ಗುಜರಾತ್ ವಿರುದ್ಧ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್; ಸೂರ್ಯ, ವಿಲಿಯಮ್ಸನ್ ಸೇರಿ ಉಭಯ ತಂಡಗಳ ಪರ ಸ್ಟಾರ್ ಆಟಗಾರರೇ ಅಲಭ್ಯ
Mar 24, 2024 07:27 PM IST
ಗುಜರಾತ್ ವಿರುದ್ಧ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್
- Gujarat Titans vs Mumbai Indians : ಐಪಿಎಲ್-2024ರ ಐದನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ ಐಪಿಎಲ್ನ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ (Gujarat Titans vs Mumbai Indians) ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಕದನದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಶುಭ್ಮನ್ ಗಿಲ್ (Shubman Gill) ನೇತೃತ್ವದ ಜಿಟಿ ಮೊದಲು ಬ್ಯಾಟಿಂಗ್ ನಡೆಸಲಿದ್ದು, ಬೃಹತ್ ಮೊತ್ತ ಕಲೆ ಗುರಿ ಹಾಕಿಕೊಂಡಿದೆ.
ಯಾರಿಗೆ ಅವಕಾಶ? ಯಾರು ಔಟ್?
ನಾಲ್ವರು ವೇಗಿಗಳು, ಮೂವರು ಸ್ಪಿನ್ನರ್ ಮತ್ತು ಏಳು ಬ್ಯಾಟರ್ಸ್ ಕಾಂಬಿನೇಷನ್ನೊಂದಿಗೆ ಮುಂಬೈ ತಂಡ ಕಣಕ್ಕಿಳಿಯುತ್ತಿದೆ. ಮತ್ತೊಂದೆಡೆ ಇಂಜುರಿಯಿಂದ ಚೇತರಿಕೆ ಕಾಣುತ್ತಿರುವ ಸೂರ್ಯಕುಮಾರ್ ಅಲಭ್ಯರಾಗಿದ್ದಾರೆ. ಅವರ ಸ್ಥಾನದಲ್ಲಿ ನಮನ್ ಧೀರ್ ಕಣಕ್ಕಿಳಿಯಲಿದ್ದಾರೆ. ಇನ್ನು ಸೌತ್ ಆಫ್ರಿಕಾದ ಜೆರಾಲ್ಡ್ ಕೊಯೆಟ್ಜಿ, ಶಮ್ಸ್ ಮುಲಾನಿ, ಲ್ಯೂಕ್ ವುಡ್ ಇದೇ ಮೊದಲ ಬಾರಿ ಮುಂಬೈ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಹಾಗೆಯೇ ಗುಜರಾತ್ ಪರ ಕೇನ್ ವಿಲಿಯಮ್ಸನ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲಿಲ್ಲ. ಅವರ ಬದಲಿಗೆ ಅಜ್ಮತುಲ್ಲಾ ಒಮರ್ಜಾಯ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ಅಜ್ಮತುಲ್ಲಾ ಒಮರ್ಜಾಯ್ ಅವರು ಪದಾರ್ಪಣೆ ಮಾಡಿದ್ದಾರೆ. ಇನ್ನು ಕಳೆದ ಎರಡು ಆವೃತ್ತಿಗಳಲ್ಲಿ ಫಿನಿಷರ್ ಆಗಿದ್ದ ಅಭಿನವ್ ಮನೋಹರ್ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದಾರೆ.
ಉಭಯ ತಂಡಗಳ ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 04
ಗುಜರಾತ್ ಗೆಲುವು - 02
ಮುಂಬೈ ಗೆಲುವು - 02
ಎರಡು ತಂಡಗಳ ನಡುವೆ ಗರಿಷ್ಠ ಸ್ಕೋರ್ - 233 (ಜಿಟಿ)
ಎರಡು ತಂಡಗಳ ನಡುವೆ ಕನಿಷ್ಠ ಸ್ಕೋರ್ - 152 (ಎಂಐ)
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI)
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೊಯೆಟ್ಜಿ, ಜಸ್ಪ್ರೀತ್ ಬುಮ್ರಾ, ಲ್ಯೂಕ್ ವುಡ್.
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI)
ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.
ಗುಜರಾತ್ ಟೈಟಾನ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್ : ಬಿಆರ್ ಶರತ್, ಮೋಹಿತ್ ಶರ್ಮಾ, ಮಾನವ್ ಸುತಾರ್, ಅಭಿನವ್ ಮನೋಹರ್, ನೂರ್ ಅಹ್ಮದ್
ಮುಂಬೈ ಇಂಡಿಯನ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್ : ಡೆವಾಲ್ಡ್ ಬ್ರೆವಿಸ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ನೆಹಾಲ್ ವಧೇರಾ, ಮೊಹಮ್ಮದ್ ನಬಿ.