logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿಕೆಟ್ ಬುಕ್ ಮಾಡ್ತೀನಿ, ಆತನನ್ನು ಭಾರತಕ್ಕೆ ಕಳ್ಸಿಬಿಡಿ; ಶ್ರೀಶಾಂತ್ ವಿರುದ್ಧ ಎಂಎಸ್ ಧೋನಿ ಕೋಪಗೊಂಡಿದ್ದನ್ನು ಬಹಿರಂಗಪಡಿಸಿದ ಅಶ್ವಿನ್

ಟಿಕೆಟ್ ಬುಕ್ ಮಾಡ್ತೀನಿ, ಆತನನ್ನು ಭಾರತಕ್ಕೆ ಕಳ್ಸಿಬಿಡಿ; ಶ್ರೀಶಾಂತ್ ವಿರುದ್ಧ ಎಂಎಸ್ ಧೋನಿ ಕೋಪಗೊಂಡಿದ್ದನ್ನು ಬಹಿರಂಗಪಡಿಸಿದ ಅಶ್ವಿನ್

Prasanna Kumar P N HT Kannada

Jul 14, 2024 08:00 AM IST

google News

ಟಿಕೆಟ್ ಬುಕ್ ಮಾಡ್ತೀನಿ, ಆತನನ್ನು ಭಾರತಕ್ಕೆ ಕಳ್ಸಿಬಿಡಿ; ಶ್ರೀಶಾಂತ್ ವಿರುದ್ಧ ಎಂಎಸ್ ಧೋನಿ ಕೋಪಗೊಂಡಿದ್ದನ್ನು ಬಹಿರಂಗಪಡಿಸಿದ ಅಶ್ವಿನ್

    • R Ashwin on MS Dhoni fury: ಕೂಲ್​ ಕ್ಯಾಪ್ಟನ್ ಎಂದೇ ಹೆಸರುವಾಸಿಯಾದ ಎಂಎಸ್ ಧೋನಿ, 2010ರಲ್ಲಿ ಸೌತ್ ಆಫ್ರಿಕಾದ ಸರಣಿಯಲ್ಲಿ ಶ್ರೀಶಾಂತ್ ವಿರುದ್ಧ ಕೋಪಗೊಂಡಿದ್ದ ಘಟನೆಯನ್ನು ಆರ್​ ಅಶ್ವಿನ್ ಬಹಿರಂಗಪಡಿಸಿದ್ದಾರೆ.
ಟಿಕೆಟ್ ಬುಕ್ ಮಾಡ್ತೀನಿ, ಆತನನ್ನು ಭಾರತಕ್ಕೆ ಕಳ್ಸಿಬಿಡಿ; ಶ್ರೀಶಾಂತ್ ವಿರುದ್ಧ ಎಂಎಸ್ ಧೋನಿ ಕೋಪಗೊಂಡಿದ್ದನ್ನು ಬಹಿರಂಗಪಡಿಸಿದ ಅಶ್ವಿನ್
ಟಿಕೆಟ್ ಬುಕ್ ಮಾಡ್ತೀನಿ, ಆತನನ್ನು ಭಾರತಕ್ಕೆ ಕಳ್ಸಿಬಿಡಿ; ಶ್ರೀಶಾಂತ್ ವಿರುದ್ಧ ಎಂಎಸ್ ಧೋನಿ ಕೋಪಗೊಂಡಿದ್ದನ್ನು ಬಹಿರಂಗಪಡಿಸಿದ ಅಶ್ವಿನ್

ಮಹೇಂದ್ರ ಸಿಂಗ್ ಧೋನಿ ಅವರು (Mahendra Singh Dhoni) ಮೈದಾನದಲ್ಲಿ ತಮ್ಮ ಸಂಯೋಜಿತ ನಡವಳಿಕೆಗೆ 'ಕ್ಯಾಪ್ಟನ್ ಕೂಲ್' ಎಂದು ಪ್ರಸಿದ್ಧಿ ಪಡೆದಿದ್ದಾರೆ. ಭಾರತೀಯ ಕ್ರಿಕೆಟ್ ತಂಡವನ್ನು (Indian Cricket Team) ಗಮನಾರ್ಹ ಸಮತೋಲನ ಮತ್ತು ಕಾರ್ಯತಂತ್ರದೊಂದಿಗೆ ಮುನ್ನಡೆಸಿದ್ದ ಧೋನಿ, ಕೋಪಗೊಂಡಿದ್ದನ್ನು ನೋಡಿರುವುದು ಅಪರೂಪದಲ್ಲಿ ಅಪರೂಪ. ಆದರೆ ಧೋನಿ, 2010ರಲ್ಲಿ ವೇಗಿ ಎಸ್​ ಶ್ರೀಶಾಂತ್ ವಿರುದ್ಧ ಕೆಂಡಾಮಂಡಲ ಆಗಿದ್ದ ಘಟನೆಯನ್ನು ಆಫ್​ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ (Ravichandran Ashwin) ಬಹಿರಂಗಪಡಿಸಿದ್ದಾರೆ.

ನಾಯಕರಾಗಿದ್ದ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಅವರಂತಹ ಲೆಜೆಂಡರಿ ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ನಿರ್ವಹಿಸಿದ ಧೋನಿ, ಸೀಮಿತ ಓವರ್​​ಗಳ ಸ್ವರೂಪದಲ್ಲಿ ಎಲ್ಲಾ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕರಾಗಿದ್ದಾರೆ. ಸದಾ ಕೂಲ್ ಆಗಿರುತ್ತಿದ್ದ 'ಮಾಹಿ' ಸಹ ತನ್ನ ತಾಳ್ಮೆ ಕಳೆದುಕೊಂಡ ಘಟನೆಯೂ ನಡೆದಿದೆ. ಶ್ರೀಶಾಂತ್ ವಿರುದ್ಧ ಧೋನಿ ತೀವ್ರ ಕೋಪಗೊಂಡಿದ್ದರು.

ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 2010ರಲ್ಲಿ ನಡೆದಿದ್ದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಧೋನಿ ತುಂಬಾ ಕೋಪಗೊಂಡು ಶ್ರೀಶಾಂತ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲೇ ತೊರೆದು ಭಾರತಕ್ಕೆ ಹೋಗು ಎಂದು ಹೇಳಿದ್ದರು ಎಂದು ಅಶ್ವಿನ್ ತಿಳಿಸಿದ್ದಾರೆ. ಮೀಸಲು ಆಟಗಾರರೊಂದಿಗೆ ಡಗೌಟ್​​ನಲ್ಲಿ ಕುಳಿತುಕೊಳ್ಳದ ವೇಗಿ, ಭಾರತದ ನಾಯಕನ (ಧೋನಿ) ಕರೆಯನ್ನು ಪದೇ ಪದೇ ನಿರ್ಲಕ್ಷಿಸಿದ್ದರು.

ಪೋರ್ಟ್ ಎಲಿಜಬೆತ್​​ (ಈಗ ಗ್ಕೆಬೆರ್ಹಾ ಎಂದು ಕರೆಯಲಾಗುತ್ತದೆ) ಮೈದಾನದಲ್ಲಿ ನಡೆದ ಸೀಮಿತ ಓವರ್​​ಗಳ ಪಂದ್ಯದ ಸಮಯದಲ್ಲಿ ಇದು ಸಂಭವಿಸಿತ್ತು. ಪಂದ್ಯದ ಮೀಸಲು ಆಟಗಾರರೂ ಆಗಿರುವ ಅಶ್ವಿನ್, ಧೋನಿಗೆ ವಾಟರ್ ಬಾಟೆಲ್​ಗಳನ್ನು ಒಯ್ದಿದ್ದನ್ನು ನೆನಪಿಸಿಕೊಂಡರು. ಈ ವೇಳೆ ಒಂದು ಹಂತದಲ್ಲಿ ಶ್ರೀಶಾಂತ್ ಎಲ್ಲಿದ್ದಾರೆ ಎಂದು ಮಾಹಿ ಕೇಳಿದ್ದರು. ಆಗ ಮಹಡಿಯ ಡ್ರೆಸ್ಸಿಂಗ್ ರೂಮ್​ನಲ್ಲಿದ್ದಾರೆ ಎಂದು ನಾನು ಹೇಳಿದ್ದೆ ಎಂದಿದ್ದಾರೆ ಅಶ್ವಿನ್.

ಆತನನ್ನು ಕೆಳಗಿಳಿದು ಉಳಿದ ಮೀಸಲು ಆಟಗಾರರೊಂದಿಗೆ ಕುಳಿತುಕೊಳ್ಳುವಂತೆ ಧೋನಿ ನನಗೆ ಹೇಳಿದ್ದರು ಎಂದು ಹಿರಿಯ ಪತ್ರಕರ್ತ ಸಿದ್ಧಾರ್ಥ್ ಮೊಂಗಾ ಸಹ-ಲೇಖಕರಾಗಿರುವ 'ಐ ಹ್ಯಾವ್ ದಿ ಸ್ಟ್ರೀಟ್ಸ್- ಎ ಕುಟ್ಟಿ ಕ್ರಿಕೆಟ್ ಸ್ಟೋರಿ' ಎಂಬ 184 ಪುಟಗಳ ಪುಸ್ತಕದಲ್ಲಿ ಅಶ್ವಿನ್ ಬರೆದಿದ್ದಾರೆ. ಧೋನಿಯ ಸಂದೇಶ ಹೊತ್ತು ಶ್ರೀಶಾಂತ್​ಗೆ ತಲುಪಿಸಲು ನಾನು ಡ್ರೆಸ್ಸಿಂಗ್​ ರೂಮ್​ಗೆ ಹೋಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ನಾನು ವಾಟರ್​​ಬಾಯ್ ಆಗಿದ್ದ ವೇಳೆ ನಾನು ಹೆಲ್ಮೆಟ್​ ತೆಗದುಕೊಂಡು ಹೋಗಿದ್ದೆ. ಈ ಬಾರಿ ಎಂಎಸ್ ಕೋಪಗೊಂಡಿದ್ದರು. ಎಂಎಸ್, ತಾಳ್ಮೆ ಕಳೆದುಕೊಂಡು ಶ್ರೀ ಎಲ್ಲಿದ್ದಾನೆ? ಆತ ಏನು ಮಾಡುತ್ತಿದ್ದಾನೆ? ಎಂಎಸ್ ಕಟುವಾಗಿ ಕೇಳಿದ್ದರು. ಶ್ರೀಶಾಂತ್ ಮಸಾಜ್ ಪಡೆಯುತ್ತಿದ್ದಾರೆ ಎಂದು ಹೇಳಿದ್ದೆ. ಆಗ ಮಾಹಿ ಹೇಳಿದ್ದು ಒಂದೇ ಮಾತು, ಶ್ರೀಗೆ ಇಲ್ಲಿರಲು ಆಸಕ್ತಿನ ಇಲ್ಲ. ನಾಳೆಯೇ ಭಾರತಕ್ಕೆ ಕಳುಹಿಸಿಬಿಡಿ. ಟಿಕೆಟ್ ಬುಕ್​ ಮಾಡುತ್ತೇನೆ ಎಂದು ಕೋಪದಿಂದ ಹೇಳಿದ್ದರು ಎಂದರು.

ಧೋನಿಯ ಹೇಳಿಕೆ ಕಂಡು ಆಘಾತಕ್ಕೆ ಒಳಗಾದ ಅಶ್ವಿನ್, ಸಂದೇಶವನ್ನು ಕೇಳಿದ ಕೂಡಲೇ ಶ್ರೀಶಾಂತ್ ಹೇಗೆ ಕೆಳಗಿಳಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ನಾನು ದಿಗ್ಭ್ರಮೆಗೊಂಡೆ. ಏನು ಹೇಳಬೇಕೆಂದು ನನಗೆ ಖಚಿತ ಇರಲಿಲ್ಲ. ಮಾಹಿ ಹೇಳಿದ್ದನ್ನು ವೇಗಿಗೆ ತಿಳಿಸುತ್ತಿದ್ದಂತೆ ಶ್ರೀ ಬೇಗನೆ ಎದ್ದು ಜೆರ್ಸಿ ಧರಿಸಿಬಿಟ್ಟರು. ಅಲ್ಲದೆ, ವಾಟರ್​ ಬಾಟೆಲ್​ಗಳನ್ನು ಹೊತ್ತೊಯ್ದರು ಎಂದು ಅಶ್ವಿನ್ ಪುಸ್ತಕದಲ್ಲಿ ಬರೆದಿದ್ದಾರೆ.

ಅಶ್ವಿನ್ ಮತ್ತು ಶ್ರೀಶಾಂತ್ ಅವರ ವೃತ್ತಿಜೀವನ

ಶ್ರೀಶಾಂತ್ ಅಂದು ಎಲ್ಲಾ ಸ್ವರೂಪಗಳಲ್ಲಿ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅಶ್ವಿನ್ ಮತ್ತು ಶ್ರೀಶಾಂತ್ ಇಬ್ಬರೂ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಅಶ್ವಿನ್ ಟೆಸ್ಟ್ ಕ್ರಿಕೆಟ್​​ನಲ್ಲಿ ಭಾರತದ ಪ್ರಮುಖ ಆಫ್-ಸ್ಪಿನ್ನರ್ ಆಗಿದ್ದು, ಈ ಸ್ವರೂಪದಲ್ಲಿ 500 ವಿಕೆಟ್​ಗಳ ಗಡಿ ದಾಟಿದ ದೇಶದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಅವರ ವೃತ್ತಿಜೀವನ ಹಠಾತ್ತನೆ ಸ್ಥಗಿತಗೊಂಡಿತ್ತು. 2019ರಲ್ಲಿ ನಿಷೇಧವನ್ನು ತೆಗೆದುಹಾಕಿದ ನಂತರ ದೇಶೀಯ ಕ್ರಿಕೆಟ್​​​​ಗೆ ಮರಳಿದರೂ ಅವರು ರಾಷ್ಟ್ರೀಯ ತಂಡಕ್ಕೆ ಮತ್ತು ಐಪಿಎಲ್​ಗೆ ಮರಳಲು ವಿಫಲರಾದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ