ಔಟ್ OR ನಾಟೌಟ್; ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ, ಅಂಪೈರ್ ವಿರುದ್ಧ ಇನ್ನೂ ನಿಲ್ಲದ ಆಕ್ರೋಶ
Jan 28, 2024 09:39 AM IST
ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ.
- DRS Controversy: ವಿವಾದಾತ್ಮಕ ತೀರ್ಪಿಗೆ ಆಲ್ರೌಂಡರ್ ರವೀಂದ್ರ ಜಡೇಜಾ ಔಟಾಗಿದ್ದು, ಮೂರನೇ ಅಂಪೈರ್ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಗಳಿಸಿದ್ದ 246 ರನ್ಗಳಿಗೆ ಉತ್ತರವಾಗಿ ಭಾರತ 3ನೇ ದಿನದಾಟದಂದು 436 ರನ್ ಕಲೆ ಹಾಕಿ ಪ್ರಾಬಲ್ಯ ಮೆರೆಯಿತು. ರವೀಂದ್ರ ಜಡೇಜಾ (87 ರನ್), ಅಕ್ಷರ್ ಪಟೇಲ್ (44 ರನ್) 8ನೇ ವಿಕೆಟ್ಗೆ ನಿರ್ಣಾಯಕ 78 ರನ್ಗಳ ಜೊತೆಯಾಟದ ಮೂಲಕ ಭಾರತದ ಮುನ್ನಡೆಯನ್ನು 190 ರನ್ಗಳಿಗೆ ವಿಸ್ತರಿಸಿದರು.
ಮೂರನೇ ದಿನದಾಟದಂದೇ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ಆರಂಭಿಸಿ 126 ರನ್ಗಳ ಮುನ್ನಡೆ ಪಡೆದಿದೆ. ಅಲ್ಲದೆ, ಒಲ್ಲಿ ಪೋಪ್ ಶತಕ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆ ಆಗಿದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 316 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. 4ನೇ ದಿನವೂ ಬ್ಯಾಟಿಂಗ್ ನಡೆಸಿ ಭಾರತಕ್ಕೆ ಸವಾಲಿನ ಗುರಿ ನೀಡಲು ಸಿದ್ಧಗೊಂಡಿದೆ. ಒಂದು ದಿನ ಕಳೆದರೂ ಆ ವಿಷಯದ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ.
ಜಡೇಜಾ ವಿವಾದಾತ್ಮಕ ಔಟ್
ಹೌದು, ರವೀಂದ್ರ ಜಡೇಜಾ ವಿವಾದಾತ್ಮಕ ಔಟ್ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಮೂರನೇ ದಿನದಂದು ಜಡೇಜಾ ಅವರ ಮೊದಲ ವಿಕೆಟ್ ಬಿದ್ದಿತು. ಜೋ ರೂಟ್ನಲ್ಲಿ ಎಲ್ಬಿ ಬಲೆಗೆ ಬಿದ್ದ ಜಡ್ಡು, ಮೂರನೇ ಅಂಪೈರ್ ಮೊರೆ ಹೋದರು. ಆದರೆ ಅಂಪೈರ್ ನಡೆಗೆ ಬೇಸರ ವ್ಯಕ್ತಪಡಿಸಿದ ಆಲ್ರೌಂಡರ್, ಬ್ಯಾಟ್ಗೆ ತಾಗಿದೆ ಎಂದು ಹೇಳುತ್ತಿದ್ದರು. ಆದರೆ ಮೂರನೇ ಅಂಪೈರ್ ಸಹ ಔಟ್ ಎಂದು ತೀರ್ಪು ಕೊಟ್ಟರು.
ಇನ್ನಿಂಗ್ಸ್ನ 120ನೇ ಓವರ್ನಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜೋ ರೂಟ್ ಅವರ ಎಸೆತವನ್ನು ಡಿಪೆಂಡ್ ಮಾಡಲು ಜಡೇಜಾ ಮುಂದಾದರು. ಆದರೆ ಚೆಂಡು ಅವರ ಪ್ಯಾಡ್ಗಳಿಗೆ ಅಪ್ಪಳಿಸಿತು. ರೂಟ್ ಮತ್ತು ಇಂಗ್ಲೆಂಡ್ ಆಟಗಾರರು ಅಪೀಲ್ ಮಾಡುತ್ತಿದ್ದಂತೆ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದನ್ನು ಪರಿಶೀಲಿಸಲು ಮೂರನೇ ಅಂಪೈರ್ ಮೊರೆ ಹೋದರು.
ಬ್ಯಾಟ್ಗೆ ತಾಗಿದಂತಿತ್ತು?
ಸೂಕ್ಷ್ಮವಾಗಿ ಪರಿಶೀಲಿಸುವಾಗ ಚೆಂಡು ಬ್ಯಾಟ್ ಮತ್ತು ಪ್ಯಾಡ್ ನಡುವೆ ಇತ್ತು. ಬ್ಯಾಟ್ ತಾಗಿದ ಬಳಿಕ ಪ್ಯಾಡ್ಗೆ ಟಚ್ ಆಗಿದೆ ಎನ್ನುವಂತಿತ್ತು. ಆದರೆ ಅಲ್ಟ್ರಾ ಎಡ್ಜ್ ಸ್ಪೈಕ್ ತೋರಿಸುತ್ತಿದ್ದಂತೆ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತ್ತು. ಆದಾಗ್ಯೂ, ಚೆಂಡು ಮೊದಲು ಬ್ಯಾಟ್ಗೆ ಅಪ್ಪಳಿಸಿದೆಯೇ ಎಂದು ಟಿವಿ ಅಂಪೈರ್ಗೆ ಖಚಿತವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ.
ಹಾಗಾಗಿ ಬಾಲ್ ಟ್ರ್ಯಾಕಿಂಗ್ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲು ಮೂರನೇ ಅಂಪೈರ್ ತೀರ್ಮಾನಿಸಿದರು. ಚೆಂಡು ಸ್ಟಂಪ್ಗಳ ಮೇಲ್ಭಾಗಕ್ಕೆ ಬಡಿಯಿತು. ತೀವ್ರ ಗೊಂದಲದ ನಡುವೆಯೂ ಔಟ್ ಎಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಈ ನಿರ್ಧಾರದಿಂದ ಬೇಸರಗೊಂಡ ಜಡೇಜಾ, ಮರು ಮಾತನಾಡದೆ ಮೈದಾನದಿಂದ ಹೊರನಡೆದರು. ಆದರೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಂಪೈರ್ ವಿರುದ್ಧ ನೆಟ್ಟಿಗರು ಆಕ್ರೋಶ
ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ನಾಟೌಟ್ ಇದ್ದರೂ ಔಟ್ ನೀಡಲಾಗಿದೆ. ಅಂಪೈರ್ಗಳನ್ನು ಬದಲಿಸಿ ಎಂದು ಕಿಡಿಕಾರಿದ್ದಾರೆ. ಈ ಘಟನೆ ನಡೆದು ಒಂದು ದಿನ ಕಳೆದರೂ ವಿವಾದ ಮಾತ್ರ ತಣ್ಣಗಾಗಿಲ್ಲ. ಇಂಗ್ಲೆಂಡ್ ಪರ ಜೋ ರೂಟ್ 79 ರನ್ ನೀಡಿ 4 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲೆ (131ಕ್ಕೆ 2) ಮತ್ತು ರೆಹಾನ್ ಅಹ್ಮದ್ (105ಕ್ಕೆ 2) ತಲಾ 2 ವಿಕೆಟ್ ಪಡೆದರು.
ಜೋ ರೂಟ್ ಅವರದ್ದು ಸಹ ಇದೇ ರೀತಿ ಬ್ಯಾಟ್ ಮತ್ತು ಪ್ಯಾಡ್ ನಡುವೆ ಚೆಂಡು ಸ್ಟ್ರೈಕ್ ಆಗಿತ್ತು. ಆದರೆ ರೂಟ್ ಅವರನ್ನು ನಾಟೌಟ್ ಎಂದು ಘೋಷಿಸಲಾಗಿತ್ತು. ಬಾಲ್-ಟ್ರ್ಯಾಕಿಂಗ್ ಕಾಣಿಸಿಕೊಂಡಾಗ, ಅಲ್ಟ್ರಾ ಅಂಚಿನಲ್ಲಿ ಸ್ಪೈಕ್ ಇತ್ತು. ಆದಾಗ್ಯೂ, 3ನೇ ಅಂಪೈರ್ ರೂಟ್ ಅವರನ್ನು ನಾಟೌಟ್ ತೀರ್ಪು ನೀಡುವಂತೆ ಒತ್ತಾಯಿಸಿದರು. ಒಬ್ಬೊಬ್ಬರಿಗೆ ಒಂದೊಂದು ನ್ಯಾಯವೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantime.com )