logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಚ್ಛೇದನ ಕೊಟ್ಟಿರೋದು ಶೋಯೆಬ್ ಅಲ್ಲ, ಸಾನಿಯಾ ಮಿರ್ಜಾ; ಟೆನಿಸ್ ತಾರೆಯ ತಂದೆ ಇಮ್ರಾನ್ ಹೇಳಿದ್ದೇನು?

ವಿಚ್ಛೇದನ ಕೊಟ್ಟಿರೋದು ಶೋಯೆಬ್ ಅಲ್ಲ, ಸಾನಿಯಾ ಮಿರ್ಜಾ; ಟೆನಿಸ್ ತಾರೆಯ ತಂದೆ ಇಮ್ರಾನ್ ಹೇಳಿದ್ದೇನು?

Prasanna Kumar P N HT Kannada

Jan 20, 2024 04:47 PM IST

google News

ಶೋಯೆಬ್ ಮಲಿಕ್ ಮದುವೆ ಕುರಿತು ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಪ್ರತಿಕ್ರಿಯೆ.

    • Sania Mirza Father Imran Mirza Reaction: ಪಾಕಿಸ್ತಾನದ ನಟಿ ಸನಾ ಜಾವೇದ್ ಅವರನ್ನು ಕ್ರಿಕೆಟಿಗ ಶೋಯೆಬ್ ಮಲಿಕ್ ವರಿಸಿದ ಬೆನ್ನಲ್ಲೇ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಪ್ರತಿಕ್ರಿಯೆ ನೀಡಿದ್ದು, ವಿಚ್ಛೇದನ ನೀಡಿದ್ದು ಯಾರು ಎಂಬುದನ್ನು ತಿಳಿಸಿದ್ದಾರೆ.
ಶೋಯೆಬ್ ಮಲಿಕ್ ಮದುವೆ ಕುರಿತು ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಪ್ರತಿಕ್ರಿಯೆ.
ಶೋಯೆಬ್ ಮಲಿಕ್ ಮದುವೆ ಕುರಿತು ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಪ್ರತಿಕ್ರಿಯೆ.

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಮತ್ತೊಂದು ವಿವಾಹವಾಗಿದ್ದಾರೆ. ಸಾನಿಯಾ ಮಿರ್ಜಾ (Sania Mirza) ಜೊತೆಗಿನ ವಿಚ್ಛೇದನ ಸುದ್ದಿ ನಡುವೆಯೇ ಪಾಕ್ ನಟಿ ಸನಾ ಜಾವೇದ್ (Sana Javed) ಅವರನ್ನು ವರಿಸಿದ್ದಾರೆ. ಆ ಮೂಲಕ 14 ವರ್ಷಗಳ ಕಾಲ ಭಾರತೀಯ ಟೆನಿಸ್ ತಾರೆಯ ಜೊತೆಗಿನ ಸಂಬಂಧವನ್ನು ಕಡಿಗೊಳಿಸಿದ್ದಾರೆ. ನೂತನ ಬಾಳ ಸಂಗಾತಿ ಆಯ್ಕೆಯ ಬೆನ್ನಲ್ಲೇ ಸಾನಿಯಾಗೆ ವಿಚ್ಛೇದನಾ ನೀಡಿದ್ದಾರಾ ಇಲ್ಲವೇ ಎನ್ನುವ ಚರ್ಚೆ ಜೋರಾಗುತ್ತಿದೆ.

ಪಾಕಿಸ್ತಾನದ ಆಲ್​ರೌಂಡರ್​​ ಮಲಿಕ್ ನಿಕಾಹ್ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾರೆ. ಆದರೆ 2021ರಿಂದ ವಿಚ್ಛೇದನ ಪಡೆದಿರುವ ಕುರಿತು ಸುದ್ದಿಗಳು ಹರಿದಾಡುತ್ತಿದ್ದರೂ ಆ ಗುಟ್ಟು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಲಿಕ್ ಮರು ಮದುವೆಯೊಂದಿಗೆ ಗಾಸಿಪ್​ಗಳು ಅಂತ್ಯಗೊಂಡಿವೆ. ಇದೀಗ ಮಲಿಕ್ ಮರು ಮದುವೆ ಮತ್ತು ವಿಚ್ಛೇದನದ ಕುರಿತು ಸಾನಿಯಾ ಅವರ ತಂದೆ ಮಾತನಾಡಿದ್ದು, ಮತ್ತೆ ಸುದ್ದಿಯಾಗುತ್ತಿದೆ.

ಸಾನಿಯಾ ಮಿರ್ಜಾ ತಂದೆ ಹೇಳಿದ್ದೇನು?

ಮಲಿಕ್ ಮೂರನೇ ಬಾರಿಗೆ ವಿವಾಹವಾಗಿದ್ದಾರೆ ಎಂಬ ಸುದ್ದಿ ವೈರಲ್ ಆದ ನಂತರ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಇಮ್ರಾನ್, ಅದು 'ಖುಲಾ' ಎಂದು ಹೇಳಿದ್ದಾರೆ. ಅಂದರೆ ಇದು ಮುಸ್ಲಿಂ ಮಹಿಳೆ ತನ್ನ ಪತಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಹಕ್ಕನ್ನು ಉಲ್ಲೇಖಿಸುತ್ತದೆ.

ಇಷ್ಟು ದಿನಗಳ ಕಾಲ ಶೋಯೆಬ್ ವಿಚ್ಛೇದನ ನೀಡಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೀಗ ಸಾನಿಯಾ ಮಿರ್ಜಾ ಅವರೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಬಹಿರಂಗಗೊಂಡಿದೆ. ತಲಾಖ್ ಮತ್ತು ಖುಲಾ ನಡುವೆ ವಿಭಿನ್ನ ವ್ಯತ್ಯಾಸಗಳಿವೆ. ಗಂಡ, ಹೆಂಡತಿಯೊಂದಿಗೆ ಸಂಬಂಧ ಕಳೆದುಕೊಳ್ಳಲು ಇಚ್ಛಿಸಿದರೆ ಅದನ್ನು ತಲಾಖ್ ಎಂದು ಕರೆಯಲಾಗುತ್ತದೆ. ಆದರೆ ಪತ್ನಿಯೇ ಗಂಡನ ಜೊತೆಗೆ ಸಂಬಂಧ ತ್ಯಜಿಸಲು ಮುಂದಾದರೆ ಅದನ್ನು ಖುಲಾ ಎನ್ನಲಾಗುತ್ತದೆ.

ಖುಲಾ ನೀಡಿದ ನಂತರವೂ ಪತಿಯ ಮನೆಯಲ್ಲೇ ಮೂರು ತಿಂಗಳು ವಾಸ ಮಾಡಬಹುದು. ಈ ಬಗ್ಗೆ ಕುರಾನ್​ ಮತ್ತು ಹದೀಸ್​ನಲ್ಲೂ ಉಲ್ಲೇಖವಾಗಿದೆ. ಹೀಗಾಗಿ ಪರಸ್ಪರ ಬೇರ್ಪಡುವ ನಿರ್ಧಾರವನ್ನು ಸಾನಿಯಾ ಮಿರ್ಜಾ ಅವರೇ ತೆಗೆದುಕೊಂಡಿರುವುದು ಇಮ್ರಾನ್ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇಬ್ಬರು ಸಹ ಬೇರೆಯಾದರೂ ಎಲ್ಲೂ ಸಹ ಒಂದು ಮಾತು ಹೇಳಿಕೆ ಕೊಟ್ಟಿರಲಿಲ್ಲ. ಈಗ ಮಲಿಕ್ ಮರು ಮದುವೆ ಆಗುತ್ತಿದ್ದಂತೆ ಎರಡೂ ದೇಶಗಳ ಗಡಿಯಾಚೆಗಿರುವ ಎಲ್ಲರನ್ನೂ ಬೆರಗುಗೊಳಿಸಿದೆ.

ಮಲಿಕ್​​ ಅವರಂತೆ ಸನಾ ಜಾವೇದ್ ಕೂಡ ಮರು ಮದುವೆಯಾಗಿದ್ದಾರೆ. ಸನಾ 2020ರಲ್ಲಿ ಪಾಕಿಸ್ತಾನಿ ಗಾಯಕ ಉಮೈರ್ ಜಸ್ವಾಲ್ ಅವರನ್ನು ವರಿಸಿದ್ದರು. ತದನಂತರ ಈ ಇಬ್ಬರ ನಡುವೆ ವಿಚ್ಛೇದನ ಉಂಟಾಗಿದೆ ಎಂದು ವರದಿಯಾಗಿತ್ತು. ಸದ್ಯ ಸನಾ ಜಾವೇದ್ ತನ್ನ ಇನ್ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ತನ್ನ ಹೆಸರನ್ನು ಸನಾ ಶೋಯೆಬ್ ಮಲಿಕ್ ಎಂದು ಬದಲಾಯಿಸಿದ್ದಾರೆ. ಅಲ್ಲದೆ, ಮಲಿಕ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ