logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾದದ ನೋವಿಂದ ಬಳಲುತ್ತಿದ್ದರೂ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಶಮಿ; ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೆ ಅನುಮಾನ

ಪಾದದ ನೋವಿಂದ ಬಳಲುತ್ತಿದ್ದರೂ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಶಮಿ; ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೆ ಅನುಮಾನ

Jayaraj HT Kannada

Dec 06, 2023 08:38 PM IST

google News

ಮೊಹಮ್ಮದ್‌ ಶಮಿ

    • ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಪಂದ್ಯಾವಳಿಯುದ್ದಕ್ಕೂ ಅವರು ಪಾದದ ಗಾಯದಿಂದ ಒದ್ದಾಡುತ್ತಿದ್ದರು ಎಂದು ವರದಿಯೊಂದು ಬಹಿರಂಗಪಡಿಸಿದೆ.
ಮೊಹಮ್ಮದ್‌ ಶಮಿ
ಮೊಹಮ್ಮದ್‌ ಶಮಿ (AP)

ಏಕದಿನ ವಿಶ್ವಕಪ್ 2023ರಲ್ಲಿ ವೇಗಿ ಮೊಹಮ್ಮದ್‌ ಶಮಿ (Mohammed Shami) ಅವರ ಅಮೋಘ ಪ್ರದರ್ಶನವನ್ನು ವಿಶೇಷವಾಗಿ ಹೇಳಬೇಕಿಲ್ಲ. ಟೂರ್ನಿಯಲ್ಲಿ ಕಡಿಮೆ ಪಂದ್ಯಗಳನ್ನಾಡಿದರೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದವರು ಶಮಿ. ಅಲ್ಲದೆ ಹಲವು ಪಂದ್ಯಗಳಲ್ಲಿ ಭಾರತದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಆಡಿದ್ದು ಕೇವಲ ಏಳು ಪಂದ್ಯಗಳಾದರೂ, ಬರೋಬ್ಬರಿ 24 ವಿಕೆಟ್‌ ಕಬಳಿಸಿ, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಆಟಗಾರನಾದರು. ಇದರೊಂದಿಗೆ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಮಿಂಚಿದರು.

ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಸೋತು ದಿನಗಳು ಉರುಳಿವೆ. ಇದೀಗ ಅಚ್ಚರಿಯ ಅಂಶವೊಂದು ಬಹಿರಂಗವಾಗಿದೆ. ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದ ಶಮಿ, ತಮ್ಮ ದೇಹದೊಳಗೆ ಹೇಳಲಾಗದಷ್ಟು ನೋವು ಅನುಭವಿಸುತ್ತಿದ್ದರು ಎಂಬ ಸತ್ಯ ಹೊರಬಿದ್ದಿದೆ.

ಇದನ್ನೂ ಓದಿ | ಟೀಂ ಇಂಡಿಯಾ ವಿಶ್ವಕಪ್ ಸೆಮಿ ಫೈನಲ್ ಗೆಲುವಿನ ಹೀರೋ ಮೊಹಮ್ಮದ್ ಶಮಿ; ಫೈನಲ್ ಪ್ರವೇಶಕ್ಕೆ ವೇಗಿಯ ಕೊಡುಗೆ ಹೀಗಿತ್ತು

ಕಾಲಿನ ನೋವಿನ ಹೊರತಾಗಿಯೂ ವೇಗದ ಬೌಲರ್‌ ಭಾರತಕ್ಕಾಗಿ ಆಡಿದ್ದಾರೆ. ಬೌಲಿಂಗ್ ಮಾಡುವಾಗ ಲ್ಯಾಂಡಿಂಗ್ ಹಂತದಲ್ಲಿ ವಿಪರೀತ ನೋವು ಅನುಭವಿಸಿದರೂ, ಅವಕಾಶ ಸಿಕ್ಕ ಎಲ್ಲಾ ಪಂದ್ಯಗಳಲ್ಲೂ ಖರಾರುವಾಕ್‌ ದಾಳಿ ನಡೆಸಿ ಅಬ್ಬರಿಸಿದ್ದಾರೆ.

ಕ್ರಿಕ್‌ಬಝ್ ಪ್ರಕಾರ, ವಿಶ್ವಕಪ್‌ ಪಂದ್ಯಾವಳಿಯ ಸಮಯದಲ್ಲಿ ಶಮಿಗೆ ಪಾದದ ನೋವಿತ್ತು. ಇದೇ ಕಾರಣಕ್ಕೆ ವಿಶ್ವಕಪ್‌ ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಯ್ತು.‌

ಇದನ್ನೂ ಓದಿ | ಬುಮ್ರಾ, ಶಮಿ ಮಾತ್ರವಲ್ಲ; ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ‌ ಗೆಲುವಿಗೆ ಈ ಇಬ್ಬರು ನಿರ್ಣಾಯಕ ಎಂದ ಶ್ರೀಶಾಂತ್

ಮುಂದೆ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರೂ ಸ್ವರೂಪದ ಕ್ರಿಕೆಟ್‌ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸುವಾಗಲೂ, ಶಮಿಗೆ ವಿಶ್ರಾಂತಿ ಕುರಿತು ಹೇಳಲಾಗಿದೆ. ಟೆಸ್ಟ್‌ ಸರಣಿಗೆ ಆಯ್ಕೆ ಮಾಡಲಾಗಿದ್ದರೂ, ಬಿಸಿಸಿಐ ಪ್ರಮುಖ ಸಂದೇಶವೊಂದನ್ನೂ ಕೊಟ್ಟಿದೆ. ಶಮಿ ಪ್ರಸ್ತುತ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಅವರ ಲಭ್ಯತೆಯು ಫಿಟ್ನೆಸ್‌ಗೆ ಒಳಪಟ್ಟಿರುತ್ತದೆ ಎಂದು ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಕಳೆದ ವರ್ಷ ನಡೆದ ವಿಶ್ವಕಪ್‌ನ ಬಳಿಕ ಶಮಿ ಭಾರತ ಟಿ20 ತಂಡದಲ್ಲಿ ಆಡಿಲ್ಲ. ಆದರೆ, ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 28 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ