logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್; ಬೆಂಗಳೂರಿನ ವಿಶ್ವಕಪ್ ಪಂದ್ಯಗಳಿಗೆ ಪೇಪರ್‌ ಟಿಕೆಟ್‌ ವಿತರಣೆ

ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್; ಬೆಂಗಳೂರಿನ ವಿಶ್ವಕಪ್ ಪಂದ್ಯಗಳಿಗೆ ಪೇಪರ್‌ ಟಿಕೆಟ್‌ ವಿತರಣೆ

Prasanna Kumar P N HT Kannada

Oct 20, 2023 06:30 AM IST

google News

ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್.

    • ಬೆಂಗಳೂರಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿಯ (World Cup Cricket 2023) ಪಂದ್ಯಗಳಿರುವ ದಿನ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ.
ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್.
ಕ್ರಿಕೆಟ್ ಪ್ರೇಮಿಗಳಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್.

ಅಕ್ಟೋಬರ್​ 20ರಿಂದ ಬೆಂಗಳೂರಿನಲ್ಲಿ ಕ್ರಿಕೆಟ್​ ವಿಶ್ವಕಪ್ ಪಂದ್ಯಗಳು ಆರಂಭವಾಗಲಿವೆ. ಆಸ್ಟ್ರೇಲಿಯಾ-ಪಾಕಿಸ್ತಾನ ತಂಡಗಳು (Australia vs Pakistan) ಸೆಣಸಾಟ ನಡೆಸಲಿವೆ. ಹಾಗಾಗಿ, ಕ್ರಿಕೆಟ್​ ಅಭಿಮಾನಿಗಳಿಗೆ ನಮ್ಮ ಮೆಟ್ರೋ (Namma Metro) ರೈಲು ನಿಗಮ ನಿಯಮಿತ (BMRCL) ದೊಡ್ಡ ಆಫರ್​ವೊಂದನ್ನು ನೀಡಿದೆ.

ಬೆಂಗಳೂರಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿಯ (World Cup Cricket 2023) ಪಂದ್ಯಗಳಿರುವ ದಿನ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ ಮಾಡಲಾಗಿದೆ. ಜೊತೆಗೆ ವಿಶೇಷ ದರದ ರಿಯಾಯಿತಿ ಪ್ರಕಟಿಸಲಾಗಿದೆ. ಪಂದ್ಯ ಮುಗಿದ ಬಳಿಕ ಮನೆಗೆ ತೆರಳಲು ಕಷ್ಟಕರವಾಗಬಾರದೆಂದು ಅವಧಿಯನ್ನು ವಿಸ್ತರಿಸಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಪಂದ್ಯಗಳು

  • ಅಕ್ಟೋಬರ್ 20: ಆಸ್ಟ್ರೇಲಿಯಾ vs ಪಾಕಿಸ್ತಾನ, ಮಧ್ಯಾಹ್ನ 2 ಗಂಟೆಗೆ
  • ಅಕ್ಟೋಬರ್ 26: ಇಂಗ್ಲೆಂಡ್ vs ಶ್ರೀಲಂಕಾ, ಮಧ್ಯಾಹ್ನ 2 ಗಂಟೆಗೆ
  • ನವೆಂಬರ್ 4: ನ್ಯೂಜಿಲೆಂಡ್ vs ಪಾಕಿಸ್ತಾನ, ಬೆಳಗ್ಗೆ 10:30
  • ನವೆಂಬರ್ 9: ನ್ಯೂಜಿಲೆಂಡ್ vs ಶ್ರೀಲಂಕಾ, ಮಧ್ಯಾಹ್ನ 2 ಗಂಟೆಗೆ
  • ನವೆಂಬರ್ 12: ಭಾರತ vs ನೆದರ್ಲೆಂಡ್ಸ್​, ಮಧ್ಯಾಹ್ನ 2 ಗಂಟೆಗೆ

ಏಕದಿನ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್​ ಪಂದ್ಯ ನಡೆಯಲಿದೆ. ನವೆಂಬರ್​ 12ರಂದು ಭಾರತ-ನೆದರ್ಲೆಂಡ್ಸ್​ ತಂಡಗಳು ಸೆಣಸಾಡಲಿವೆ. ಟೂರ್ನಿಯಲ್ಲಿ ನಡೆಯುವ ಎಲ್ಲಾ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ವಿಶೇಷ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಎಂಜಿ ರಸ್ತೆ, ಕಬ್ಬನ್‌ ಪಾರ್ಕ್ ಮೆಟ್ರೊ ನಿಲ್ದಾಣಗಳಲ್ಲಿ ಜನಸಂದಣಿ ಕಡಿಮೆ ಮಾಡುವುದೇ ಇದರ ಉದ್ದೇಶ.

50 ರೂಪಾಯಿ ಪೇಪರ್‌ ಟಿಕೆಟ್‌

ಪೇಪರ್‌ ಟಿಕೆಟ್​ನ ಬೆಲೆ 50 ರೂಪಾಯಿ. ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಪೇಪರ್‌ ಟಿಕೆಟ್‌ ಲಭ್ಯವಿರುತ್ತದೆ. ಪಂದ್ಯ ಆರಂಭಕ್ಕೂ ಮುನ್ನ ಪೇಪರ್‌ ಟಿಕೆಟ್‌ ಖರೀದಿಸಿದರೆ ಪಂದ್ಯ ಮುಗಿದ ಬಳಿಕ ಅಡಚಣೆಯಿಲ್ಲದೆ ಪ್ರಯಾಣಿಸಬಹುದು. ಸ್ಮಾರ್ಟ್ ಕಾರ್ಡ್ ಹಾಗೂ ಎನ್​ಸಿಎಂಸಿ ವ್ಯವಸ್ಥೆಯನ್ನೂ ಪ್ರಯಾಣಿಕರು ಪಡೆಯಬಹುದು ಎಂದು ಈ ಬಗ್ಗೆ ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿದೆ.

ಎಲ್ಲಿ ಟಿಕೆಟ್ ಖರೀದಿಸಬಹುದು?

ನೀವು ವಾಟ್ಸಪ್, ನಮ್ಮ ಮೆಟ್ರೋ ಅಪ್ಲಿಕೇಶನ್, ಪೆಟಿಎಂ ಮತ್ತು ಯಾತ್ರಾ ಅಪ್ಲಿಕೇಶನ್ ಬಳಸಿ ಟಿಕೆಟ್​​ಗಳನ್ನು ಖರೀದಿಸಬಹುದು. ಇಲ್ಲಿ ಖರೀದಿಸಿದವರಿಗೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ. ವಾಟ್ಸಪ್​ ಸಂಖ್ಯೆ 81055-56677.

ಮೈದಾನದ ಸುತ್ತಲೂ ಬಿಗಿ ಬಂದೋಬಸ್ತ್

ಆಸ್ಟ್ರೇಲಿಯಾ-ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಂದು ಆಸ್ಟ್ರೇಲಿಯಾ-ಪಾಕಿಸ್ತಾನ (PAK vs AUS) ನಡುವಿನ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯುವ ಮೊದಲ ಪಂದ್ಯ.

ಆದರೆ, ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ (israel vs palestine) ನಡುವೆ ನಡೆಯುತ್ತಿರುವ ಭಾರಿ ಘರ್ಷಣೆಗೆ ಸಂಬಂಧಿಸಿ ನಗರದಲ್ಲಿ ಹಲೆವೆಡೆ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಮೈದಾನದ ಸುತ್ತಮುತ್ತ ಸರ್ಪಗಾವಲು ಹಾಕಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ