logo
ಕನ್ನಡ ಸುದ್ದಿ  /  ಕ್ರಿಕೆಟ್  /  ನಿಜಕ್ಕೂ ಕಠಿಣ ನಿರ್ಧಾರ, ಆದರೆ...; ರೋಹಿತ್ ಕೆಳಗಿಳಿಸಿ ಪಾಂಡ್ಯಗೆ ನಾಯಕತ್ವ ವಹಿಸಿದ ಹಿಂದಿನ ಉದ್ದೇಶ ತಿಳಿಸಿದ ಜಯವರ್ಧನೆ

ನಿಜಕ್ಕೂ ಕಠಿಣ ನಿರ್ಧಾರ, ಆದರೆ...; ರೋಹಿತ್ ಕೆಳಗಿಳಿಸಿ ಪಾಂಡ್ಯಗೆ ನಾಯಕತ್ವ ವಹಿಸಿದ ಹಿಂದಿನ ಉದ್ದೇಶ ತಿಳಿಸಿದ ಜಯವರ್ಧನೆ

Jayaraj HT Kannada

Dec 20, 2023 05:16 PM IST

google News

ರೋಹಿತ್ ಶರ್ಮಾ ಮತ್ತು ಹಾರ್ದಿಕ್‌ ಪಾಂಡ್ಯ

    • Mahela Jayawardene: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ ಕುರಿತು ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಮಾತನಾಡಿದ್ದಾರೆ.
ರೋಹಿತ್ ಶರ್ಮಾ ಮತ್ತು ಹಾರ್ದಿಕ್‌ ಪಾಂಡ್ಯ
ರೋಹಿತ್ ಶರ್ಮಾ ಮತ್ತು ಹಾರ್ದಿಕ್‌ ಪಾಂಡ್ಯ (PTI)

ಮುಂಬೈ ಇಂಡಿಯನ್ಸ್‌ (Mumbai Indians) ಫ್ರಾಂಚೈಸಿಯು ತಂಡದ ನಾಯಕತ್ವವನ್ನು ಬದಲಾಯಿಸಿರುವುದು ಅಭಿಮಾನಿಗಳ ಬೇಸರ ಮತ್ತು ಅಕ್ರೋಶಕ್ಕೆ ಕಾರಣವಾಗಿದೆ. ಈ ಮಹತ್ವದ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಫ್ರಾಂಚೈಸಿಯು ತನ್ನ ಅಭಿಮಾನಿ ಬಳಗದಿಂದ ತೀವ್ರ ಟೀಕೆ ಎದುರಿಸುತ್ತಿದೆ. ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಕಳೆದುಕೊಂಡಿದೆ. ಈ ನಡುವೆ ಈ ನಿರ್ಧಾರಕ್ಕೆ ಬರುವುದು ಎಷ್ಟ ಮಟ್ಟಿಗೆ ಕಷ್ಟವಾಯಿತು ಎಂಬುದನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಕ್ರಿಕೆಟ್‌ನ ಜಾಗತಿಕ ಮುಖ್ಯಸ್ಥ ಮಹೇಲಾ ಜಯವರ್ಧನೆ (Mahela Jayawardene) ವಿವರಿಸಿದ್ದಾರೆ.

ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವ ವಹಿಸುವ ನಿರ್ಧಾರದ ಹಿಂದಿನ ಉದ್ದೇಶದ ಕುರಿತು ಜಯವರ್ದನೆ ಮಾತನಾಡಿದರು. ಮಹತ್ವದ ನಿರ್ಧಾರದ ಬಳಿಕ ಅಭಿಮಾನಿಗಳ ಭಾವನಾತ್ಮಕ ಪ್ರತಿಕ್ರಿಯೆಯನ್ನು ಒಪ್ಪಿಕೊಂಡ ಜಯವರ್ಧನೆ, ಫ್ರಾಂಚೈಸಿಯ ಭವಿಷ್ಯವನ್ನು ಮುಂದಿಟ್ಟುಕೊಟ್ಟು ಸವಾಲಿನ ನಿರ್ಧಾರ ತೆಗೆದುಕೊಳ್ಳಬೇಕಿದ್ದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಜಿಯೋ ಸಿನಿಮಾ ಜೊತೆಗಿನ ಸಂದರ್ಶನದಲ್ಲಿ, ನಾಯಕತ್ವ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಕುರಿತ ಒಳನೋಟಗಳನ್ನು ಲಂಕಾ ದಿಗ್ಗಜ ಜಯವರ್ಧನೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | ಹರಾಜಿಗೆ ನಿಂತರೆ ಕೊಹ್ಲಿ 42, ಬುಮ್ರಾಗೆ 35 ಕೋಟಿ ಪಡೆಯೋದು ಪಕ್ಕಾ ಎಂದ ಆಕಾಶ್ ಚೋಪ್ರಾ

“ಇದು ತುಂಬಾ ಕಠಿಣ ನಿರ್ಧಾರವಾಗಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾವನಾತ್ಮಕವಾಗಿತ್ತು. ಈ ನಿರ್ಧಾರದ ಬಗ್ಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿರುವುದು ಕೂಡಾ ನ್ಯಾಯಯುತವಾಗಿದೆ. ನಾಯಕತ್ವ ಬದಲಾವಣೆ ವಿಚಾರವಾಗಿ ಫ್ರಾಂಚೈಸಿಯಲ್ಲಿ ಪ್ರತಿಯೊಬ್ಬರೂ ಭಾವನಾತ್ಮಕವಾಗಿದ್ದಾರೆ. ಆದರೆ ನಾವು ಅದನ್ನು ಗೌರವಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಮಹೇಲಾ ಹೇಳಿಕೊಂಡಿದ್ದಾರೆ.

ನಾಯಕತ್ವ ಬದಲಾವಣೆಯ ಹೊರತಾಗಿಯೂ, ತಂಡದಲ್ಲಿ ಹಿಟ್‌ಮ್ಯಾನ್ ಪ್ರಮುಖ ಪಾತ್ರವನ್ನು ಮುಂದುವರೆಸಲಿದ್ದಾರೆ ಎಂದು ಜಯವರ್ಧನೆ ತಿಳಿಸಿದ್ದಾರೆ.

ರೋಹಿತ್‌ ತಂಡದಲ್ಲೇ ಇರುತ್ತಾರೆ

“ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಸಲುವಾಗಿ ಮೈದಾನದ ಒಳಗೆ ಮತ್ತು ಹೊರಗೆ ರೋಹಿತ್ ತಂಡದಲ್ಲಿಯೇ ಇರುವುದು ನಮಗೆ ಬಹಳ ಮುಖ್ಯ. ಅವರು ನಿಜಕ್ಕೂ ಅದ್ಭುತ ವ್ಯಕ್ತಿತ್ವ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಮುಂಬೈನ ಪರಂಪರೆಯ ಭಾಗವಾಗುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ” ಎಂದು ಮಾಜಿ ಬ್ಯಾಟರ್ ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವ ಹಿಂದೆ ಅರ್ಥಪೂರ್ಣ ಸಂಭಾಷಣೆಗಳು ನಡೆದಿವೆ. ಅಲ್ಲದೆ ಫ್ರಾಂಚೈಸಿಯ ಪರಂಪರೆಯನ್ನು ಮುಂದುವರೆಸುವ ಉದ್ದೇಶದಿಂದ ಈ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

“ಹಾರ್ದಿಕ್ ಸಾಕಷ್ಟು ಸಮಯದಿಂದ ಎಂಐ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದಾರೆ. ಹೀಗಾಗಿ ಅವರಿಗೆ ಯಾವುದೂ ಹೊಸದಲ್ಲ. ಒಬ್ಬ ಆಲ್‌ರೌಂಡರ್ ಆಗಿ ಅವರ ಕೊಡುಗೆ ಏನು ಎಂಬುದು ನಮಗೆ ತಿಳಿದಿದೆ. ಗುಜರಾತ್‌ ತಂಡವನ್ನು ಮುನ್ನಡೆಸಿದ ಅವರ ಅನುಭವದಿಂದ ಇದು ವಿಭಿನ್ನವಾಗಿರುತ್ತದೆ,” ಎಂದು ಜಯವರ್ಧನೆ ತಿಳಿಸಿದ್ದಾರೆ.

ಇದನ್ನೂ ಓದಿ | ರೋಹಿತ್‌ರನ್ನು ಮತ್ತೆ ನಾಯಕ ಮಾಡಿ ಎಂದು ಕೂಗಿದ ಅಭಿಮಾನಿ; ಎಂಐ ಮಾಲೀಕ ಅಂಬಾನಿ ಪ್ರತಿಕ್ರಿಯೆ ಹೀಗಿತ್ತು

ದುಬೈನಲ್ಲಿ ಐಪಿಎಲ್ 2024ರ ಮಿನಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿನಲ್ಲಿ ಮುಂಬೈ ತಂಡದ ಮಾಲೀಕ ಆಕಾಶ್ ಅಂಬಾನಿ ಭಾಗವಹಿಸಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ, ಮುಂಬೈ ಇಂಡಿಯನ್ಸ್ ಅಭಿಮಾನಿಯೊಬ್ಬರು “ರೋಹಿತ್ ಶರ್ಮಾ ಕೋ ವಾಪಸ್ ಲಾವೋ” ಎಂದು ಕೂಗಿದರು. ಅಂದರೆ ರೋಹಿತ್ ಶರ್ಮಾರನ್ನು ಮತ್ತೆ ನಾಯಕನಾಗಿ ಮಾಡಿ ಎಂಬುದು ಅಭಿಮಾನಿಯ ಮಾತಾಗಿತ್ತು. ಇದಕ್ಕೆ ಅಂಬಾನಿ ಪ್ರತಿಕ್ರಿಯೆ ನೀಡಿದ್ದಾರೆ. “ಚಿಂತಾ ಮತ್ ಕರೋ, ವೋ ಬ್ಯಾಟಿಂಗ್ ಕರೇಗಾ” ಎಂದು ಉತ್ತರಿಸಿದ್ದಾರೆ. ಅಂದರೆ, ಚಿಂತಿಸಬೇಡಿ, ಅವರು ಬ್ಯಾಟಿಂಗ್‌ ಮಾಡುತ್ತಾರೆ ಎಂಬುದು ಆಕಾಶ್‌ ಪ್ರತಿಕ್ರಿಯೆಯಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ