logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Nz: ಏಕದಿನ ವಿಶ್ವಕಪ್‌ನಲ್ಲಿ ಅಗ್ರ ಸ್ಥಾನಕ್ಕಾಗಿ ಭಾರತ-ನ್ಯೂಜಿಲೆಂಡ್ ಪೈಪೋಟಿ;20 ವರ್ಷಗಳ ದಾಖಲೆ ಬ್ರೇಕ್ ಮಾಡಲು ರೋಹಿತ್ ಪಡೆ ಸಿದ್ಧತೆ

IND vs NZ: ಏಕದಿನ ವಿಶ್ವಕಪ್‌ನಲ್ಲಿ ಅಗ್ರ ಸ್ಥಾನಕ್ಕಾಗಿ ಭಾರತ-ನ್ಯೂಜಿಲೆಂಡ್ ಪೈಪೋಟಿ;20 ವರ್ಷಗಳ ದಾಖಲೆ ಬ್ರೇಕ್ ಮಾಡಲು ರೋಹಿತ್ ಪಡೆ ಸಿದ್ಧತೆ

Raghavendra M Y HT Kannada

Oct 22, 2023 06:55 AM IST

google News

ಧರ್ಮಶಾಲಾದಲ್ಲಿ ಭಾರತ-ನ್ಯೂಜಿಲೆಂಡ್ ವಿಶ್ವಕಪ್ ಹಣಾಹಣಿ

  • ಧರ್ಮಶಾಲಾದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ವಿಶ್ವಕಪ್‌ನಲ್ಲಿ ನಂಬರ್ 1 ಸ್ಥಾನಕ್ಕಾಗಿ ಇಂದು (ಅಕ್ಟೋಬರ್ 22, ಭಾನುವಾರ) ಪೈಪೋಟಿ ನಡೆಸಲಿವೆ. ಕಿವೀಸ್ ವಿರುದ್ಧ ಟೀಂ ಇಂಡಿಯಾ 20 ವರ್ಷಗಳ ದಾಖಲೆಯನ್ನ ಮುರಿಯೋಕೆ ತಂತ್ರಗಳನ್ನು ರೂಪಿಸಿದೆ.

ಧರ್ಮಶಾಲಾದಲ್ಲಿ ಭಾರತ-ನ್ಯೂಜಿಲೆಂಡ್ ವಿಶ್ವಕಪ್ ಹಣಾಹಣಿ
ಧರ್ಮಶಾಲಾದಲ್ಲಿ ಭಾರತ-ನ್ಯೂಜಿಲೆಂಡ್ ವಿಶ್ವಕಪ್ ಹಣಾಹಣಿ

ಧರ್ಮಶಾಲಾ (ಹಿಮಾಚಲ ಪ್ರದೇಶ): ಐಸಿಸಿ ವಿಶ್ವಕಪ್‌ 2023ರ (ICC ODI World Cup 2023) ಆವೃತ್ತಿಯಲ್ಲಿನ 21ನೇ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ಇಂದು (ಅಕ್ಟೋಬರ್ 22, ಭಾನುವಾರ) ಧರ್ಮಶಾಲಾದಲ್ಲಿ ನಡೆಯಲಿದೆ. 2019ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಮಣಿಸಿದ್ದ ಕಿವೀಸ್ ಫೈನಲ್ ಪ್ರವೇಶಿಸಿತ್ತು. ಇದೀಗ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಟೀಂ ಇಂಡಿಯಾ ಕಾಯುತ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವಿಶ್ವಕಪ್‌ ಅಂಕಪಟ್ಟಿಯಲ್ಲಿ ನಂಬರ್ ಸ್ಥಾನವನ್ನು ಕಾಯ್ದುಕೊಳ್ಳಲು ಭಾರತ, ನ್ಯೂಜಿಲೆಂಡ್ ತಂಡಗಳ ನಡುವೆ ಹಾಲು ಏಣಿ ಆಟ ನಡೆಯುತ್ತಿದೆ. ಇವತ್ತಿನ ಪಂದ್ಯವನ್ನು ಗೆದ್ದು ನಂಬರ್ 1 ಸ್ಥಾನದಲ್ಲೇ ಮುಂದುವರಿಯಲು ರೋಹಿತ್ ಪಡೆ ಚಿಂತನೆ ನಡೆಸಿದೆ.

ಏಕದಿನ ಕ್ರಿಕೆಟ್‌ನಲ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾ ಮೇಲುಗೈ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿದೆ. ಆದರೆ ಐಸಿಸಿ ವಿಶ್ವಕಪ್‌ಗೆ ಬಂದಾಗ ಕಿವೀಸ್ ಪಡೆ ಭಾರತದ ವಿರುದ್ಧ ಕಳೆದ 20 ವರ್ಷಗಳಿಂದ ಸೋತೇ ಇಲ್ಲ ಅನ್ನೋದು ವಿಶೇಷ. ಧರ್ಮಶಾಲಾದಲ್ಲಿ ಆ ದಾಖಲೆ ಬ್ರೇಕ್ ಮಾಡುತ್ತ ಭಾರತದ ಬಳಗ ಚಿತ್ತನೆಟ್ಟಿದೆ.

ಈವರೆಗೆ ಆಡಿರುವ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ 58 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 50 ಪಂದ್ಯಗಳಲ್ಲಿ ಜಯವನ್ನು ತನ್ನದಾಗಿಸಿಕೊಂಡಿದೆ. ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ 5 ಪಂದ್ಯಗಳನ್ನು ಗೆದ್ದಿದೆ. ಆದರೆ ಭಾರತ 3ರಲ್ಲಿ ಜಯ ಕಂಡಿದೆ. 2003ರ ಬಳಿಗ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದೇ ಇಲ್ಲ. ಹೀಗಾಗಿ 20 ವರ್ಷಗಳ ಬಳಿಕ ಕಿವೀಸ್ ಪಡೆಯನ್ನ ಸೋಲಿಸಲೇಬೇಕೆಂದು ರೋಹಿತ್ ಅಂಡ್ ಟೀಂ ಪಣತೊಟ್ಟಿದೆ.

2019ರ ವಿಶ್ವಕಪ್ ಸೆಮಿ ಫೈನಲ್ ಸೋಲಿನ ನಂತರ ಟೀಂ ಇಂಡಿಯಾ, ಮೊದಲ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಕಿವೀಸ್ ವಿರುದ್ಧ ಪರಾಭವಗೊಂಡಿದೆ. ಹಿಂದಿನ ಟೂರ್ನಿಗಳಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ವಿಶ್ವಕಪ್‌ನಲ್ಲಿ ರೋಹಿತ್ ಪಡೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್, ಬೌಲಂಗ್ ಎರಡರಲ್ಲೂ ಒಗ್ಗಟ್ಟಿನ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಆಡಿರುವ 4 ಪಂದ್ಯಗಳನ್ನು ಗೆದ್ದುಕೊಂಡಿದೆ. ಇಂದು ಟಾಮ್ ಲ್ಯಾಥಮ್ ಪಡೆಯನ್ನ ಮಣಿಸಿ 5ನೇ ಗೆಲುವು ದಾಖಲಿಸುವ ಯೋಜನೆಯಲ್ಲಿದೆ.

ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಬಲಿಷ್ಠ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ, ಹಾಲಿ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನೊಳಗೊಂಡ ಭಾರತದ ಬ್ಯಾಟಿಂಗ್ ಲೈನ್‌ಅಪ್ ತುಂಬಾ ಬಲಿಷ್ಠವಾಗಿದೆ. ರೋಹಿತ್ ಶರ್ಮಾ ನಾಲ್ಕು ಪಂದ್ಯಗಳಿಂದ 265 ರನ್ ಬಾರಿಸಿದ್ದು, ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 259 ರನ್ ಗಳಿಸಿರುವ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.

ಆರಂಭಿಕ ಉತ್ತಮ ಅಡಿಪಾಯವನ್ನು ಹಾಕುತ್ತಿದ್ದಾರೆ. ಎದುರಾಳಿ ತಂಡ ನೀಡುವ ಗುರಿಯನ್ನು 42 ಓವರ್‌ಗಳ ಒಳಗೆಯೇ ಮುಟ್ಟುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಂಡಕ್ಕೆ ಗಮನಾರ್ಹವಾದ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಈ ಇಬ್ಬರು ಬೌಲರ್‌ಗಳು ವಿಕೆಟ್ ಪಡೆಯುವ ಜೊತೆಗೆ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ನೆರವಾಗುತ್ತಿದ್ದಾರೆ.

ಹೇಗಿದೆ ನ್ಯೂಜಿಲೆಂಡ್ ತಂಡದ ಪ್ರದರ್ಶನ

ನ್ಯೂಜಿಲೆಂಡ್ ತಂಡದ ಬಗ್ಗೆ ಹೇಳುವುದಾರೆ ಈ ಬಾರಿಯ ವಿಶ್ವಕಪ್‌ನಲ್ಲಿ ಕಿವೀಸ್ ಪಡೆಯು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, ಈವರೆಗೆ ಆಡಿರುವ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡಿದೆ.

ಪೂರ್ಣ ಪ್ರಮಾಣದ ನಾಯಕ ಕೇನ್ ವಿಲಿಯಮ್ಸನ್ ಅವರ ಅಲಭ್ಯಯ ನಡುವೆ ತಂಡವನ್ನು ಟಾಮ್ ಲಥಾಮ್ ತಂಡವನ್ನು ಚೆನ್ನಾಗಿಯೇ ಮುನ್ನಡೆಸುತ್ತಿದ್ದಾರೆ. ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಕೇನ್ ವಿಲಿಯಮ್ಸನ್ ಕೆಲವು ವಾರಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆ ಇದೆ. ಐಪಿಎಲ್‌ನಲ್ಲಿ ಉತ್ತಮ ದಾಖಲೆಗಳನ್ನು ಹೊಂದಿರುವ ಡೆವೊನ್ ಕಾನ್ವೆ ಫಾರ್ಮ್‌ನಲ್ಲಿದ್ದಾರೆ.

ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಗ್ಲೆನ್ ಫಿಲಿಪ್ಸ್ ಮತ್ತು ನಾಯಕ ಟಾಲ್ ಲಾಥಮ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಒಟ್ಟಾರೆಯಾಗಿ ಇಂದು (ಅಕ್ಟೋಬರ್ 22, ಭಾನುವಾರ) ಎರಡು ಬಲಿಷ್ಠ ತಂಡಗಳ ನಡುವಿನ ಪೈಪೋಟಿ ಕ್ರಿಕೆಟ್‌ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ