logo
ಕನ್ನಡ ಸುದ್ದಿ  /  ಕ್ರಿಕೆಟ್  /  Asia Cup 2023: ರಾಹುಲ್-ಅಯ್ಯರ್​ ಅನ್​ಫಿಟ್​ ಆದರೆ ಯಾರಿಗೆ ಮಣೆ ಹಾಕಬೇಕು; ರವಿಶಾಸ್ತ್ರಿ, ಮಾಜಿ ಚೀಫ್ ಸೆಲೆಕ್ಟರ್ಸ್ ಬಿಸಿ ಬಿಸಿ ಚರ್ಚೆ

Asia Cup 2023: ರಾಹುಲ್-ಅಯ್ಯರ್​ ಅನ್​ಫಿಟ್​ ಆದರೆ ಯಾರಿಗೆ ಮಣೆ ಹಾಕಬೇಕು; ರವಿಶಾಸ್ತ್ರಿ, ಮಾಜಿ ಚೀಫ್ ಸೆಲೆಕ್ಟರ್ಸ್ ಬಿಸಿ ಬಿಸಿ ಚರ್ಚೆ

Prasanna Kumar P N HT Kannada

Aug 18, 2023 09:30 AM IST

google News

ಸಂದೀಪ್ ಪಾಟೀಲ್, ರವಿ ಶಾಸ್ತ್ರಿ, ಎಂಎಸ್​ಕೆ ಪ್ರಸಾದ್.

    • Asia Cup 2023: ಏಷ್ಯಾಕಪ್‌ಗೆ ತಂಡದ ಆಯ್ಕೆಯ ಕುರಿತು ಸ್ಟಾರ್ ಸ್ಪೋರ್ಟ್ಸ್ ವಿಶೇಷ ಶೋನಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಭಾರತದ ಮಾಜಿ ಆಯ್ಕೆಗಾರರ ​​ಅಧ್ಯಕ್ಷ ಸಂದೀಪ್ ಪಾಟೀಲ್ ಮತ್ತು ಎಂಎಸ್‌ಕೆ ಪ್ರಸಾದ್ ಭಾಗಿಯಾಗಿದ್ದು, ಈ ಬಗ್ಗೆ ಒಟ್ಟಿಗೆ ಚರ್ಚೆ ನಡೆಸಿದ್ದಾರೆ.
ಸಂದೀಪ್ ಪಾಟೀಲ್, ರವಿ ಶಾಸ್ತ್ರಿ, ಎಂಎಸ್​ಕೆ ಪ್ರಸಾದ್.
ಸಂದೀಪ್ ಪಾಟೀಲ್, ರವಿ ಶಾಸ್ತ್ರಿ, ಎಂಎಸ್​ಕೆ ಪ್ರಸಾದ್.

ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ ಆಗಿದ್ದಾರೆಯೇ? ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಆಡುತ್ತಾರೆಯೇ? ಸದ್ಯ ಈ ಎರಡು ಪ್ರಶ್ನೆಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಗಲ್ಲಿಯಿಂದ ಡಿಲ್ಲಿವರೆಗೂ ಇವರ ಬಗ್ಗೆಯೇ ಟಾಕ್ ನಡೆಯುತ್ತಿದೆ. ಮತ್ತೊಂದೆಡೆ ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿಗೂ ಇವರದ್ದೇ ಟೆನ್ಶನ್. ಏಷ್ಯಾಕಪ್ ಟೂರ್ನಿಗೆ ಆಗಸ್ಟ್ 20ರಂದು ತಂಡ ಪ್ರಕಟವಾಗಲಿದೆ.

ಭಾರತ ತಂಡದಲ್ಲಿ 4ನೇ ಕ್ರಮಾಂಕ ಮತ್ತು 5ನೇ ಅಥವಾ ವಿಕೆಟ್​ ಕೀಪರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ, ಕೆಲವು ವರದಿಗಳು ಇಬ್ಬರೂ ಫಿಟ್​ ಆಗಿದ್ದಾರೆ ಎಂದು ಹೇಳುತ್ತಿವೆ. ಈ ಇಬ್ಬರು ಸ್ಟಾರ್​ ಆಟಗಾರರು ತಂಡದಲ್ಲಿ ಇರಬೇಕೆಂಬುದು ಎಲ್ಲರ ಬಯಕೆಯಾಗಿದೆ. ಆದರೆ ಈ ಇಬ್ಬರು ಆಯ್ಕೆಯಾಗುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಏಷ್ಯಾಕಪ್‌ಗೆ ತಂಡದ ಆಯ್ಕೆಯ ಕುರಿತು ಸ್ಟಾರ್ ಸ್ಪೋರ್ಟ್ಸ್ ವಿಶೇಷ ಶೋನಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಭಾರತದ ಮಾಜಿ ಆಯ್ಕೆಗಾರರ ​​ಅಧ್ಯಕ್ಷ ಸಂದೀಪ್ ಪಾಟೀಲ್ ಮತ್ತು ಎಂಎಸ್‌ಕೆ ಪ್ರಸಾದ್ ಭಾಗಿಯಾಗಿದ್ದು, ಈ ಬಗ್ಗೆ ಒಟ್ಟಿಗೆ ಚರ್ಚೆ ನಡೆಸಿದ್ದಾರೆ. ರಾಹುಲ್- ಅಯ್ಯರ್ ಇಬ್ಬರ ಅನಿವಾರ್ಯತೆ ತಂಡಕ್ಕೆ ಎಷ್ಟಿದೆ ಎಂಬುದರ ಕುರಿತು ವಿವರಿಸಿದ್ದಾರೆ. ಅವರ ಸಂಭಾಷಣೆ ಹೀಗಿದೆ ನೋಡಿ.

ಮೂವರು ಮಾಜಿ ಕ್ರಿಕೆಟಿಗರ ಮಾತುಕತೆ ಹೀಗಿದೆ

ಎಂಎಸ್‌ಕೆ ಪ್ರಸಾದ್: ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಫಿಟ್ ಆಗಿದ್ದರೆ ಮುಂದಿನ ನಡೆ ಏನು?

ರವಿಶಾಸ್ತ್ರಿ: ಅವರು ಫಿಟ್​ ಆಗಿದ್ದರೆ ಕೆಲವು ಪಂದ್ಯಗಳನ್ನು ಆಡಬೇಕಾಗುತ್ತದೆ. ಏಷ್ಯಾಕಪ್‌ಗೆ ಮೊದಲು ಅವರಿಗೆ ಕೆಲವು ಪಂದ್ಯಗಳನ್ನು ಆಡಿಸಿದರೆ ಉತ್ತಮ.

ಎಂಎಸ್‌ಕೆ ಪ್ರಸಾದ್: ಸರಿ, ಹಾಗಿದ್ದರೆ ಕೆಲವು ಪಂದ್ಯಗಳನ್ನು ಆಡಿದ ನಂತರ ಅವರು ಫಿಟ್ ಆಗಿದ್ದಾರೆ ಎಂದು ಹೇಳಲು ಸಾಧ್ಯವೇ?

ರವಿಶಾಸ್ತ್ರಿ: ಆದರೆ ಅವರಿಗೆ ಅಷ್ಟು ಸಮಯ ಇಲ್ಲವಲ್ಲ. ಅವರು ಎಲ್ಲಿ ಆಡಲು ಸಾಧ್ಯ? ಯಾಕಂದರೆ ಒಂದೆರಡು ವಾರಗಳಲ್ಲಿ ಏಷ್ಯಾಕಪ್ ಆರಂಭವಾಗಲಿದೆ.

ಎಂಎಸ್‌ಕೆ ಪ್ರಸಾದ್: ಎನ್‌ಸಿಎಯಲ್ಲಿ ರಾಹುಲ್ ಆಡುವುದನ್ನು ನಾನು ನೋಡಿದ್ದೇನೆ. ಅವನು ಫಿಟ್ ಆಗಿ ಕಾಣುತ್ತಾರೆ. ಅವರು ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಸಂದೀಪ್ ಪಾಟೀಲ್: ನೆಟ್ಸ್‌ನಲ್ಲಿ ಆಡುವುದೇ ಬೇರೆ, ಪಂದ್ಯದಲ್ಲಿ ಆಡುವುದೇ ಬೇರೆ. ಎರಡೂ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ.

ಎಂಎಸ್‌ಕೆ ಪ್ರಸಾದ್: ಅವರು (ರಾಹುಲ್-ಅಯ್ಯರ್) ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದಾರೆ.

ಸಂದೀಪ್ ಪಾಟೀಲ್: ಆದರೆ, ಸ್ಪರ್ಧಾತ್ಮಕ ಪಂದ್ಯಗಳಲ್ಲವಲ್ಲ, ಸೌಹಾರ್ದ ಪಂದ್ಯಗಳನ್ನು ಆಡುವುದು ಮತ್ತು ರನ್ ಗಳಿಸುವುದು ಸುಲಭ. ಸ್ಪರ್ಧಾತ್ಮಕ ಪಂದ್ಯಗಳಲ್ಲಿ ರನ್ ಗಳಿಸುವುದು ಸುಲಭವಲ್ಲ.

ರವಿಶಾಸ್ತ್ರಿ: ಗಾಯಗಳು ಸಂಭವಿಸುವುದು ಸಹಜ. ನೀವು (ಆಟಗಾರರು) ತುಂಬಾ ಜಾಗರೂಕರಾಗಿರಬೇಕು. ಎಚ್ಚರ ತಪ್ಪಿದರೆ ಬೂಮ್ರಾ ಅವರಂತೆ ಒಂದಲ್ಲ, ಎರಡಲ್ಲ, 14 ತಿಂಗಳಿಂದ ಹೊರಗೆ ಕೂರುವಂತೆ ಆಗುತ್ತದೆ.

ಒಂದು ವೇಳೆ ಈ ಇಬ್ಬರು ಫಿಟ್​ ಆಗಿಲ್ಲದಿದ್ದರೆ ಸೂರ್ಯಕುಮಾರ್​ ಮತ್ತು ಇಶಾನ್ ಕಿಶನ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ವಿಂಡೀಸ್ ಸರಣಿಯಲ್ಲಿ ಪ್ರಭಾವ ಬೀರಿದ ಯುವ ಎಡಗೈ ಆಟಗಾರ ತಿಲಕ್ ವರ್ಮಾ ಅವರನ್ನೂ ಭಾರತದ 15 ಸದಸ್ಯರ ತಂಡದಲ್ಲಿ ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ. ಆದರೆ ಸ್ಯಾಮ್ಸನ್​ಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆಸಿಲ್ಲ.

4-5ನೇ ಕ್ರಮಾಂಕದ್ದೇ ಚಿಂತೆ

ಮಹತ್ವದ ಟೂರ್ನಿಗಳನ್ನು ಮುಂದಿಟ್ಟುಕೊಂಡಿರುವ ಭಾರತ ಇನ್ನೂ ಪರಿಪೂರ್ಣ ತಂಡವನ್ನು ಸಂಯೋಜಿಸಿಲ್ಲ ಎಂಬುದು ವಿಪರ್ಯಾಸ. ಅಗ್ರ ಕ್ರಮಾಂಕದಲ್ಲಿ ಯಾವುದೇ ಸಮಸ್ಯೆ ಕಾಡದಿದ್ದರೂ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಬಿಸಿಸಿಐ, ಸೆಲೆಕ್ಟರ್ಸ್, ಟೀಮ್ ಮ್ಯಾನೇಜ್​ಮೆಂಟ್ ವಿಫಲವಾಗಿದೆ.

ಸರಣಿ ಸರಣಿಗೂ ಪ್ರಯೋಗ ನಡೆಸಿರುವ ಟೀಮ್ ಮ್ಯಾನೇಜ್​ಮೆಂಟ್ ಸರಿಯಾದ ಆಟಗಾರನ ಆಯ್ಕೆಗೆ ಪರಿಗಣಿಸಲು ಎಡವಿತು. ಅಯ್ಯರ್​​ ಮತ್ತು ರಾಹುಲ್​​ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಸ್ಥಾನಕ್ಕೆ ಅವರು ಹೊಂದಿಕೊಂಡಿದ್ದಾರೆ. ಮ್ಯಾನೇಜ್​ಮೆಂಟ್​ ಕೂಡ ಅವರನ್ನೇ ನೆಚ್ಚಿಕೊಂಡಿದೆ. ಉಳಿದಂತೆ ಯಾವೊಬ್ಬ ಬ್ಯಾಟರ್ ಕೂಡ​ ಈ ಕ್ರಮಾಂಕದಲ್ಲಿ ಅಬ್ಬರಿಸಿಲ್ಲ.

ಹಾಗಾಗಿ ಮ್ಯಾಚ್ ಫಿಟ್​ ಆಗಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಇಬ್ಬರಿಗೂ ಇನ್ನಷ್ಟು ಅವಕಾಶ ನೀಡಲಾಗಿದೆ. ಅವರನ್ನು ತಂಡಕ್ಕೆ ಕರೆತರುವ ಕಾರಣದಿಂದಲೇ ಏಷ್ಯಾಕಪ್ ತಂಡವನ್ನು ಪ್ರಕಟಿಸಲು ಸೆಲೆಕ್ಟರ್ಸ್ ವಿಳಂಬ ಮಾಡುತ್ತಿದ್ದಾರೆ. ಒಂದು ವೇಳೆ ಎನ್​ಸಿಎ ಫೈನಲ್​ ರಿಪೋರ್ಟ್​​ನಲ್ಲಿ ಅನ್​ಫಿಟ್​ ಎಂದರೆ ಸೂರ್ಯಕುಮಾರ್, ಇಶಾನ್​​​​ಗೆ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ