logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಹುಲ್ ದ್ರಾವಿಡ್ ಅದ್ದೂರಿ ಜೀವನಶೈಲಿ: ನಿವ್ವಳ ಮೌಲ್ಯ, ಬೆರಗುಗೊಳಿಸುವ ಮನೆಗಳು, ಐಷಾರಾಮಿ ಕಾರು ಸಂಗ್ರಹಣೆ.. ಇನ್ನಷ್ಟು

ರಾಹುಲ್ ದ್ರಾವಿಡ್ ಅದ್ದೂರಿ ಜೀವನಶೈಲಿ: ನಿವ್ವಳ ಮೌಲ್ಯ, ಬೆರಗುಗೊಳಿಸುವ ಮನೆಗಳು, ಐಷಾರಾಮಿ ಕಾರು ಸಂಗ್ರಹಣೆ.. ಇನ್ನಷ್ಟು

Prasanna Kumar P N HT Kannada

Jul 10, 2024 10:30 AM IST

google News

ರಾಹುಲ್ ದ್ರಾವಿಡ್ ಅದ್ದೂರಿ ಜೀವನಶೈಲಿ: ನಿವ್ವಳ ಮೌಲ್ಯ, ಬೆರಗುಗೊಳಿಸುವ ಮನೆಗಳು, ಐಷಾರಾಮಿ ಕಾರು ಸಂಗ್ರಹಣೆ.. ಇನ್ನಷ್ಟು

    • Rahul Dravid lavish lifestyle: ಕ್ರಿಕೆಟ್ ಮೈದಾನದಾಚೆ ರಾಹುಲ್ ದ್ರಾವಿಡ್ ಜೀವನಶೈಲಿ ತುಂಬಾ ಆಕರ್ಷಕವಾಗಿದೆ. ನಿವ್ವಳ ಮೌಲ್ಯ, ಐಷಾರಾಮಿ ಮನೆಗಳು, ಕಾರು ಸಂಗ್ರಹಣೆ ಹೇಗಿದೆ ಎಂಬುದರ ವಿವರ ಇಲ್ಲಿದೆ.
ರಾಹುಲ್ ದ್ರಾವಿಡ್ ಅದ್ದೂರಿ ಜೀವನಶೈಲಿ: ನಿವ್ವಳ ಮೌಲ್ಯ, ಬೆರಗುಗೊಳಿಸುವ ಮನೆಗಳು, ಐಷಾರಾಮಿ ಕಾರು ಸಂಗ್ರಹಣೆ.. ಇನ್ನಷ್ಟು
ರಾಹುಲ್ ದ್ರಾವಿಡ್ ಅದ್ದೂರಿ ಜೀವನಶೈಲಿ: ನಿವ್ವಳ ಮೌಲ್ಯ, ಬೆರಗುಗೊಳಿಸುವ ಮನೆಗಳು, ಐಷಾರಾಮಿ ಕಾರು ಸಂಗ್ರಹಣೆ.. ಇನ್ನಷ್ಟು

ವೆಸ್ಟ್ ಇಂಡೀಸ್‌ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯಗಳಿಸುವ ಮೂಲಕ ರಾಹುಲ್ ದ್ರಾವಿಡ್ (Rahul Dravid) ಭಾರತೀಯ ಕ್ರಿಕೆಟ್ ತಂಡದ ಮುಖ್ಯಕೋಚ್ ಅಧಿಕಾರ ಕೊನೆಗೊಂಡಿತು. ಅವರ ಕೋಚಿಂಗ್ ಅಡಿಯಲ್ಲಿ ಭಾರತ ತಂಡ ಪುರುಷರ ಒಡಿಐ ವಿಶ್ವಕಪ್ 2023 ಫೈನಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ಫೈನಲ್ ಎರಡರಲ್ಲೂ ರನ್ನರ್-ಅಪ್ ಸ್ಥಾನ ಪಡೆದಿತ್ತು. ಗಮನಾರ್ಹ ಮೈಲಿಗಲ್ಲುಗಳನ್ನೂ ಸಾಧಿಸಿದೆ. ಟಿ20 ವಿಶ್ವಕಪ್ 2024 ಜೊತೆಗೆ 2023ರಲ್ಲಿ ಏಷ್ಯಾಕಪ್ ಗೆದ್ದುಕೊಂಡಿತು.

ಹಿರಿಯರ ತಂಡಕ್ಕೆ ತರಬೇತಿ ನೀಡುವ ಮೊದಲು ದ್ರಾವಿಡ್ ಭಾರತೀಯ ಕ್ರಿಕೆಟ್‌ಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಕ್ರಿಕೆಟ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. 2018ರಲ್ಲಿ ಅಂಡರ್​-19 ವಿಶ್ವಕಪ್‌ನಲ್ಲಿ ಮುಖ್ಯ ತರಬೇತುದಾರರಾಗಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದರು. ಜ್ಯಾಮಿ, ದಿ ವಾಲ್, ಮಿಸ್ಟರ್ ಡಿಪೆಂಡೇಬಲ್ ಎಂದು ಕರೆಸಿಕೊಳ್ಳುವ ದ್ರಾವಿಡ್, ಆಟಗಾರ ಮತ್ತು ತರಬೇತುದಾರರಾಗಿ ಅಸಾಧಾರಣ ವೃತ್ತಿಜೀವನ ಹೊಂದಿದ್ದಾರೆ. ತನ್ನ ಘನ ತಂತ್ರ, ಅಚಲ ನಿರ್ಧಾರಕ್ಕೆ ಹೆಸರುವಾಸಿಯಾದ ದ್ರಾವಿಡ್ ಕ್ರೀಡೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

ಕ್ರಿಕೆಟ್ ಮೈದಾನದಾಚೆಗೂ ಮಾಜಿ ಹೆಡ್​ಕೋಚ್ ಜೀವನಶೈಲಿ ತುಂಬಾ ಆಕರ್ಷಕವಾಗಿದೆ. ನಿವ್ವಳ ಮೌಲ್ಯ, ಐಷಾರಾಮಿ ಮನೆಗಳು, ಕಾರು ಸಂಗ್ರಹಣೆ, ಲಾಭದಾಯಕ ಬ್ರಾಂಡ್​ಗಳೊಂದಿಗೆ ಒಪ್ಪಂದ ಸೇರಿದಂತೆ ದ್ರಾವಿಡ್ ಜೀವನ ಹೇಗಿದೆ ಎಂಬುದರ ವಿವರ ಇಲ್ಲಿದೆ.

ಆಟದ ವೃತ್ತಿ ಮತ್ತು ಕೋಚಿಂಗ್ ಸಂಬಳ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,177 ರನ್‌ ಕಲೆಹಾಕಿ ಅದ್ಭುತ ಆಟದ ವೃತ್ತಿಜೀವನ ಹೊಂದಿರುವ ರಾಹುಲ್ ದ್ರಾವಿಡ್, ಭಾರತೀಯ ಕ್ರಿಕೆಟ್‌ನ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಮುಖ್ಯಕೋಚ್​ ಆಗಿ ಕೂಡ ಅಷ್ಟೇ ನಿರ್ಣಾಯಕ ಪಾತ್ರವಹಿಸಿದ್ದಾರೆ. ಡಿಎನ್ಎ ಮತ್ತು ಸ್ಪೋರ್ಟ್ಸ್​ಕೀಡಾ ಪ್ರಕಾರ, ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ವಾರ್ಷಿಕವಾಗಿ ಸುಮಾರು 12 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದರು.

ದ್ರಾವಿಡ್ ನಿವ್ವಳ ಮೌಲ್ಯ

ವರದಿಗಳ ಪ್ರಕಾರ, ದ್ರಾವಿಡ್ ಅವರ ನಿವ್ವಳ ಮೌಲ್ಯ ಸುಮಾರು 320 ಕೋಟಿ ರೂಪಾಯಿ. ದ್ರಾವಿಡ್ ಕ್ರಿಕೆಟ್ ವೃತ್ತಿಜೀವನದಲ್ಲಿ 52.31ರ ಸರಾಸರಿಯೊಂದಿಗೆ 164 ಟೆಸ್ಟ್‌ ಆಡಿದ್ದು, ಏಕದಿನದಲ್ಲಿ 39.16ರ ಸರಾಸರಿಯೊಂದಿಗೆ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಐಷಾರಾಮಿ ಮನೆಗಳು ಮತ್ತು ಕಾರು ಸಂಗ್ರಹ

ರಾಹುಲ್ ದ್ರಾವಿಡ್ ಅವರು ಬೆಂಗಳೂರಿನ ಕೋರಮಂಗಲದಲ್ಲಿ ಸುಮಾರು 4.2 ಕೋಟಿ ಮೌಲ್ಯದ ಐಷಾರಾಮಿ ಮನೆ ಹೊಂದಿದ್ದಾರೆ. ಕಾರು ಸಂಗ್ರಹವೂ ಅಷ್ಟೇ ಆಕರ್ಷಕವಾಗಿದೆ. ಅವರು 2013 ಪೋರ್ಷೆ 911 ಕ್ಯಾರೆರಾ, ಆಡಿ ಕ್ಯೂ5 ಮತ್ತು ಮರ್ಸಿಡಿಸ್-ಬೆನ್ಜ್ ಜಿಎಲ್ಇ 350 ಹೊಂದಿದ್ದಾರೆ.

ದ್ರಾವಿಡ್ ಬ್ರ್ಯಾಂಡ್​ ಒಪ್ಪಂದ ಮತ್ತು ರಾಯಭಾರಿ

ದ್ರಾವಿಡ್ ಹಲವು ಬ್ರ್ಯಾಂಡ್​ಗಳಿಗೆ ಅನುಮೋದಿಸಿದ್ದಾರೆ. ರೀಬ್ಯಾಕ್, ಪೆಪ್ಸಿ, ಕಿಸ್ಸಾನ್, ಕ್ಯಾಸ್ಟ್ರೋಲ್, ಹಚ್, ಕರ್ನಾಟಕ ಪ್ರವಾಸೋದ್ಯಮ, ಮ್ಯಾಕ್ಸ್ ಲೈಫ್, ಬ್ಯಾಂಕ್ ಆಫ್ ಬರೋಡಾ, ಸಿಟಿಜನ್, ಸ್ಕೈಲೈನ್ ಕನ್ಸ್ಟ್ರಕ್ಷನ್, ಸಾನ್ಸುಯಿ, ಜಿಲೆಟ್, ಸ್ಯಾಮ್ಸಂಗ್, ಕ್ರೆಡ್ ಬ್ರಾಂಡ್​ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲವು ಬ್ರಾಂಡ್​ಗಳಿಗೆ ರಾಯಭಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಬ್ರ್ಯಾಂಡ್​ಗಳ ಒಪ್ಪಂದದಿಂದ ಸುಮಾರು 3.5 ಕೋಟಿ ರೂಪಾಯಿ ಆದಾಯ ಬರುತ್ತದೆ.

ರಾಹುಲ್ ದ್ರಾವಿಡ್ ಅವರ ಸಾಮಾಜಿಕ ಬದ್ಧತೆಗಳು

ಕ್ರಿಕೆಟ್ ಮತ್ತು ಬ್ರ್ಯಾಂಡ್​ಗಳ ಒಪ್ಪಂದಗಳ ಹೊರತಾಗಿ ರಾಹುಲ್ ದ್ರಾವಿಡ್ ಹಲವಾರು ಸಾಮಾಜಿಕ ಕಾರಣಗಳಿಗೆ ಸಮರ್ಪಿತರಾಗಿದ್ದಾರೆ. ಅವರು ನಾಗರಿಕ ಜಾಗೃತಿಗಾಗಿ ಮಕ್ಕಳ ಚಳುವಳಿ (CMCA), ಯುನಿಸೆಫ್ (UNICEF) ಮತ್ತು ಏಡ್ಸ್​ (AIDS) ಜಾಗೃತಿ ಅಭಿಯಾನ ಬೆಂಬಲಿಸಿದ್ದಾರೆ. ಜಿಂದಾಲ್ ಸ್ಟೀಲ್ ವರ್ಕ್ಸ್ ಒಡೆತನದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಕ್ಲಬ್ ಬೆಂಗಳೂರು ಎಫ್‌ಸಿಯ ಬ್ರಾಂಡ್ ಅಂಬಾಸಿಡರ್ ಆಗಿ ದ್ರಾವಿಡ್ ಅವರನ್ನು ಹೆಸರಿಸಲಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ