logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮಾತ್ರ ನಿವೃತ್ತಿ ಹೇಳಿದ್ದೇನೆ; ಐಪಿಎಲ್​ಗೆ ಮರಳುವ ಸುಳಿವು ನೀಡಿದ ಧೋನಿ, Video

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮಾತ್ರ ನಿವೃತ್ತಿ ಹೇಳಿದ್ದೇನೆ; ಐಪಿಎಲ್​ಗೆ ಮರಳುವ ಸುಳಿವು ನೀಡಿದ ಧೋನಿ, VIDEO

Prasanna Kumar P N HT Kannada

Oct 27, 2023 06:30 AM IST

google News

ಮಹೇಂದ್ರ ಸಿಂಗ್ ಧೋನಿ.

  • Mahendra Singh Dhoni: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ಗೆ ವಿದಾಯ ಹೇಳುತ್ತಾರೆ ಎಂಬ ಗೊಂದಲದ ನಡುವೆ 2024ರ ಐಪಿಎಲ್​ಗೆ ಮರಳುವ ಸುಳಿವು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ.
ಮಹೇಂದ್ರ ಸಿಂಗ್ ಧೋನಿ.

ಮಹೇಂದ್ರ ಸಿಂಗ್ ಧೋನಿ (MS Dhoni) ಭಾರತ ಕ್ರಿಕೆಟ್ ತಂಡದ (Indian Cricket Team) ಪರ ಆಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಸೇರಿ ಮೂರು ಐಸಿಸಿ ಟ್ರೋಫಿಗಳನ್ನೂ ಗೆದ್ದ ಏಕೈಕ ನಾಯಕ. 2023ರ ಸಾಲಿನ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ (Chennai Super Kings) ನಾಯಕರಾಗಿ 5ನೇ ಪ್ರಶಸ್ತಿ ಗೆದ್ದುಕೊಟ್ಟ ಎಂಎಸ್ ಧೋನಿ, ಟೂರ್ನಿಯ ಬೆನ್ನಲ್ಲೇ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೀಗ 2024ರ ಐಪಿಎಲ್​ಗೆ (IPL 2024) ಮರಳುವುದಾಗಿ ಧೋನಿ ಸುಳಿವು ನೀಡಿದ್ದಾರೆ.

ಐಪಿಎಲ್​ ಆಡುವ ಬಗ್ಗೆ ಸುಳಿವು ನೀಡಿದ ಧೋನಿ

ಎಂಎಸ್ ಧೋನಿ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದರು. ಅಲ್ಲಿ ಅವರು ಮತ್ತೊಮ್ಮೆ ಐಪಿಎಲ್ 2024ರಲ್ಲಿ ಆಡುವ ದೊಡ್ಡ ಸುಳಿವು ಬಿಟ್ಟುಕೊಟ್ಟರು. ಸಂದರ್ಶಕರು ಧೋನಿಯನ್ನು ನಿವೃತ್ತ ಕ್ರಿಕೆಟಿಗ ಎಂದು ಸಂಬೋಧಿಸಿದರು. ಇದರ ಬೆನ್ನಲ್ಲೇ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಮಾತ್ರ ನಿವೃತ್ತನಾಗಿದ್ದೇನೆ ಎಂದು ಹೇಳಿದ್ದಾರೆ. ನೀವು ಕ್ರಿಕೆಟ್​​ನಿಂದ ರಿಟೈರ್​ ಆಗಿದ್ದೀರಿ ಎಂದು ಕೇಳುತ್ತಾರೆ. ಹೌದು, ನಾನು ಅಂತಾರಾಷ್ಟ್ರೀಯ ಪಂದ್ಯಗಳಿಂದ ಮಾತ್ರ ನಿವೃತ್ತಿ ಹೊಂದಿದ್ದೇನೆ ಎಂದು ಹೇಳುವ ಮೂಲಕ ಐಪಿಎಲ್​ ಆಡುವ ಸುಳಿವು ನೀಡಿದರು.

‘ಒಳ್ಳೆಯ ಮನುಷ್ಯನಾಗಲು ಬಯಸುತ್ತೇನೆ’

ಕಾರ್ಯಕ್ರಮದಲ್ಲಿ ಧೋನಿ ಅವರ ಜೀವನದ ಪ್ರಮುಖ ಅಂಶಗಳ ಬಗ್ಗೆ ಮತ್ತು ಅವರ ಯಶಸ್ಸಿನ ಹಸಿವು ಇನ್ನೂ ಹಾಗೇ ಇದೆಯೇ ಎಂದು ನಿರೂಪಕರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಭಾರತ ತಂಡದ ಮಾಜಿ ನಾಯಕ, ಮೊದಲಿನಿಂದಲೂ ಜನರು ನನ್ನನ್ನು ಉತ್ತಮ ಕ್ರಿಕೆಟಿನೆಂದು ನೆನಪಿಸಿಕೊಳ್ಳಬೇಕು ಎಂದು ನಾನು ಬಯಸುವುದಿಲ್ಲ. ನಾನು ಒಳ್ಳೆಯ ಮನುಷ್ಯ ಎಂದು ನೆನಪಿಸಿಕೊಳ್ಳಬೇಕು. ಉತ್ತಮ ಮನುಷ್ಯನಾಗಲು ಬಯಸಿದರೆ, ನೀವು ಸಾಯುವವರೆಗೂ ಇದು ಒಂದು ಪ್ರಕ್ರಿಯೆ ಎಂದು ಮೂರು ವಿಶ್ವಕಪ್ ಗೆದ್ದುಕೊಟ್ಟ ನಾಯಕ ಹೇಳಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆ

2023ರ ಐಪಿಎಲ್​​ನಲ್ಲಿ ಚೆನ್ನೈಗೆ ಟ್ರೋಫಿ ಗೆದ್ದ ಬಳಿಕ ಧೋನಿ ಅವರ ಕೊನೆಯ ಸೀಸನ್. ಅವರು ಲೀಗ್‌ನಿಂದ ನಿವೃತ್ತರಾಗುತ್ತಾರೆ ಎಂದು ಹಲವರು ಊಹಿಸಿದ್ದರು. ಇದೀಗ ಹಲವು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಗಾಯದ ನಡುವೆಯೇ ಐಪಿಎಲ್ ಆಡಿದ್ದ ಧೋನಿ, ಟೂರ್ನಿ ಮುಕ್ತಾಯದ ಬೆನ್ನಲ್ಲೇ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ರಿಹ್ಯಾಬ್​ಗೆ ಒಳಗಾಗಿದ್ದರು. ಇದೀಗ ಫಿಟ್​ ಆಗಿದ್ದಾರೆ. ಮುಂದಿನ ವರ್ಷ ಆಡುವ ಬಗ್ಗೆ ಐಪಿಎಲ್​​ ಫೈನಲ್​​ನಲ್ಲೂ ಸುಳಿವು ನೀಡಿದ್ದರು. ಆದರೆ ಆ ಹೇಳಿಕೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇತ್ತು.

ಧೋನಿ ವೃತ್ತಿಜೀವನ

ಎಂಎಸ್ ಧೋನಿ ಭಾರತ ತಂಡಕ್ಕಾಗಿ 350 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಹತ್ತು ಶತಕಗಳು ಮತ್ತು 73 ಅರ್ಧಶತಕಗಳೊಂದಿಗೆ 10,773 ರನ್​ ಗಳಿಸಿದ್ದಾರೆ. 90 ಟೆಸ್ಟ್ ಪಂದ್ಯಗಳಲ್ಲಿ ಅವರು 6 ಶತಕ, ಒಂದು ದ್ವಿಶತಕ ಮತ್ತು 33 ಅರ್ಧಶತಕ ಸೇರಿ 4,876 ರನ್ ಸಿಡಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 98 ಪಂದ್ಯಗಳನ್ನಾಡಿದ್ದಾರೆ. ಎರಡು ಅರ್ಧಶತಕ ಸಹಿತ 1,617 ರನ್ ಸಿಡಿಸಿದ್ದಾರೆ. ಐಪಿಎಲ್​ನಲ್ಲಿ ಈವರೆಗೂ 250 ಪಂದ್ಯಗಳನ್ನಾಡಿದ್ದು, 5082 ರನ್ ಸಿಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ