logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​ಕೆ ತಂಡಕ್ಕೆ ಮರಳಿದ ಸ್ಟಾರ್ ವೇಗಿ; ಕೋಲ್ಕತ್ತಾ ನೈಟ್​ ರೈಡರ್ಸ್ Vs ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ Xi

ಸಿಎಸ್​ಕೆ ತಂಡಕ್ಕೆ ಮರಳಿದ ಸ್ಟಾರ್ ವೇಗಿ; ಕೋಲ್ಕತ್ತಾ ನೈಟ್​ ರೈಡರ್ಸ್ vs ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ XI

Prasanna Kumar P N HT Kannada

Apr 08, 2024 07:03 AM IST

google News

ಕೋಲ್ಕತ್ತಾ ನೈಟ್​ ರೈಡರ್ಸ್ vs ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ XI

    • CSK vs KKR Playing 11: 17ನೇ ಆವೃತ್ತಿಯ 22ನೇ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗಾದರೆ ಪಂದ್ಯದ ಪ್ಲೇಯಿಂಗ್ 11, ಪಿಚ್​ ಮತ್ತು ಹವಾಮಾನ ವರದಿ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಕೋಲ್ಕತ್ತಾ ನೈಟ್​ ರೈಡರ್ಸ್ vs ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ XI
ಕೋಲ್ಕತ್ತಾ ನೈಟ್​ ರೈಡರ್ಸ್ vs ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ XI

ಸತತ ಎರಡು ಸೋಲಿನ ಬಳಿಕ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಮವಾರ (ಏಪ್ರಿಲ್ 8) ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಐಪಿಎಲ್​ನ 22ನೇ ಪಂದ್ಯದಲ್ಲಿ ಗೆಲುವಿನೊಂದಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದು, ತವರಿನ ಮೈದಾನದಲ್ಲಿ 3ನೇ ಗೆಲುವಿನ ತವಕದಲ್ಲಿದೆ. ಮತ್ತೊಂದೆಡೆ ಸೋಲೇ ಕಾಣದ ಕೆಕೆಆರ್​, ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಉಭಯ ತಂಡಗಳ ಸೆಣಸಾಟಕ್ಕೆ ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನ ವೇದಿಕೆ ಕಲ್ಪಿಸಲಿದೆ.

ಸಿಎಸ್​​​​ಕೆ ಕಳೆದ 2 ಪಂದ್ಯಗಳಿಂದ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಲು ಕಾರಣ ಆರಂಭಿಕರು ಧಮ್ ಕಳೆದುಕೊಂಡಿರುವುದು. ಹಾಗಾಗಿ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ತಮ್ಮ ಆಟವನ್ನು ಸುಧಾರಿಸಬೇಕಾಗಿದೆ. ಪವರ್ ಪ್ಲೇನಲ್ಲಿ ಸೂಪರ್ ಕಿಂಗ್ಸ್‌ಗೆ ಉತ್ತಮ ಆರಂಭ ನೀಡಬೇಕಾಗಿದೆ. ಉಳಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ಉತ್ತಮ ಫಾರ್ಮ್​​ನಲ್ಲಿರುವುದು ಸಿಎಸ್​ಕೆ ಬಲ ಹೆಚ್ಚಿಸಿದೆ.

ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಮುಸ್ತಾಫಿಜುರ್​ ರೆಹಮಾನ್ ಈ ಪಂದ್ಯಕ್ಕೆ ಕೂಡಿಕೊಳ್ಳಲಿದ್ದಾರೆ. ತವರಿಗೆ ವಾಪಸ್ ಹೋಗಿದ್ದ ಈ ವೇಗದ ಬೌಲರ್​​ ಮತ್ತೆ ಮರಳಿದ್ದು, ಬೌಲಿಂಗ್​ ವಿಭಾಗದ ಬಲ ಹೆಚ್ಚಿಸಿದ್ದಾರೆ. ಮುಸ್ತಾಫಿಜುರ್​ ಉತ್ತಮ ಫಾರ್ಮ್​ನಲ್ಲಿದ್ದು, ಅವರಿಗೆ ತುಷಾರ್​ ದೇಶಪಾಂಡೆ, ದೀಪಕ್ ಚಹರ್ ಅವರು ಸಾಥ್ ನೀಡಬೇಕಿದೆ. ಆದರೆ ಮಹೀಶಾ ತೀಕ್ಷಣಾ ಈ ಪಂದ್ಯದಲ್ಲಿ ಬೆಂಚ್ ಬಿಸಿ ಮಾಡಲಿದ್ದಾ

ಕೋಲ್ಕತ್ತಾ ತಂಡವು ಭರ್ಜರಿ ಪ್ರದರ್ಶನ ನೀಡುತ್ತಿದೆ. ಸುನಿಲ್ ನಾರಾಯಣ್ ಮತ್ತು ಫಿಲ್ ಸಾಲ್ಟ್​ ಸ್ಫೋಟಕ ಆರಂಭ ಒದಗಿಸುತ್ತಿದ್ದು, ಸಿಎಸ್​ಕೆ ಬೌಲರ್​ಗಳಿಗೆ ಸವಾಲಾಗಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸ್ಥಿರತೆ ಕಾಪಾಡಿಕೊಳ್ಳಬೇಕಿದೆ. ಉಳಿದಂತೆ ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

ಹರ್ಷಿತ್ ರಾಣಾ, ರಸೆಲ್ ಮತ್ತು ವೈಭವ್ ಅರೋರಾ ಬೌಲಿಂಗ್‌ನಲ್ಲಿ ಕೆಕೆಆರ್‌ಗೆ ಉತ್ತಮ ಪ್ರದರ್ಶನ ನೀಡಿದರೆ, ಮಿಚೆಲ್ ಸ್ಟಾರ್ಕ್ ಮತ್ತು ವರುಣ್ ಚಕ್ರವರ್ತಿ ಕೂಡ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ನಂತರ ನಿಧಾನವಾಗಿ ತಮ್ಮ ಲಯವನ್ನು ಮರಳಿ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ಕೆಕೆಆರ್​ ಆಲ್-ರೌಂಡ್ ಪ್ರದರ್ಶನ ನೀಡುತ್ತಿದ್ದು, ತಮ್ಮ ಹನ್ನೊಂದರಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI

ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಶಿವಂ ದುಬೆ, ಸಮೀರ್ ರಿಜ್ವಿ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಫಿಜಿಜುರ್​ ರೆಹಮಾನ್.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ XI

ಫಿಲ್ ಸಾಲ್ಟ್, ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

 ಸಿಎಸ್​ಕೆ vs ಕೆಕೆಆರ್ ಹೆಡ್-ಟು-ಹೆಡ್ ದಾಖಲೆಗಳು

ಚೆನ್ನೈ-ಕೋಲ್ಕತ್ತಾ ಇದುವರೆಗೆ 29 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಸಿಎಸ್​ಕೆ 18 ಮತ್ತು ಕೆಕೆಆರ್​​ 10ರಲ್ಲಿ ಗೆದ್ದಿದೆ. ಒಂದು ಪಂದ್ಯವು ಯಾವುದೇ ಫಲಿತಾಂಶ ಕಾಣದೆ ರದ್ದಾಗಿದೆ. ಕೆಕೆಆರ್ ವಿರುದ್ಧ ಇದುವರೆಗೆ ಚೆನ್ನೈನ ಗರಿಷ್ಠ ಮೊತ್ತ 235, ಸಿಎಸ್‌ಕೆ ವಿರುದ್ಧ ಕೋಲ್ಕತ್ತಾದ ಗರಿಷ್ಠ ಸ್ಕೋರ್ 202.

ಸಿಎಸ್​ಕೆ vs ಕೆಕೆಆರ್ ಪಿಚ್ ವರದಿ

ಚೆಪಾಕ್‌ನಲ್ಲಿರುವ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮಾನ ಅವಕಾಶ ನೀಡುತ್ತದೆ. ಆದಾಗ್ಯೂ, ಇದು ಸಾಮಾನ್ಯವಾಗಿ ಶುಷ್ಕವಾಗಿರುತ್ತದೆ. ಸ್ಪಿನ್ನರ್​​ಗಳಿಗೆ ಕೊಂಚ ಹೆಚ್ಚು ಸಹಾಯ ಮಾಡುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟವಾಗಲಿದೆ.

ಸಿಎಸ್​ಕೆ vs ಕೆಕೆಆರ್ ಹವಾಮಾನ

ಪಂದ್ಯ ಆರಂಭವಾದಾಗ ಚೆನ್ನೈನಲ್ಲಿ ತಾಪಮಾನ ಸುಮಾರು 31 ಡಿಗ್ರಿ ಇರುತ್ತದೆ. ಇದು ಪಂದ್ಯದುದ್ದಕ್ಕೂ ಬಹುತೇಕ ಒಂದೇ ಆಗಿರುತ್ತದೆ. ಮಳೆ ಬರುವ ಸಾಧ್ಯತೆ ಇಲ್ಲ; ಆರ್ದ್ರತೆಯು 83% ವರೆಗೆ ಸಾಕಷ್ಟು ಹೆಚ್ಚಾಗಿರುತ್ತದೆ. ಅಕ್ಯುವೆದರ್ ಪ್ರಕಾರ ಗಾಳಿಯ ಗುಣಮಟ್ಟ ಕಳಪೆಯಾಗಿರುತ್ತದೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ