logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಾರೆವ್ಹಾ! ಎಂಎಸ್ ಧೋನಿಯನ್ನು ನೆನಪಿಸಿದ ಮುಶೀರ್​ ಖಾನ್ ಹೆಲಿಕಾಪ್ಟರ್ ಶಾಟ್; ವಿಡಿಯೋ ಇಲ್ಲಿದೆ

ವಾರೆವ್ಹಾ! ಎಂಎಸ್ ಧೋನಿಯನ್ನು ನೆನಪಿಸಿದ ಮುಶೀರ್​ ಖಾನ್ ಹೆಲಿಕಾಪ್ಟರ್ ಶಾಟ್; ವಿಡಿಯೋ ಇಲ್ಲಿದೆ

Prasanna Kumar P N HT Kannada

Jan 31, 2024 11:54 AM IST

google News

ಎಂಎಸ್ ಧೋನಿಯನ್ನು ನೆನಪಿಸಿದ ಮುಶೀರ್​ ಖಾನ್ ಹೆಲಿಕಾಪ್ಟರ್ ಶಾಟ್.

    • 131 ರನ್ ಗಳಿಸುವ ಹಾದಿಯಲ್ಲಿ, ಮುಶೀರ್ ಅಪ್ರತಿಮ ಹೆಲಿಕಾಪ್ಟರ್ ಶಾಟ್ ಅನ್ನು ಕಾರ್ಯಗತಗೊಳಿಸಿದರು, ಮಧ್ಯಮ ವಿಕೆಟ್ನಲ್ಲಿ ಭಾರಿ ಸಿಕ್ಸರ್ ಬಾರಿಸಿದರು, ಬಹುಶಃ ಧೋನಿಗಿಂತಲೂ ಉತ್ತಮವಾಗಿದ್ದರು.
ಎಂಎಸ್ ಧೋನಿಯನ್ನು ನೆನಪಿಸಿದ ಮುಶೀರ್​ ಖಾನ್ ಹೆಲಿಕಾಪ್ಟರ್ ಶಾಟ್.
ಎಂಎಸ್ ಧೋನಿಯನ್ನು ನೆನಪಿಸಿದ ಮುಶೀರ್​ ಖಾನ್ ಹೆಲಿಕಾಪ್ಟರ್ ಶಾಟ್.

ಐಸಿಸಿ ಅಂಡರ್​​-19 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್​ ಸಿಕ್ಸ್ ಹಂತದ ಪಂದ್ಯದಲ್ಲಿ (ICC U-19 World Cup 2023) ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಶತಕ ಸಿಡಿಸಿದ ಮುಶೀರ್​ ಖಾನ್ (Musheer Khan), ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಶೀರ್ ಬ್ಯಾಟಿಂಗ್​​ 131 ರನ್​ಗಳ ಜೊತೆಗೆ ಬೌಲಿಂಗ್​ನಲ್ಲೂ ಎರಡು ವಿಕೆಟ್ ಪಡೆದು ಮಿಂಚಿದರು. ಅದ್ಭುತ ಆಟದ ನೆರವಿನಿಂದ ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 214 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಧೋನಿಯನ್ನು ನೆನಪಿಸಿದ ಮುಶೀರ್ ಹೆಲಿಕಾಪ್ಟರ್ ಸಿಕ್ಸ್​

ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುಶೀರ್, ಅಪ್ರತಿಮ ಹೆಲಿಕಾಪ್ಟರ್ ಶಾಟ್ ಪ್ಲೇ ಮಾಡಿ ಗಮನ ಸೆಳೆದಿದ್ದಾರೆ. ಆತ ಮಧ್ಯಮ ವಿಕೆಟ್​ನಲ್ಲಿ ಬಾರಿಸಿದ ಹೆಲಿಕಾಪ್ಟರ್ ಸಿಕ್ಸರ್​ ಧೋನಿಯನ್ನು ನೆನಪಿಸಿದೆ. ಎಂಎಸ್ ಧೋನಿ ಅವರ ಐಕಾನಿಕ್ 'ಹೆಲಿಕಾಪ್ಟರ್' ಶಾಟ್ ಅನ್ನು ಮುಶೀರ್ ಖಾನ್ ಪುನರಾವರ್ತಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಬ್ಲೋಮ್‌ಫಾಂಟೈನ್​ನ​ ಮಂಗಾಂಗ್ ಓವಲ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್​ನ 46 ನೇ ಓವರ್​​​ನಲ್ಲಿ ಮುಶೀರ್ ಸಿಕ್ಸರ್ ಸಿಡಿಸಿದರು. ಶಿಖರ್ ಧವನ್ (2004ರಲ್ಲಿ 3 ಶತಕಗಳು) ನಂತರ ಒಂದೇ ಅಂಡರ್ 19 ವಿಶ್ವಕಪ್​ ಆವೃತ್ತಿಯಲ್ಲಿ ಹೆಚ್ಚು ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟ್ಸ್​​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಲಗೈ ವೇಗದ ಬೌಲರ್ ಮೇಸನ್ ಕ್ಲಾರ್ಕ್ ನಿಧಾನಗತಿಯ ಎಸೆತವನ್ನು ನೀಡಿದರು. 18 ವರ್ಷದ ಭಾರತದ ಬ್ಯಾಟರ್​ ಮಧ್ಯಮ ವಿಕೆಟ್​​​ನಲ್ಲಿ ಅತ್ಯಮೋಘ ಹೆಲಿಕಾಪ್ಟರ್​ ಸಿಕ್ಸರ್​ ಬಾರಿಸಿದರು. ಈ ಸಿಕ್ಸರ್​ ನೋಡಿದ ಸಹ ಆಟಗಾರರು ಶಾಕ್ ಆದರು.

126 ಎಸೆತಗಳಲ್ಲಿ 131 ರನ್ ಬಾರಿಸಿದ ಮುಶೀರ್ ತಮ್ಮ ಮ್ಯಾರಥಾನ್ ಇನ್ನಿಂಗ್ಸ್​ನಲ್ಲಿ 13 ಬೌಂಡರಿಗಳು ಮತ್ತು ಮೂರು ಸಿಕ್ಸರ್​​ಗಳಿವೆ. ಆರಂಭಿಕ ಆಟಗಾರ ಆದರ್ಶ್ ಸಿಂಗ್ ಅವರೊಂದಿಗೆ ಐವತ್ತು ರನ್​​ಗಳ ಜೊತೆಯಾಟವಾಡಿದ ಮುಶೀರ್, ನಾಯಕ ಉದಯ್ ಶರಣ್ ಅವರೊಂದಿಗೆ 87 ರನ್​ಗಳ ಪಾಲುದಾರಿಕೆ ನೀಡಿದರು. ಅಲ್ಲದೆ, ಉದಯ್ 34 ರನ್ ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಭಾರತ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 295 ರನ್​​ಗಳ ಸ್ಕೋರ್ ಕಲೆ ಹಾಕಿತು.

ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್​, ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆರಂಭದಿಂದಲೂ ಹಿನ್ನಡೆ ಅನುಭವಿಸಿದ ಕಿವೀಸ್ ಆಟಗಾರರು 28.1 ಓವರ್​​ಗಳಿಗೆ 81 ರನ್ ಗಳಿಸಿ ಸರ್ವಪತನವಾಯಿತು. ಇದಕ್ಕೆ ಉತ್ತರವಾಗಿ ಸೌಮ್ಯ ಪಾಂಡೆ 19 ರನ್ ನೀಡಿ 4 ವಿಕೆಟ್ ಕಬಳಿಸಿದರು. ರಾಜ್ ಲಿಂಬಾನಿ ಮತ್ತು ಮುಶೀರ್ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ ಸತತ ಮೂರನೇ ಬಾರಿಗೆ 200ಕ್ಕೂ ಅಧಿಕ ರನ್​ಗಳ ಜಯ ಸಾಧಿಸಿ ಸೆಮಿಫೈನಲ್​​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಭಾರತ ತನ್ನ ಕೊನೆಯ ಸೂಪರ್ ಸಿಕ್ಸ್ ಪಂದ್ಯವನ್ನು ಫೆಬ್ರವರಿ 2 ರಂದು ನೇಪಾಳ ವಿರುದ್ಧ ಆಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ