logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲ; ಯು ಟರ್ನ್ ಹೊಡೆದ ರಾಹುಲ್ ದ್ರಾವಿಡ್

ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲ; ಯು ಟರ್ನ್ ಹೊಡೆದ ರಾಹುಲ್ ದ್ರಾವಿಡ್

Jayaraj HT Kannada

Feb 06, 2024 03:12 PM IST

google News

ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲಎಂದ ರಾಹುಲ್ ದ್ರಾವಿಡ್

    • Rahul Dravid: ಟೀಮ್ ಇಂಡಿಯಾ ಆಯ್ಕೆಗೆ ಲಭ್ಯವಾಗುವ ಮೊದಲು ಇಶಾನ್ ಕಿಶನ್ ಯಾವುದೇ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್ ಆಡಬೇಕೆಂದು ತಾನು ಬಯಸುವುದಾಗಿ‌ ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.
ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲಎಂದ ರಾಹುಲ್ ದ್ರಾವಿಡ್
ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲಎಂದ ರಾಹುಲ್ ದ್ರಾವಿಡ್

ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid), ಈ ಹಿಂದೆ ದೇಶೀಯ ಕ್ರಿಕೆಟ್‌ನಲ್ಲಿ ಆಡುವಂತೆ ಇಶಾನ್ ಕಿಶನ್ (Ishan Kishan) ಅವರಿಗೆ ನೀಡಿದ್ದ ಸಲಹೆ ಕುರಿತು ಯು ಟರ್ನ್‌ ಹೊಡೆದಿದ್ದಾರೆ. ಕಳೆದ ಡಿಸೆಂಬರ್‌ ತಿಂಗಳಲ್ಲಿ, ಮಾನಸಿಕ ಆಯಾಸದ ಕಾರಣ ನೀಡಿದ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಇಶಾನ್ ನಿರಂತರ ಕ್ರಿಕೆಟ್ ಆಟದಿಂದ ವಿರಾಮ ತೆಗೆದುಕೊಂಡರು. ತಂಡಕ್ಕೆ ಮತ್ತೆ ಅವರ ಮರಳುವಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ದ್ರಾವಿಡ್, ದೇಶೀಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್‌ ಸಾಬೀತುಪಡಿಸಿದ ನಂತರವೇ ಅಂತಾರಾಷ್ಟ್ರೀಯ ತಂಡಕ್ಕೆ ಮರಳಬೇಕು ಎಂದಿದ್ದರು.

ಸದ್ಯ ತಮ್ಮ ಹೇಳಿಕೆಯ ಬಗ್ಗೆ ದ್ರಾವಿಡ್‌ ಮತ್ತಷ್ಟು ಸ್ಪಷ್ಟನೆ ನೀಡಿದ್ದಾರೆ. ಟೆಸ್ಟ್ ಸ್ವರೂಪದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪಿಂಗ್ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಟೀಮ್ ಮ್ಯಾನೇಜ್‌ಮೆಂಟ್‌ ಖಚಿತಪಡಿಸಿದಾಗ, ಇಶಾನ್‌ಗೆ ಅವಕಾಶ ನೀಡಬಹುದಿತ್ತು. ಆದರೆ ಇಶಾನ್ ವಿರಾಮ ತೆಗೆದುಕೊಂಡರು. ಹೀಗಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ತಮ್ಮ ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ಅವರು ಮತ್ತೆ ತಂಡಕ್ಕೆ ಮರಳುತ್ತಾರೆ ಎಂದು ದ್ರಾವಿಡ್ ಹೇಳಿದ್ದರು.‌ ಇದೀಗ ಆ ಮಾತಿಗೆ ಯು ಟರ್ನ್‌ ಹೊಡೆದಿದ್ದಾರೆ.‌

ಇದನ್ನೂ ಓದಿ | ಜೈಸ್ವಾಲ್-ಗಿಲ್ ಜಾಗತಿಕ ಕ್ರಿಕೆಟ್ ಆಳುತ್ತಾರೆ; ತೆಂಡೂಲ್ಕರ್-ಗಂಗೂಲಿ ಜೋಡಿ ನೆನಪಿಸಿದ ಸೆಹ್ವಾಗ್‌ ಹೇಳಿಕೆ

ದ್ರಾವಿಡ್‌ ಹೇಳಿದ್ದೇನು?

“ಇಶಾನ್ ವಿರಾಮ ಕೇಳಿದ್ದರು. ಹೀಗಾಗಿ ನಾವು ದಕ್ಷಿಣ ಆಫ್ರಿಕಾದಲ್ಲಿ ಅದಕ್ಕೆ ಒಪ್ಪಿಕೊಂಡಿದ್ದೇವೆ. ಅವರು ಇನ್ನೂ ಆಯ್ಕೆಗೆ ಲಭ್ಯರಿಲ್ಲ. ಅವರು ಲಭ್ಯರಾದಾಗ, ದೇಶೀಯ ಕ್ರಿಕೆಟ್ ಆಡಿ ಆಯ್ಕೆಗೆ ಲಭ್ಯರಾಗುತ್ತಾರೆ” ಎಂದು ದ್ರಾವಿಡ್ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಮೊಹಾಲಿಯಲ್ಲಿ ತಿಳಿಸಿದ್ದರು.

ತಂಡಕ್ಕೆ ಮರಳಲು ಕಿಶನ್ ಕ್ರಿಕೆಟ್ ಆಡಬೇಕು ಅಷ್ಟೆ

ಸದ್ಯ, ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಗೆಲುವಿನ ಬಳಿಕ ಭಾರತದ ಮಾಜಿ ನಾಯಕ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಟೀಮ್ ಇಂಡಿಯಾ ಆಯ್ಕೆಗೆ ಲಭ್ಯವಾಗುವ ಮೊದಲು ಇಶಾನ್ ಯಾವುದೇ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್ ಆಡಬೇಕೆಂದು ತಾನು ಬಯಸುವುದಾಗಿ ಹೇಳಿದರು.

ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ

“ಯಾರೇ ಆದರೂ ತಂಡಕ್ಕೆ ಹಿಂತಿರುಗಲು ಅವಕಾಶವಿದೆ. ನಾವು ಯಾರನ್ನೂ ಕಟ್ಟಿಹಾಕುವುದಿಲ್ಲ,” ಎಂದು ದ್ರಾವಿಡ್ ವಿಶಾಖಪಟ್ಟಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನಾನು ಇಶಾನ್ ಕಿಶನ್ ಕುರಿತಾಗಿ ಸಾಧ್ಯವಾದಷ್ಟು ಉತ್ತಮವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ. ಅವರು ವಿರಾಮವನ್ನು ಕೋರಿದ್ದರು. ನಾವು ಅವರಿಗೆ ವಿರಾಮ ಕೊಟ್ಟಿದ್ದೇವೆ ಅಷ್ಟೆ. ಅವರು ಕ್ರಿಕೆಟ್‌ ಆಡಲು ಸಿದ್ಧರಾದಾಗ, ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ನಾನು ಹೇಳಿಲ್ಲ. ಅವರು ಸಿದ್ಧರಾದಾಗ ಸ್ವಲ್ಪ ಕ್ರಿಕೆಟ್ ಆಡಬೇಕು ಮತ್ತು ತಂಡಕ್ಕೆ ಮರಳಬೇಕು ಎಂದಿದ್ದೆ. ಆ ಆಯ್ಕೆ ಅವರಿಗೆ ಬಿಟ್ಟದ್ದು. ನಾವು ಅವರ ಮೇಲೆ ಯಾವುದಕ್ಕೂ ಒತ್ತಾಯ ಮಾಡುತ್ತಿಲ್ಲ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ,” ಎಂದು ದಿ ವಾಲ್ ಹೇಳಿದ್ದಾರೆ.

ಇದನ್ನೂ ಓದಿ | ರೋಹಿತ್ ಶರ್ಮಾ ಕೆಳಗಿಳಿಸಿದ್ದೇಕೆ; ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗುವುದರ ಹಿಂದಿನ ಅಸಲಿ ಕಾರಣ ಬಹಿರಂಗ

ಭಾರತದ ಬಳಿ ಸಾಕಷ್ಟು ವಿಕೆಟ್ ಕೀಪಿಂಗ್ ಆಯ್ಕೆಗಳಿವೆ. ಅತ್ತ ರಿಷಬ್‌ ಪಂತ್ ಅವರ ಫಿಟ್ನೆಸ್ ಕುರಿತು ಭಾರತ ಕುತೂಹಲದಿಂದ ಕಾಯುತ್ತಿದೆ. ಈ ನಡುವೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬ್ಯಾಕ್ ಅಪ್ ಆಯ್ಕೆಯಾಗಿ ಧ್ರುವ್ ಜುರೆಲ್ ಆಯ್ಕೆಯಾಗಿದ್ದಾರೆ.‌

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ