logo
ಕನ್ನಡ ಸುದ್ದಿ  /  ಕ್ರಿಕೆಟ್  /  Wpl 2024: ಆರ್​​ಸಿಬಿ ಮಹಿಳಾ ತಂಡಕ್ಕೆ ನೂತನ ಹೆಡ್​ಕೋಚ್ ನೇಮಕ; ಅಧಿಕೃತ ಘೋಷಣೆ ಬಾಕಿ

WPL 2024: ಆರ್​​ಸಿಬಿ ಮಹಿಳಾ ತಂಡಕ್ಕೆ ನೂತನ ಹೆಡ್​ಕೋಚ್ ನೇಮಕ; ಅಧಿಕೃತ ಘೋಷಣೆ ಬಾಕಿ

Prasanna Kumar P N HT Kannada

Sep 21, 2023 03:13 PM IST

google News

ಆರ್​​ಸಿಬಿ ಮಹಿಳಾ ತಂಡಕ್ಕೆ ನೂತನ ಹೆಡ್​ಕೋಚ್ ನೇಮಕ.

    • Royal Challengers Bangalore: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಕೋಚ್ ಸ್ಥಾನದಿಂದ ಬೆನ್ ಸಾಯರ್ ಅವರನ್ನು ಕಿತ್ತೊಗೆಯಲು ಫ್ರಾಂಚೈಸಿ ನಿರ್ಧರಿಸಿದೆ. ಬದಲಿಗೆ ಲ್ಯೂಕ್ ವಿಲಿಯಮ್ಸ್ (Luke Williams) ಅವರನ್ನು ಹೆಡ್​ಕೋಚ್ ನೇಮಿಸಲು ನಿರ್ಧರಿಸಿದೆ.
ಆರ್​​ಸಿಬಿ ಮಹಿಳಾ ತಂಡಕ್ಕೆ ನೂತನ ಹೆಡ್​ಕೋಚ್ ನೇಮಕ.
ಆರ್​​ಸಿಬಿ ಮಹಿಳಾ ತಂಡಕ್ಕೆ ನೂತನ ಹೆಡ್​ಕೋಚ್ ನೇಮಕ.

ಪುರುಷರ ತಂಡದಲ್ಲಿ ದೊಡ್ಡ ಬದಲಾವಣೆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಹಿಳಾ ತಂಡದಲ್ಲೂ ಮಹತ್ವದ ಬದಲಾವಣೆ ಕಂಡಿದೆ. 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​​ಗೆ ಲ್ಯೂಕ್ ವಿಲಿಯಮ್ಸ್ ಅವರನ್ನು ನೂತನ ಕೋಚ್ ಆಗಿ ನೇಮಿಸಲು ಆರ್​ಸಿಬಿ ಫ್ರಾಂಚೈಸಿ ನಿರ್ಧರಿಸಿದೆ. ಈ ವರ್ಷ ನಡೆದ ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಎಲ್​​ನಲ್ಲಿ ಸ್ಮೃತಿ ಮಂಧಾನ (Smriti Mandhana) ಪಡೆ ಹೀನಾಯ ಪ್ರದರ್ಶನ ನೀಡಿತ್ತು. ಮುಂಬರುವ ಆವೃತ್ತಿಯಲ್ಲಿ ಮುಂದಿನ ಕೆಲವು ಬದಲಾವಣೆಗಳ ಜೊತೆ ಕಣಕ್ಕಿಳಿಯಲು ಸಜ್ಜಾಗಿದೆ.

ಕೋಚ್​ ಬೆನ್ ಸಾಯರ್ (Ben Sawyer) ಬದಲಿಗೆ ಲ್ಯೂಕ್ ವಿಲಿಯಮ್ಸ್ (Luke Williams) ಅವರನ್ನು ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಿಸಲು ರೆಡಿಯಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ವಿಶ್ವದ ಹಲವು ಫ್ರಾಂಚೈಸಿಗಳಿಗೆ ತರಬೇತಿ ನೀಡಿರುವ ಖ್ಯಾತಿ ವಿಲಿಯಮ್ಸ್ ಅವರದ್ದು. ಈ ವರ್ಷ ನಡೆದ ಚೊಚ್ಚಲ ಆವೃತ್ತಿಯ ಲೀಗ್​ನಲ್ಲಿ ಮಂಧಾನ ಪಡೆ, ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು.

ಆರ್​​ಸಿಬಿ ಮಹಿಳಾ ತಂಡ

ವಿಲಿಯಮ್ಸ್ ಕೋಚಿಂಗ್​ ಅನುಭವ ಹೇಗಿದೆ?

ಆರ್​​ಸಿಬಿ ಹೊಸ ತರಬೇತುದಾರರಾಗಿ ನೇಮಕಗೊಳ್ಳಲಿರುವ ವಿಲಿಯಮ್ಸ್ ಬಗ್ಗೆ ಈ ಮುಂದೆ ತಿಳಿಯೋಣ. ದಕ್ಷಿಣ ಆಸ್ಟ್ರೇಲಿಯಾ ಪರ 2000-2005ರ ನಡುವೆ ಪ್ರಥಮ ದರ್ಜೆ ವೃತ್ತಿಜೀವನ ನಡೆಸಿದ್ದರು. ಆ ಬಳಿಕ ಮಹಿಳಾ ಬಿಗ್​ಬ್ಯಾಷ್ ಲೀಗ್​ನಲ್ಲಿ ಅಡಿಲೇಡ್​ ಸ್ಟ್ರೈಕರ್ ತಂಡದ ಉಸ್ತುವಾರಿಯಾಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಕೋಚಿಂಗ್ ಅಡಿ ಸ್ಟ್ರೈಕರ್ಸ್​ ಅದ್ಭುತ ಪ್ರದರ್ಶನ ನೀಡಿತ್ತು.

ಇನ್ನು ಇಂಗ್ಲೆಂಡ್​ನಲ್ಲಿ ನಡೆಯುವ ಹಂಡ್ರೆಡ್ ಲೀಗ್​​ನಲ್ಲೂ ಸದರ್ನ್​ ಬ್ರೇವ್ ತಂಡದ ಸಹಾಯಕ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಸತತ 3ನೇ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಸದರ್ನ್ ಬ್ರೇವ್ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿತು. ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್​​​ನಲ್ಲಿ (WNCL) ಸೌತ್ ಆಸ್ಟ್ರೇಲಿಯನ್ ಸ್ಕಾರ್ಪಿಯನ್ಸ್ ತಂಡದೊಂದಿಗೆ ಸೇವೆ ಸಲ್ಲಿಸಿದ್ದಾರೆ.

ಲ್ಯೂಕ್ ವಿಲಿಯಮ್ಸ್.

ಆರ್​ಸಿಬಿ ಮಹಿಳಾ ತಂಡದ ಪ್ರದರ್ಶನ

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಆರ್​​ಸಿಬಿ ತಂಡವು ಸ್ಟಾರ್​ ಆಟಗಾರ್ತಿಯರನ್ನೇ ಹೊಂದಿತ್ತು. ಸ್ಮೃತಿ ಮಂಧಾನ, ಎಲಿಸ್ ಪೆರಿ, ಸೋಫಿ ಡಿವೈನ್, ರೇಣುಕಾ ಸಿಂಗ್, ರಿಚಾ ಘೋಷ್ ಸೇರಿದಂತೆ ಹಲವರು ಪ್ರಮುಖ ಆಟಗಾರ್ತಿಯರು ತಂಡದಲ್ಲಿದ್ದಾರೆ. ಆದರೂ ಆರಂಭಿಕ ಐದು ಪಂದ್ಯಗಳಲ್ಲಿ ಸತತ ಸೋಲು ಕಂಡಿತು. ಆದರೆ ಕೊನೆಯ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದು, ಐದು ತಂಡಗಳ ಪೈಕಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪುರುಷರ ತಂಡದಲ್ಲೂ ಬದಲಾವಣೆ

ಇತ್ತೀಚೆಗಷ್ಟೆ ಪುರುಷರ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ಆ್ಯಂಡಿ ಫ್ಲವರ್ ಅವರನ್ನು ಹೆಡ್​ಕೋಚ್​ ಆಗಿ ನೇಮಿಸಿಕೊಂಡಿದೆ. ಹೆಡ್​ಕೋಚ್​ ಆಗಿದ್ದ ಸಂಜಯ್ ಬಂಗಾರ್ ಅವರಿಗೂ ಗೇಟ್​ಪಾಸ್ ನೀಡಲಾಗಿತ್ತು. ಪುರುಷ-ಮಹಿಳಾ ತಂಡಗಳ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದ ಮೈಕ್​ ಹೆಸನ್​ರನ್ನು ಕೆಳಗಿಳಿಸಲಾಯಿತು. ಈ ಬದಲಾವಣೆಗಳ ಬಳಿಕ ಮಹಿಳಾ ತಂಡಕ್ಕೆ ವಿಲಿಯಮ್ಸ್​ ಅವರನ್ನು ಹೆಡ್​ಕೋಚ್​ ಆಗಿ ನೇಮಕ ಮಾಡಲಾಗಿದೆ. ಹಾಗಾಗಿ ಮುಂದಿನ ವರ್ಷ ವಿಲಿಯಮ್ಸನ್​ ಆರ್​ಸಿಬಿ ಟ್ರೋಫಿ ಕನಸನ್ನು ನನಸಾಗಿಸುತ್ತಾರಾ ಎಂಬುದನ್ನು ಕಾದುನೋಡೋಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ