logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಆಟ, ಓಮನ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ; ಉಗಾಂಡ ಎದುರು ಶರಣಾದ ಪಪುವಾ ನ್ಯೂಗಿನಿಯಾ

ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಆಟ, ಓಮನ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ; ಉಗಾಂಡ ಎದುರು ಶರಣಾದ ಪಪುವಾ ನ್ಯೂಗಿನಿಯಾ

Prasanna Kumar P N HT Kannada

Jun 06, 2024 03:23 PM IST

google News

ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಆಟ, ಓಮನ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ; ಉಗಾಂಡ ಎದುರು ಶರಣಾದ ಪಪುವಾ ನ್ಯೂಗಿನಿಯಾ

    • T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇಂದು (ಜೂನ್ 6) ನಡೆದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಉಗಾಂಡ ತಂಡಗಳು ಗೆದ್ದಿವೆ. ಕ್ರಮವಾಗಿ ಓಮನ್ ಮತ್ತು ನಮೀಬಿಯಾ ತಂಡಗಳ ಎದುರು ಗೆಲುವು ದಾಖಲಿಸಿವೆ.
ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಆಟ, ಓಮನ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ; ಉಗಾಂಡ ಎದುರು ಶರಣಾದ ಪಪುವಾ ನ್ಯೂಗಿನಿಯಾ
ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಆಟ, ಓಮನ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ; ಉಗಾಂಡ ಎದುರು ಶರಣಾದ ಪಪುವಾ ನ್ಯೂಗಿನಿಯಾ

ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ (T20 World Cup 2024) 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವಿನ ಅಭಿಯಾನ ಆರಂಭಿಸಿದೆ. ಓಮನ್ ತಂಡದ ಎದುರು ಆಸೀಸ್​, 39 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಬಾರ್ಬಡೋಸ್​​ನ ಕೆನ್ನಿಂಗ್ಟನ್ ಓವನ್​ನಲ್ಲಿ ಜರುಗಿದ ಈ ಪಂದ್ಯದಲ್ಲಿ ಕಾಂಗರೂ ಪಡೆ ಎದುರೂ ಓಮನ್ ಸೋಲನುಭವಿಸಿತು. ಓಮನ್​ಗೆ ಇದು 2ನೇ ಸೋಲು. ನಮೀಬಿಯಾ ವಿರುದ್ಧ ಸೂಪರ್​ ಓವರ್​​ನಲ್ಲಿ ಸೋತಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಉತ್ತಮ ಆರಂಭ ಪಡೆಯಲಿಲ್ಲ. ನಿಧಾನಗತಿಯ ಪಿಚ್​​ನಲ್ಲಿ ಆರ್ಭಟಿಸಲು ಯತ್ನಿಸಿದ ಟ್ರಾವಿಸ್ ಹೆಡ್ 12 ರನ್ ಗಳಿಸಿ ಔಟಾದರು. ಬಳಿಕ ಮಿಚೆಲ್ ಮಾರ್ಷ್ 14, ಮ್ಯಾಕ್ಸ್​ವೆಲ್ ಡಕೌಟ್ ಆದರು. ಟ್ರಾವಿಸ್ ಹೆಡ್ ಸಹ 9 ರನ್​ಗೆ ಸುಸ್ತಾದರು. ಆದರೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್​ ಮತ್ತು ಮಾರ್ಕಸ್ ಸ್ಟೋಯ್ನಿಸ್ ಶತಕದ ಜೊತೆಯಾಟವಾಡಿದರು.

ಪಿಚ್​ ತಕ್ಕಂತೆ ಬ್ಯಾಟಿಂಗ್ ಬೀಸಿದ ಈ ಜೋಡಿ ಆಸೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಅಲ್ಲದೆ, ಇಬ್ಬರು ಸಹ ತಲಾ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ವಾರ್ನರ್ 51 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 56 ರನ್, ಸ್ಟೋಯ್ನಿಸ್ 36 ಎಸೆತಗಳಲ್ಲಿ 6 ಸಿಕ್ಸರ್, 2 ಬೌಂಡರಿ ಸಹಿತ 67 ರನ್ ಬಾರಿಸಿದರು. ಪರಿಣಾಮ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿತು. ಮೆಹ್ರಾನ್ ಖಾನ್ 2 ವಿಕೆಟ್ ಪಡೆದರು.

ಆದರೆ ಈ ಗುರಿ ಬೆನ್ನಟ್ಟಿದ ಓಮನ್, ಆಸೀಸ್ ಮಾರಕ ಬೌಲಿಂಗ್ ದಾಳಿಯ ಮುಂದೆ ಮಂಕಾಯಿತು. ಪವರ್​​ಪ್ಲೇ ಒಳಗೆ 29 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಆಡಂ ಜಂಪಾ ತಲಾ 2 ವಿಕೆಟ್ ಪಡೆದರೆ, ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಸ್ಟೋಯ್ನಿಸ್ ಬೌಲಿಂಗ್​ನಲ್ಲೂ 3 ವಿಕೆಟ್ ಉರುಳಿಸಿ ಗಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಓಮನ್ ಪರ ಆಯಾನ್ ಖಾನ್ 36 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್​ ಆಗಿದೆ. ಕಳೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೋತಿದ್ದ ಓಮನ್, ಈಗ ಮತ್ತೊಂದು ಸೋಲು ಅನುಭವಿಸಿ ಬಿ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಮೊದಲ ಗೆಲುವು ಸಾಧಿಸಿ ಮೊದಲ ಸ್ಥಾನ ಪಡೆದಿದೆ.

ಮತ್ತೊಂದು ಪಂದ್ಯದಲ್ಲಿ ಉಗಾಂಡಗೆ ಗೆಲುವು

ಜೂನ್ 6ರಂದು ಟಿ20 ವಿಶ್ವಕಪ್​ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ, ಎರಡನೇ ಸೋಲಿಗೆ ಶರಣಾಗಿದೆ. ಸಿ ಗುಂಪಿನಲ್ಲಿ ಜರುಗಿದ ಪಂದ್ಯದಲ್ಲಿ ಉಗಾಂಡ ಮೊದಲ ಗೆಲುವು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋತಿದ್ದ ಉಗಾಂಡ, ಈಗ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಗಯಾನದ ಪ್ರಾವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ನ್ಯೂಗಿನಿಯಾ, 19.1 ಓವರ್​​​ಗಳಲ್ಲಿ 77 ರನ್ ಗಳಿಸಿ ಆಲೌಟ್ ಆಯಿತು. ಹಿರಿ ಹಿರಿ ಅವರು 15 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಅಲ್ಪೇಶ್ ರಂಜಾನಿ, ಕಾಸ್ಮಾಸ್ ಕ್ಯೆವುಟಾ, ಜುಮಾ ಮಿಯಾಗಿ, ನ್ಸುಬುಗ ತಲಾ 2 ವಿಕೆಟ್ ಪಡೆದರು. 78 ರನ್​ಗಳ ಅಲ್ಪಗುರಿ ಹಿಂಬಾಲಿಸಿದ ಉಗಾಂಡ ಚೇಸ್ ಮಾಡಲು 18.2 ಓವರ್​ಗಳನ್ನು ತೆಗೆದುಕೊಂಡಿತು. 7 ವಿಕೆಟ್ ಕಳೆದುಕೊಂಡಿತು.

ಇನ್ನಷ್ಟು ಟಿ20 ವಿಶ್ವಕಪ್​ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ