logo
ಕನ್ನಡ ಸುದ್ದಿ  /  ಕ್ರಿಕೆಟ್  /  ತನ್ನ ಬೈಕ್​ನಲ್ಲಿ ಯುವ ಕ್ರಿಕೆಟಿಗನಿಗೆ ಲಿಫ್ಟ್ ಕೊಟ್ಟ ಧೋನಿ; ಸರಳತೆಯ ಸಾಹುಕಾರ ಎಂದ ನೆಟ್ಟಿಗರು, Video

ತನ್ನ ಬೈಕ್​ನಲ್ಲಿ ಯುವ ಕ್ರಿಕೆಟಿಗನಿಗೆ ಲಿಫ್ಟ್ ಕೊಟ್ಟ ಧೋನಿ; ಸರಳತೆಯ ಸಾಹುಕಾರ ಎಂದ ನೆಟ್ಟಿಗರು, VIDEO

Prasanna Kumar P N HT Kannada

Sep 15, 2023 09:30 PM IST

google News

ಯುವ ಕ್ರಿಕೆಟಿಗನಿಗೆ ತನ್ನ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಧೋನಿ.

    • MS Dhoni Gives Lift To Young Cricketer On Bike: ಬೈಕ್​ನಲ್ಲಿ ಹೋಗುವಾಗ, ಲಿಫ್ಟ್​ ಕೇಳಿದ ಯುವ ಕ್ರಿಕೆಟಿಗನಿಗೆ ಎಂಎಸ್ ಧೋನಿ ಲಿಫ್ಟ್​ ನೀಡಿದ್ದಾರೆ. ಆತನ​ ಕೋಚಿಂಗ್​ ಮೈದಾನದಿಂದ ಕರೆದುಕೊಂಡು ಹೋಗಿರುವ ವಿಡಿಯೋ ಇದಾಗಿದೆ.
ಯುವ ಕ್ರಿಕೆಟಿಗನಿಗೆ ತನ್ನ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಧೋನಿ.
ಯುವ ಕ್ರಿಕೆಟಿಗನಿಗೆ ತನ್ನ ಬೈಕ್​ನಲ್ಲಿ ಲಿಫ್ಟ್ ಕೊಟ್ಟ ಧೋನಿ.

ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್​ ಧೋನಿ (Mahendra Singh Dhoni) ಅವರನ್ನು ಆರಾಧಿಸುವ ಅಭಿಮಾನಿಗಳ ಬಳಗ ವಿಶ್ವದಾದ್ಯಂತ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿ 3 ವರ್ಷಗಳೇ ಕಳೆದರೂ ಅವರ ಕ್ರೇಜ್​ ಕಿಂಚಿತ್ತೂ ಕುಗ್ಗಿಲ್ಲ. ಇತ್ತೀಚಿನ ದಿನಗಳಲ್ಲಿ ಒಂದಲ್ಲ, ಒಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುವ ಮಾಹಿ, ಸೋಷಿಯಲ್ ಮೀಡಿಯಾದಲ್ಲಿ ಟಾಪ್ ಟ್ರೆಂಡಿಂಗ್​ನಲ್ಲಿರುತ್ತಾರೆ. ಅದರಂತೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಕೂಲ್ ಕ್ಯಾಪ್ಟನ್.

ಧೋನಿ ಬಳಿ ಕಾರು ಮತ್ತು ಬೈಕ್​​ಗಳ ಸಂಗ್ರಹ ಹೆಚ್ಚಾಗಿದೆ. ಆಗಾಗ್ಗೆ ಕಾರು ಮತ್ತು ಬೈಕ್​ ಮೂಲಕ ರಾಂಚಿಯ ರಸ್ತೆಗಳಲ್ಲಿ ಚಲಾಯಿಸುವಾಗ ಅಭಿಮಾನಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿ ಟ್ರೆಂಡಿಂಗ್ ಆಗಿದ್ದೂ ಇದೆ. ಧೋನಿ ಸುಮಾರು 1040 ಕೋಟಿಗೆ ಒಡೆಯ. ಇಷ್ಟಾದರೂ ಸರಳತೆಯಿಂದಲೇ ಬದುಕುತ್ತಾರೆ. ಸಾವಿರಾರು ಕೋಟಿಯ ಒಡೆಯ ಮಾಹಿ ಸರಳತೆಯ ಸಾಹುಕಾರ ಎನ್ನುವುದಕ್ಕೆ ಸಂಬಂಧಿಸಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಅವರ ಸರಳತೆಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

ಯುವ ಕ್ರಿಕೆಟಿಗನಿಗೆ ಲಿಫ್ಟ್ ನೀಡಿದ ಧೋನಿ

ಹೌದು, ಯುವ ಕ್ರಿಕೆಟಿಗನೊಬ್ಬನಿಗೆ ತನ್ನ ಬೈಕ್​​ನಲ್ಲಿ ಧೋನಿ ಲಿಫ್ಟ್ ನೀಡುವ ಮೂಲಕ ಸರಳತೆ ಮೆರೆದಿದ್ದಾರೆ. ರಾಂಚಿ ಮೈದಾನದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ಬಳಿಕ ಹೊರಡಲು ತಯಾರಿ ನಡೆಸಿರುವುದನ್ನು ಮತ್ತು ಧೋನಿಯೊಂದಿಗೆ ಬೈಕ್​​ನಲ್ಲಿ ಹೋಗುತ್ತಿರುವುದನ್ನು ಆ ಯುವಕ ಸೆರೆ ಹಿಡಿದಿದ್ದಾನೆ. ಬೈಕ್​ನಲ್ಲಿ ಹೋಗುವಾಗ, ಲಿಫ್ಟ್​ ಕೇಳಿದ ಯುವ ಕ್ರಿಕೆಟಿಗನಿಗೆ (MS Dhoni Gives Lift To Young Cricketer On Bike) ಲಿಫ್ಟ್​ ನೀಡಿದ್ದಾರೆ. ಆತನ​ ಕೋಚಿಂಗ್​ ಮೈದಾನದಿಂದ ಕರೆದುಕೊಂಡು ಹೋಗಿರುವ ವಿಡಿಯೋ ಇದಾಗಿದೆ.

ಧೋನಿ ಬೈಕ್​ನಿಂದ ಲಿಫ್ಟ್ ಪಡೆದ ಯುವ ಕ್ರಿಕೆಟಿಗ ವಿಡಿಯೋ ಮಾಡಿಕೊಂಡಿದ್ದಾನೆ. ಆ ಮೂಲಕ ಭಾರಿ ಸಂತಸ ಹೊರ ಹಾಕಿದ್ದಾರೆ. ಈ ವಿಡಿಯೋ ಸಖತ್​ ವೈರಲ್ ಆಗಿದ್ದು, ಧೋನಿ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಧೋನಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ YAMAHA RD350 ನಲ್ಲಿ ಲಿಫ್ಟ್ ಪಡೆದ ಅತ್ಯಂತ ಅದೃಷ್ಟಶಾಲಿ ಯುವ ಕ್ರಿಕೆಟಿಗ ಎಂದು ಜಾರ್ಖಾಂಡ್ ಯಾತ್ರಾ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಟ್ರಂಪ್ ಜೊತೆ ಗಾಲ್ಫ್ ಆಡಿದ ಮಾಹಿ

ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಧೋನಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್  (MS Dhoni played golf with Donald Trump) ಅವರೊಂದಿಗೆ ಗಾಲ್ಫ್‌ನ ಸ್ನೇಹಪರ ಆಟದಲ್ಲಿ ತೊಡಗಿದ್ದರು. ದುಬೈ ಮೂಲದ ಉದ್ಯಮಿಯಾದ ಹಿತೇಶ್ ಸಾಂಘ್ವಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ನ್ಯೂಜೆರ್ಸಿಯ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ ಬೆಡ್‌ಮಿನ್‌ಸ್ಟರ್‌ನಲ್ಲಿ ಧೋನಿ ಮತ್ತು ಟ್ರಂಪ್ ಜತೆಯಾಗಿ ಗಾಲ್ಫ್ ಆಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

ಯುಎಸ್​ ಓಪನ್​ ಪಂದ್ಯವನ್ನು ನೋಡಿದ ಧೋನಿ

ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ 2023 ಯುಎಸ್ ಓಪನ್ ಕ್ವಾರ್ಟರ್-ಫೈನಲ್ ಪಂದ್ಯವನ್ನು ಧೋನಿ ಕಣ್ತುಂಬಿಕೊಂಡಿದ್ದರು. ಸ್ಟ್ಯಾಂಡ್​ನಲ್ಲಿ ತನ್ನ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ, ವಿಮಾನದಲ್ಲಿ ಎರಡು ಬಾರಿ ಪ್ರಯಾಣಿಸಿದ್ದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಗಗನಸಖಿಯೊಬ್ಬರು ಧೋನಿಗೆ ಚಾಕೋಲೇಟ್ ನೀಡಿದ್ದರು. ಮತ್ತೊಂದು ವಿಡಿಯೋದಲ್ಲಿ ಧೋನಿ ಮಲಗಿದ್ದಾಗ, ಅವರಿಗೆ ಗೊತ್ತಿಲ್ಲದಂತೆ ಗಗನಸಖಿ ವಿಡಿಯೋ ಮಾಡಿದ್ದರು.

ಚೆನ್ನೈಗೆ 5ನೇ ಕಪ್ ಗೆದ್ದುಕೊಟ್ಟ ಧೋನಿ

ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿರುವ ಧೋನಿ, 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಪ್ ಗೆದ್ದುಕೊಟ್ಟರು. ಗುಜರಾತ್ ಟೈಟಾನ್ಸ್ ವಿರುದ್ಧ ರೋಮಾಂಚಕ ಫೈನಲ್‌ನಲ್ಲಿ ತಮ್ಮ ದಾಖಲೆಯ 5ನೇ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದರು. ಟೂರ್ನಿಯಲ್ಲಿ ಗಾಯಗೊಂಡಿದ್ದ ಅವರು, ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಈಗ ಫಿಟ್​ ಆಗಿದ್ದು, ಮುಂದಿನ ಸೀಸನ್​​ನಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ಲವೇ ಎಂಬ ಪ್ರಶ್ನೆ ಎದ್ದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ