logo
ಕನ್ನಡ ಸುದ್ದಿ  /  ಕ್ರಿಕೆಟ್  /  Mohammed Shami: ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಶಮಿ 5 ವಿಕೆಟ್; ಹಲವು ದಾಖಲೆಗಳು ಧೂಳೀಪಟ

Mohammed Shami: ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಶಮಿ 5 ವಿಕೆಟ್; ಹಲವು ದಾಖಲೆಗಳು ಧೂಳೀಪಟ

Prasanna Kumar P N HT Kannada

Oct 22, 2023 08:56 PM IST

google News

ಮೊಹಮ್ಮದ್ ಶಮಿ ವಿಕೆಟ್ ಪಡೆದ ಸಂಭ್ರಮ.

    • Mohammed Shami Records: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 21ನೇ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್ ಪಡೆದ ಮೊಹಮ್ಮದ್ ಶಮಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಮೊಹಮ್ಮದ್ ಶಮಿ ವಿಕೆಟ್ ಪಡೆದ ಸಂಭ್ರಮ.
ಮೊಹಮ್ಮದ್ ಶಮಿ ವಿಕೆಟ್ ಪಡೆದ ಸಂಭ್ರಮ.

ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಐದು ವಿಕೆಟ್​ ಪಡೆದು ವೇಗದ ಬೌಲರ್​ ಮೊಹಮ್ಮದ್ ಶಮಿ (Mohammed Shami), ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ನ್ಯೂಜಿಲೆಂಡ್​ ಬ್ಯಾಟಿಂಗ್​ (India vs New Zealand) ಲೈನಪ್​ ಅನ್ನು ಧೂಳಿಪಟಗೊಳಿಸಿದ ಶಮಿ, ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಟೀಮ್ ಇಂಡಿಯಾ ಪರ 2 ಬಾರಿ 5 ವಿಕೆಟ್​​ ಸಾಧನೆ ಮಾಡಿದ ಮೊದಲ ಬೌಲರ್​​ ಎನಿಸಿದ್ದಾರೆ.

ಕಳೆದ 4 ಪಂದ್ಯಗಳಿಂದ ಬೆಂಚ್​ ಬಿಸಿ ಮಾಡಿದ್ದ ಶಮಿ, ಕಿವೀಸ್ ವಿರುದ್ಧ ಶಾರ್ದೂಲ್ ಠಾಕೂರ್​ (Shardul Thakur) ಬದಲಾಗಿ ತಂಡದಲ್ಲಿ ಸ್ಥಾನ ಪಡೆದರು. ಸಿಕ್ಕ ಅವಕಾಶದಲ್ಲಿ ಮಿಂಚಿದ ಶಮಿ, ಟೀಮ್ ಮ್ಯಾನೇಜ್​ಮೆಂಟ್ ನಂಬಿಕೆ ಉಳಿಸಿಕೊಂಡರು. 10 ಓವರ್​​​ಗಳಲ್ಲಿ 54 ರನ್​ ಬಿಟ್ಟುಕೊಟ್ಟ ಶಮಿ 5 ವಿಕೆಟ್​ ಉರುಳಿಸಿದರು. ಆ ಮೂಲಕ ಏಕದಿನ ವಿಶ್ವಕಪ್​​ನಲ್ಲಿ ಭಾರತ ತಂಡದ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಏಕದಿನ ವಿಶ್ವಕಪ್​ನಲ್ಲಿ ಮೊಹಮ್ಮದ್ ಶಮಿ ಸಾಧನೆ

ಮೊಹಮ್ಮದ್ ಶಮಿ ಈವರೆಗೂ 12 ವಿಶ್ವಕಪ್​ ಪಂದ್ಯಗನ್ನಾಡಿದ್ದಾರೆ. ಕೇವಲ 5.09ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿರುವ ವೇಗಿ, 36 ವಿಕೆಟ್ ಉರುಳಿಸಿದ್ದಾರೆ. 17.6 ಬೌಲಿಂಗ್​ ಸ್ಟ್ರೈಕ್​ರೇಟ್ ಇದ್ದರೆ, 15.02 ಬೌಲಿಂಗ್ ಸರಾಸರಿ ಹೊಂದಿದ್ದಾರೆ.

ಭಾರತದ ಪರ ಅತಿಹೆಚ್ಚು ವಿಕೆಟ್

ಏಕದಿನ ವಿಶ್ವಕಪ್​​ನಲ್ಲಿ ಭಾರತದ ಪರ ಅಧಿಕ ವಿಕೆಟ್ ಕಬಳಿಸಿದ ಬೌಲರ್​​​ಗಳಲ್ಲಿ 3ನೇ ಸ್ಥಾನಕ್ಕೆ ಗಿತ ಕಂಡರು. ಆ ಮೂಲಕ ಅನಿಲ್ ಕುಂಬ್ಳೆ ದಾಖಲೆ ಮುರಿದರು. ಪಂದ್ಯದಲ್ಲಿ 1 ವಿಕೆಟ್ ಕಬಳಿಸಿದ ವೇಳೆ 31 ವಿಕೆಟ್​ ಪಡೆದಿದ್ದ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದರು. ಈ ಪಂದ್ಯಕ್ಕೂ ಮುನ್ನ ಶಮಿ ಸಹ 31 ವಿಕೆಟ್​ ಪಡೆದಿದ್ದರು.

ವಿಶ್ವಕಪ್​ನಲ್ಲಿ ಭಾರತದ ಪರ ಅಧಿಕ ವಿಕೆಟ್​ ಪಡೆದ ಬೌಲರ್ಸ್

  • 44 ವಿಕೆಟ್ - ಜಹೀರ್ ಖಾನ್
  • 44 ವಿಕೆಟ್ - ಜಾವಗಲ್ ಶ್ರೀನಾಥ್
  • 36 ವಿಕೆಟ್ - ಮೊಹಮ್ಮದ್ ಶಮಿ*
  • 31 ವಿಕೆಟ್ - ಅನಿಲ್ ಕುಂಬ್ಳೆ
  • 29 ವಿಕೆಟ್ - ಜಸ್ಪ್ರೀತ್ ಬುಮ್ರಾ*
  • 28 ವಿಕೆಟ್ - ಕಪಿಲ್ ದೇವ್

ವಿಶ್ವಕಪ್​ನಲ್ಲಿ ಭಾರತದ ಪರ 5 ವಿಕೆಟ್​ಗಳ ಸಾಧನೆ

ಇನ್ನು 5 ವಿಕೆಟ್ ಶಮಿ ಮತ್ತೊಂದು ದಾಖಲೆ ಬರೆದಿದ್ದಾರೆ. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ 5 ವಿಕೆಟ್​​ಗಳ ಸಾಧನೆ ಮಾಡಿದ ಭಾರತದ ಮೊದಲ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಪಿಲ್ ದೇವ್, ವೆಂಕಟೇಶ್ ಪ್ರವಾಸ್, ರಾಬಿನ್ ಸಿಂಗ್​, ಆಶಿಶ್ ನೆಹ್ರಾ, ಯುವರಾಜ್ ಸಿಂಗ್​ ಅವರು ತಲಾ 1 ಬಾರಿ ವಿಶ್ವಕಪ್​​ನಲ್ಲಿ ಇನ್ನಿಂಗ್ಸ್​ವೊಂದರಲ್ಲಿ 5 ವಿಕೆಟ್​ಗಳ ಸಾಧನೆ ಮಾಡಿದ್ದಾರೆ.

ವಿಶ್ವಕಪ್​​ನಲ್ಲಿ ಅತಿ ಹೆಚ್ಚು ಬಾರಿ 4+ ವಿಕೆಟ್​​ಗಳ ಸಾಧನೆ

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇನ್ನಿಂಗ್ಸ್​​ವೊಂದರಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್​ ಪಡೆದ ಬೌಲರ್​​ಗಳ ಪಟ್ಟಿಯಲ್ಲಿ ಶಮಿ ಜಂಟಿ 2ನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್​ 6 ಬಾರಿ 4+ ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ಶಮಿ ಮತ್ತು ಇಮ್ರಾನ್ ತಾಹೀರ್​ ತಲಾ 5 ಬಾರಿ 4+ ವಿಕೆಟ್ ಕಬಳಿಸಿದ್ದಾರೆ. ಆದರೆ ಭಾರತದ ಪರ ಈ ಸಾಧನೆ ಮಾಡಿದ ಮೊದಲ ಬೌಲರ್​​ ಎಂಬ ದಾಖಲೆ ಶಮಿ ಪಾಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ