logo
ಕನ್ನಡ ಸುದ್ದಿ  /  ಕ್ರಿಕೆಟ್  /  ಎಲ್‌ಎಸ್‌ಜಿ Vs ಎಸ್‌ಆರ್‌ಎಚ್: ನಾಳಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು

ಎಲ್‌ಎಸ್‌ಜಿ vs ಎಸ್‌ಆರ್‌ಎಚ್: ನಾಳಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು

Jayaraj HT Kannada

Published May 18, 2025 07:55 PM IST

google News

ಎಲ್‌ಎಸ್‌ಜಿ vs ಎಸ್‌ಆರ್‌ಎಚ್: ನಾಳಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು

  • ಲಕ್ನೋ ಸೂಪರ್ ಜೈಂಟ್ಸ್ ತಂಡವು ಐಪಿಎಲ್‌ 18ನೇ ಆವೃತ್ತಿಯ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸಲು ಇರುವ ಎಲ್ಲಾ ಅವಕಾಶಗಳನ್ನು ಅನ್ವೇಷಿಸುತ್ತಿದೆ. ಮುಂದಿನ ಪಂದ್ಯದಲ್ಲಿ ಎಲ್‌ಎಸ್‌ಜಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಎದುರಾಳಿ.
ಎಲ್‌ಎಸ್‌ಜಿ vs ಎಸ್‌ಆರ್‌ಎಚ್: ನಾಳಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು
ಎಲ್‌ಎಸ್‌ಜಿ vs ಎಸ್‌ಆರ್‌ಎಚ್: ನಾಳಿನ ಐಪಿಎಲ್ ಪಂದ್ಯದ 10 ಪ್ರಮುಖ ಅಂಶಗಳು (ANI)

ಐಪಿಎಲ್ 2025ರ ಆವೃತ್ತಿಯ 61ನೇ ಪಂದ್ಯದಲ್ಲಿ, ಟೂರ್ನಿಯಿಂದ ಈಗಾಗಲೇ ಎಲಿಮನೇಟ್‌ ಆಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಲ್‌ಎಸ್‌ಜಿ ತಂಡವು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಡುತ್ತಿದ್ದು, ಪ್ರತಿ ಪಂದ್ಯವನ್ನು ಗೆಲ್ಲಬೇಕಾಗದ ಅಗತ್ಯವಿದೆ. ಒಂದು ವೇಳೆ ಎಲ್ಲಾ ಪಂದ್ಯಗಳಲ್ಲಿ ಗೆದ್ದರೂ, ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ. ಆಗ ಮಾತ್ರ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸುವುದು ಸಾಧ್ಯವಾಗಲಿದೆ.

ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ 10 ಅಂಶಗಳನ್ನು ನೋಡೋಣ.

  • ಎರಡನೇ ಹಂತದ ಐಪಿಎಲ್‌ ಪಂದ್ಯಗಳಿಗೆ ಕೆಲವು ವಿದೇಶಿ ಆಟಗಾರರು ಲಭ್ಯವಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಬಹುತೇಕ ಎಲ್ಲರೂ ಲಭ್ಯವಾಗಲಿದ್ದಾರೆ. ಲೀಗ್ ಹಂತದವರೆಗೆ ಐಡೆನ್ ಮಾರ್ಕ್ರಾಮ್ ಇರಲಿದ್ದಾರೆ. ಉಳಿದಂತೆ ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ಬ್ರೀಟ್ಜ್ಕೆ ಪೂರ್ಣ ಆವೃತ್ತಿಗೆ ಉಳಿಯಲಿದ್ದಾರೆ. ಶಮರ್ ಜೋಸೆಫ್ ಹೊರಗುಳಿದಿದಾರೆ. ಗಾಯಗೊಂಡ ಮಯಾಂಕ್ ಯಾದವ್ ಬದಲಿಗೆ ಮಿಚೆಲ್ ಒ'ರೂರ್ಕೆ ಸೇರ್ಪಡೆಯಾಗಿದ್ದಾರೆ.
  • ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲು ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಕಮಿಂದು ಮೆಂಡಿಸ್ ಹಾಗೂ ಎಶಾನ್ ಮಾಲಿಂಗ ಲಭ್ಯವಿದ್ದಾರೆ. ವಿಯಾನ್ ಮುಲ್ಡರ್ ಹೊರಗುಳಿದಿದ್ದಾರೆ.
  • ಈ ಎರಡು ತಂಡಗಳು ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಒಟ್ಟು ಐದು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಎಲ್‌ಎಸ್‌ಜಿ ತಂಡವು 4-1 ಅಂತರದಿಂದ ಭರ್ಜರಿಯಾಗಿ ಗೆದ್ದು ಮೇಲುಗೈ ಸಾಧಿಸಿದೆ. ಏಕಾನಾ ಕ್ರೀಡಾಂಗಣದಲ್ಲಿ ಈ ಎರಡೂ ತಂಡಗಳ ನಡುವೆ ಯಾವುದೇ ಪಂದ್ಯ ನಡೆದಿಲ್ಲ. ಇಲ್ಲಿ ಈ ತಂಡಗಳಿಗೆ ಇದು ಮೊದಲ ಪಂದ್ಯ.
  • ಎಕಾನಾ ಕ್ರೀಡಾಂಗಣದದ ಪಿಚ್‌ನಲ್ಲಿ ಈ ವರ್ಷ ನಡೆದ ಐಪಿಎಲ್‌ ಪಂದ್ಯಗಳಲ್ಲಿ ಚೇಸಿಂಗ್‌ ಮಾಡಿದ ತಂಡಗಳು ಮೇಲುಗೈ ಸಾಧಿಸಿವೆ. ಓಟ್ಟು ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಚೇಸಿಂಗ್‌ ನಡೆಸಿದ ತಂಡಗಳು ಗೆದ್ದಿವೆ. ಹೀಗಾಗಿ ಇಲ್ಲಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಬಹುದು.
  • ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರ ಫಾರ್ಮ್ ದೇವರಿಗೇ ಪ್ರೀತಿ ಎಂಬಂತಿದೆ. ಪಂತ್‌ ಕೂಡಾ ಈ ಋತುವಿನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. 10 ಇನ್ನಿಂಗ್ಸ್‌ಗಳಲ್ಲಿ 99.22ರ ಸ್ಟ್ರೈಕ್ ರೇಟ್ ಮತ್ತು 12.80ರ ಸರಾಸರಿಯಲ್ಲಿ ಕೇವಲ 128 ರನ್ ಗಳಿಸಿದ್ದಾರೆ.
  • ಸನ್‌ರೈಸರ್ಸ್‌ ತಂಡದ ಮಿಡಲ್ ಮತ್ತು ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್, ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಪಂತ್ ಅವರನ್ನು ಔಟ್ ಮಾಡಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಪಂತ್‌ ಅಭಿಮಾನಿಗಳಿಗೆ ನಿರಾಶೆ ಮೂಡಿಸಬಹುದು. ಜಯದೇವ್ ಉನಾದ್ಕತ್‌ ಐದು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಪಂತ್ ವಿಕೆಟ್‌ ಪಡೆದಿದ್ದಾರೆ.
  • ಇಶಾನ್ ಕಿಶನ್ ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಸ್ಫೋಟಕ ಶತಕದೊಂದಿಗೆ ಟೂರ್ನಿ ಆರಂಭಿಸಿದ ಅವರ ಫಾರ್ಮ್ ಆ ನಂತರ ಹೇಳಿಕೊಳ್ಳುವಂತಿಲ್ಲ. ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಆರು ಬಾರಿ ಅವರ ಸ್ಕೋರ್ ಎರಡಂಕಿಯನ್ನು ಕೂಡಾ ತಲುಪಿಲ್ಲ. ಲಕ್ನೋ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು, ಏಳು ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ಕಿಶನ್ ಅವರನ್ನು ಔಟ್ ಮಾಡಿದ್ದಾರೆ.
  • ಎಸ್‌ಆರ್‌ಹೆಚ್ ತಂಡದಲ್ಲಿ ವಿಶ್ವದ ಅಗ್ರ ಎರಡು ಶ್ರೇಯಾಂಕದ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇದ್ದಾರೆ. ಈ ಆಕ್ರಮಣಕಾರಿ ಆರಂಭಿಕ ಜೋಡಿಯು, ಒಂದೆರಡು ಪಂದ್ಯಗಳನ್ನು ಬಿಟ್ಟರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಲಕ್ನೋ ತಂಡದ ಪ್ರಮುಖ ಬೌಲರ್‌ಗಳಾದ ಆವೇಶ್ ಖಾನ್ ಮತ್ತು ಶಾರ್ದೂಲ್ ಠಾಕೂರ್, ಈ ಬ್ಯಾಟಿಂಗ್‌ ಜೋಡಿಯನ್ನು ಕಾಡುವ ನಿರೀಕ್ಷೆ ಇದೆ. ಆವೇಶ್ ಖಾನ್ ಈ ಇಬ್ಬರನ್ನು ತಲಾ ಎರಡು ಬಾರಿ ಔಟ್ ಮಾಡಿದ್ದಾರೆ. ಆವೇಶ್ ಬೌಲಿಂಗ್‌ನಲ್ಲಿ ಅಭಿಷೇಕ್ ಕೇವಲ 64ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
  • ಐಪಿಎಲ್ ಪಂದ್ಯಗಳಲ್ಲಿ ಅಭಿಷೇಕ್ ಅವರನ್ನು ಠಾಕೂರ್ ಮೂರು ಬಾರಿ ಔಟ್ ಮಾಡಿದ್ದಾರೆ. ಈ ಅವಧಿಯಲ್ಲಿ ಅಭಿಷೇಕ್ ಸ್ಟ್ರೈಕ್ ರೇಟ್ ಕೂಡಾ 106 ಮಾತ್ರ. ಟಿ20 ಇನ್ನಿಂಗ್ಸ್‌ಗಳಲ್ಲಿ ಎಸ್‌ಆರ್‌ಹೆಚ್ ಫಿನಿಷರ್ ಹೆನ್ರಿಕ್ ಕ್ಲಾಸೆನ್ ಅವರನ್ನು ಠಾಕೂರ್ ಐದರಲ್ಲಿ ಎರಡು ಬಾರಿ ಔಟ್ ಮಾಡಿದ್ದಾರೆ.
  • ಆಸ್ಟ್ರೇಲಿಯಾದಲ್ಲಿ ಟ್ರಾವಿಸ್‌ ಹೆಡ್‌ಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಲಕ್ನೋ ವಿರುದ್ಧ ಅವರು ಆಡುತ್ತಿಲ್ಲ ಎಂದು ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ | ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಯಾವ ತಂಡದ ವಿರುದ್ಧ ಎಷ್ಟು ರನ್ ಗಳಿಸಿದ್ದಾರೆ; ಈ ವಿಶಿಷ್ಟ ಸಾಧನೆ ಮಾಡಿದ ಏಕೈಕ ಆಟಗಾರ

    ಹಂಚಿಕೊಳ್ಳಲು ಲೇಖನಗಳು