logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾಕಿಸ್ತಾನಕ್ಕೆ ಮತ್ತೆ ಬೆಂಡೆತ್ತಿದ್ದ ಆರ್​ಸಿಬಿ ಮಾಜಿ ಆಟಗಾರ; ನ್ಯೂಜಿಲೆಂಡ್​ಗೆ ಸತತ 2ನೇ ಗೆಲುವು

ಪಾಕಿಸ್ತಾನಕ್ಕೆ ಮತ್ತೆ ಬೆಂಡೆತ್ತಿದ್ದ ಆರ್​ಸಿಬಿ ಮಾಜಿ ಆಟಗಾರ; ನ್ಯೂಜಿಲೆಂಡ್​ಗೆ ಸತತ 2ನೇ ಗೆಲುವು

Jan 14, 2024 09:56 PM IST

New Zealand beat Pakistan: ಹ್ಯಾಮಿಲ್ಟನ್​​ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿದೆ.

  • New Zealand beat Pakistan: ಹ್ಯಾಮಿಲ್ಟನ್​​ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿದೆ.
ತಾನು ಎದುರಿಸುತ್ತಿದ್ದ ಎಲ್ಲಾ ಟೀಕೆಗಳಿಗೆ ತಿರುಗೇಟು ನೀಡಲು ಬಾಬರ್ ಅಜಮ್​ಗೆ ಅವಕಾಶವಿತ್ತು. ಪಾಕಿಸ್ತಾನದ ಮಾಜಿ ನಾಯಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಉತ್ತರ ನೀಡಬಹುದಿತ್ತು. ಆದರೆ, ಆ ಅವಕಾಶವನ್ನು ಕೈಚೆಲ್ಲಿದರು. ಬ್ಯಾಟಿಂಗ್ ಮೂಲಕ ಅರ್ಧಶತಕ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. 
(1 / 8)
ತಾನು ಎದುರಿಸುತ್ತಿದ್ದ ಎಲ್ಲಾ ಟೀಕೆಗಳಿಗೆ ತಿರುಗೇಟು ನೀಡಲು ಬಾಬರ್ ಅಜಮ್​ಗೆ ಅವಕಾಶವಿತ್ತು. ಪಾಕಿಸ್ತಾನದ ಮಾಜಿ ನಾಯಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಉತ್ತರ ನೀಡಬಹುದಿತ್ತು. ಆದರೆ, ಆ ಅವಕಾಶವನ್ನು ಕೈಚೆಲ್ಲಿದರು. ಬ್ಯಾಟಿಂಗ್ ಮೂಲಕ ಅರ್ಧಶತಕ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. (AFP)
ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಪಾಕಿಸ್ತಾನ 21 ರನ್‌ಗಳಿಂದ ಸೋಲು ಕಂಡಿತು. 195 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ, 3 ಎಸೆತಗಳು ಬಾಕಿ ಇರುವಂತೆ 173 ರನ್‌ಗಳಿಗೆ ಆಲೌಟಾಯಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
(2 / 8)

ಕೊನೆಯ 4 ಓವರ್‌ಗಳಲ್ಲಿ ಪಾಕಿಸ್ತಾನಕ್ಕೆ 59 ರನ್‌ಗಳ ಅಗತ್ಯ ಇತ್ತು. ಆಗಿನ್ನೂ ಬಾಬರ್ ಕ್ರೀಸ್​ನಲ್ಲೇ ಇದ್ದರು. ಆದರೆ ಇಷ್ಟು ರನ್ ಚೇಸ್​ ಮಾಡುವುದು ನಿಜಕ್ಕೂ ಕಠಿಣವಾಗಿತ್ತು. ಶಾಹೀನ್ ಶಾ ಅಫ್ರಿದಿ, ಬಾಬರ್ ಜೊತೆಗಿದ್ದರು. ಇಬ್ಬರು ಸೇರಿ ಮಿಚೆಲ್ ಸ್ಯಾಂಟ್ನರ್ ಓವರ್​​ನಲ್ಲಿ 17 ರನ್​ ಗಳಿಸಿ ಫೈಟ್​ ನೀಡಲು ಮುಂದಾದರು. ಆದರೆ, 18ನೇ ಓವರ್​​ನಲ್ಲಿ ಬಾಬರ್ ಔಟಾದ ಬೆನ್ನಲ್ಲೇ ಪಾಕ್​ ಗೆಲುವಿನ ಆಸೆ ಕಮರಿತು.
(3 / 8)

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಭರ್ಜರಿ ಆರಂಭ ಪಡೆಯಿತು. ಈ ಪಂದ್ಯದಲ್ಲೂ ಫಿನ್ ಅಲೆನ್, ಪಾಕಿಸ್ತಾನದ ಬೌಲರ್​​ಗಳ ಬೆವರಿಳಿಸಿದರು. ಡೆವೊನ್ ಕಾನ್ವೆ (20 ರನ್) ಜೊತೆ ಸೇರಿ ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 59 ರನ್‌ ಕಲೆ ಹಾಕಿದರು. ಆದರೆ ಫಿನ್ ಅಲೆನ್ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದರು.
(4 / 8)

ಸತತ ವಿಕೆಟ್​​ಗಳ ನಡುವೆಯೂ ಮಿಂಚಿದ ಆರ್​​ಸಿಬಿ ಮಾಜಿ ಆಟಗಾರ ಫಿನ್ ಅಲೆನ್, ಬೌಂಡರಿ-ಸಿಕ್ಸರ್​​​ಗಳ ಸುರಿಮಳೆಗೈದರು. 41 ಎಸೆತಗಳಲ್ಲಿ 5 ಸಿಕ್ಸರ್​, 7 ಬೌಂಡರಿ ಸಹಿತ 74 ರನ್ ಗಳಿಸಿದರು. ಇದು ಅವರ ನಾಲ್ಕನೇ ಟಿ20 ಅರ್ಧಶತಕ. ಕೇನ್ ವಿಲಿಯಮ್ಸನ್ 26 ರನ್, ಡೇರಿಲ್ ಮಿಚೆಲ್ 17, ಗ್ಲೆನ್ ಫಿಲಿಪ್ಸ್ 13, ಚಾಪ್​​ಮನ್ 4, ಸ್ಯಾಂಟ್ನರ್ 25 ರನ್ ಗಳಿಸಿದರು. ಅಂತಿಮವಾಗಿ ಕಿವೀಸ್​​ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 194 ರನ್ ಕಲೆ ಹಾಕಿತು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್ ಪಡೆದರು.
(5 / 8)

195 ರನ್​​ಗಳ ಗುರಿ ಬೆನ್ನಟ್ಟಿದ ಪಾಕ್, ಆರಂಭಿಕ ಡಬಲ್ ಆಘಾತ ಅನುಭವಿಸಿತು. ಸಯಿಮ್ ಅಯುಬ್ 1, ಮೊಹಮ್ಮದ್ ರಿಜ್ವಾನ್ 7 ರನ್ ಗಳಿಸಿ ಬೇಗನೆ ಔಟಾದರು. 10 ರನ್​ಗಳಿಗೆ ಆರಂಭಿಕರು ನಿರ್ಗಮಿಸಿದರು. ಆ ಬಳಿಕ ಬಾಬರ್ ಅಜಮ್ ಮತ್ತು ಫಖಾರ್ ಜಮಾನ್ ಅದ್ಭುತ ಪ್ರದರ್ಶನ ನೀಡಿದರು. 3ನೇ ವಿಕೆಟ್​ಗೆ ಈ ಜೋಡಿ 87 ರನ್​ ಜೊತೆಯಾಟವಾಡಿತು.
(6 / 8)

ಫಖಾರ್ 25 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸಹಿತ 50 ರನ್ ಗಳಿಸಿ ಔಟಾದರೆ, ಬಾಬರ್​ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 66 ರನ್ ಗಳಿಸಿದರು. ಇವರ ಅದ್ಭುತ ಆಟದ ನಂತರ ಪಾಕಿಸ್ತಾನ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು.
(7 / 8)

ಇಫ್ತಿಕಾರ್ ಅಹ್ಮದ್ 4, ಅಜಮ್ ಖಾನ್ 2, ಅಮೀರ್ ಜಮಲ್ 9, ಶಾಹೀನ್ ಅಫ್ರಿದಿ 22, ಅಬ್ಬಾಸ್ ಅಫ್ರಿದಿ 7 ರನ್, ಉಸಾಮ ಮಿರ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಆ್ಯಡಂ ಮಿಲ್ನೆ 4 ವಿಕೆಟ್ ಉರುಳಿಸಿ ಪಾಕ್ ಕುಸಿತಕ್ಕೆ ಕಾರಣರಾದರು. ಟಿಮ್ ಸೌಥಿ, ಬೆನ್ ಸಿಯರ್ಸ್, ಇಶ್ ಸೋಧಿ ತಲಾ 2 ವಿಕೆಟ್ ಪಡೆದರು. ಇದರೊಂದಿಗೆ ಕಿವೀಸ್ 21 ರನ್​ಗಳಿಂದ ಗೆದ್ದು ಬೀಗಿತು.
(8 / 8)

    ಹಂಚಿಕೊಳ್ಳಲು ಲೇಖನಗಳು