logo
ಕನ್ನಡ ಸುದ್ದಿ  /  ಕ್ರಿಕೆಟ್  /  Virat Kohli: ಇನ್​ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್​ಗೆ 11.45 ಕೋಟಿ ಗಳಿಸುತ್ತೇನೆ ಎಂಬುದು ಶುದ್ಧ ಸುಳ್ಳು; ವದಂತಿಗಳಿಗೆ ತೆರೆ ಎಳೆದ ಕೊಹ್ಲಿ

Virat Kohli: ಇನ್​ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್​ಗೆ 11.45 ಕೋಟಿ ಗಳಿಸುತ್ತೇನೆ ಎಂಬುದು ಶುದ್ಧ ಸುಳ್ಳು; ವದಂತಿಗಳಿಗೆ ತೆರೆ ಎಳೆದ ಕೊಹ್ಲಿ

Prasanna Kumar P N HT Kannada

Aug 12, 2023 01:52 PM IST

google News

ಸಾಮಾಜಿಕ ಮಾಧ್ಯಮದಿಂದ ಆದಾಯ ಗಳಿಸುವ ಕುರಿತು ಎದ್ದಿರುವ ವದಂತಿಗಳಿಗೆ ತೆರೆ ಎಳೆದ ಕೊಹ್ಲಿ.

    • Virat Kohli: ನನ್ನ ಸಾಮಾಜಿಕ ಮಾಧ್ಯಮ ಗಳಿಕೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ ಎಂದು ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಿಂದ ಆದಾಯ ಗಳಿಸುವ ಕುರಿತು ಎದ್ದಿರುವ ವದಂತಿಗಳಿಗೆ ತೆರೆ ಎಳೆದ ಕೊಹ್ಲಿ.
ಸಾಮಾಜಿಕ ಮಾಧ್ಯಮದಿಂದ ಆದಾಯ ಗಳಿಸುವ ಕುರಿತು ಎದ್ದಿರುವ ವದಂತಿಗಳಿಗೆ ತೆರೆ ಎಳೆದ ಕೊಹ್ಲಿ.

ಸಾಮಾಜಿಕ ಮಾಧ್ಯಮ ಇನ್​ಸ್ಟಾಗ್ರಾಂನಲ್ಲಿ (Instagram) ಪ್ರತಿ ಪೋಸ್ಟ್​ಗೆ 11.45 ಕೋಟಿ ಗಳಿಸುತ್ತೇನೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದು ಭಾರತೀಯ ಕ್ರಿಕೆಟ್​ನ ಸೂಪರ್ ಸ್ಟಾರ್ ಆಟಗಾರ, ಮಾಜಿ ನಾಯಕ ವಿರಾಟ್​ ಕೊಹ್ಲಿ (Virat Kohli) ಸ್ಪಷ್ಟಡಿಸಿದ್ದಾರೆ. ಆಗಸ್ಟ್ 11ರಂದು ಸೋಷಿಯಲ್ ಮೀಡಿಯಾ (Social Media) ಸೇರಿದಂತೆ ಮಾಧ್ಯಮಗಳಲ್ಲಿ ಈ ಸುದ್ದಿ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು. ಇದೀಗ ತನ್ನ ಕುರಿತು ಎದ್ದಿರುವ ಎಲ್ಲಾ ವದಂತಿಗಳಿಗೆ ಸ್ವತಃ ಕೊಹ್ಲಿಯೇ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ.

ಕಿಂಗ್​ ಕೊಹ್ಲಿ ಅಲ್ಲದೆ ಇನ್‌ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ಗೆ ಜನಪ್ರಿಯ ವ್ಯಕ್ತಿಗಳು ಎಷ್ಟೆಲ್ಲಾ ಸಂಪಾದನೆ ಮಾಡುತ್ತಾರೆ ಎಂಬ ಕುರಿತು ಹೂಪರ್ ಹೆಚ್‌ಕ್ಯು ವರದಿ ಮಾಡಿತ್ತು. ಈ ವರದಿಯನ್ನಾಧರಿಸಿ ಎಲ್ಲಾ ಮಾಧ್ಯಮಗಳು ಸಹ ಇದೇ ರೀತಿ ಸುದ್ದಿ ಮಾಡಿದ್ದವು. ಈ ವರದಿಯಂತೆ ಪ್ರತಿ ಪೋಸ್ಟ್​ಗೆ ರೊನಾಲ್ಡೊ, ಮೆಸ್ಸಿ ನಂತರ ಕೊಹ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಜಗತ್ತಿನ 3ನೇ ಕ್ರೀಡಾ ಪಟು ಎನಿಸಿದ್ದರು. ಇದೀಗ ಕೊಹ್ಲಿ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಈ ಕುರಿತು ಟ್ವಿಟರ್​ ಮೂಲಕ ಪೋಸ್ಟ್ ಮಾಡಿರುವ ಕೊಹ್ಲಿ, ಈ ಮಾಹಿತಿ ಸುಳ್ಳು ಎಂದು ಬರೆದಿದ್ದಾರೆ.

ವಿರಾಟ್ ಕೊಹ್ಲಿ ಪೋಸ್ಟ್​ ಹೀಗಿದೆ

ನಾನು ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ. ಆದರೆ, ನನ್ನ ಸಾಮಾಜಿಕ ಮಾಧ್ಯಮ ಗಳಿಕೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ ಎಂದು ಭಾರತೀಯ ಕ್ರಿಕೆಟಿಗ ಟ್ವಿಟರ್ (ಎಕ್ಸ್​​​​)ನಲ್ಲಿ ಪೋಸ್ಟ್ ಬರೆದಿದ್ದಾರೆ. ಇದರೊಂದಿಗೆ ಇಷ್ಟು ದಿನಗಳಿಂದ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಆದರೆ ಗಳಿಕೆಯ ಸುದ್ದಿ ನಿಜವಾಗದಿದ್ದರೂ, ಅವರಿಗಿರುವ ಫಾಲೋವರ್ಸ್​ ಕ್ರಿಕೆಟ್​​ ಲೋಕದಲ್ಲಿ ಬೇರೆ ಯಾರಿಗೂ ಇಲ್ಲ. ಏಷ್ಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಏಕೈಕ ವ್ಯಕ್ತಿ.

256 ಮಿಲಿಯನ್ ಫಾಲೋವರ್ಸ್

ಇನ್​ಸ್ಟಾಗ್ರಾಂನಲ್ಲಿ 256 ಮಿಲಿಯನ್ ಫಾಲೋವರ್ಸ್​ ಅನ್ನು ಹೊಂದಿದ್ದಾರೆ. ಏಷ್ಯಾಖಂಡದಲ್ಲಿ ಯಾರೂ ಕೂಡ 100 ಮಿಲಿಯನ್ ಕೂಡ ದಾಟಿಲ್ಲ. 2ನೇ ಸ್ಥಾನದಲ್ಲಿ ಪ್ರಿಯಾಂಕ ಚೋಪ್ರಾ ಇದ್ದಾರೆ. ಆದರೆ ಅವರಿಗಿರುವ ಫಾಲೋವರ್ಸ್ ಸಂಖ್ಯೆ 87 ಮಿಲಿಯನ್ಸ್. ಇನ್ನು ವಿಶ್ವದಲ್ಲಿ ಫುಟ್ಬಾಲ್ ತಾರೆ ಕ್ರಿಸ್ಟಿಯಾಮನೊ ರೊನಾಲ್ಡೊ ಅವರು 600 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಏಕೈಕ ಮತ್ತು ಮೊದಲ ವ್ಯಕ್ತಿ ಎನಿಸಿದ್ದಾರೆ. ಅವರ ಹಿಂದೆ ಮತ್ತೊಬ್ಬ ದಿಗ್ಗಜ ಲಿಯೊನೆಲ್ ಮೆಸ್ಸಿ ಇರುವುದು ವಿಶೇಷ. ಮೆಸ್ಸಿಯನ್ನು 482 ಮಿಲಿಯನ್ ಮಂದಿ ಹಿಂಬಾಲಿಸುತ್ತಿದ್ದಾರೆ.

ಏಷ್ಯಾಕಪ್​, ವಿಶ್ವಕಪ್​ಗೆ ತಯಾರಿ

ವೆಸ್ಟ್ ಇಂಡೀಸ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಭಾರತಕ್ಕೆ ಮರಳಿರುವ ವಿರಾಟ್ ಕೊಹ್ಲಿ, ಸದ್ದಿಲ್ಲದೆ ಏಷ್ಯಾಕಪ್, ವಿಶ್ವಕಪ್​ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆರಿಬಿಯನ್ನರ ನಾಡಿನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ 76ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಕಿಂಗ್ ಕೊಹ್ಲಿ, ಏಕದಿನ ಸರಣಿಯ ಕೊನೆಯ 2 ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದರು. ಯುವ ಆಟಗಾರರಿಗೆ ಹೆಚ್ಚು ಹೆಚ್ಚು ಅವಕಾಶ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ