logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೂಚ್ ಬೆಹಾರ್ ಟ್ರೋಫಿ ಫೈನಲ್‌ನಲ್ಲಿ ಕನ್ನಡಿಗನ ದಾಖಲೆ; 400 ರನ್ ಬಾರಿಸಿದ ಮೊದಲ ಆಟಗಾರನಾದ ಪ್ರಖರ್ ಚತುರ್ವೇದಿ

ಕೂಚ್ ಬೆಹಾರ್ ಟ್ರೋಫಿ ಫೈನಲ್‌ನಲ್ಲಿ ಕನ್ನಡಿಗನ ದಾಖಲೆ; 400 ರನ್ ಬಾರಿಸಿದ ಮೊದಲ ಆಟಗಾರನಾದ ಪ್ರಖರ್ ಚತುರ್ವೇದಿ

Jayaraj HT Kannada

Jan 15, 2024 07:16 PM IST

google News

ಪ್ರಖರ್ ಚತುರ್ವೇದಿ

    • Prakhar Chaturvedi: ಮುಂಬೈ ವಿರುದ್ಧದ ಕೂಚ್ ಬೆಹಾರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಪ್ರಖರ್ ಚತುರ್ವೇದಿ
ಪ್ರಖರ್ ಚತುರ್ವೇದಿ (BCCI)

ಕೂಚ್ ಬೆಹಾರ್ ಟ್ರೋಫಿಯ (Cooch Behar Trophy) ಫೈನಲ್‌ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕದ ಯುವ ಆಟಗಾರ ಪ್ರಖರ್ ಚತುರ್ವೇದಿ (Prakhar Chaturvedi) ಇತಿಹಾಸ ನಿರ್ಮಿಸಿದ್ದಾರೆ. ಕೆಎಸ್‌ಸಿಎ ನವುಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ಪರ ಪರ ಇನ್ನಿಂಗ್ಸ್ ಆರಂಭಿಸಿದ ಆರಂಭಿಕ ಆಟಗಾರ ಚತುರ್ವೇದಿ, ಬೃಹತ್‌ ಮೊತ್ತ ಕಲೆ ಹಾಕಿದ್ದಾರೆ. ಅಂಡರ್‌ 19 ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ 400 ರನ್‌ ಗಳಿಸಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಅಜೇಯರಾಗಿ ಉಳಿದಿದ್ದಾರೆ.

ಆರಂಭಿಕ ಆಟಗಾರ ಕಾರ್ತಿಕ್ ಎಸ್ ಯು ಜೊತೆಗೂಡಿ ಮೊದಲ ವಿಕೆಟ್‌ಗೆ ಚತುರ್ವೇದಿ 109 ರನ್ ಒಟ್ಟುಗೂಡಿಸಿದರು. ಈ ವೇಳೆ ಕಾರ್ತಿಕ್ 67 ಎಸೆತಗಳಲ್ಲಿ 50 ರನ್ ಗಳಿಸಿದರು. ಆ ಬಳಿಕ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಹರ್ಷಿಲ್ ಧರ್ಮಾನಿ ಅವರೊಂದಿಗೆ ಸೇರಿಕೊಂಡ ಚತುರ್ವೇದಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದರು. ಧರ್ಮಾನಿ 228 ಎಸೆತಗಳಲ್ಲಿ 169 ರನ್ ಗಳಿಸಿದರೆ, ಚತುರ್ವೇದಿ 638 ಎಸೆತಗಳಲ್ಲಿ ಬರೋಬ್ಬರಿ 404 ರನ್ ಗಳಿಸಿ ದೇಶೀಯ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದರು.

ಕೂಚ್ ಬೆಹಾರ್ ಟ್ರೋಫಿ ಫೈನಲ್‌ನಲ್ಲಿ 400 ರನ್ ಗಳಿಸಿದ ಮೊದಲ ಆಟಗಾರ

ಧರ್ಮನಿ ಜೊತೆಗೂಡಿ 411 ಎಸೆತಗಳಲ್ಲಿ 290 ರನ್‌ಗಳ ಜೊತೆಯಾಟವಾಡಿದ ಚತುರ್ವೇದಿ ಕ್ರೀಸ್‌ಕಚ್ಚಿ ಆಡಿದರು. ಅವರು ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅವರೊಂದಿಗೆ 41 ರನ್‌ ಜೊತೆಯಾಟ ನಡೆಸಿದರು.

ಇದನ್ನೂ ಓದಿ | ಗೆಲುವಿನ ಹೊಸ್ತಿಲಲ್ಲಿ ಎಡವಿದ ಕರ್ನಾಟಕ, ರಣಜಿ ಪಂದ್ಯದಲ್ಲಿ 6 ರನ್‌ಗಳ ಆಘಾತಕಾರಿ ಸೋಲು; ರೋಚಕ ಪಂದ್ಯ ಗೆದ್ದ ಗುಜರಾತ್

ಕನ್ನಡಿಗ ಚತುರ್ವೇದಿ ಕೂಚ್ ಬೆಹಾರ್ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ 400 ರನ್ ಗಳಿಸಿದ ಮೊದಲ ಆಟಗಾರ. ಕರ್ನಾಟಕದ ಆರಂಭಿಕ ಆಟಗಾರ ಮುಂಬೈ ಬೌಲರ್‌ಗಳನ್ನು ನಿರಂತರವಾಗಿ ದಂಡಿಸಿದರು. ಒಟ್ಟಾರೆ ತಮ್ಮ ಇನ್ನಿಂಗ್ಸ್‌ನಲ್ಲಿ 46 ಬೌಂಡರಿಗಳನ್ನು ಸಿಡಿಸಿದರು. ಇದೇ ವೇಳೆ ಮೂರು ಆಕರ್ಷಕ ಸಿಕ್ಸರ್‌ ಸಿಡಿಸಿದರು.

ಧೀರಜ್ ಗೌಡ ನೇತೃತ್ವದ ಕರ್ನಾಟಕ ತಂಡವು ಮುಂಬೈ ವಿರುದ್ಧದ ಅಂಡರ್‌ 19 ಪಂದ್ಯಾವಳಿಯ ಫೈನಲ್‌ನಲ್ಲಿ ಬರೋಬ್ಬರಿ 223 ಓವರ್‌ಗಳನ್ನು ಆಡಿತು. ಚತುರ್ವೇದಿ ಅವರ ದಾಖಲೆಯ ಆಟದ ನೆರವಿನಿಂದ ಮುಂಬೈ ವಿರುದ್ಧ ರಾಜ್ಯ ತಂಡವು 223 ಓವರ್‌ಗಳಲ್ಲಿ 890/8 ರನ್‌ ಗಳಿಸಿತು. ಆಯುಷ್ ಮ್ಹಾತ್ರೆ ಅವರ 145 ರನ್‌ಗಳ ನೆರವಿಂದ ಮುಂಬೈ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 113 ಓವರ್‌ಗಳಲ್ಲಿ 380 ರನ್ ಗಳಿಸಿತು. ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ