ಪ್ರೊ ಕಬಡ್ಡಿ ಲೀಗ್-10; ಇಲ್ಲಿದೆ 12 ತಂಡಗಳು, ದುಬಾರಿ ಆಟಗಾರ, ರೈಡರ್ಸ್, ಡಿಫೆಂಡರ್ಸ್ ಪಟ್ಟಿ
Nov 26, 2023 03:07 PM IST
ಪ್ರೊ ಕಬಡ್ಡಿ ಲೀಗ್-10.
- Pro Kabaddi League 2023: ಪ್ರೊ ಕಬಡ್ಡಿ ಲೀಗ್ನ 12 ಎಲ್ಲಾ ತಂಡಗಳಲ್ಲಿ ಆಟಗಾರರು ಯಾರಿದ್ದಾರೆ? ನಾಯಕ, ಮಾಲೀಕ ಯಾರು? ತಂಡದ ದುಬಾರಿ ಆಟಗಾರರು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಎಲೆಕ್ಟ್ರಿಫೈಯಿಂಗ್ ಪ್ರೊ ಕಬಡ್ಡಿ ಲೀಗ್-2023 (Pro Kabaddi League 2023) ಟೂರ್ನಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 2 ರಿಂದ ಫೆಬ್ರವರಿ 21ರವರೆಗೂ ನಡೆಯಲಿದೆ. ಅಹ್ಮದಾಬಾದ್ನಲ್ಲಿ ಜರುಗಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಒಟ್ಟು 12 ನಗರಗಳು ಈ ಲೀಗ್ಗೆ ಆತಿಥ್ಯ ವಹಿಸುತ್ತಿವೆ.
ಎಲ್ಲಾ ತಂಡಗಳು ಪ್ರತಿ ನಗರದಲ್ಲೂ ತಲಾ 6 ಪಂದ್ಯಗಳು ನಡೆಯಲಿವೆ. ಆರಂಭದಲ್ಲಿ ಅಹಮದಾಬಾದ್, ನಂತರ ಬೆಂಗಳೂರು, ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ, ಹೈದರಾಬಾದ್, ಪಾಟ್ನಾ, ದೆಹಲಿ, ಕೋಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿವೆ. ಇನ್ನು ಎಲ್ಲಾ ತಂಡಗಳಲ್ಲಿ ಆಟಗಾರರು ಯಾರಿದ್ದಾರೆ? ನಾಯಕ, ಮಾಲೀಕ ಯಾರು? ತಂಡದ ದುಬಾರಿ ಆಟಗಾರು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
1. ಬೆಂಗಾಲ್ ವಾರಿಯರ್ಸ್
ಮಾಲೀಕರು: ಕ್ಯಾಪ್ರಿ ಸ್ಪೋರ್ಟ್ಸ್
ನಾಯಕ: ಮಣಿಂದರ್ ಸಿಂಗ್
ತಂಡದ ದುಬಾರಿ ಆಟಗಾರ: ಮಣಿಂದರ್ ಸಿಂಗ್, 2.12 ಕೋಟಿ
ಒಟ್ಟು ಆಟಗಾರರು: 19
2. ಬೆಂಗಳೂರು ಬುಲ್ಸ್
ಮಾಲೀಕರು: ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್
ನಾಯಕ: ವಿಕಾಶ್ ಕಂಡೋಲ (ಸಂಭವ ಕ್ಯಾಪ್ಟನ್
ದುಬಾರಿ ಆಟಗಾರ: ವಿಕಾಶ್ ಖಂಡೋಲ, 55.25 ಲಕ್ಷ
ಒಟ್ಟು ಆಟಗಾರರು: 25
3. ದಬಾಂಗ್ ಡೆಲ್ಲಿ ಕೆಸಿ
ಮಾಲೀಕರು: ರಾಧಾ ಕಪೂರ್ ಖನ್ನಾ
ನಾಯಕ: ನವೀನ್ ಕುಮಾರ್
ದುಬಾರಿ ಆಟಗಾರ: ಆಶು ಮಲಿಕ್, 96.25 ಲಕ್ಷ
ಒಟ್ಟು ಆಟಗಾರರು: 20
4. ಗುಜರಾತ್ ಜೈಂಟ್ಸ್
ಮಾಲೀಕರು: ಗೌತಮ್ ಅದಾನಿ
ನಾಯಕ: ಫಝಲ್ ಅತ್ರಾಚಲಿ
ದುಬಾರಿ ಆಟಗಾರ: ಫಝಲ್ ಅತ್ರಾಚಲಿ, 1.60 ಕೋಟಿ
ಒಟ್ಟು ಆಟಗಾರರು: 20
5. ಹರಿಯಾಣ ಸ್ಟೀಲರ್ಸ್
ಮಾಲೀಕರು: ಜೆಎಸ್ಡಬ್ಲ್ಯು ಗ್ರೂಪ್
ನಾಯಕ: ಜೈದೀಪ್ (ಸಂಭವ)
ದುಬಾರಿ ಆಟಗಾರ: ಸಿದ್ಧಾರ್ಥ್ ದೇಸಾಯಿ, 1 ಕೋಟಿ
ಒಟ್ಟು ಆಟಗಾರರು: 21
6. ಜೈಪುರ ಪಿಂಕ್ ಪ್ಯಾಂಥರ್ಸ್
ಮಾಲೀಕರು: ಅಭಿಷೇಕ್ ಬಚ್ಚನ್
ನಾಯಕ: ಸುನಿಲ್ ಮಲಿಕ್
ದುಬಾರಿ ಆಟಗಾರ: ರಾಹುಲ್ ಚೌದರಿ, 13 ಲಕ್ಷ
ಒಟ್ಟು ಆಟಗಾರರು: 19
7. ಪಾಟ್ನಾ ಪೈರೇಟ್ಸ್
ಮಾಲೀಕರು: ನರೇಂದ್ರ ಕುಮಾರ್ ರೆಧು
ನಾಯಕ: ನೀರಜ್ ಕುಮಾರ್ (ಸಂಭವ)
ದುಬಾರಿ ಆಟಗಾರ: ಮಂಜೀತ್, 13 ಲಕ್ಷ
ಒಟ್ಟು ಆಟಗಾರರು: 22
8. ಪುಣೇರಿ ಪಲ್ಟನ್
ಮಾಲೀಕರು: ಇನ್ಸುರೆಕೋಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್
ನಾಯಕ: ಅಸ್ಲಂ ಇನಾಮದಾರ
ದುಬಾರಿ ಆಟಗಾರ: ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆ, 2.35 ಕೋಟಿ
ಒಟ್ಟು ಆಟಗಾರರು: 18
9. ತಮಿಳ್ ತಲೈವಾಸ್
ಮಾಲೀಕರು: ಮ್ಯಾಗ್ನಮ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್
ನಾಯಕ: ಸಾಗರ್ ರಥಿ (ಸಂಭವ)
ದುಬಾರಿ ಆಟಗಾರ: ಮಸಣಮುತ್ತು ಲಕ್ಷ್ಣಣನ್, 31.60 ಲಕ್ಷ
ಒಟ್ಟು ಆಟಗಾರರು: 21
10. ತೆಲುಗು ಟೈಟಾನ್ಸ್
ಮಾಲೀಕರು: ವೀರಾ ಸ್ಪೋರ್ಟ್ಸ್ ಯೂನಿಲೇಜರ್ ವೆಂಚರ್ಸ್
ನಾಯಕ: ಪವನ್ ಕುಮಾರ್ ಸೆಹ್ರಾವತ್
ದುಬಾರಿ ಆಟಗಾರ: ಪವನ್ ಕುಮಾರ್ ಸೆಹ್ರಾವತ್, 2.6 ಕೋಟಿ
ಒಟ್ಟು ಆಟಗಾರರು: 18
11. ಯು ಮುಂಬಾ
ಮಾಲೀಕರು: ಯುನಿಲೇಜರ್ ವೆಂಚರ್ಸ್ ರೋನಿ ಸ್ಕ್ರೂವಾಲಾ
ನಾಯಕ: ಸುರೀಂದರ್ ಸಿಂಗ್ ಅಥವಾ ರಿಂಕು (ಸಂಭವ)
ದುಬಾರಿ ಆಟಗಾರ: ಗುಮನ್ ಸಿಂಗ್, 85 ಲಕ್ಷ
ಒಟ್ಟು ಆಟಗಾರರು: 22
12. ಯುಪಿ ಯೋಧಾಸ್
ಮಾಲೀಕರು: ಜಿಎಂಆರ್ ಲೀಗ್ ಗೇಮ್ಸ್ ಪ್ರೈವೇಟ್ ಲಿಮಿಟೆಡ್
ನಾಯಕ: ನಿತೇಶ್ ಕುಮಾರ್ (ಸಂಭವ)
ದುಬಾರಿ ಆಟಗಾರ: ವಿಜಯ್ ಮಲಿಕ್, 85 ಲಕ್ಷ
ಒಟ್ಟು ಆಟಗಾರರು: 18