logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂದು ಮನೆಯಿಂದಲೇ ಬಿಸಿನೆಸ್​, ಇಂದು ಹೇರ್​​ಕಟ್​ಗೆ 1 ಲಕ್ಷ ಫೀಸ್; ಸೆಲೆಬ್ರೆಟಿಸ್ ನೆಚ್ಚಿನ ಅಲೀಮ್ ಹಕೀಮ್ ರೋಚಕ ಹಾದಿ

ಅಂದು ಮನೆಯಿಂದಲೇ ಬಿಸಿನೆಸ್​, ಇಂದು ಹೇರ್​​ಕಟ್​ಗೆ 1 ಲಕ್ಷ ಫೀಸ್; ಸೆಲೆಬ್ರೆಟಿಸ್ ನೆಚ್ಚಿನ ಅಲೀಮ್ ಹಕೀಮ್ ರೋಚಕ ಹಾದಿ

Prasanna Kumar P N HT Kannada

Aug 14, 2024 10:01 AM IST

google News

ಅಂದು ಮನೆಯಿಂದಲೇ ಬಿಸಿನೆಸ್​, ಇಂದು ಹೇರ್​​ಕಟ್​ಗೆ 1 ಲಕ್ಷ ಫೀಸ್; ಸೆಲೆಬ್ರೆಟಿಸ್ ನೆಚ್ಚಿನ ಅಲೀಮ್ ಹಕೀಮ್ ರೋಚಕ ಹಾದಿ

    • Aalim Hakim: ಬಾಲಿವುಡ್​ನಿಂದ ಕ್ರಿಕೆಟ್​​ ತನಕ, ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಗಣ್ಯ ವ್ಯಕ್ತಿ ನೆಚ್ಚಿನ ಹೇರ್​ಕಟ್ಟರ್ ಆಗಿರುವ ಅಲಿಮ್ ಹಕೀಮ್ ಅವರು ಯಾರು? ಇಲ್ಲಿದೆ ನೋಡಿ ವಿವರ.
ಅಂದು ಮನೆಯಿಂದಲೇ ಬಿಸಿನೆಸ್​, ಇಂದು ಹೇರ್​​ಕಟ್​ಗೆ 1 ಲಕ್ಷ ಫೀಸ್; ಸೆಲೆಬ್ರೆಟಿಸ್ ನೆಚ್ಚಿನ ಅಲೀಮ್ ಹಕೀಮ್ ರೋಚಕ ಹಾದಿ
ಅಂದು ಮನೆಯಿಂದಲೇ ಬಿಸಿನೆಸ್​, ಇಂದು ಹೇರ್​​ಕಟ್​ಗೆ 1 ಲಕ್ಷ ಫೀಸ್; ಸೆಲೆಬ್ರೆಟಿಸ್ ನೆಚ್ಚಿನ ಅಲೀಮ್ ಹಕೀಮ್ ರೋಚಕ ಹಾದಿ

ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ ಸೇರಿ ಸ್ಟಾರ್ ಕ್ರಿಕೆಟಿಗರ ಹೇರ್​​ಸ್ಟೈಲ್​​ ನೋಡಿ ಫಿದಾ ಆಗಿದ್ದೀರಾ? ಕ್ರಿಕೆಟಿಗರೇ ಏಕೆ? ಬಾಲಿವುಡ್ ನಟರ ಭಿನ್ನ, ವಿಭಿನ್ನ ಹೇರ್​​ಸ್ಟೈಲ್​​ಗೆ ಫ್ಯಾನ್​ ಆಗಿದ್ದೀರಾ? ಅಷ್ಟೇ ಯಾಕೆ? ಕೆಜಿಎಫ್​ಗೆ ಯಶ್​ ಅವರ ಹೇರ್​​ಸ್ಟೈಲ್​ ಸಾಕಷ್ಟು ಮಂದಿಗೆ ಸಖತ್ ಇಷ್ಟ ಆಯ್ತು ಅಲ್ವಾ? ಸೆಲೆಬ್ರೆಟಿಸ್ ಈ ರೀತಿ ಸಖತ್ ಟ್ರೆಂಡಿ ಲುಕ್​​​ಗಳೊಂದಿಗೆ ಮಿಂಚೋಕೆ ಕಾರಣ ಬೇರೆ ಯಾರೂ ಅಲ್ಲ, ಅಲಿಮ್ ಹಕೀಮ್.!

ಕೇಶವಿನ್ಯಾಸದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಅಲಿಮ್ ಹಕೀಮ್, ಸೆಲೆಬ್ರೆಟಿಗಳ ಫೇವರಿಟ್ ಹೇರ್​ ಕಟ್ಟರ್ ಆಗಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಗಣ್ಯರು ಈತನ ಅಪಾಯಿಂಟ್ಮೆಂಟ್​ಗೆ ದಿನಗಟ್ಟಲೇ, ವಾರಗಟ್ಟಲೆ, ತಿಂಗಳುಗಟ್ಟಲೇ ಕಾಯುತ್ತಾರೆ. ಅಷ್ಟರ ಮಟ್ಟಿಗೆ ಬೇಡಿಕೆ ಹೊಂದಿರುವ ವ್ಯಕ್ತಿಯಾಗಿ ಮಾರ್ಪಟ್ಟಿದ್ದಾರೆ. ಕಟಿಂಗ್​ ಮೂಲಕವೇ ಈ ಪಾಟಿ ಹೆಸರು ಮಾಡಿದ ಅಲಿಮ್ ಹಕೀಮ್ ಯಾರು? ಇಲ್ಲಿದೆ ವಿವರ.

ಬಾಲ್ಯದಿಂದ ವೃತ್ತಿಜೀವನದವರೆಗೆ

ಹೇರ್ ಡ್ರೆಸ್ಸಿಂಗ್ ಕಲೆಯಲ್ಲಿ ಆಳವಾಗಿ ಬೇರೂರಿದ ಕುಟುಂಬದಲ್ಲಿ ಜನಿಸಿದ ಹಕೀಮ್, ವೃತ್ತಿಜೀವನ ಆರಂಭಿಸಿದ್ದು 16ನೇ ವಯಸ್ಸಿನಲ್ಲಿ. ಚಿಕ್ಕಂದಿನಲ್ಲೇ ಅವರ ಕುಟುಂಬವು ಆತನ ಮೇಲಿಟ್ಟಿದ್ದ ನಿರೀಕ್ಷೆ ಅಪಾರ. ಆದರೆ ಹಕೀಮ್ 9ನೇ ವಯಸ್ಸಿನಲ್ಲಿದ್ದ ಸಂದರ್ಭದಲ್ಲಿ ತನ್ನ ತಂದೆಯ ಮರಣವು ಆತನ ಭುಜಗಳ ಮೇಲೆ ಹೊಸ ಸವಾಲು ಇರಿಸಿತು. ತಂದೆ ತೀರಿಕೊಂಡಾಗ ತನ್ನಲ್ಲಿದ್ದದ್ದು ಕೇವಲ 13 ರೂಪಾಯಿ. ಆರಂಭದಲ್ಲಿ ಸಣ್ಣದಾಗಿ ಪ್ರಾರಂಭಿಸಿದ ಹಕೀಮ್, ತನ್ನ ಮನೆಯ ಬಾಲ್ಕನಿಯನ್ನು ತಾತ್ಕಾಲಿಕ ಸಲೂನ್ ನಿರ್ಮಿಸಿದರು.

ಅಲ್ಲಿ, ಕಾಲೇಜು ಹುಡುಗರು, ಸ್ನೇಹಿತರ ಮೇಲೆ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರು. 1974ರ ಆಗಸ್ಟ್​ 25ರಂದು ಜನಿಸಿದ ಹಕೀಮ್​ಗೆ ಪ್ರಸ್ತುತ 39 ವರ್ಷ. ಮುಂಬೈನ ಭೇನ್ಡಿ ಬಜಾರ್​ ಏರಿಯಾ ಅವರ ಜನ್ಮಸ್ಥಳ. ಕಮ್ಮು ಜಾಫ್ರ್ ಹಾಸ್ಪಿಟಲ್​​ನಲ್ಲಿ ಅವರು ಜನಿಸಿದರು. ಅವರ ತಂದೆ ಹಕೀಮ್ ಕೈರಾನ್ವಿ, ತಾಯಿ ಜೆಬುನ್ನಿಸಾ. ಇವರ ಮೂಲತಃ ಹುಟ್ಟೂರು ಉತ್ತರ ಪ್ರದೇಶ. ಹಕೀಮ್ ಶಾಲಾ ವಿದ್ಯಾಭ್ಯಾಸ ಮಾಹಿತಿ ಸಿಕ್ಕಿಲ್ಲವಾದರೂ ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಹಕೀಮ್ ಇಸ್ಲಾಂ ಧರ್ಮದವರಾದರೂ ಮದುವೆಯಾಗಿದ್ದು ಸಿಖ್ ಧರ್ಮದವರನ್ನು (2013ರ ಡಿಸೆಂಬರ್ 27). ಹೆಸರು ಶಾನೋ ಜಸ್ಬೀರ್ ಸಿಂಗ್ ಹಂಸಪಾಲ್. ಯಾವುದೇ ರೀತಿಯ ಆಚರಣೆಯನ್ನು ಇತರರ ಮೇಲೆ ಒತ್ತಾಯಿಸಬಾರದು ಎಂಬ ಅಭಿಪ್ರಾಯ ಹೊಂದಿರುವ ಹಕೀಮ್, ತನ್ನ ಪತ್ನಿಯನ್ನು ಮುಸ್ಲಿಂ ಮತಾಂತರಗೊಳ್ಳುವಂತೆ ಯಾವುದೇ ಒತ್ತಡ ಹೇರಿಲ್ಲ. 2018ರಲ್ಲಿ ಮಗ ಜನಿಸಿದ್ದು, ಆತನ ಜನನ ನೋಂದಣಿ ಪ್ರಮಾಣ ಪತ್ರದಲ್ಲಿ ಧರ್ಮದ ಜಾಗದಲ್ಲಿ ಮಾನವೀಯತೆ ಎಂದು ನಮೂದಿಸಿದ್ದಾರಂತೆ!

ಹಕೀಮ್ ಪ್ರಗತಿಯ ಪಯಣ

ತನ್ನಲ್ಲಿದ್ದ ಸೀಮಿತ ಸಂಪನ್ಮೂಲಗಳೊಂದಿಗೆ ಹೋರಾಡುತ್ತಿದ್ದ ಹಕೀಮ್, ಸಾಕಷ್ಟು ಪರಿಶ್ರಮ ಹಾಕುತ್ತಿದ್ದರು. ಆದರೆ, ಏರ್​ ಕಂಡೀಷನ್ ಖರೀದಿಸಿದ್ದು, ಹಕೀಮ್ ಜೀವನಕ್ಕೆ ಮಹತ್ವದ ತಿರುವು ಕೊಟ್ಟಿತು. ತನ್ನ ಅನುಭವ ಮತ್ತಷ್ಟು ಹೆಚ್ಚಿಸಿತ್ತು. ಇದು ನನ್ನ ಸಮೃದ್ಧಿಗೆ ಹೊಸ ಅರ್ಥ ಕಲ್ಪಿಸಿಕೊಟ್ಟಿತು. ಹೀಗಂತ ಈ ಹಿಂದೆ ಸ್ವತಃ ಅವರೇ ಹೇಳಿಕೊಂಡಿದ್ದರು. ಆರಂಭದಲ್ಲೇ ನಾನು ಮನೆಯಲ್ಲೇ ಕೆಲಸ ಮಾಡುತ್ತಿದ್ದೆ. ಅದು ಕೂಡ ಬಾಲ್ಕನಿಯಲ್ಲಿ. ಒಂದೇ ಒಂದು ಸಣ್ಣ ಫ್ಯಾನ್ ಇತ್ತು.

ಆದರೆ ಅದು ನನಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ ನಾನು ಹಣ ಸಂಗ್ರಹಿಸಿ ಸೆಕೆಂಡ್ ಹ್ಯಾಂಡ್ ಏರ್ ಕಂಡಿಷನರ್ ಖರೀದಿಸಲು ಯತ್ನಿಸಿದೆ. ಆದರೆ ಆ ಸಮಯದಲ್ಲಿ ಸೆಕೆಂಡ್ ಹ್ಯಾಂಡ್ ಏರ್ ಕಂಡಿಷನರ್ ಸಹ 30,000 ರೂಪಾಯಿಗೆ ಇತ್ತು. 1990ರ ದಶಕದಲ್ಲೇ ಮಾಸಿಕ ಕಂತು ಒಂದೊಂದು ಬಾರಿ 2,000 ಅಥವಾ 3,000 ಸಾವಿರ ರೂಪಾಯಿ ಪಾವತಿಸುತ್ತಿದ್ದೆ. ನಿಜ ಹೇಳಬೇಕೆಂದರೆ ಅದು ನನ್ನ ಜೀವನವನ್ನು ಬದಲಿಸಿತು. ಸ್ವಂತವಾಗಿ ಅಂಗಡಿಯೊಂದನ್ನು ತೆರೆದೆ.

ಬ್ರೂಟ್ ಇಂಡಿಯಾದೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಅಲಿಮ್ ಹಕೀಮ್, 1990 ರ ದಶಕದಲ್ಲಿ ಕಾಲೇಜು ಸ್ನೇಹಿತರು ನನ್ನ ಬಳಿಗೆ ಬರಲು ಪ್ರಾರಂಭಿಸಿದರು. ನನ್ನ ವಿನ್ಯಾಸದ ಶೈಲಿ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು. ನನ್ನ ಅಪಾಯಿಂಟ್ಮೆಂಟ್ ಮೊದಲೇ ತೆಗೆದುಕೊಳ್ಳುತ್ತಿದ್ದರು. ಇಡೀ ಕಾಲೇಜಿಗೆ ನನ್ನ ಹೇರ್​​ಕಟಿಂಗ್ ಇಷ್ಟವಾಯಿತು. ನನ್ನ ಸ್ನೇಹಿತರಿಂದ ಮತ್ತೊಬ್ಬರಿಗೆ, ಮತ್ತೊಬ್ಬರಿಂದ ಇನ್ನೊಬ್ಬರಿಗೆ ನನ್ನ ಹೆಸರು ಪರಿಚಿತವಾಯಿತು. ಹೀಗಾಗಿ ನಾನು ಬೆಳೆಯತೊಡಗಿದೆ.

ಕ್ರಮೇಣ ನನ್ನ ಹೆಸರು ಬಾಲಿವುಡ್​​ವರೆಗೂ ಹೋಯಿತು. ಎಲ್ಲಾ ನಟರು ನನ್ನ ಬಳಿಗೆ ಬರಲು ಪ್ರಾರಂಭಿಸಿದರು. ಸಲ್ಮಾನ್ ಖಾನ್, ಫರ್ದೀನ್ ಖಾನ್, ಸೈಫ್ ಅಲಿ ಖಾನ್ , ಸುನೀಲ್ ಶೆಟ್ಟಿ, ಅಜಯ್ ದೇವಗನ್, ಅವರೆಲ್ಲರೂ 20 ವರ್ಷಗಳ ಹಿಂದೆಯೇ ನನ್ನ ಗ್ರಾಹಕರಾದರು. ಈಗಲೂ ಸಹ ಅವರು ನನ್ನ ಗ್ರಾಹಕರು. ಆದ್ದರಿಂದ ಇದನ್ನು ನಿಷ್ಠೆ ಎಂದು ನಾನು ಹೇಳಬಲ್ಲೆ ಎಂದು ಹಕೀಮ್ ಸೇರಿಸಿದ್ದಾರೆ.

ವಾರ್​ನಲ್ಲಿ ಹೃತಿಕ್ ರೋಷನ್ ಲುಕ್, ಅನಿಮಲ್ ಮತ್ತು ಸಂಜು ಚಿತ್ರದಲ್ಲಿ ರಣಬೀರ್ ಕಪೂರ್ ಲುಕ್, ಕಬೀರ್ ಸಿಂಗ್​ನಲ್ಲಿ ಶಾಹಿದ್ ಕಪೂರ್ ಲುಕ್, ಸ್ಯಾಮ್ ಬಹದ್ದೂರ್​ನಲ್ಲಿ ವಿಕ್ಕಿ ಕೌಶಲ್ ಲುಕ್, ಜೈಲರ್​​ನಲ್ಲಿ ರಜನಿಕಾಂತ್ ಸರ್ ಲುಕ್, ಬಾಹುಬಲಿಯಲ್ಲಿ ಪ್ರಭಾಸ್ ಲುಕ್ ಹಕೀಮ್ ಸ್ಟೈಲ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್​ನ ಬಹುತೇಕ ಆಟಗಾರರು, ಹಕೀಮ್​​ ಅವರೊಂದಿಗೆ ಸ್ಟೈಲಿಶ್ ಹೇರ್​ಕಟ್ ಮಾಡಿಸಿಕೊಳ್ಳುತ್ತಾರೆ.

1 ಲಕ್ಷದಿಂದ ಶುಲ್ಕ ಪ್ರಾರಂಭ, 184 ಕೋಟಿ ಶ್ರೀಮಂತ

ಇಂದು ವಿಶ್ವಮಟ್ಟದಲ್ಲಿ ಹೆಸರು ಸಂಪಾದಿಸಿರುವ ಹಕೀಮ್, ತಾನು ವಿಧಿಸುವ ಶುಲ್ಕ 1 ಲಕ್ಷದಿಂದ ಪ್ರಾರಂಭವಾಗುತ್ತದೆ. ಹೀಗಂತ ಅವರೇ ಹೇಳಿದ್ದಾರೆ. ನಾನು ವಿಧಿಸುವ ಶುಲ್ಕಾ 1 ಲಕ್ಷದಿಂದ ಆರಂಭವಾಗುತ್ತದೆ. ಆದರೆ ಇದೇ ಕನಿಷ್ಠ. ನಾನು ಎಷ್ಟು ಶುಲ್ಕ ವಿಧಿಸುತ್ತೇನೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ. ಅಂದು ಮನೆಯ ಬಾಲ್ಕನಿಯಿಂದ ವೃತ್ತಿ ಆರಂಭಿಸಿದ ಹಕೀಮ್ ಇಂದು ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. 2023ರ ವರದಿ ಪ್ರಕಾರ ಅವರ ಬಳಿ 184 ಕೋಟಿ ಇದೆ ಎನ್ನಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ