ಒಂದು ಸಣ್ಣ ಬದಲಾವಣೆಯಿಂದ ಹೆಚ್ಚು ವೇಗ ಪಡೆಯಬಹುದು; ಬುಮ್ರಾಗೆ ನೀರಜ್ ಚೋಪ್ರಾ ಅಮೂಲ್ಯ ಸಲಹೆ
Dec 04, 2023 06:24 PM IST
ಜಸ್ಪ್ರೀತ್ ಬುಮ್ರಾ ಮತ್ತು ನೀರಜ್ ಚೋಪ್ರಾ
- Neeraj Chopra: ಏಕದಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ, ಭಾರತದ ವೇಗಿ ಜಸ್ಪ್ರೀತ್ ಬುಮ್ರಾಗೆ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ.
ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಅವರು ತಮ್ಮ ನೆಚ್ಚಿನ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರಿಗೆ ಅಮೂಲ್ಯ ಸಲಹೆಯನ್ನು ನೀಡಿದ್ದಾರೆ. ಒಂದೇ ಒಂದು ಬದಲಾವಣೆಯಿಂದ ತಮ್ಮ ಬೌಲಿಂಗ್ ವೇಗವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ಐಡಿಯಾ ಎಕ್ಸ್‌ಚೇಂಜ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ನೀರಜ್, ಬುಮ್ರಾ ಅವರು ತಮ್ಮ ರನ್-ಅಪ್ ಹೆಚ್ಚಿಸಿದರೆ ಅವರ ಬೌಲಿಂಗ್ ವೇಗ ಕೂಡಾ ಹೆಚ್ಚಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | ಲಾಸ್ಟ್ ಓವರ್‌ನಲ್ಲಿ ವೇಡ್ ಕಟ್ಟಿ ಹಾಕಿದ ಅರ್ಷದೀಪ್; ಟಿ20 ವಿಶ್ವಕಪ್ ನೆನಪಿಸಿ ಶಾಹೀನ್ ಅಫ್ರಿದಿ ಕಾಲೆಳೆದ ಪಂಜಾಬ್ ಕಿಂಗ್ಸ್
“ನನಗೆ ಜಸ್ಪ್ರೀತ್ ಬುಮ್ರಾ ಅಂದ್ರೆ ಇಷ್ಟ. ಅವರ ಆಟದ ವೈಖರಿಯೇ ಭಿನ್ನ. ಇನ್ನಷ್ಟು ಹೆಚ್ಚಿನ ವೇಗವನ್ನು ತಮ್ಮ ಬೌಲಿಂಗ್ ವೇಳೆ ಪಡೆಯಲು ಅವರು ಓಡುವ ವೇಗವನ್ನು ಹೆಚ್ಚಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಚೋಪ್ರಾ ಹೇಳಿದ್ದಾರೆ. ಒಬ್ಬ ಜಾವೆಲಿನ್ ಎಸೆತಗಾರನಾಗಿ ಬೌಲರ್‌ಗಳು ಕೂಡಾ ಓಟವನ್ನು ಸ್ವಲ್ಪ ಹಿಂದಿನಿಂದ ಪ್ರಾರಂಭಿಸಿದರೆ ಅವರ ವೇಗವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ನಾವು ಆಗಾಗ್ಗೆ ಚರ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | ಇಂಡೋ-ಆಫ್ರಿಕಾ ಸರಣಿಯ ವೇಳಾಪಟ್ಟಿ, ಪಂದ್ಯಗಳ ಸಮಯ, ನೇರಪ್ರಸಾರ, ತಂಡಗಳು; ಸಂಪೂರ್ಣ ಮಾಹಿತಿ ಇಲ್ಲಿದೆ
ಇತ್ತೀಚೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೀರಜ್ ವೀಕ್ಷಿಸಿದ್ದರು. ಪಂದ್ಯ ವೀಕ್ಷಣೆ ಕುರಿತು ಮಾತನಾಡಿದ ಅವರು, “ನಾನು ಪಂದ್ಯವನ್ನು ಸಂಪೂರ್ಣವಾಗಿ ವೀಕ್ಷಿಸಿದ್ದು ಇದೇ ಮೊದಲು. ನಾನು ವಿಮಾನದಲ್ಲಿದ್ದಾಗ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಾನು ಮೈದಾನ ತಲುಪಿದಾಗ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದರು. ಕ್ರಿಕೆಟ್‌ನಲ್ಲಿ ನನಗೆ ಅರ್ಥವಾಗದ ಕೆಲವು ತಾಂತ್ರಿಕ ವಿಷಯಗಳಿವೆ” ಎಂದು ಹೇಳಿದರು.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತಕ್ಕೆ ಎಂದಿನಂತೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಶುಭ್ಮನ್ ಗಿಲ್ ಬೇಗನೇ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಇದರಿಂದ ರನ್ ವೇಗ ಕಡಿಮೆಯಾಯಿತು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅರ್ಧಶತಕಗಳನ್ನು ಗಳಿಸಿದರು. ಆದರೆ ರಾಹುಲ್ ಅತ್ಯಂತ ನಿಧಾನವಾಗಿ ಬ್ಯಾಟ್ ಬೀಸಿದರು. ಸೂರ್ಯಕುಮಾರ್ ಯಾದವ್ ಕೂಡ ಬ್ಯಾಟಿಂಗ್ ವೇಗ ಹೆಚ್ಚಿಸಲು ವಿಫಲರಾದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಲು ಸಾಧ್ಯವಾಯಿತು.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನಿಂಗ್ಸ್‌ನ ಆರಂಭದಲ್ಲಿ 47 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ 192 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು. ಫೈನಲ್ನಲ್ಲಿ ಶತಕ ಸಿಡಿಸಿದ ಹೆಡ್, ಆಸೀಸ್ ತಂಡದ 6 ವಿಕೆಟ್ಗೆಲುವಿಗೆ ಕಾರಣರಾದರು.