನಿಂದ ಪಾರಾಗಲು ತಂತ್ರಗಳನ್ನು ರೂಪಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬುದನ್ನು ಕಾದು ನೋಡಬೇಕು.
ಪಂದ್ಯ: ಐರ್ಲೆಂಡ್ vs ಭಾರತ, 3ನೇ ಟಿ20
ದಿನಾಂಕ: 2023ರ ಆಗಸ್ಟ್ 23, ಬುಧವರಾ
ಸಮಯ: 7.30 PM (ಭಾರತೀಯ ಕಾಲಮಾನ)
ಸ್ಥಳ: ದಿ ವಿಲೇಜ್, ಡಬ್ಲಿನ್
ಭಾರತ ತಂಡ
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಶಹಬಾಜ್ ಅಹ್ಮದ್, ಜಿತೇಶ್ ಶರ್ಮಾ ಮತ್ತು ಅವೇಶ್ ಖಾನ್,
ಐರ್ಲೆಂಡ್ ತಂಡ
ಪೌಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್) ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶ್ವಾ ಲಿಟಲ್, ಬೆಂಬಮಿನ್ ವೈಟ್, ಗರೆಥ್ ಡೆಲಾನಿ, ಫಿಯಾನ್ ಹ್ಯಾಂಡ್, ರಾಸ್ ಅಡೈರ್, ಥಿಯೋ ವ್ಯಾನ್ ವೋರ್ಕಾಮ್